Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಗಜಲಕ್ಷ್ಮಿ ರಾಜಯೋಗ 2024: ಈ 3 ರಾಶಿಯವರ ಮೇಲೆ ಲಕ್ಷ್ಮಿ ಕೃಪೆ ಇರಲಿದೆ
ಹೊಸ ವರ್ಷ ಎಂದಾಗ ಹೊಸ ನಿರೀಕ್ಷೆಗಳು, ಈ ವರ್ವಾದರೂ ನಮ್ಮ ಆಸೆ-ಆಕಾಂಕ್ಷೆಗಳು ಈಡೇರಲಿ ಎಂದು ಪ್ರಾರ್ಥಿಸುತ್ತೇವೆ. ಪ್ರಯತ್ನದ ಜೊತೆಗೆ ಅದೃಷ್ಟವೂ ಬೇಕು ಎಂದು ಹೇಳಲಾಗುವುದು.
ವೈದಿಕ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನವು ನಮ್ಮ ರಾಶಿಯ ಮೇಲೆ ತುಂಬಾನೇ ಪ್ರಭಾವ ಬೀರುವುದು. 2024ರಲ್ಲಿ ಗಜಲಕ್ಷ್ಮಿ ರಾಜಯೋಗವಿದೆ. ಗಜಲಕ್ಷ್ಮಿ ರಾಜಯೋಗ 3 ರಾಶಿಯವರಿಗೆ ತುಂಬಾನೇ ಅದೃಷ್ಟಕರವಾಗಿದೆ. ಈ ಯೋಗದಿಂದಾಗಿ ಈ ರಾಶಿಯವರ ಮೇಲೆ ಲಕ್ಷ್ಮಿ ಕೃಪೆ ಇರಲಿದೆ. ಆ ರಾಶಿಗಳು ಯಾವುದು ನೋಡೋಣ ಬನ್ನಿ:

2024ರಲ್ಲಿ ಗಜಲಕ್ಷ್ಮಿ ಯೋಗ
2024ರಲ್ಲಿ ಗಜಲಕ್ಷ್ಮಿ ಯೋಗ ಮೇ 19ಕ್ಕೆ ಶುಕ್ರ ವೃಷಭ ರಾಶಿಗೆ ಪ್ರವೇಶಿಸಿದಾಗ ಗುರು ಮತ್ತು ಶುಕ್ರ ಸರಿ ಗಜಲಕ್ಷ್ಮಿ ಯೋಗ ರೂಪಿಸುತ್ತದೆ.
ಈ 3 ರಾಶಿಯವರಿಗೆ ಒಳ್ಳೆಯದು
ಕರ್ಕ ರಾಶಿ
ಗಜಲಕ್ಷ್ಮಿ ರಾಜಯೋಗ ಕರ್ಕ ರಾಶಿಯವರಿಗೆ ತುಂಬಾನೇ ಒಳ್ಳೆಯದು. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ಏನಾದರೂ ಹಳೆಯ ಸಾಲವಿದ್ದರೆ ಅದನ್ನು ತೀರಿಸಲು ಸಾಧ್ಯವಾಗುವುದು. ಮಕ್ಕಳ ವಿಷಯದಲ್ಲಿ ಖುಷಿಯ ಸುದ್ದಿಗಳು ದೊರೆಯಲಿದೆ. ಈ ಅವಧಿಯಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ಲಕ್ಷ್ಮಿ ಕೃಪೆ ನಿಮ್ಮ ಮೇಲೆ ಇರಲಿದೆ. ವಿದ್ಯಾರ್ಥಿಗಳಿಗೂ ಈ ಅವಧಿ ಅನುಕೂಲಕರವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಯಗಳಿಸುವಿರಿ. ಮನೆಯ ವಾತಾವರಣ ತುಂಬಾ ಚೆನ್ನಾಗಿರಲಿದೆ. ನಿಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನ ತುಂಬಾ ಚೆನ್ನಾಗಿರಲಿದೆ.
ಸಿಂಹ ರಾಶಿ
ಗಜಲಕ್ಷ್ಮಿ ಯೋಗದಿಂದಾಗಿ ಸಿಂಹ ರಾಶಿಯವರು ಆರ್ಥಿಕ ಲಾಭ ಪಡೆಯುತ್ತೀರಿ. ನಮ್ಮ ವೃತ್ತಿ ಜೀವನದಲ್ಲಿ ತುಂಬಾನೇ ಪ್ರಗತಿ ಕಾಣುವಿರಿ. ನಿಮಗೆ ಬರಬೇಕಾಗಿದ್ದ ಹಣ ನಿಮ್ಮ ಕೈ ಸೇರಲಿದೆ. ನಿಮ್ಮ ವೈವಾಹಿಕ ಜೀವನ ಚೆನ್ನಾಗಿರಲಿದೆ. ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಅಥವಾ ಉದ್ಯೋಗ ಮಾಡಬಯಸುವವರಿಗೆ ಈ ಅವಧಿ ಅನುಕೂಲಕರವಾಗಿದೆ. ರಾಜಕಾರಣಿಗಳಿಗೆ ಈ ಅವಧಿ ತುಂಬಾನೇ ಅನುಕೂಲಕರವಾಗಿದೆ.
ಧನು ರಾಶಿ
ಗಜಲಕ್ಷ್ಮಿ ರಾಜಯೋಗ ಧನು ರಾಶಿಯವರಿಗೆ ತುಂಬಾನೇ ಅನುಕೂಲಕರವಾಗಿದೆ, ವೃತ್ತಿ ಜೀವನದಲ್ಲಿ ಪ್ರಗತಿ ಕಾಣುವಿರಿ, ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ನೀವು ವ್ಯವಹಾರದಲ್ಲಿ ಒಳ್ಳೆಯ ಲಾಭ ಕಾಣುವಿರಿ. ಏನಾದರೂ ಆರೋಗ್ಯ ಸಮಸ್ಯೆ ಇದ್ದರೆ ಅದರಲ್ಲೂ ಸುಧಾರಣೆ ಕಂಡು ಬರುವುದು. ಆರ್ಥಿಕ ಲಾಭದಿಂದಾಗಿ ನಿಮ್ಮ ಮನೆ ಅಥವಾ ವಾಹನ ಖರೀದಿಸುವ ಆಸೆ ಈಡೇರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
