Latest Updates
-
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ
ಅಕ್ಟೋಬರ್ 28ಕ್ಕೆ ಖಗ್ರಾಸ ಚಂದ್ರಗ್ರಹಣ: ಯಾವ ರಾಶಿಯವರಿಗೆ ಶುಭವಲ್ಲ?
ಅಕ್ಟೋಬರ್ 28ರ ಹುಣ್ಣಿಮೆಯಂದು ಭಾಗಶಃ ಚಂದ್ರಗ್ರಹಣ ಸಂಭವಿಸಲಿದೆ. ಆದ್ದರಿಂದ ಜಾಗರೂಕರಾಗಿರಬೇಕು. ಈ ಚಂದ್ರಗ್ರಹಣ ಭಾರತ ಸೇರಿದಂತೆ ಇತರ ಕೆಲವು ದೇಶಗಳಲ್ಲೂ ಗೋಚರಿಸಲಿದೆ. ಅಶ್ವಿನ್ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ ಅಕ್ಟೋಬರ್ 28 ರಂದು ಮೇಷ ರಾಶಿಯಲ್ಲಿ ಚಂದ್ರಗ್ರಹಣ ಸಂಭವಿಸಲಿದೆ.
ಭಾರತವಲ್ಲದೆ, ಏಷ್ಯಾ, ಯುರೋಪ್, ಆಫ್ರಿಕಾ, ಪಶ್ಚಿಮ ದಕ್ಷಿಣ ಪೆಸಿಫಿಕ್ ಮಹಾಸಾಗರ, ಅಮೆರಿಕದ ಪೂರ್ವ ಭಾಗ, ಅಟ್ಲಾಂಟಿಕ್ ಮಹಾಸಾಗರ ಮತ್ತು ಹಿಂದೂ ಮಹಾಸಾಗರದಲ್ಲಿ ಈ ಗ್ರಹಣ ಗೋಚರಿಸಲಿದೆ.
ಭಾರತೀಯ ಕಾಲಮಾನದ ಪ್ರಕಾರ ಚಂದ್ರಗ್ರಹಣದ ರಾತ್ರಿ 11:32 ಕ್ಕೆ, ಪ್ರಾರಂಭವಾಗಿ ರಾತ್ರಿ 1:05ರವರೆಗೆ ಇರಲಿದೆ,
ಗ್ರಹಣ ಮೋಕ್ಷದ ಸಮಯ ರಾತ್ರಿ 02:23ಕ್ಕೆ

ಈ ಗ್ರಹಣವು ಭಾರತದಲ್ಲಿ ಗೋಚರಿಸುವುದರಿಂದ, ಸೂತಕವು ದಿನದಲ್ಲಿ ಸಂಜೆ 4.05 ರಿಂದ ಪ್ರಾರಂಭವಾಗುತ್ತದೆ. ಈ ಗ್ರಹಣ ಗೋಚರವಾಗುವ ಪ್ರದೇಶಗಳಲ್ಲಿ ವೇಧ, ಸೂತಕ, ಸ್ನಾನ, ದಾನ ಇತ್ಯಾದಿ ಎಲ್ಲ ನಿಯಮಗಳನ್ನೂ ಪಾಲಿಸಲಾಗುವುದು. ವೃಷಭ, ಸಿಂಹ, ತುಲಾ, ಧನು ಮತ್ತು ಮೀನ ರಾಶಿಯವರಿಗೆ ಚಂದ್ರಗ್ರಹಣವು ಅಶುಭ ಮತ್ತು ನೋವಿನಿಂದ ಕೂಡಿರಲಿದೆ, ಮೇಷ, ಕನ್ಯಾ ಮತ್ತು ಮಕರ ರಾಶಿಯವರಿಗೆ ಸಾಮಾನ್ಯವಾಗಿರುತ್ತದೆ. ಮಿಥುನ, ಕರ್ಕ, ವೃಶ್ಚಿಕ ಮತ್ತು ಕುಂಭ ರಾಶಿಯವರಿಗೆ ಇದು ಚೆನ್ನಾಗಿರಲಿದೆ. ಯಾರಿಗೆ ಗ್ರಹಣ ಅಶುಭವಾಗಿದೆಯೋ ಅವರು ಗ್ರಹಣ ನೋಡಲೇಬಾರದು
ಮೇಷ ರಾಶಿ
ಮೇಷ ರಾಶಿಯವರು ತುಂಬಾನೇ ಜಾಗ್ರತೆವಹಿಸಬೇಕು, ಈ ಸಮಯದಲ್ಲಿ ಗಾಡಿ ಚಲಾಯಿಸುವಾಗ ಜಾಗ್ರತೆವಹಿಸಿ.
ವೃಷಭ ರಾಶಿ
ಈ ಗ್ರಹಣದ ಪ್ರಭಾವದಿಂದ ಜೀವನದಲ್ಲಿ ಏರಳಿತ ಅನುಭವಿಸಬೇಕಾಗುವುದು, ಇದ್ದಕ್ಕಿದ್ದಂತೆ ಹಣ ನಷ್ಟವಾಗುವ ಸಾಧ್ಯತೆ ಇದೆ, ಆದ್ದರಿಂದ ಜಾಗ್ರತೆವಹಿಸಿ.
ಮಿಥುನ ರಾಶಿ
ಈ ಗ್ರಹಣದ ಬಳಿಕ ಉತ್ತಮ ಆರ್ಥಿಕ ಪ್ರಯೋಜನವನ್ನು ಪಡೆಯುತ್ತೀರಿ, ನಿಮಗೆ ಉತ್ತಮ ಆದಾಯದ ಮೂಲ ದೊರೆಯಲಿದೆ.
ಕರ್ಕ ರಾಶಿ
ಗ್ರಹಣದ ಪ್ರಭಾವದಿಂದ ಕುಟುಂಬದಲ್ಲಿ ಸಮಸ್ಯೆಗಳಿರಬಹುದು, ಕುಟುಂಬದ ಸಮಸ್ಯೆಗಳನ್ನು ತಾಳ್ಮೆಯಿಂದ ನಿಭಾಯಿಸಿಕೊಂಡು ಹೋಗಲು ಪ್ರಯತ್ನಿಸಿ, ಆದಷ್ಟು ಕೋಪ ನಿಯಂತ್ರಿಸಿ.
ಸಿಂಹ ರಾಶಿ
ಸಿಂಹ ರಾಶಿಯವರ ಪ್ರಮುಖ ಕೆಲಸಕ್ಕೆ ಅಡೆತಡೆ ಉಂಟಾಗುವ ಸಾಧ್ಯತೆ ಇದೆ. ಮಕ್ಕಳ ಕುರಿತು ನಿಮ್ಮ ಚಿಂತೆ ಕಾಡಬಹುದು. ಅವರ ವರ್ತನೆ ಅಥವಾ ಶಿಕ್ಷಣದ ಕುರಿತು ಚಿಂತೆ ಕಾಡಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಅನುಕೂಲಕರವಾಗಿದೆ. ವಾಹನ ಖರೀದಿ, ಆಸ್ತಿ ಖರೀದಿ ಅಂತ ಮಾಡುವ ಸಾಧ್ಯತೆ ಇದೆ.
ತುಲಾ ರಾಶಿ
ಸಂಗಾತಿಯ ಭಿನ್ನಾಭಿಪ್ರಾಯ ಹೆಚ್ಚಾಗಬಹುದು, ಅತೀ ಹೆಚ್ಚಿನ ಮಾನಸಿಕ ಒತ್ತಡ ಅನುಭವಿಸಬಹುದು, ನೀವು ಧ್ಯಾನದ ಕಡೆಗೆ ಗಮನಹರಿಸಿ. ಸಂಗಾತಿಯೊಂದಿಗಿನ ಸಮಸ್ಯೆಯನ್ನು ಮುಕ್ತ ಮನಸ್ಸಿನಿಂದ ಬಗೆಹರಿಸಲು ಪ್ರಯತ್ನಿಸಿ.
ವೃಶ್ಚಿಕ ರಾಶಿ
ಆರೋಗ್ಯದ ಕಡೆಗೆ ತುಂಬಾನೇ ಜಾಗ್ರತೆವಹಿಸಬೇಕು, ಇಲ್ಲದಿದ್ದರೆ ಆಸ್ಪತ್ರೆಗೆ ತುಂಬಾನೇ ಖರ್ಚಾಗುವುದು.
ಧನು ರಾಶಿ
ಅನಗ್ಯತವಾಗಿ ವಾದಕ್ಕೆ ಹೋಗಬೇಡಿ. ಎಷ್ಟು ತಾಳ್ಮೆಯಿಂದ ವರ್ತಿಸುತ್ತಾರೋ ಅಷ್ಟು ಸಮಸ್ಯೆ ಕಡಿಮೆಯಾಗುವುದು.
ಮಕರ ರಾಶಿ
ನಿಮ್ಮ ಸೌಕರ್ಯ ಹೆಚ್ಚಾಗಲಿದೆ. ನಿಮ್ಮಲ್ಲಿ ಕೆಲವರು ಆಸ್ತಿ, ವಾಹನ ಖರೀದಿಸಬಹುದು.
ಕುಂಭ ರಾಶಿ
ನಿಮ್ಮ ಸೌಕರ್ಯ ಹೆಚ್ಚಾಗಲಿದೆ, ಆರ್ಥಿಕ ಸ್ಥಿತಿ ಮತ್ತಷ್ಟು ಉತ್ತಮವಾಗಲಿದೆ. ನಿಮಗೆ ಬರಬೇಕಾಗಿರುವ ಹಣ ಕೈ ಸೇರಲಿದೆ.
ಮೀನ ರಾಶಿ
ವ್ಯವಹಾರಸ್ಥರು ತುಂಬಾನೇ ಜಾಗ್ರತೆವಹಿಸಬೇಕು. ಯಾವುದೇ ನಿರ್ಧಾರವನ್ನು ಆತುರದಿಂದ ತೆಗೆದುಕೊಳ್ಳಬೇಡಿ.
ಗ್ರಹಣದ ಸಮಯದಲ್ಲಿ ಈ ನಿಯಮಗಳನ್ನು ಪಾಲಿಸಿ
ಗ್ರಹಣದ ಸಮಯದಲ್ಲಿ ಗರ್ಭಿಣಿಯರು ವಿಶೇಷವಾಗಿ ಜಾಗೃತರಾಗಿರಬೇಕು. ಸೂತಕ ಆರಂಭವಾದ ತಕ್ಷಣ ಮೇಷ ರಾಶಿಯ ಜನರು ಗ್ರಹಣ ಮುಗಿಯುವವರೆಗೂ ಏನನ್ನೂ ತಿನ್ನಬಾರದು. ಗ್ರಹಣದ ಮುಗಿದ ಬಳಿಕ ದಾಣ ಮಾಡುವುದು ಒಳ್ಳೆಯದು. ಗ್ರಹಣ ಅವಧಿಯಲ್ಲಿ, ಪ್ರಧಾನ ದೇವತೆಗಳಾದ ಶ್ರೀರಾಮ, ಕೃಷ್ಣ, ಹನುಮಾನ್ ಜಿ ಮುಂತಾದವರ ಮಂತ್ರವನ್ನು ಪಠಿಸಿ. ಮಂತ್ರ ಪಠಿಸುವಾಗ ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಿ. ಮಂತ್ರ ಗೊತ್ತಿಲ್ಲದಿದ್ದರೆ ದೇವರ ನಾಮ ಜಪ ಮಾಡಿದರೂ ಸಾಕು. ಗ್ರಹಣ ಮುಗಿದ ಬಳಿಕ ಸ್ನಾನ ಮಾಡಿ ನಂತರವಷ್ಟೇ ಏನಾದರೂ ಸೇವಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











