Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಈ ವರ್ಷ ಕಾರ್ತಿಕ ಮಾಸ ಯಾವಾಗ ಶುರು? ಕಾರ್ತಿಕ ಸೋಮವಾರದ ಮಹತ್ವವೇನು?
ಕಾರ್ತಿಕ ಮಾಸ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಮಾಸಗಳಲ್ಲಿ ಒಂದಾಗಿದೆ. ಈ ತಿಂಗಳು ಶಿವನ ಹಾಗೂ ಶ್ರೀವಿಷ್ಣುವಿನ ಆರಾಧನೆಗೆ ಮೀಸಲಾದ ತಿಂಗಳಾಗಿದೆ. ಈ ತಿಂಗಳನ್ನು ದಾಮೋದರಾ ಮಾಸ, ಕಾರ್ತಿಕ ಮಾಸ ಎಂದು ಕರೆಯಲಾಗುವುದು.
ಕಾರ್ತಿಕ ಮಾಸ ಈ ವರ್ಷ ಯಾವಾಗಿನಿಂದ ಶುರು?
ಕರ್ನಾಟಕದಲ್ಲಿ ಕಾರ್ತಿಕ ಮಾಸ ಮಂಗಳವಾರ ನವೆಂಬರ್ 14ರಿಂದ ಶುರುವಾಗಿ ಡಿಸೆಂಬರ್ 12ರವರೆಗೆ ಇರಲಿದೆ.

ಕಾರ್ತಿಕ ಮಾಸದ ಮಹತ್ವ
ಚಂದ್ರಮಾನ ಕ್ಯಾಲೆಂಡರ್‌ನಲ್ಲಿ ದಕ್ಷಿಣಾಯನ, ಉತ್ತರಾಯಣ ಎಂದು ವಿಂಗಡಿಸಲಾಗಿದೆ. ಕಾರ್ತಿಕ ಮಾಸ ದಕ್ಷಿಣಾಯನ ಕಾಲದಲ್ಲಿ ಬರುತ್ತದೆ. ಈ ತಿಂಗಳು ಸಾಧನೆಗೆ ಮೀಸಲಾದ ತಿಂಗಳಲಾಗಿದೆ. ಕಾರ್ತಿಕ ಮಾಸದ ಅತ್ಯಂತ ಶುಭ ಮಾಸ ಎಂದು ಕರೆಯಲಾಗುವುದು. ಪದ್ಮ ಪುರಾಣದ ಮತ್ತು ಸ್ಕಂದ ಪುರಾಣದ ಪ್ರಕಾರ ಕಾರ್ತಿಕ ಮಾಸ ಆಚರಣೆ ಮಾಡುವುದರಿಂದ ಧಾರ್ಮಿಕ, ಆರ್ಥಿಕ, ಜ್ಞಾನ ದೊರೆಯುವುದು, ಸೌಕರ್ಯಗಳು ದೊರೆಯುವುದು, ಬದುಕು ತುಂಬಾನೇ ಉತ್ತಮವಾಗುವುದು.
ಕಾರ್ತಿಕ ಮಾಸದ ಮಹತ್ವ ತಿಳಿಸಿದವರು ನಾರಾಯಣ
ಕಾರ್ತಿಕ ಮಾಸದ ಮಹತ್ವದ ಬಗ್ಗೆ ನಾರಾಯಣ ಬ್ರಹ್ಮನಿಗೆ , ಬ್ರಹ್ಮ ನಾರದರಿಗೆ, ನಾರದರು ರಾಜ ಪ್ರಿತುವಿಗೆ ತಿಳಿಸಿದರು ಎಂದು ಪೌರಾಣಿಕ ಕತೆ ತಿಳಿಸಿದೆ.
ಕಾರ್ತಿಕ ಸೋಮವಾರದ ಮಹತ್ವ
ಕಾರ್ತಿಕ ಮಾಸದ ಪ್ರತಿಯೊಂದು ದಿನವೇ ವಿಶೇಷ, ಅದರಲ್ಲೂ ಕಾರ್ತಿಕ ಸೋಮವಾರವೆಂದರೆ ಇನ್ನೂ ವಿಶೇಷ. ಈ ದಿನ ಶಿವನಿಗೆ ವಿಶೇಷ ಪೂಜೆ ಮಾಡಲಾಗುವುದು. ಚಂದ್ರ ದಕ್ಷನ ಕಾಟದಿಂದ ಪಾರಾಗಲು ಕಾರ್ತಿಕ ಸೋಮವಾರ ವ್ರತ ಮಾಡಿದ ಎಂದು ಪೌರಾಣಿಕ ಕತೆಯಲ್ಲಿದೆ. ಆದ್ದರಿಂದ ಕಾರ್ತಿಕ ಸೋಮವಾರ ಆಚರಣೆ ಮಾಡುವುದರಿಂದ ಶಿವನ ಕೃಪೆಗೆ ಪಾತ್ರರಾಗುವುದರಿಂದ ಎಲ್ಲಾ ಕಷ್ಟಗಳು ದೂರಾಗುವುದು ಎಂದು ಹೇಳಲಾಗುವುದು.
ಕಾರ್ತಿಕ ಸೋಮವಾರ ದಿನಾಂಕಗಳು
ನವೆಂಬರ್ 20
ನವೆಂಬರ್ 27
ಡಿಸೆಂಬರ್ 4
ಡಿಸೆಂಬರ್ 11
ಕಾರ್ತಿಕ ಮಾಸದ ಆಚರಣೆಯ ವಿಧಾನಗಳು
ಕಾರ್ತಿಕ ದೀಪ ಹಚ್ಚಿಡುವುದು
ಕಾರ್ತಕ ಮಾಸದಲ್ಲಿ ತುಳಸಿ ಗಿಡದ ಬಳಿ ದೀಪವನ್ನು ಹಚ್ಚಿ. ಸೂರ್ಯೋದಕ್ಕೆ ಮುನ್ನ ಹಾಗೂ ಸೂರ್ಯೋದಯದ ನಂತ ಮನೆಯಲ್ಲಿ ದೀಪ ಹಚ್ಚಿಡಬೇಕು.
ಕಾರ್ತಿಕ ಸ್ನಾನ ಅಥವಾ ನದಿ ಸ್ನಾನ
ಕಾರ್ತಿಕ ಮಾಸದಲ್ಲಿ ನದಿ ಸ್ನಾನ ಒಳ್ಳೆಯದು ಎಂದು ಹೇಳಲಾಗುವುದು. ಈ ತಿಂಗಳಿನಲ್ಲಿ ನದಿ ನೀರು ತುಂಬಾ ಶುಭ್ರವಾಗಿರುತ್ತದೆ, ಅಲ್ಲದೆ ನದಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಅನೇಕ ಆರೋಗ್ಯಕರ ಗುಣಗಳೂ ಸಿಗುವುದು.
ಭಾದ್ರಪದ ಹಾಗೂ ಶ್ರಾವಣ ಮಾಸದಲ್ಲಿ ನದಿ ಸ್ನಾನ ಒಳ್ಳೆಯದಲ್ಲ.
ಶಿವನ ದೇವಾಲಯಕ್ಕೆ ಭೇಟಿ ನೀಡಿ
* ಈ ತಿಂಗಳಿನಲ್ಲಿ ವಿಷ್ಣು ಹಾಗೂ ಶಿವನ ದೇವಾಲಯದಲ್ಲಿ ವಿಶೇಷ ಪೂಜೆ ಇರುತ್ತದೆ.
* ದೇವಾಲಯದ ಸುತ್ತಲೂ ದೀಪಗಳನ್ನು ಹಚ್ಚಿಡಲಾಗುವುದು. ಈ ಅವಧಿಯಲ್ಲಿ ಭಕ್ತರು ಹೆಚ್ಚಾಗಿ ಬರುತ್ತಾರೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
