Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಕಾರ್ತಿಕ ಮಾಸ ಕಡೆಯ ಸೋಮವಾರ: ಈ ದಿನ ಈ ಕಾರ್ಯಗಳನ್ನು ಮಾಡಿದರೆ ತುಂಬಾ ಒಳಿತಾಗುವುದು
2023ರಲ್ಲಿ ಕಾರ್ತಿಕ ಮಾಸ ಡಿಸೆಂಬರ್ 12ಕ್ಕೆ ಮುಕ್ತಾಯವಾಗಲಿದೆ, ಆದ್ದರಿಂದ ಡಿಸೆಂಬರ್ 11ನ್ನು ಕಡೆಯ ಕಾರ್ತಿಕ ಸೋಮವಾರವೆಂದು ಆಚರಿಸಲಾಗುವುದು. ಕಾರ್ತಿಕ ಮಾಸದಲ್ಲಿ ಕಾರ್ತಿಕ ಸೋಮವಾರಕ್ಕೆ ತುಂಬಾನೇ ಮಹತ್ವವಿದೆ.
ಈ ಕಾರ್ತಿಕ ಸೋಮವಾರದಂದು ಶಿವನನ್ನು ಪೂಜಿಸುವುದರಿಂದ ವಿಶೇಷ ಫಲ ಸಿಗಲಿದೆ. ಲಿ ಶನೀವು ಈ ಕಾರ್ತಿಕ ಸೋಮವಾರ ಈ ರೀತಿ ಮಾಡಿದರೆ ನಿಮ್ಮ ಜೀವನದಲ್ಲಿ ಶಿವನ ಕೃಪೆಯಿಂದಾಗಿ ಎಲ್ಲವೂ ಒಳಿತಾಗುವುದು ಎಂದು ಹೇಳಲಾಗುವುದು.
ಕಡೆಯ ಕಾರ್ತಿಕ ಸೋಮವಾರ ಏನು ಮಾಡಬೇಕು ಎಂದು ನೋಡೋಣ ಬನ್ನಿ:

ಕಾರ್ತಿಕ ಸೋಮವಾರದಂದು ನದಿ ಸ್ನಾನ ಮಾಡಿ. ನದಿ ಸ್ನಾನ ಮಾಡಿದರೆ ದೇಹಕ್ಕೆ ಒಳ್ಳೆಯದು ಎಂದು ಹೇಳಲಾಗುವುದು. ಈ ಸಮಯದಲ್ಲಿ ನದಿ ನೀರಿನಲ್ಲಿ ಧನಾತ್ಮಕ ಅಂಶಗಳಿರುತ್ತದೆ, ಆದ್ದರಿಂದ ಈ ಸಮಯದಲ್ಲಿ ನದಿ ಸ್ನಾನ ಮಾಡಿದರೆ ಮೈಗೆ ಒಳ್ಳೆಯದು ಎಂದು ಹೇಳಲಾಗುವುದು. ನವೆಂಬರ್ , ಡಿಸೆಂಬರ್, ಜನವರಿ ತಿಂಗಳಿನಲ್ಲಿ ಅಯ್ಯಪ್ಪವ್ರತ ಮಾಡುವ ಭಕ್ತರು ನದಿ ಸ್ನಾನ ಮಾಡುತ್ತಾರೆ, ಈ ರೀತಿ ನದಿ ಸ್ನಾನ ಮಾಡುವುದರಿಂದ ಶರೀರಕ್ಕೆ ಹೊಸ ಚೈತನ್ಯ ದೊರೆಯುತ್ತದೆ ಎಂಬುವುದು ನದಿ ಸ್ನಾನ ಮಾಡಿದವರ ಅನುಭವಕ್ಕೆ ಬಂದಿರುತ್ತದೆ.
ಶಿವ-ಪಾರ್ವತಿಗೆ ಅಲಂಕಾರ ಮಾಡಿ
ಸ್ನಾನದ ನಂತರ ಶಿವ-ಪಾರ್ವತಿ ಫೋಟೋಗೆ ಹೂಗಳನ್ನು ಅರ್ಪಿಸಿ, ಗಣಪತಿಯೇ ನಮಃ ಎಂದು ಮೊದಲು ಗಣೇಶನನ್ನು ಆರಾಧಿಸಿ 'ಓಂ ನಮಃ ಶಿವಾಯ' ಮಂತ್ರ ಪಠಿಸಿ.
ಈ ದಿನ 27 ದೀಪಗಳನ್ನು
ಕಾರ್ತಿಕ ಸೋಮವಾರ 27 ಹಣತೆಗಳನ್ನು ಹಚ್ಚಿಡಿ. ತುಳಸಿ ಕಟ್ಟೆಯ ಮುಂದೆ ಎರಡು ದೀಪಗಳನ್ನು ಹಚ್ಚಿಡಿ.
ಉಪವಾಸ ನಿಯಮ ಬಳಸಿ
ಕಾರ್ತಿಕ ಸೋಮವಾರದಂದು ಉಪವಾಸ ನಿಯಮ ಬಳಸಿ, ಈ ದಿನ ಸಂಪೂರ್ಣ ಉಪವಾಸ ಮಾಡಲು ಸಾಧ್ಯವಾಗದಿದ್ದರೆ ಹಣ್ಣುಗಳನ್ನು ಸೇವಿಸಬಹುದು. ಈ ದಿನ ಟೀ, ಮಜ್ಜಿಗೆ ಏನೂ ತೆಗೆದುಕೊಳ್ಳಬೇಡಿ. ಈ ದಿನ ಉಪವಾಸ ನಿಯಮ ಮಾಡಿದರೆ ಇದರ ಫಲ ಅಧಿಕ ದೊರೆಯಲಿದೆ.
* ಸಂಜೆ ಶಿವ ದೇವಾಲಯಕ್ಕೆ ಹೋಗಿ ದೀಪಗಳನ್ನು ಹಚ್ಚಿ ನಕ್ಚತ್ರ ನೋಡಿ ನಂತರವಷ್ಟೇ ಆಹಾರ ಸೇವಿಸಿ.
16 ಸೋಮವಾರ ವ್ರತವನ್ನು ನೀವು ಮಾಡಬಹುದು
ಈ ದಿನದಿಂದ ನೀವು 16 ವಾರಗಳ ಕಾಲ ಉಪವಾಸ ವ್ರತ ಪಾಲಿಸಿ ಶಿವನನ್ನು ಆರಾಧಿಸಬಹುದು, ಹೀಗೆ ಆರಾಧಿಸುವುದರಿಂದ ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಅನೇಕ ಸಮಸ್ಯೆಗಳು ದೂರಾಗುವುದು ಎಂದು ಹೇಳಲಾಗುವುದು.
ಈ ಶಿವ ಮಂತ್ರಗಳನ್ನು ಪಠಿಸಿ
ಪಂಚಾಕ್ಷರಿ ಶಿವ ಮಂತ್ರ
ಓಂ ನಮಃ ಶಿವಾಯ
ಮಹಾಮೃತ್ಯುಂಜಯ ಮಂತ್ರ
ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿವರ್ಧನಂ| ಊರ್ವಾರುಕಂವಾ ಬಂಧನಾ ಮೃತ್ಯೋರ್-ಮುಕ್ಷೀಯ ಮಾಮೃತಾತ್||
ರುದ್ರ ಮಂತ್ರ
ಓಂ ನಮೋ ಭಗವತೇ ರುದ್ರಾಯ
ಶಿವ ಗಾಯತ್ರಿ ಮಂತ್ರ
ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರ ಪ್ರಚೋದಯಾತ್
ಶಿವ ಧ್ಯಾನ ಮಂತ್ರ
ಕರ್ಚರನ್‌ಕೃತಂ ವಾ ಕೈಜಮ್ ಕರ್ಮಜಂ ವಾ ಶ್ರಾವಣ್ಣನಂಜಂ ವಾ ಮಾನ್ಸಮ್ ವಾ ಪರಧಮ್ ವಿಹಿತಂ ವಿಹಿತಂ ವಾ ಸರ್ವ್ ಮೆಟಾಟ್ ಕ್ಷಮಾಸ್ವ ಜೇ ಜೇ ಕರುನಾಬ್ಧೆ ಶ್ರೀ ಮಹಾದೇವ್ ಶಂಭೋ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications