Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಪಿಶಾಚ ಯೋಗ: ಶನಿ-ರಾಹು ಸಂಯೋಗ, ಅ.17ರವರೆಗೆ ಈ 3 ರಾಶಿಯವರು ಜಾಗ್ರತೆ
ಶನಿ ತುಂಬಾ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ರಾಹು ಹಿಮ್ಮುಖವಾಗಿ ಚಲಿಸುವ ಗ್ರಹವಾಗಿದೆ. ಶನಿಯು ಕರ್ಮದ ಫಲ ನೀಡುವ ಗ್ರಹವಾಗಿದೆ, ರಾಹುವನ್ನು ಆಶುಭ ಗ್ರಹವೆಂದು ಪರಿಗಣಿಸಲಾಗುವುದು. ಇದೆರಡು ಜೊತೆ ಸೇರಿದಾಗ ಪಿಶಾಚ ಯೋಗ ಏರ್ಪಡುವುದು. ಶನಿ ಕುಂಭ ರಾಶಿಯಲ್ಲಿದೆ ಆದರೆ ಶತಾಭಿಶಾ ನಕ್ಷತ್ರದಲ್ಲಿದೆ, ಇದು ರಾಹುಗೆ ಸೇರಿದ ಗ್ರಹವಾಗಿದೆ. ಇದರಿಂದ ಪಿಶಾಚ ಯೋಗ ಏರ್ಪಟ್ಟಿದೆ. ಇದರಿಂದ ರಾಶಿಗಳ ಮೇಲೆ ಪ್ರಭಾವ ಬೀರಲಿದೆ.

ಪಿಶಾಚ ಯೋಗ
ಪಿಶಾಚ ಯೋಗ ವ್ಯಕ್ತಿಯ ಬದುಕಿನ ಮೇಲೆ ಕೆಟ್ಟ ಪ್ರಭಾವ ಬೀರುವುದು. ಈ ಸಮಯದಲ್ಲಿ ಗೊಂದಲ, ಕೆಟ್ಟ ಆಲೋಚನೆ, ಅತ್ಯಧಿಕ ಸವಾಲುಗಳು ಎಲ್ಲವೂ ಏರ್ಪಡುವುದು. ಇದರಿಂದ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುವುದು. ಇದರಿಂದ ದೈಹಿಕ ಹಾಗೂ ಮಾನಸಿಕ ಒತ್ತಡಗಳು ಉಂಟಾಗುವುದು.
ಈ ಸಮಯದಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡುವುದರ ಮುಖಾಂತರ, ಒಳ್ಳೆಯ ಕಾರ್ಯಗಳನ್ನು ಮಾಡುವುದರ ಮುಖಾಂತರ ದೇವರ ಪ್ರಾರ್ಥನೆ ಮಾಡುವುದರಿಂದ ಈ ಕೆಟ್ಟ ಪರಿಣಾಮವನ್ನು ಕಡಿಮೆ ಮಾಡಬಹುದು.
ಪಿಶಾಚ ಯೋಗದ ಸಮಯದಲ್ಲಿ ಯಾವೆಲ್ಲಾ ರಾಶಿಯವರು ಜಾಗ್ರತೆಯಿಂದಿರಬೇಕು ನೋಡೋಣ ಬನ್ನಿ:
ಕರ್ಕ ರಾಶಿ
ಶತಾಭಿಷ ನಕ್ಷತ್ರದಲ್ಲಿ ಈ ಶನಿ ಹಾಗೂ ರಾಹು ಸಂಯೋಗವಾಗಿರುವುದರಿಂದ ಕರ್ಕ ರಾಶಿಯವರು ತುಂಬಾನೇ ಜಾಗ್ರತೆವಹಿಸಬೇಕು. ಈ ಅವಧಿಯಲ್ಲಿ ಆರೋಗ್ಯ ಸಮಸ್ಯೆ ಕಂಡು ಬರುವುದು, ಮಾನಸಿಕ ಒತ್ತಡ ಹೆಚ್ಚಾಗುವುದು. ವೃತ್ತಿ ಜೀವನದಲ್ಲಿ ಹಾಗೂ ಉದ್ಯಮದಲ್ಲಿ ಹಲವು ಸವಾಲುಗಳು ಎದುರಾಗುವುದು. ಈ ಅವಧಿಯಲ್ಲಿ ಆರ್ಥಿಕ ವಿಷಯದಲ್ಲಿ ತುಂಬಾನೇ ಜಾಗ್ರತೆವಹಿಸಬೇಕು. ನೀವು ಅಕ್ಟೋಬರ್ 17ರವರೆಗೆ ಜಾಗ್ರತೆವಹಿಸಬೇಕಾಗಿದೆ. ವೈವಾಹಿಕ ಸಂಬಂಧದಲ್ಲಿ ಸಮಸ್ಯೆಗಳು ಕಂಡು ಬರುವುದು. ವಾಹನ ಚಲಾಯಿಸುವಾಗ ತುಂಬಾನೇ ಜಾಗ್ರತೆವಹಿಸಿ.
ಕನ್ಯಾ ರಾಶಿ
ಪಿಶಾಚ ಯೋಗದ ಕೆಟ್ಟ ಪರಿಣಾಮ ಕನ್ಯಾ ರಾಶಿಯ ಮೇಲೆ ಇರುವುದರಿಂದ ನೀವು ಅಕ್ಟೋಬರ್ 17ರವರೆಗೆ ತುಂಬಾನೇ ಜಾಗ್ರತೆವಹಿಸಬೇಕಾಗಿದೆ. ಈ ಸಮಯದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸಬೇಕಾಗುವುದು. ನಿಮ್ಮ ಆರ್ಥಿಕ ಸ್ಥಿತಿ ತುಂಬಾನೇ ಕೆಟ್ಟದಾಗಿರುತ್ತದೆ. ವೃತ್ತಿ ಜೀವನದಲ್ಲಿ ತುಂಬಾನೇ ಅಡೆತಡೆ ಎದುರಾಗುವುದು. ಜೀವನದಲ್ಲಿ ತುಂಬಾನೇ ಏರಳಿತವಿರುತ್ತದೆ.
ಮೀನ ರಾಶಿ
ಈ ಶನಿ ಮತ್ತು ರಾಹು ಸಂಯೋಜನೆ ನಿಮಗೆ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಕುಟುಂಬದ ಸದಸ್ಯರ ನಡುವೆ ಆರೋಗ್ಯ ಸಮಸ್ಯೆವಿರಬಹುದು. ಮಾನಸಿಕವಾಗಿ ತುಂಬಾ ತೊಳಲಾಟವಿರುತ್ತದೆ. ಋಣಾತ್ಮಕ ಚಿಂತೆ ಕಾಡುವುದು. ವೃತ್ತಿ ಜೀವನದಲ್ಲಿ ಅನೇಕ ಅಡೆತಡೆಗಳು ಉಂಟಾಗುವುದು.
ಈ ಮೂರು ರಾಶಿಯವರು ಅಕ್ಟೋಬರ್ 17ರವರೆಗೆ ತುಂಬಾನೇ ಜಾಗ್ರತೆವಹಿಸಬೇಕು. ನೀವು ಈ ಅವಧಿಯಲ್ಲಿ ಧನಾತ್ಮಕವಾಗಿರಲು ಪ್ರಯತ್ನಿಸಿ. ದೇವರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ, ಇಷ್ಟದ ದೇವರನ್ನು ಪ್ರಾರ್ಥಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications