Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ತುಲಾ ಸಂಕ್ರಾಂತಿ ಯಾವಾಗ? ಈ ದಿನ ತುಂಬಾ ವಿಶೇಷವಾದದ್ದು ಏಕೆ?
ವೈದಿಕ ಶಾಸ್ತ್ರದಲ್ಲಿ ಸೂರ್ಯನ ರಾಶಿಬದಲಾವಣೆಗೆ ತುಂಬಾನೇ ಮಹತ್ವವಿದೆ. ಸೂರ್ಯ ಪ್ರತೀ ತಿಂಗಳು ರಾಶಿ ಬದಲಾಯಿಸುತ್ತಾನೆ, ಹೀಗೆ ರಾಶಿ ಬದಲಾವಣೆ ಮಾಡಿದಾಗ ಅದರ ಪ್ರಬಾವ 12 ರಾಶಿಗಳ ಮೇಲೂ ಇರುತ್ತದೆ. ಈ ಅಕ್ಟೋಬರ್ 17ಕ್ಕೆ ಸೂರ್ಯ ಕನ್ಯಾ ರಾಶಿಯನ್ನು ಬಿಟ್ಟು ತುಲಾ ರಾಶಿಗೆ ಪ್ರವೇಶಿಸಲಿದೆ. ಇದನ್ನು ತುಲಾ ಸಂಕ್ರಾಂತಿ ಎಂದು ಕರೆಯಲಾಗುವುದು. ಹಿಂದೂ ಧರ್ಮದಲ್ಲಿ ತುಲಾ ಸಂಕ್ರಾಂತಿಯನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ.

ಕೆಲವು ಕಡೆ ತುಲಾ ಸಂಕ್ರಾಂತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ದಿನ ತೀರ್ಥಯಾತ್ರೆ, ಸ್ನಾನ, ದಾನ, ಸೂರ್ಯನಿಗೆ ವಿಶೇಷ ಪೂಜೆ ಮಾಡುವ ಸಂಪ್ರದಾಯವಿದೆ. ಈ ದಿನ ಈ ರೀತಿ ಮಾಡುವುದರಿಂದ ಎಲ್ಲಾ ದೋಷಗಳಿಂದ ಪರಿಹಾರ ಸಿಗಲಿದೆ ಎಂಬ ನಂಬಿಕೆ. ತುಲಾ ಸಂಕ್ರಾಂತಿಯಂದು ತಾಯಿ ಲಕ್ಷ್ಮಿಯನ್ನು ಪೂಜಿಸಲಾಗುವುದು. ಈ ದಿನ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯನ್ನು ಆರಾಧಿಸಲಾಗುವುದು. ಇದರಿಂದ ಆರ್ಥಿಕ ಸಮಸ್ಯೆ ದೂರಾಗುವುದು ಎಂದು ಹೇಳಲಾಗುವುದು.
ನಾವಿಲ್ಲಿ ತುಲಾ ಸಂಕ್ರಾಂತಿಯ ಪೂಜಾ ವಿಧಾನ ಹಾಗೂ ಈ ದಿನ ಯಾವ ಪರಿಹಾರ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:
ತುಲಾ ಸಂಕ್ರಾಂತಿಯ ಪೂಜಾ ವಿಧಾನ
* ತುಲಾ ಸಂಕ್ರಾಂತಿಯ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ಲಕ್ಷ್ಮಿ ಮತ್ತು ಪಾರ್ವತಿ ದೇವಿಯನ್ನು ಪೂಜಿಸಿ.
* ಈ ದಿನ ಲಕ್ಷ್ಮಿಗೆ ಧಾನ್ಯಗಳು, ವೀಳ್ಯದೆಲೆ, ಶ್ರೀಗಂಧವನ್ನು ಪಾರ್ವತಿ ದೇವಿಗೆ ಅರ್ಪಿಸಿ.
* ತುಲಾ ಸಂಕ್ರಾಂತಿ ಆಚರಣೆ ಮಾಡುವುದರಿಂದ ಫಸಲು ಚೆನ್ನಾಗಿ ಬರುತ್ತದೆ, ರೈತರು ಹೆಚ್ಚು ಗಳಿಸುವ ಲಾಭವನ್ನು ಪಡೆಯುತ್ತಾರೆ ಎಂಬ ನಂಬಿಕೆ
ತುಲಾ ಸಂಕ್ರಾಂತಿಯಂದು ಮಾಡಬೇಕಾದ ಪರಿಹಾರಗಳು
* ಆರ್ಥಿಕ ಲಾಭ ಮತ್ತು ವ್ಯವಹಾರದಲ್ಲಿ ಪ್ರಗತಿಗಾಗಿ ತುಲಾ ಸಂಕ್ರಾಂತಿಯಂದು ಲಕ್ಷ್ಮಿ ದೇವಿಯನ್ನು ಪೂಜಿಸಬೇಕು.
* ನಿಮ್ಮ ರಾಶಿಯಲ್ಲಿ ಸೂರ್ಯನ ಸ್ಥಾನವು ಕೆಟ್ಟದಾಗಿದ್ದರೆ ಈ ದಿನ ಸೂರ್ಯನಿಗೆ ಆರ್ಘ್ಯ ಅರ್ಪಿಸಬೇಕು.
* ಈ ದಿನ ಬಡವರಿಗೆ ಏನಾದರೂ ದಾನ ಮಾಡಿದರೆ ಇದರಿಂದ ನಿಮಗೆ ತುಂಬಾನೇ ಶುಭವಾಗುವುದು
* ತುಲಾ ಸಂಕ್ರಾಂತಿಯ ದಿನದಂದು ಗೋಧಿಯನ್ನು ದಾನ ಮಾಡುವುದು ಸೂರ್ಯಗ್ರಹಣದ ದೋಷವನ್ನು ಕೂಡ ತೊಡೆದು ಹಾಕಬಹುದು. ಈ
* ಈ ದಿನ ಹಸುಗಳಿಗೆ ಮೇವು ತಿನ್ನಿಸಿದರೆ ಒಳ್ಳೆಯದು
* ಈ ದಿನ ಕೋಪಗೊಳ್ಳುವುದು, ಜಗಳ ಮಾಡುವುದು ಮಾಡಬೇಡಿ.
ಕಾವೇರಿ ಸಂಕ್ರಮಣ
ತುಲಾ ಸಂಕ್ರಾಂತಿಯನ್ನು ಕೊಡಗಿನಲ್ಲಿ ಕಾವೇರಿ ಸಂಕ್ರಮಣ ಎಂದು ಆಚರಿಸಲಾಗುವುದು. ಕೊಡಗಿನ ಭಾಗಮಂಡಲದಲ್ಲಿ ಈ ದಿನ ತೀರ್ಥೋದ್ಭವಾಗುತ್ತದೆ. ಕಾವೇರಿ ನದಿಯ ಉಗಮಕ್ಕೆ ಸಂಬಂಧಿಸಿದಂತೆ ಅನೇಕ ಪೌರಾಣಿಕ ಕತೆಗಳಿವೆ. ಇದರಲ್ಲೊಂದು ವಿಷ್ಣು ಮಾಯಾ ಎಂಬ ಹುಡುಗಿ. ಆಕೆ ಬ್ರಹ್ಮನ ಮಗಳು, ಕಾವೇರ ಎಂಬ ರಾಜ ಸಂತಾನಭಾಗ್ಯಕ್ಕಾಗಿ ಬ್ರಹ್ಮನ ಕುರಿತು ತಪಸ್ಸು ಮಾಡಿದಾಗ ವಿಷ್ಣುಮಾಯಾ ಕಾವೇರನ ಮಗಳಾಗು ಜನಿಸುತ್ತಾಳೆ.
ಅವಳಿಗೆ ಕಾವೇರಿ ಎಂದು ಹೆಸರಿಡಲಾಗುವುದು. ಕಾವೇರಿ
ಅಗಸ್ತ್ಯ ಋಷಿಯನ್ನು ಮದುವೆಯಾಗುತ್ತಾಳೆ. ಕಾವೇರಿ ಪತಿ ಬಳಿ ಒಂದು ದಿನವೂ ನನ್ನ ಬಿಟ್ಟು ದೂರ ಹೋಗಬಾರದು ಎಂದು ಕೇಳಿಕೊಂಡಿರುತ್ತಾರೆ. ಆದರೆ ಶಿಷ್ಯರಿಗೆ ಬೋಧಿಸಲು ಕಾಡಿಗೆ ಹೋದ ಅಗಸ್ತ್ಯ ಮಹರ್ಷಿ ಮನೆಗೆ ಮರಳಲು ಸಾಧ್ಯವಾಗುವುದಿಲ್ಲ. ಇದರಿಂದ ಕಾವೇರಿ ಕೋಪಗೊಂಡು ಬೆಟ್ಟದಿಂದ ಧುಮುಕುತ್ತಾಳೆ, ಆವಾಗ ಕಾವೇರಿ ನದಿಯಾಗಿ ಹರಿಯಲಾರಂಭಿಸುತ್ತಾರೆ. ಆ ದಿನವೇ ಕಾವೇರಿ ಸಂಕ್ರಮಣ ಅಥವಾ ತುಲಾ ಸಂಕ್ರಮಣ.
ಪ್ರತೀವರ್ಷ ಕಾವೇರಿ ಉಗಮಸ್ಥಾನದಲ್ಲಿ ಜಲ ಉತ್ಪತ್ತಿಯಾಗುತ್ತದೆ, ಇದನ್ನು ತೀರ್ಥೋದ್ಭವ ಎಂದು ಕರೆಯಲಾಗುವುದು. ತುಲಾ ಸಂಕ್ರಾಂತಿಯಂದೇ ತೀರ್ಥೋದ್ಭವವಾಗುವುದು ತುಂಬಾನೇ ವಿಸ್ಮಯಕಾರಿ. ಈ ದಿನ ಲಕ್ಷಾಂತ ಭಕ್ತರು ಇಲ್ಲಿಗೆ ಬಂದು ತೀರ್ಥವನ್ನು ಪಡೆಯುತ್ತಾರೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications