ನವರಾತ್ರಿ ಮೊದಲ ದಿನ ನವರಾತ್ರಿ ಪೂಜಾ ನಿಯಮಗಳೇನು?

ನವರಾತ್ರಿಯ ಸಡಗರ ಶುರುವಾಗಿದೆ, ಅಕ್ಟೋಬರ್ 15ಕ್ಕೆ ಶುಭ ಮುಹೂರ್ತದಿಂದ ನವರಾತ್ರಿ ಸಡಗರ ಶುರುವಾಗುವುದು. ನವರಾತ್ರಿ ಎಂದರೆ ತುಂಬಾನೇ ಶುಭ ಸಮಯ. ಈ ಸಮಯದಲ್ಲಿ ಏನಾದರು ಹೊಸ ಕಾರ್ಯ ಪ್ರಾರಂಭಿಸಲು ತುಂಬಾನೇ ಶುಭ ಎಂದು ಹೇಳಲಾಗುವುದು.

ಹಾಗಾಗಿ ವ್ಯವಹಾರ, ಹೊಸ ಉದ್ಯಮ, ಗೃಹ ಪ್ರವೇಶ ಇವುಗಳನ್ನು ಈ ಸಮಯದಲ್ಲಿ ಹೆಚ್ಚಾಗಿ ಮಾಡಲಾಗುವುದು. ಅಕ್ಟೋಬರ್‌ 15ರಂದು ಶುಭ ಮುಹೂರ್ತದಲ್ಲಿ ಘಟಸ್ಥಾಪನ ಮಾಡಿ ದೇವಿ ಶಕ್ತಿಯನ್ನು ಆಹ್ವಾನಿಸಲಾಗುವುದು. ದುರ್ಗಾ ಪೂಜೆಗೆ ಯಾವೆಲ್ಲಾ ಸಾಮಗ್ರಿ ಬೇಕು, ಪೂಜಾ ನಿಯಮಗಳೇನು? ದೇವಿ ಮಂತ್ರಗಳು ಇವುಗಳ ಬಗ್ಗೆ ಮಾಹಿತಿ ತಿಳಿಯೋಣ

Navratri

ಶಾರದೀಯ ನವರಾತ್ರಿ ತಿಥಿ ಮುಹೂರ್ತ
ಪ್ರತಿಪದ ದಿನಾಂಕ ಪ್ರಾರಂಭ- 14 ಅಕ್ಟೋಬರ್ 2023, ಶನಿವಾರ ರಾತ್ರಿ 11:24ಕ್ಕೆ
ಪ್ರತಿಪದ ತಿಥಿಯ ಮುಕ್ತಾಯ - ಅಕ್ಟೋಬರ್ 15, ಭಾನುವಾರ, ಮಧ್ಯಾಹ್ನ 12:32 ಕ್ಕೆ
ಉದಯತಿಥಿಯ ಪ್ರಕಾರ, ಶಾರದೀಯ ನವರಾತ್ರಿಯು ಅಕ್ಟೋಬರ್ 15 ರ ಭಾನುವಾರದಿಂದ ಪ್ರಾರಂಭವಾಗಲಿದೆ.

ಕಲಶವನ್ನು ಯಾವ ಸಮಯದಲ್ಲಿ ಪ್ರತಿಷ್ಠಾಪನೆ ಮಾಡಬೇಕು?
ಕಲಶ ಸ್ಥಾಪನೆಗೆ ಶುಭ ಸಮಯ: ಅಕ್ಟೋಬರ್ 15 ಬೆಳಗ್ಗೆ 11:44 ರಿಂದ ಮಧ್ಯಾಹ್ನ 12:30 ರವರೆಗೆ
ಕಲಾಶ ಸ್ಥಾಪನೆಗೆ ಒಟ್ಟು ಅವಧಿ: 45 ನಿಮಿಷಗಳು

ಕಲಶ ಪ್ರತಿಷ್ಠಾಪಿಸಲು ಸಂಬಂಧಿಸಿದ ವಸ್ತುಗಳು
ಮಣ್ಣಿನ ಮಡಕೆ
ಮಣ್ಣು
ಸಪ್ತ ಬಗೆಯ ಧಾನ್ಯಗಳು
ಹಿತ್ತಾಳೆ ಕಲಶ
ನೀರು
ಕೆಂಪು ಅಥವಾ ಬಿಳಿ ನೂಲು
ಸುಗಂಧ ದ್ರವ್ಯ
ವೀಳ್ಯದೆಲೆ
ನಾಣ್ಯಗಳು
ಅಶೋಕ ಎಲೆ 5 ಅಥವಾ ಮಾವಿನ ಮರದ 5
ಕೆಂಪು ವಸ್ತ್ರ
ತೆಂಗಿನಕಾಯಿ
ನಾಣ್ಯ
ಹೂ
ತಾಳಿ

ಕಲಶಕ್ಕೆ ಪವಿತ್ರ ನೂಲನ್ನು ಸುತ್ತಬೇಕು
ಅದರೊಳಗೆ ವೀಳ್ಯೆದೆಲೆ, ನಾಣ್ಯ, ಧಾನ್ಯ, ಸುಗಂಧ ದ್ರವ್ಯ, ಗರಿಕೆ ಹುಲ್ಲು, ಅಕ್ಷತೆ ಹಾಕಿ ಕಲಶದ ಮೇಲೆ ಅಶೋಕ ಎಲೆಯಿಂದ ಮುಚ್ಚಿ ಅದರ ಮೇಲೆ ಕೆಂಪು ಬಟ್ಟೆಯಿಂದ ಸುತ್ತಿದ ತೆಂಗಿನಕಾಯಿ ಇಡಿ. ಕಲಶಕ್ಕೆ ತಾಳಿಯನ್ನು ಹಾಕಿ.
* ಮಣ್ಣಿನ ಮಡಿಕೆಯಲ್ಲಿ ಮಣ್ಣನ್ನು ತುಂಬಿ ಅದರಲ್ಲಿ ಧಾನ್ಯಗಳನ್ನು ಮೊಳಕೆ ಬರಲು ಹಾಕಿ, ಮಣ್ಣಿಗೆ ಸ್ವಲ್ಪ ನೀರು ಚಿಮುಕಿಸಬೇಕು.
* ನಂತರ ದೇವಿ ಶಕ್ತಿಯನ್ನು ಆಹ್ವಾನ ಮಾಡಬೇಕು.
* ದೇವಿಗೆ ಹೂಗಳು, ಹಣ್ಣುಗಳನ್ನು ಅರ್ಪಿಸಿ ಪೂಜಿಸಬೇಕು.

ನವರಾತ್ರಿಯಲ್ಲಿ ದೇವಿಗೆ ನೈವೇದ್ಯ ಅರ್ಪಿಸಬೇಕು:
* ದುರ್ಗಾದೇವಿಗೆ ನೀವು ಮೊದಲ ದಿನ ನೈವೇದ್ಯ ಜೊತೆಗೆ ತುಪ್ಪವನ್ನೂ ಅರ್ಪಿಸಿ'
* ಎರಡನೇ ದಿನ ದೇವಿಗೆ ಹಣ್ಣುಗಳು ಹಾಗೂ ಸಕ್ಕರೆಯನ್ನು ನೈವೇದ್ಯವಾಗಿ ಅರ್ಪಿಸಿ
* ಮೂರನೇಯ ದಿನ ಅಕ್ಕಿ ಪಾಯಸ ಅರ್ಪಿಸಿ
* ನಾಲ್ಕನೇ ದಿನ ದೇವಿಗೆ ಕಜ್ಜಾಯವನ್ನು ಅರ್ಪಿಸಿ
* ಐದನೇ ದಿನ ದೇವಿಗೆ ಬಾಳೆಹಣ್ಣುಗಳನ್ನು ಪ್ರಸಾದವನ್ನಾಗಿ ಅರ್ಪಿಸಿ
* 6ನೇ ದಿನ ಪ್ರಸಾದ ಜೊತೆಗೆ ಜೇನುತುಪ್ಪ ಕೂಡ ಅರ್ಪಿಸಿ.
* 7ನೇ ದಿನ ನೀವು ದೇವಿಗೆ ಬೆಲ್ಲವನ್ನು ಅರ್ಪಿಸಿ
* 8ನೇ ದಿನ ಹಣ್ಣುಗಳ ಜೊತೆಗೆ ತೆಂಗಿನಕಾಯಿಯನ್ನು ಅರ್ಪಿಸಿ
* 9ನೇ ದಿನ ಎಳ್ಳು ಅರ್ಪಿಸಿ.

ಈ ಮಂತ್ರ ಪಠಿಸಿ
"ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ| ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣಿ ನಮೋಸ್ತುತೇ||''

ದುರ್ಗೆಯನ್ನು ಆರಾಧನೆ ಮಾಡುವುದರಿಂದ ಎಲ್ಲಾ ಕಷ್ಟಗಳು ದೂರಾಗುವುದು, ನಿಮ್ಮ ಸಂಪತ್ತು ವೃದ್ಧಿಸುವುದು, ಮನೆಯಲ್ಲಿ ಧನಾತ್ಮಕ ಶಕ್ತಿಯಿಂದ ಕೂಡಿರುತ್ತದೆ, ಆದ್ದರಿಂದ ಯಾವುದೇ ಕೆಟ್ಟ ಶಕ್ತಿಗಳು ಬಾಧಿಸುವುದಿಲ್ಲ ಎಂದು ಹೇಳಲಾಗುವುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Navratri: Puja Vidhi To Perform On Ist Day of Navratri In Kannada

Navratri: How to perform puja on navratri first day, read on....
Story first published: Saturday, October 14, 2023, 13:52 [IST]
X
Desktop Bottom Promotion