Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ರಾಹು-ಕೇತು-ಶನಿ ಸಂಯೋಗ: ಈ 5 ರಾಶಿಯವರಿಗೆ ಆರ್ಥಿಕವಾಗಿ ಸವಾಲಿನ ಸಮಯ
ರಾಹು-ಕೇತು ಹಿಮ್ಮುಖ ಚಲನೆ ಮಾಡುವ ನೆರಳು ಗ್ರಹವಾಗಿದೆ, ಈ ಗ್ರಹಗಳು ಅಕ್ಟೋಬರ್ 30ಕ್ಕೆ ರಾಶಿ ಬದಲಾಯಿಸಲಿದೆ, ಶನಿಯು ಹಿಮ್ಮುಖ ಚಲನೆಯಲ್ಲಿದೆ. ಈ ರೀತಿ ನೆರಳು ಗ್ರಹಗಳು ರಾಶಿ ಬದಲಾವಣೆ ಮಾಡಿದಾಗ ಶನಿ, ರಾಹು-ಕೇತು ಗ್ರಹಗಳ ಸಂಯೋಗವಾಗುವುದರಿಂದ ಇದರ ಪ್ರಭಾವ ರಾಶಿಯ ಮೇಲಿರಲಿದೆ. ಈ ಸಂಯೋಗ ಕೆಲವೊಂದು ರಾಶಿಗಳಿಗೆ ದೊಡ್ಡ ಸವಾಲನ್ನು ತರಲಿದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ, ಆ ರಾಶಿಗಳು ಯಾವುವು ಎಂದು ನೋಡುವುದಾದರೆ....
ರಾಹು-ಕೇತು-ಶನಿ ಸಂಯೋಗ: ಚಂದ್ರನ ರಾಶಿಯ 12ನೇ, ಮೊದಲ ಹಾಗೂ 2ನೇ ಮನೆಯಲ್ಲಿ ಈ ಗ್ರಹಗಳು ಇದ್ದಾಗ ರಾಹು-ಕೇತು-ಶನಿ ಸಂಯೋಗ ಉಂಟಾಗುವುದು.

ಮೇಷ ರಾಶಿ:
ಈ ರಾಹು-ಕೇತು-ಶನಿ ಸಂಯೋಗ ಮೇಷ ರಾಶಿಯವರಿಗೆ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಒತ್ತಡವನ್ನು ಹೆಚ್ಚಿಸಲಿದೆ. ಹಣ ತುಂಬಾನೇ ಖರ್ಚಾಗಲಿದೆ, ಊಹಿಸಿದೆ ಇರುವ ಖರ್ಚುಗಳು ಎದುರಾಗುವುದು. ಆದ್ದರಿಂದ ಹಣಕಾಸಿನ ವಿಷಯದಲ್ಲಿ ತುಂಬಾನೇ ಜಾಗ್ರತೆವಹಿಸಬೇಕಾಗಿದೆ. ಆರ್ಥಿಕ ತೊಂದರೆಯಿಂದಾಗಿ ಕುಟುಂಬ ಜೀವನದಲ್ಲಿ ಹಲವು ಸಮಸ್ಯೆಗಳನ್ನು ತರಬಹುದು.
ಕರ್ಕ ರಾಶಿ:
ರಾಹು-ಕೇತು-ಶನಿ ಗ್ರಹಗಳ ಸಂಯೋಗ ಕರ್ಕ ರಾಶಿಯವರ ಮೇಲೂ ಅಡ್ಡಪರಿಣಾಮ ಬೀರುವುದು. ನೀವು ನಿಮ್ಮ ವೃತ್ತಿ ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸಬಹುದು. ನಿಮ್ಮ ಉಳಿತಾಯದ ಮೇಲೆ ದೊಡ್ಡ ಹೊಡೆತ ಬೀಳುವುದು, ಹಣ ನೀರಿನಂತೆ ಖರ್ಚಾಗುವುದು. ಈ ಸಮಯದಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಗಳು ಕಂಡು ಬರುವುದು. ಹಣ ಜೋಡಿಸುವುದೇ ದೊಡ್ಡ ಸವಾಲಾಗಬಹುದು. ಈ ಅವಧಿಯಲ್ಲಿ ಎಷ್ಟು ಕಡಿಮೆ ಖರ್ಚು ಮಾಡುತ್ತೀರೋ ಅಷ್ಟೇ ಒಳ್ಳೆಯದು.
ಸಿಂಹ ರಾಶಿ
ಸಿಂಹ ರಾಶಿಯವರು ರಾಹು-ಕೇತು-ಶನಿ ಸಂಯೋಗದಿಂದ ಕೆಲವು ಅನಿರೀಕ್ಷಿತ ಘಟನೆಗಳು ಸಂಭವಿಸುವುದು. ನೀವು ಎಷ್ಟೇ ಶ್ರಮಪಟ್ಟು ಕೆಲಸ ಮಾಡಿದರೂ ನೀವು ನಿರೀಕ್ಷೆ ಮಾಡಿದಷ್ಟು ಫಲಿತಾಂಶ ಸಿಗದೇ ಇರುವುದರಿಂದ ನಿರಾಸೆ ಉಂಟಾಗುವುದು. ವೃತ್ತಿ ಜೀವನದಲ್ಲಿ ಹಲವು ಸವಾಲುಗಳು ಎದುರಾಗುವುದು. ಕಾನೂನು ವಿಷಯದಲ್ಲಿ ತುಂಬಾನೇ ಜಾಗ್ರತೆವಹಿಸಬೇಕು. ವಾಹನ ಚಲಾಯಿಸುವಾಗ ತುಂಬಾನೇ ಜಾಗ್ರತೆವಹಿಸಿ, ಈ ಅವಧಿಯಲ್ಲಿ ತಾಳ್ಮೆ ತುಂಬಾನೇ ಮುಖ್ಯ.
ವೃಶ್ಚಿಕ ರಾಶಿ
ರಾಹು-ಕೇತು-ಶನಿಯ ಸಂಯೋಗದಿಂದ ವೃಶ್ಚಿಕ ರಾಶಿಯವರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಆರೋಗ್ಯಕ್ಕಾಗಿ ಹೆಚ್ಚಿನ ಹಣ ಖರ್ಚಾಗುವುದು. ಯಾವುದೇ ಹೊಸ ಪ್ರಾಜೆಕ್ಟ್ ಶುರು ಮಾಡಲು ಹೋಗಬೇಡಿ. ಆರ್ಥಿಕ ಸಂಕಷ್ಟ ಎದುರಾಗುವುದು ಈ ಕಾರಣಕ್ಕೆ ಮನೆಯಲ್ಲೂ ಹಲವಾರು ಸಮಸ್ಯೆಗಳು ಎದುರಾಗುವುದು.
ಮೀನ ರಾಶಿ:
ರಾಹು-ಕೇತು-ಶನಿ ಸಂಯೋಗದಿಂದ ಅನೇಕ ಸವಾಲುಗಳು ಎದುರಾಗುವುದು. ಕುಟುಂಬದಲ್ಲಿ ಅನೇಕ ಸಮಸ್ಯೆಗಳು ಎದುರಾಗಬಹುದು. ಆರ್ಥಿಕ ತೊಂದರೆಯಿಂದ ಖರ್ಚು, ಮಾನಸಿಕ ಒತ್ತಡ ಹೆಚ್ಚಾಗುವುದು, ಕೂಡಿಟ್ಟ ಹಣ ಖರ್ಚಾಗುವುದು. ಖರ್ಚಿನ ಬಗ್ಗೆ ಹೆಚ್ಚಿನ ಜಾಗ್ರತೆವಹಿಸಿ.
ಪರಿಹಾರವೇನು?
* ಮಂಗಳವಾರ ರಾತ್ರಿ 150 ಗ್ರಾಂ ಉದ್ದಿನ ಬೇಳೆ, 150 ಗ್ರಾಂ ಎಳ್ಳಿ ಮಿಶ್ರ ಮಾಡಿ ಮೀನಿಗೆ ಹಾಕಿ.
* ರಾತ್ರಿ ಮಲಗುವಾಗ ಕಪ್ಪು ಕಂಬಳಿ ಒದ್ದು ಮಲಗಿ.
* ಬೆಳಗ್ಗೆ ಬೇಗನೆ ಎದ್ದು ಮೀನುಗಳಿಗೆ ಕಪ್ಪು ಬಟ್ಟೆಯಲ್ಲಿ ಎಳ್ಳು, ಉದ್ದು ಮಿಶ್ರ ಮಾಡಿ ತೆಗೆದುಕೊಂಡು ಹೋಗಿ ಹಾಕಿ. ನಂತರ ಮೀನುಗಳು ಆ ಆಹಾರವನ್ನು ತಿನ್ನುವುದನ್ನು ನೋಡುತ್ತಾ ನಿಲ್ಲಿ. ಇದರಿಮದ ರಾಹು-ಕೇತು-ಶನಿ ಮೂರು ಗ್ರಹಗಳ ದೋಷವೂ ಕಡಿಮೆಯಾಗುವುದು.
ಈ ಮೂರು ಗ್ರಹಗಳ ದೋಷ ಕಡಿಮೆ ಮಾಡಲು ರಾಹು, ಕೇತು, ಶನಿ ಮಂತ್ರ ಪಠಿಸಿ
ಈ ರೀತಿ ಮಾಡುವುದರಿಂದ ನಿಮ್ಮ ಸಮಸ್ಯೆಗಳು ದೂರಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
