Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಕೇತು ಸಂಚಾರ: ಅಕ್ಟೋಬರ್ 30ರಿಂದ 18 ತಿಂಗಳು ಈ 3 ರಾಶಿಯವರೇ ಜಾಗ್ರತೆ
ಕೇತು ಹಾಗೂ ರಾಹು ಹಿಮ್ಮುಖವಾಗಿ ಚಲಿಸುವ ಗ್ರಹಗಳಾಗಿವೆ. ಕೇತುವನ್ನು ನೆರಳು ಗ್ರಹವೆಂದು ಕರೆಯಲಾಗುವುದು. ನಮ್ಮ ರಾಶಿಯಲ್ಲಿ ಗುರು ಮತ್ತು ಮಂಗಳ ಬಲವಾದ ಸ್ಥಾನದಲ್ಲಿದ್ದರೆ ಕೇತುವಿನ ಅಶುಭ ಫಲ ಕಡಿಮೆ. ಕೇತು ಒಬ್ಬ ವ್ಯಕ್ತಿಗೆ ಆಧ್ಯಾತ್ಮಿಕ ಜ್ಞಾನವನ್ನು ಒದಗಿಸುತ್ತದೆ, ಗುರುವಿನ ನಂತರ, ಕೇತುವನ್ನು ಮೋಕ್ಷಕ್ಕೆ ಕಾರಣವಾದ ಗ್ರಹ ಎಂದು ಕರೆಯಲಾಗುವುದು.
ಇದೀಗ ಕೇತು ತುಲಾ ರಾಶಿಯಲ್ಲಿದೆ. ಅಕ್ಟೋಬರ್ 30ಕ್ಕೆ ತುಲಾ ರಾಶಿಯನ್ನು ಬಿಟ್ಟು ಕನ್ಯಾ ರಾಶಿಯನ್ನು ಪ್ರವೆಶಿಸಲಿದೆ. ಕೇತು ಕನ್ಯಾ ರಾಶಿಯಲ್ಲಿ 18 ತಿಂಗಳು ಇರಲಿದೆ. ಈ ಅವಧಿಯಲ್ಲಿ ಈ ಮೂರು ರಾಶಿಯವರು ಜಾಗ್ರತೆವಹಿಸಬೇಕಾಗಿದೆ:

ಮಿಥುನ ರಾಶಿ
ಕೇತು ಮಿಥುನ ರಾಶಿಯಲ್ಲಿ ನಾಲ್ಕನೇ ಮನೆಯಲ್ಲಿ ಇರಲಿದೆ. ಈ ಮನೆಯಲ್ಲಿ ಕೇತು ಇರುವುದರಿಂದ ಚಂಚಲತೆ, ಗೊಂದಲ ಇರುವುದು. ನೀವು ನಿಮ್ಮ ತಾಯಿಯ ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು. ಈ ಅವಧಿಯಲ್ಲಿ ಅನೇಕ ಸವಾಲುಗಳು ಎದುರಾಗುವುದರಿಂದ ಜೀವನದಲ್ಲಿ ಉತ್ಸಾಹ ಕಡಿಮೆಯಾಗುವುದು. ಈ ಸಾರಿಗೆ ಅವಧಿಯಲ್ಲಿ ನೀವು ಮಾನಸಿಕ ತೊಂದರೆ ಅನುಭವಿಸಬಹುದು. ನೀವು ನಿರೀಕ್ಷಿಸಿದಂತೆ ಕುಟುಂಬದಿಂದ ಸಹಾಯ ದೊರೆಯುವುದಿಲ್ಲ, ಇದರಿಂದ ನಿಮ್ಮ ಅಸಮಧಾನ ಹೆಚ್ಚಾಗುವುದು. ಈ ಸಮಯದಲ್ಲಿ ನೀವು ಎಚ್ಚರಿಕೆಯಿಂದ ವಾಹನ ಚಲಾಯಿಸಿ. ಕೆಲಸದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ನಡೆಸಬಹುದು, ಒಳ ರಾಜಕೀಯ ಬಗ್ಗೆ ಎಚ್ಚರವಹಿಸಿ. ವಿದೇಶಕ್ಕೆ ಹೋಗುವ ಪ್ರಯತ್ನದಲ್ಲಿದ್ದರೆ ಕನಸುಗಳು ಈಡೇರುತ್ತವೆ.
ಕನ್ಯಾ ರಾಶಿ
ಕೇತು ಕನ್ಯಾರಾಶಿಯ ಲಗ್ನ ಮನೆಯಲ್ಲಿ ಇರಲಿದೆ. ಮೊದಲ ಮನೆಯಲ್ಲಿರುವ ಕೇತು ನಿಮ್ಮ ಐದನೇ, ಏಳನೇ ಮತ್ತು ಒಂಬತ್ತನೇ ಮನೆಯ ಮೇಲೆ ತನ್ನ ದೃಷ್ಟಿಯನ್ನು ಹೊಂದಿರುತ್ತದೆ. ಲಗ್ನದಲ್ಲಿ ಕೇತುವಿನ ಸಂಚಾರವು ನಿಮ್ಮ ಆತ್ಮವಿಶ್ವಾಸ ಕುಗ್ಗಿಸುವುದು. ಈ ಅವಧಿಯಲ್ಲಿ ಅನಾವಶ್ಯಕವಾಗಿ ಹಣ ಖರ್ಚಾಗುವ ಸಾಧ್ಯತೆ ಇದೆ ಜಾಗ್ರತೆವಹಿಸಿ. ಈ ಕೇತು ಸಂಕ್ರಮಣದಿಂದಾಗಿ ಒಂದು ದೊಡ್ಡ ಯೋಜನೆ ನಿಮ್ಮ ಕೈ ತಪ್ಪುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ಸವಾಲುಗಳನ್ನು ಎದುರಿಸಬೇಕಾಗಬಹುದು. ನೀವು ಪ್ರೀತಿಸುತ್ತಿದ್ದರೆ ಮೋಸ ಹೋಗುವ ಸಾಧ್ಯತೆ ಇದೆ, ವೈವಾಹಿಕ ಜೀವನದಲ್ಲಿಯೂ ಉದ್ವಿಗ್ನತೆಯ ಸಾಧ್ಯತೆ ಇದೆ. ಈ ಸಮಯದಲ್ಲಿ ಯಾರೊಬ್ಬರ ಮಾತಿನಿಂದ ಪ್ರಭಾವಿತರಾಗಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ಈ ಕೇತು ಸಂಕ್ರಮಣದ ಸಮಯದಲ್ಲಿ ಹೆಚ್ಚು ಧಾರ್ಮಿಕ ಪ್ರಯಾಣ ಮಾಡುತ್ತಿರಿ.
ಕುಂಭ ರಾಶಿ
ಕುಂಭ ರಾಶಿಯಲ್ಲಿ ಕೇತು 8ನೇ ಮನೆಯಲ್ಲಿ ಇರಲಿದೆ. ಈ ಮನೆಯಿಂದ ಅಪಘಾತ ಮತ್ತು ಹಠಾತ್ ನಷ್ಟದ ಮನೆಯಾಗಿದೆ. ಈ ಮನೆಯಲ್ಲಿ ಇರಿಸಲಾಗಿರುವ ಕೇತುವು ಹನ್ನೆರಡನೇ, ಎರಡನೇ ಮತ್ತು ನಾಲ್ಕನೇ ಮನೆಗಳ ಮೇಲೆ ತನ್ನ ದೃಷ್ಟಿಯನ್ನು ಬೀರುವುದು. ಇದರ ಪ್ರಭಾವದಿಂದ ವ್ಯಕ್ತಿಯ ಬುದ್ಧಿವಂತಿಕೆಯನ್ನು ಅವನ ಸ್ನೇಹಿತರು ನಿಯಂತ್ರಿಸಲು ಪ್ರಾರಂಭಿಸುತ್ತಾರೆ. ಕೇತುವಿನ ಪ್ರಭಾವದಿಂದ ಕುಟುಂಬದಲ್ಲಿ ಕೆಲ ಸಮಸ್ಯೆಗಳು ಇರಬಹುದು. ಹಠಾತ್ ದೊಡ್ಡ ಹಣದ ನಷ್ಟ ಸಾಧ್ಯ. ಈ ಸಮಯದಲ್ಲಿ, ಕುಟುಂಬದಲ್ಲಿ ನಿಮ್ಮ ಕಾರಣದಿಂದಾಗಿ ಯಾವುದೇ ಕುಟುಂಬ ಭಿನ್ನಾಭಿಪ್ರಾಯ ಉಂಟಾಗದಂತೆ ನೀವು ಪ್ರಯತ್ನಿಸಬೇಕು. ಈ ಸಮಯದಲ್ಲಿ, ನಿಮ್ಮ ಮಾತಿನ ಪ್ರಭಾವದಿಂದಾಗಿ, ನೀವು ಕೆಲವು ದೊಡ್ಡ ಕೆಲಸವನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತೀರಿ.
ಕೇತು ದೋಷಕ್ಕೆ ಪರಿಹಾರ
* 'ಓಂ ಶ್ರಾಂ ಶ್ರೀಂ ಶ್ರೌಂ ಸಃ: ಕೇತವೇ ನಮಃ' ಈ ಮಂತ್ರ ಪ್ರತಿದಿನ 108 ಬಾರಿ ಪಠಿಸಿ: ಈ ಮಂತ್ರ ಪಠಣೆ ಮಾಡುವುದರಿಂದ ಕೇತುವಿನಿಂದ ಉಂಟಾಗುವ ತೊಂದರೆಯನ್ನು ತಡೆಗಟ್ಟಬಹುದು.
* ಪ್ರತಿ ಶನಿವಾರ ಆಲದ ಮರದ ಕೆಳಗಡೆ ತುಪ್ಪದ ದೀಪ ಹಚ್ಚಿ
* ಕೇತುವಿನ ದೋಷ ಕಡಿಮೆ ಮಾಡಲು ವಿನಾಯಕ, ಹನುಮಂತ, ದುರ್ಗೆಯನ್ನು ಆರಾಧಿಸಿ
* ಭಾನುವಾರ ಸಿಹಿ ತಿಂಡಿಯನ್ನು ಚಿಕ್ಕ ಹೆಣ್ಮಕ್ಕಳಿಗೆ ನೀಡಿ
* ಉದ್ದಿನ ಬೇಳೆ, ಉಣ್ಣೆಯ ಬಟ್ಟೆ, ಕಬ್ಬಿಣದ ವಸ್ತುಗಳು, ಕೊಡೆ, ಕಂಬಳಿ ಈ ಬಗೆಯ ವಸ್ತುಗಳನ್ನು ದಾನ ಮಾಡಿ.
* ತ್ರಯೋದಶಿ ತಿಥಿಯಂದು ಉಪವಾಸವಿದ್ದು ಕೇತು ಮಂತ್ರ ಪಠಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











