Latest Updates
-
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು
ಅ. 14ಕ್ಕೆ ಸರ್ವ ಪಿತೃ ಅಮವಾಸ್ಯೆ: ಈ ದಿನ ಯಾವ ಸಮಯದಲ್ಲಿ ಶ್ರಾದ್ಧ ಮಾಡಿದರೆ ಒಳ್ಳೆಯದು?
ಪಿತೃಪಕ್ಷ ಹಿಂದೂಗಳಿಗೆ ತುಂಬಾ ಪ್ರಮುಖವಾದ ದಿನಗಳಾಗಿವೆ. ಸೆಪ್ಟೆಂಬರ್ 29ರಿಂದ -ಅಕ್ಟೋಬರ್ 14ರವರೆಗೆ ಪಿತೃಪಕ್ಷ ಆಚರಿಸಲಾಗುವುದು. ಪಿತೃ ಪಕ್ಷದಲ್ಲಿ ಶ್ರಾದ್ಧಕಾರ್ಯ ಮಾಡಿದರೆ ತಿರಿ ಹೋದವರ ಆತ್ಮಕ್ಕೆ ಶಾಂತಿ ಸಿಗುವುದು, ಅವರಿಗೆ ಮೋಕ್ಷ ಸಿಗುವುದರಿಂದ ಸಂತುಷ್ಟರಾಗಿ ಆಶೀರ್ವದಿಸುತ್ತಾರೆ . ಪಿತೃ ಪಕ್ಷದ 15 ದಿನಗಳ ಅವಧಿಯಲ್ಲಿ, ಪೂರ್ವಜರು ಭೂಮಿಯ ಮೇಲೆರುತ್ತಾರೆ. ಆದ್ದರಿಂದ ಈ ಸಮಯ ಶ್ರಾದ್ಧಕಾರ್ಯಕ್ಕೆ ಒಳ್ಳೆಯದು ಎಂದು ಭಾವಿಸಲಾಗುವುದು.

ಅಕ್ಟೋಬರ್ 14ಕ್ಕೆ ಪಿತೃಪಕ್ಷ ಕೊನೆಯಾಗಲಿದೆ, 14ನೇ ದಿನದಂದು ಸರ್ವ ಪಿತೃ ಅಮಾವಾಸ್ಯೆ ಆಚರಿಸಿಲಾಗುವುದು. ಮರಣದ ದಿನಾಂಕ ತಿಳಿದಿಲ್ಲದಿದ್ದರೆ ನಮಗೆ ಗೊತ್ತಿಲ್ಲದೆ ಇರುವ ಹಿರಿಯರು ಅಂದ್ರೆ ನಮಗೆ ನಮ್ಮ ಅಜ್ಜ-ಅಜ್ಜಿ ಗೊತ್ತಿರುತ್ತದೆ, ಆದರೆ ಅವರ ಹಿರಿಯರು ಗೊತ್ತಿರುವುದಿಲ್ಲ, ಅವರಿಗೆಲ್ಲಾ ಸೇರಿಸಿ ಈ ದಿನ ತರ್ಪಣ ನೀಡಲಾಗುವುದು. ಸರ್ವಪಿತೃ ಅಮವಾಸ್ಯೆಯಂದು ಶ್ರಾದ್ಧ ಕಾರ್ಯಮಾಡಿದರೆ ಹಿರಿಯರ ಆಶೀರ್ವಾದ ದೊರೆಯುವುದರಿಂದ ಪಿತೃದೋಷ ದೂರಾಗುವುದು. 16 ದಿನಗಳಲ್ಲಿ ಈ ದಿನಕ್ಕೆ ತುಂಬಾನೇ ಮಹತ್ವ.
ಸರ್ವಪಿತೃಅಮಾವಾಸ್ಯೆಯಂದು ಈ ಶುಭ ಸಮಯದಲ್ಲಿ ತರ್ಪಣ ನೀಡಿ
ಅಶ್ವಿನ್ ಮಾಸದ ಕೃಷ್ಣ ಪಕ್ಷದ ಅಮವಾಸ್ಯೆ ದಿನಾಂಕ: 13 ಅಕ್ಟೋಬರ್ 2023, ರಾತ್ರಿ 09:50 ಕ್ಕೆ
ಅಶ್ವಿನ್ ಮಾಸದ ಕೃಷ್ಣ ಪಕ್ಷದ ಅಮವಾಸ್ಯೆ ದಿನಾಂಕ: 14 ಅಕ್ಟೋಬರ್ 2023, ರಾತ್ರಿ 11:24 ಕ್ಕೆ
ಉದಯ ತಿಥಿಯ ಪ್ರಕಾರ, ಈ ವರ್ಷ ಸರ್ವ ಪಿತೃ ಅಮವಾಸ್ಯೆಯನ್ನು 14 ಅಕ್ಟೋಬರ್ 2023 ರಂದು ಆಚರಿಸಲಾಗುತ್ತದೆ. ಸರ್ವಪಿತೃ ಅಮಾವಾಸ್ಯೆಯ ದಿನದಂದು ತರ್ಪಣಕ್ಕೆ 3 ಶುಭ ಮುಹೂರ್ತಗಳಿವೆ.
ಮಂಗಳಕರ ಸಮಯ
ಕುಟುಪ್ ಮುಹೂರ್ತ - 11:44 ರಿಂದ 12:30 ರವರೆಗೆ
ರೋಹಿಣ ಮುಹೂರ್ತ - ಮಧ್ಯಾಹ್ನ 12:30 ರಿಂದ 01:16 ರವರೆಗೆ
ಮಧ್ಯಾಹ್ನ 01:16 ರಿಂದ 03:35ರವರೆಗೆ
ಈ ಸಮಯಗಳಲ್ಲಿ ಯಾವುದೇ ಸಮಯದಲ್ಲಿ ಬೇಕಾದರೂ ನೀಡಬಹುದು.
ಸರ್ವಪಿತೃ ಅಮವಾಸ್ಯೆ
ಪಿತೃ ಪಕ್ಷದ 16 ದಿನಗಳಲ್ಲಿ ದಿನಾಂಕದ ಪ್ರಕಾರ ಶ್ರಾದ್ಧವನ್ನು ಮಾಡಲಾಗುತ್ತದೆ. ಆದರೆ ಸರ್ವಪಿತೃ ಅಮಾವಾಸ್ಯೆಯ ದಿನ, ಅಮವಾಸ್ಯೆಯ ತಿಥಿ, ಪೂರ್ಣಿಮಾ ತಿಥಿ ಮತ್ತು ಚತುರ್ದಶಿ ತಿಥಿಗಳಲ್ಲಿ ಮರಣ ಹೊಂದಿದ ಕುಟುಂಬದ ಸದಸ್ಯರಿಗೆ ಶ್ರಾದ್ಧವನ್ನು ಮಾಡಲಾಗುವುದು.ಧಾರ್ಮಿಕ ನಂಬಿಕೆಯ ಪ್ರಕಾರ, ಅಮಾವಾಸ್ಯೆಯ ತಿಥಿಯಂದು ಆಚರಿಸುವ ಶ್ರಾದ್ಧವು ಕುಟುಂಬದ ಎಲ್ಲಾ ಪೂರ್ವಜರ ಆತ್ಮಗಳಿಗೆ ಮೋಕ್ಷ ನಿಡುವುದು. ಆದ್ದರಿಂದ ಈ ದಿನ ಹೆಚ್ಚಿನವರು ಶ್ರಾದ್ದಕಾರ್ಯ ಮಾಡುತ್ತಾರೆ. ಸರ್ವ ಆತ್ಮಗಳಿಗೆ ಮೋಕ್ಷ ಸಿಗುವುದರಿಂದ ಮನೆಯ ಮೇಲೆ ಹಿರಿಯರ ಶಾಪ ಇರುವುದಿಲ್ಲ, ಅವರ ಆಶೀರ್ವಾದ ಸಿಗುವುದರಿಂದ ಮನೆಗೆ ಒಳಿತಾಗಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications