Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಧನಿಷ್ಠಾ ನಕ್ಷತ್ರದಲ್ಲಿ ಶನಿ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವ ಹೀಗಿರಲಿದೆ
ಶನಿಯೂ ರಾಶಿ ಎರಡೂವರೆ ವರ್ಷಕ್ಕೊಮ್ಮೆ ಬದಲಾಯಿಸುವುದು, ಇದೀಗ ಶನಿಯು ತನ್ನ ನಕ್ಷತ್ರ ಬದಲಾಯಿಸಿದೆ. ಶನಿಯು ಅಕ್ಟೋಬರ್ 15ಕ್ಕೆ ಧನಿಷ್ಠಾ ನಕ್ಷತ್ರಕ್ಕೆ ಸಂಚಾರ ಮಾಡಿದೆ. ಇದರ ಪ್ರಭಾವ ಯಾವ ರಾಶಿಗೆ ಹೇಗಿರಲಿದೆ ಎಂದು ನೋಡೋಣ....
ಮೇಷ ರಾಶಿ
ವೃತ್ತಿ ಜೀವನಕ್ಕೆ ಈ ಅವಧಿ ತುಂಬಾ ಚೆನ್ನಾಗಿದೆ. ನೀವು ಬಯಸಿದ್ದು ನೆರವೇರಲಿದೆ. ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ಒಳ್ಳೆಯ ಅವಕಾಶ ದೊರೆಯಲಿದೆ. ವ್ಯವಹಾರಸ್ಥರಿಗೂ ಈ ಅವಧಿ ಉತ್ತಮವಾಗಿದೆ.
ಪ್ರತಿ ಶನಿವಾರ ಕಪ್ಪು ಎಳ್ಳನ್ನು ಶನಿ ದೇವಾಲಯಕ್ಕೆ ದಾನ ಮಾಡಿ

ವೃಷಭ ರಾಶಿ
ಈ ಅವಧಿಯಲ್ಲಿ ಉದ್ಯೋಗದಲ್ಲಿ ಬದಲಾವಣೆಯಾಗಬಹುದು. ನಿಮ್ಮ ಆದಾಯ ಹೆಚ್ಚಾಗಬಹುದು. ನೀವು ವೃತ್ತಿ ಜೀವನದಲ್ಲಿ ಹೊಸತನ್ನು ಅನುಭವಿಸುವಿರಿ. ನಿಮ್ಮ ಕೆಲಸದಲ್ಲಿ ಪ್ರಗತಿ ಕಾಣಲಿದೆ.
* ಶನಿವಾರ ಆಲದ ಮರದ ಕೆಳಗಡೆ ಸಾಸಿವೆಯೆಣ್ಣೆಯ ದೀಪ ಹಚ್ಚಿ.
ಮಿಥುನ ರಾಶಿ
ಶನಿ ಧನಿಷ್ಠಾ ನಕ್ಷತ್ರದಲ್ಲಿ ಇರುವಾಗ ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣ ಮಾಡಬಹುದು, ವಿದೇಶದಲ್ಲಿ ಓದಲು ಪ್ರಯತ್ನ ಮಾಡುತ್ತಿದ್ದರೆ ನಿಮ್ಮ ಪ್ರಯತ್ನಕ್ಕೆ ಫಲ ಸಿಗಲಿದೆ. ಧಾರ್ಮಿಕ ಕಾರ್ಯಗಳತ್ತ ನಿಮ್ಮ ಗಮನ ಹೆಚ್ಚಾಗುವುದು
* ಪ್ರತಿ ಶನವಾರ ಶನಿಚಾಲೀಸಾ ಪಠಿಸಿ
ಕರ್ಕ ರಾಶಿ
ಈ ಅವಧಿಯಲ್ಲಿ ನಿಮ್ಮ ವೈವಾಹಿ ಹಾಗೂ ಕುಟುಂಬ ಬದುಕಿನಲ್ಲಿ ಏರಳಿತಗಳಿರಲಿದೆ. ಇದ್ದಕ್ಕಿದ್ದಂತೆ ನಷ್ಟ-ಲಾಭ ಕಂಡು ಬರುವುದು.
ಮಂಗಳವಾರ ಮತ್ತು ಶನುವಾರ ಹನುಮಾನ್ ಚಾಲೀಸಾ ಪಠಿಸಿ
ಸಿಂಹ ರಾಶಿ
ಶನಿ ಧನಿಷ್ಠಾ ನಕ್ಷತ್ರದಲ್ಲಿದ್ದಾಗ ನಿಮಗೆ ಹೊಸ ವ್ಯವಹಾರ ಅವಕಾಶಗಳು ದೊರೆಯಲಿದೆ. ಈ ಅವಧಿಯಲ್ಲಿ ಆಸ್ತಿ ಖರೀದಿಸಲು ಅಥವಾ ಇತರ ಲಕ್ಷುರಿ ಸಾಧನ ಖರೀದಿಸಲು ಸಾಧ್ಯವಾಗುವುದು. ಅವಾಹಿತರಿಗೆ ವಿವಾಹ ಯೋಗ ಬರಬಹುದು.
ಶನಿವಾರ ಕಪ್ಪು ಬೇಳೆಯನ್ನು ದಾನ ಮಾಡಿ
ಕನ್ಯಾ ರಾಶಿ
ವಕೀಲ ವೃತ್ತಿ, ಕಾನೂನು ವೃತ್ತಿಯಲ್ಲಿ ಇರುವವರಿಗೆ ಈ ಅವಧಿ ಅನುಕೂಲಕರವಾಗಿದೆ. ಹೂಡಿಕೆಗೆ ಈ ಅವಧಿ ಅನುಕೂಲಕರವಾಗಿದೆ ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ.
* ಮೀನು ಹಾಗೂ ಇರುವೆಗಳಿಗೆ ಆಹಾರ ಹಾಕಿ.
ತುಲಾ ರಾಶಿ
ಕಲೆಗೆ ಸಂಬಂಧಿತ ವೃತ್ತಿ ಜೀವನದಲ್ಲಿ ಇರುವವರಿಗೆ ಈ ಅವಧಿ ಅನುಕೂಲಕರವಾಗಿದೆ. ಧನಿಷ್ಠಾದಲ್ಲಿ 5ನೇ ಮನೆಯಲ್ಲಿ ಶನಿಯ ಸ್ಥಾನ ನಿಮ್ಮ ವೈವಾಹಿಕ ಜೀವನದ ಮೇಲೆ ಪ್ರಭಾವ ಬೀರಬಹುದು, ಜಾಗ್ರತೆವಹಿಸಿ.
* ಪ್ರತಿಶನಿವಾರ ರುದ್ರಾಭಿಷೇಕ ಮಾಡಿಸಿ.
ವೃಶ್ಚಿಕ ರಾಶಿ
ಈ ಅವಧಿಯಲ್ಲಿ ದೈಹಿಕ ಸಮಸ್ಯೆ, ಮಾನಸಿಕ ಒತ್ತಡಗಳು ಇರಲಿದೆ. ಉದ್ಯೋಗ, ವ್ಯವಹಾರ ಉತ್ತಮವಾಗಿರಲಿದೆ. ಶನಿಯ 4ನೇ ಮನೆಯಲ್ಲಿ ಇರುವುದರಿಂದ ಕುಟುಂಬದ ಮೇಲೆ ಇದರ ಪ್ರಭಾವ ಇರಲಿದೆ, ಸಣ್ಣ ಪುಟ್ಟ ಸಮಸ್ಯೆಗಳು ಇರಬಹುದು.
ಪ್ರತಿ ಶನಿವಾರ ಶನಿ ದೇವಾಲಯಕ್ಕೆ ಭೇಟಿ ನೀಡಿ.
ಧನು ರಾಶಿ
ಈ ಅವಧಿಯಲ್ಲಿ ನಿಮ್ಮ ಶ್ರಮ ಹೆಚ್ಚಾಗಲಿದೆ, ನಿಮ್ಮ ಆತ್ಮಬಲವೂ ಹೆಚ್ಚುವುದು. ನೀವು ಯೋಚಿಸಿದ ಕೆಲಸದಲ್ಲಿ ಯಶಸ್ಸು ಪಡೆಯಲು ರಿಸ್ಕ್ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡಲ್ಲ. ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣ ಮಾಡಬಹುದು.
ಶನಿ ಬೀಜ ಮಂತ್ರ ಪಠಿಸಿ.
ಮಕರ ರಾಶಿ
ಈ ಅವಧಿ ಆರ್ಥಿಕವಾಗಿ ತುಂಬಾ ಒಳ್ಳೆಯದಿದೆ. ಈ ಅವಧಿಯಲ್ಲಿ ಉಳಿತಾಯ ಮಾಡಲು ಸಾಧ್ಯವಾಗುವುದು. ನಿಮ್ಮ ಮಾತುಗಳಿಂದ ಹಿರಿಯರ ಮನಸ್ಸಿಗೆ ನೋವಾಗದಂತೆ ಎಚ್ಚರವಹಿಸಿ. ವಿದ್ಯಾರ್ಥಿಗಳಿಗೆ ಈ ಸಮಯ ಉತ್ತಮವಾಗಿದೆ.
ಶನಿ ಮಂತ್ರ ಪಠಿಸಿ.
ಕುಂಭ ರಾಶಿ
ಈ ಅವಧಿಯಲ್ಲಿ ಖರ್ಚು ಹೆಚ್ಚಾಗಲಿದೆ. ಈ ಅವಧಿಯಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆ ಕಾಣಿಸಬಹುದು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಈ ಅವಧಿ ಒಳ್ಳೆಯದಿದೆ. ವೃತ್ತಿ ಜೀವನದಲ್ಲಿ ಬೆಳೆಯಲು ಸಾಧ್ಯವಾಗುವುದು.
ಬಡವರಿಗೆ ಚಪ್ಪಲಿ, ಬಟ್ಟೆ ನೀಡಿ.
ಮೀನ ರಾಶಿ
ವಿದ್ಯಾರ್ಥಿಗಳಿಗೆ ಈ ಸಮಯ ಸವಾಲಿನಿಂದ ಕೂಡಿರಲಿದೆ. ಕೆಲಸ ಸಂಬಂಧಿತ ಪ್ರಯತ್ನದಲ್ಲಿ ಯಶಸ್ವಿಯಾಗಲಿದೆ. ನಿಮ್ಮ ಖರ್ಚು ಹೆಚ್ಚಾಗಲಿದೆ. ವ್ಯವಹಾರದಲ್ಲಿ ಲಾಭ ಗಳಿಸುತ್ತೀರಿ, ಮಾನಸಿಕ ಒತ್ತಡ ಹೆಚ್ಚಾಗುವುದು, ಅಭದ್ರತೆ ಕಾಡುವುದು.
ಶನಿವಾರ ಆಲದ ಮರದ ಕೆಳಗಡೆ ಸಾಸಿವೆಯೆಣ್ಣೆ ದೀಪ ಹಚ್ಚಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











