Latest Updates
-
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ!
ಮಹಾಲಯ ಅಮವಾಸ್ಯೆ: ತರ್ಪಣ ನೀಡುವಾಗ ಈ ಮಂತ್ರ ಪಠಿಸಿ
ಪಿತೃಪಕ್ಷ ಭಾದ್ರಪದ ಶುಕ್ಲ ಪೂರ್ಣಿಮಾದಂದು ಪ್ರಾರಂಭವಾಗಿ ಅಶ್ವಿನಿ ಕೃಷ್ನ ಅಮವಾಸ್ಯೆಯಂದು ಮುಕ್ತಾಯವಾಗುವುದು. ಈ ದಿನಗಳಲ್ಲಿ ಶ್ರಾದ್ಧ ಕಾರ್ಯ ಮಾಡಲಾಗುವುದು. ಅಕ್ಟೋಬರ್ 14ಕ್ಕೆ ಪಿತೃಪಕ್ಷ ಕೊನೆಯ ದಿನ, ದಿನ ಅಮವಾಸ್ಯೆ. ಸರ್ವ ಪಿತೃ ಅಮವಾಸ್ಯೆ. ಈ ದಿನ ಕೆಲವೊಂದು ವಿಷಯಗಳು ಮನೆಗೆ ಶ್ರೇಯಸ್ಸು ಅಲ್ಲ, ಈ ದಿನ ಏನು ಮಾಡಬಾರದು, ಏನು ಮಾಡಬೇಕು ಎಂದು ನೋಡೋಣ ಬನ್ನಿ:

ಪಿತೃದೋಷದ ಲಕ್ಷಣಗಳು
* ಮನೆಯ ಹಿರಿಯರ ಕೂದಲು ಬೆಳ್ಳಗಾಗಿದ್ದು ನಂತರ ಹಳದಿ ಬಣ್ಣಕ್ಕೆ ತಿರುಗಿದರೆ ಅಥವಾ ಕುಟುಂಬದ ಸದಸ್ಯರು ವಿಪರೀತ ಕೆಮ್ಮು ಸಮಸ್ಯೆಯಿಂದ ಬಳಲುತ್ತಿದ್ದರೆ ಅದು ಪಿತೃದೋಷದ ಲಕ್ಷಣವಾಗಿದೆ.
* ಸಮಾಜದಲ್ಲಿ ನಿಮ್ಮ ಗೌರವಕ್ಕೆ ಧಕ್ಕೆಯಾಗುವ ಸಂಗತಿಗಳು ನಡೆಯುವುದು
* ಕುಟುಂಬದಲ್ಲಿ ಆಗಾಗ ಜಗಳ, ಭಿನ್ನಾಭಿಪ್ರಾಯ, ಮನಸ್ಸಿನಲ್ಲಿ ನೆಮ್ಮದಿಯೇ ಇಲ್ಲದಿರುವುದು
* ತುಂಬಾನೇ ಆರ್ಥಿಕ ಸಮಸ್ಯೆ
* ಮಕ್ಕಳಾಗಲು ಅಡಚಣೆ
* ಮನೆ ಮಕ್ಕಳಿಗೆ ಮದುವೆ ವಿಳಂಬ
ಈ ದಿನ ಎನು ಮಾಡಬಾರದು?
*ಪಿತೃಪಕ್ಷ ಪೂಜೆ ಮಾಡುವಾಗ ಮಾಂಸ ಸೇವಿಸಬಾರದು
* ಸ್ಟೀಲ್, ಕಬ್ಬಿಣ, ಪ್ಲಾಸ್ಟಿಕ್, ಗಾಜಿನ ಪಾತ್ರೆಗಳನ್ನು ಪೂಜೆಗೆ ಬಳಸಬಾರದು
* ಪೂಜೆ ಮಾಡುವಾಗ ಘಂಟೆ ಭಾರಿಸಬೇಡಿ.
* ಪೂಜೆ ಮಾಡುವಾಗ ಪೂಜೆಗೆ ಯಾವುದೇ ಭಂಗ ಉಂಟಾಗಬಾರದು.
* ಹಿರಿಯರನ್ನು ಗೌರವಿಸಿ.
ಪಿತೃ ಪೂಜೆ ಮಾಡುವಾಗ ಈ ಮಂತ್ರ ಪಠಿಸಿ
ಓಂ ದೇವತಾಭ್ಯ ಪಿತೃಭಕ್ಷ್ಯ ಮಹಾಯೋಗಿಭ್ಯೇವ ಚನಮಃ ಸ್ವಾಹಾಯಃ ।।
ಈ ಮಂತ್ರವನ್ನು ಶ್ರದ್ಧೆಯಿಂದ ಪಠಿಸಿ.
ಅಚನಂ ಮಾಡುವಾಗ ಈ ಮಂತ್ರ ಪಠಿಸಿ
ಓಂ ಕೇಶವಾಯ ನಮಃ, ಓಂ ಮಾಧವಾಯ ನಮಃ, ಓಂ ನಾರಾಯಣಾಯ ನಮಃ ಮಂತ್ರ ಪಠಿಸಿ.
ಸಂಕಲ್ಪ ಹೇಗೆ ತೆಗೆದುಕೊಳ್ಳಬೇಕು?
ಕುಶ (ಹುಲ್ಲು), ಯಾವ (ಬಾರ್ಲಿ), ಕೆಲವು ದಾನ್ಯಗಳು, ಅಕ್ಷತೆ ಇವುಗಳನ್ನು ಕೈಯಲ್ಲಿ ಹಿಡಿದು ಸಂಕಲ್ಪ ತೆಗೆದುಕೊಳ್ಳಬೇಕು. ನಂತರ ಮಂತ್ರ ಹೇಳುತ್ತಾ ಅವುಗಳನ್ನು ದೇವರಿಗೆ ಅರ್ಪಿಸಬೇಕು. ಒಂದು ತಾಮ್ರದ ತಟ್ಟೆಯಲ್ಲಿ ಅಕ್ಕಿ, ಬಾರ್ಲಿ, ಹೂಗಳು, ತುಳಸಿ ಎಲೆಯನ್ನು ಹಾಕಿಡಿ, ಅದನ್ನು ಕೈಯಲ್ಲಿ ಹಿಡಿದುಕೊಳ್ಳಬೇಕು, ನಂತರ ಮೂರು ಕುಶ ಪ್ಲೇಟ್‌ನಲ್ಲಿ ಇಡಬೇಕು. ನಂತರ ನೀರನ್ನು ಚಿಮುಕಿಸಿ ನಂತರ ನೀರನ್ನು ಮಂತ್ರ ಪಠಿಸುತ್ತಾ ಅರ್ಪಿಸಬೇಕು. ತರ್ಪಣ ಅರ್ಪಣೆ ಮಾಡುವಾಗ ಪವಿತ್ರ ದಾರ ಧರಿಸಬೇಕು, ಬಿಳಿ ಟವಲ್ ಕುತ್ತಿಗೆಯಲ್ಲಿರಬೇಕು. ನಂತರ ಉತ್ತರಕ್ಕೆ ಮುಖ ಮಾಡಿ ಕೂರಬೇಕು, ಪಿಂಡ, ಎಳ್ಳು, ನೀರನ್ನು ಮೂರು ಬಾರಿ ಅರ್ಪಿಸಬೇಕು. ದಕ್ಷಿಣಕ್ಕೆ ಮುಖ ನೀಡಿ ನಿಂತು ಯಮಧರ್ಮನಿಗೂ ತರ್ಪಣ ಅರ್ಪಿಸಬೇಕು.
ಓಂ ಯಮಾಯ ನಮಃ, ಓಂ ಧರ್ಮ ರಾಜಾಯ ನಮಃ, ಓಂ ಮೃತ್ಯವೇ ನಮಃ, ಓಂ ಅನಂತ ಕಾಯ ನಮಃ, ಓಂ ವೈವಸ್ವತಾಯ ನಮಃ, ಓಂ ಕಾಲಾಯ ನಮಃ, ಓಂ ಸರ್ವ ಭೂತ ಕ್ಷಯ ನಮಃ, ಓಂ ಪ್ರದುಮ್ಬ್ರಾಯ ನಮಃ, ಓಂ ದಧ್ನಾಯ ನಮಃ, ಓಂ ನೀಲಾಯ ನಮಃ, ಓಂ ಪರಮೇಷ್ಟಿನೇ ನಮಃ, ಓಂ ವೃಕೋದರಾಯ ನಮಃ,ಓಂ ಚಿತ್ರಾಯ ನಮಃ, ಓಂ ಚಿತ್ರಗುಪ್ತಾಯ ನಮಃ
ಈ ಮಂತ್ರ ಪಠಣೆ ಮಾಡಿ, ತರ್ಪಣ ಅರ್ಪಿಸಿ, ನಂತರ ಅಲ್ಲಿಂದ ಸ್ವಲ್ಪ ಹೊತ್ತು ದೂರ ನಿಲ್ಲಿ. ಆವಾಗ ಪಿತೃ ಬಂದು ತರ್ಪಣ ಸ್ವೀಕರಿಸುತ್ತಾರೆ ಎಂಬ ನಂಬಿಕೆ.
ಪಿತೃತರ್ಪಣ ನೀಡುವುದರಿಂದ ಕುಟುಂಬಕ್ಕೆ ಒಳಿತಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
