Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಕಾರ್ತಿಕ ಮಾಸ ಶುರು: 30 ದಿನಗಳು ಧಾರ್ಮಿಕ ದೃಷ್ಟಿಯಿಂದ ಈ ಕಾರ್ಯಗಳನ್ನ ಮಾಡಲೇಬಾರದು
ಧಾರ್ಮಿಕ ದೃಷ್ಟಿಯಿಂದ ಕಾರ್ತಿಕ ಮಾಸ ತುಂಬಾ ವಿಶೇಷವಾದ ಮಾಸವಾಗಿದೆ. ಕಾರ್ತಿಕ ಮಾಸ ನವೆಂಬರ್ 2ರಿಂದ ಶುರು. ಈ ಮಾಸ ಧಾರ್ಮಿಕ ಕಾರ್ಯಗಳಿಗೆ ತುಂಬಾನೇ ಶ್ರೇಷ್ಠ ಮಾಸವಾಗಿದೆ. ಕಾರ್ತಿಕ ಮಾಸದಲ್ಲಿ ಕಾರ್ತಿಕ ಸೋಮಾವಾರ ತುಂಬಾ ವಿಶೇಷವಾದ ದಿನವಾಗಿದೆ. ಈ ವರ್ಷ ಕಾರ್ತಿಕ ಮಾಸ ಡಿಸೆಂಬರ್ 1ಕ್ಕೆ ಮುಗಿಯಲಿದೆ. ಈ 30 ದಿನಗಳು ದೇವಾಲಯಗಳಲ್ಲಿ ದೀಪಗಳನ್ನು ಬೆಳಗಿಸಿ ವಿಶೇಷ ಪೂಜೆ ಸಲ್ಲಿಸಲಾಗುವುದು.
ಕಾರ್ತಿಕ ಮಾಸದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂಬ ಕೆಲ ಧಾರ್ಮಿಕ ನಿಯಮಗಳಿವೆ, ಇವುಗಳ ಬಗ್ಗೆ ನೋಡುವುದಾದರೆ...

ಕಾರ್ತಿಕ ಮಾಸದಲ್ಲಿ ಬ್ರಹ್ಮ ಮುಹೂರ್ತದಲ್ಲಿ ಎದ್ದೇಳಬೇಕು
ತುಳಸಿ ಕಟ್ಟೆಯ ಮುಂದೆ ಬೆಳಗ್ಗೆ ಮತ್ತು ಸಂಜೆ ದೀಪಗಳನ್ನು ಹಚ್ಚಿಡಬೇಕು
ಈ ಮಾಸದಲ್ಲಿ ದೇವಾಲಯದಲ್ಲಿ ದೀಪ ಹಚ್ಚಿಡಲು ಎಣ್ಣೆ ದಾನ ಮಾಡಿ, ದೀಪಗಳನ್ನು ದಾನ ಮಾಡಿ.
ಈ ತಿಂಗಳಿನಲ್ಲಿ ಭಗವದ್ಗೀತೆ ಓದಬೇಕು
ಅಲ್ಲದೆ ಈ ಮಾಸದಲ್ಲಿ ನೆಲದಲ್ಲಿ ಮಲಗಬೇಕೆಂದು ಹೇಳಲಾಗುವುದು
ಧಾರ್ಮಿಕ ಕಾರ್ಯಗಳನ್ನು ಮಾಡುವುದರಿಂದ ಒಳಿತಾಗಲಿದೆ.
ಕಾರ್ತಿಕ ಮಾಸದಲ್ಲಿ ಏನು ಮಾಡಬಾರದು?
ಈ ಮಾಸ ಮಾಂಸಾಹಾರ ಸೇವಿಸಬೇಡಿ, ಬರಿ ಸಾತ್ವಿಕ ಆಹಾರವಷ್ಟೇ ಸೇವಿಸಿ.
ಈ ತಿಂಗಳಿನಲ್ಲಿ ಹಾಗಲಕಾಯಿ, ಮೊಸರು, ಜೀರಿಗೆ, ಬದನೆಕಾಯಿ ಈ ಬಗೆಯ ಆಹಾರ ಸೇವಿಸಬಾರದು ಎಂದು ಹೇಳಲಾಗುವುದು
ಹೆಸರು ಕಾಳು, ಕಡ್ಲೆಬೇಳೆ, ಕಪ್ಪು ಕಡ್ಲೆ, ಬಟಾಣಿ ಇವುಗಳನ್ನು ಸೇವಿಸಬಾರದು ಎಂದು ಹೇಳಲಾಗುವುದು
ಕಾರ್ತಿಕ ಮಾಸದಲ್ಲಿ ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡುವುದಿಲ್ಲ
ಮನೆಗೆ ದಾನ ಕೇಳಿ ಬಂದವರನ್ನು ಖಾಲಿ ಹೊಟ್ಟೆ ಕಳುಹಿಸಬಾರದು ಎಂದು ಹೇಳಲಾಗುವುದು.
ಕಾರ್ತಿಕ ಮಾಸದಲ್ಲಿ ಶಿವ, ವಿಷ್ಣುವನ್ನು ಆರಾಧಿಸಲಾಗುವುದು
ಕಾರ್ತಿಕ ಮಾಸ ವಿಷ್ಣು, ಶಿವನ ಆರಾಧನೆಗೆ ತುಂಬಾನೇ ಶ್ರೇಷ್ಠವಾಗಿದೆ, ಈ ಸಮಯದಲ್ಲಿ ಭಕ್ತರು ಪ್ರತಿದಿನ ಸಮೀಪದ ವಿಷ್ಣು ಅಥವಾ ಶಿವನ ದೇವಾಲಯಕ್ಕೆ ಹೋಗಿ ಕಾರ್ತಿಕ ಪೂಜೆಯಲ್ಲಿ ಭಾಗಿಯಾಗಿ ಬರುತ್ತಾರೆ.
ಕಾರ್ತಿಕ ಮಾಸದಲ್ಲಿ ಬರುವ ತುಳಸಿ ವಿವಾಹ
ಕಾರ್ತಿಕ ಮಾಸದಲ್ಲಿ ಬರುವ ತುಳಸಿ ಪೂಜೆಗೆ ತುಂಬಾನೇ ಮಹತ್ವವಿದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಸಾಲಿಗ್ರಾಮ ಮತ್ತು ತುಳಸಿ ವಿವಾಹವನ್ನು ಮಾಡಲಾಗುವುದು. ಈ ತುಳಸಿ ವಿವಾಹಕ್ಕೆ ತುಂಬಾನೇ ಧಾರ್ಮಿಕ ಮಹತ್ವವಿದೆ. ಮಕ್ಕಳಿಲ್ಲದ ದಂಪತಿ ಈ ತುಳಸಿ ವಿವಾಹ ಮಾಡಿದರೆ ಸಂತಾನ ಭಾಗ್ಯ ದೊರೆಯಲಿದೆ, ಕನ್ಯಾದಾನ ಪುಣ್ಯಫಲ ದೊರೆಯಲಿದೆ. ಇನ್ನು ಹೆಣ್ಮಕ್ಕಳಿಗೆ ಮದುವೆಯಲ್ಲಿ ಏನಾದರೂ ಅಡಚಣೆಯಿದ್ದರೆ ಅದು ಬಗೆಹರಿಯಲಿದೆ. ಈ ಮಾಸ ನವೆಂಬರ್ 12ಕ್ಕೆ ಪ್ರಬೋಧಿನಿ ಏಕಾದಶಿ, ಆ ದಿನದಂದು ತುಳಸಿ ವಿವಾಹ ಮಾಡಲಾಗುವುದು.
ತುಳಸಿ ವಿವಾಹದಂತೆಯೇ ಕಾರ್ತಿಕ ಹುಣ್ಣಿಮೆಗೂ ತುಂಬಾನೇ ಮಹತ್ವವಿದೆ
ಕಾರ್ತಿಕ ಹುಣ್ಣಿಮೆ ನವೆಂಬರ್ 15ಕ್ಕೆ ನಡೆಯಲಿದೆ
ಈ ದಿನ ಕಾರ್ತಿಕ ಸ್ನಾನ ಮಾಡಿ ಪೂಜೆಯನ್ನು ಸಲ್ಲಿಸಲಾಗುವುದು.
ಕಾರ್ತಿಕ ಮಾಸದಲ್ಲಿ ಪ್ರಕೃತಿಯಲ್ಲಿಯೂ ಬದಲಾವಣೆಯಾಗುತ್ತೆ
ಕಾರ್ತಿಕ ಮಾಸದಲ್ಲಿ ಹಗಲು ಕಡಿಮೆ ಇರುತ್ತದೆ, ರಾತ್ರಿ ತುಂಬಾ ಇರುತ್ತದೆ, ಬಹು ಬೇಗನೆ ಕತ್ತಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
