Latest Updates
-
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ!
ಅಕ್ಟೋಬರ್ 16ರಂದು ಬ್ರಹ್ಮಚಾರಿಣಿ ಮೂಜೆಗೆ ಶುಭ ಮುಹೂರ್ತ ಯಾವಾಗ?
ನವರಾತ್ರಿ ಪೂಜೆ ಶುರುವಾಗಿದೆ. ಅಕ್ಟೋಬರ್ 16ಕ್ಕೆ ನವರಾತ್ರಿ 2ನೇ ದಿನ, ಈ ದಿನ ಬ್ರಹ್ಮಚಾರಿಣಿಯನ್ನು ಆರಾಧಿಸಲಾಗುವುದು. ಬ್ರಹ್ಮಚಾರಿಣಿ ದೇವಿಯು ಪ್ರೀತಿ ಹಾಗೂ ಶಾಂತಿಯ ಸಂಕೇತ. ಬ್ರಹ್ಮಚಾರಿಣಿ ಅವಾಹಿತ ಪಾರ್ವತಿ ರೂಪ ಎಂದು ಕೂಡ ಹೇಳಲಾಗುವುದು. ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಲು ಶುಭ ಮುಹೂರ್ತ ಯಾವಾಗ? ಬ್ರಹ್ಮಚಾರಿಣಿಯನ್ನು ಆರಾಧಿಸುವುದರಿಂದ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ:

ಬ್ರಹ್ಮಚಾರಿಣಿ ಅರ್ಥವೇನು?
ಬ್ರಹ್ಮ ಎಂದರೆ 'ತಪಸ್ಸು' ಮತ್ತು ಚಾರಿಣಿ ಎಂದರೆ 'ವಾಹಕ' ಎಂದರ್ಥ. ಬ್ರಹ್ಮಚಾರಿಣಿ ಮಾತೆಯ ಆರಾಧನೆಯಿಂದ ಮನುಷ್ಯ ಎಲ್ಲ ರೀತಿಯ ಸುಖವನ್ನು ಪಡೆಯುತ್ತಾನೆ. ಬ್ರಹ್ಮಚಾರಿಣಿಯನ್ನು ತಪಸ್ಸಿನ ದೇವತೆ ಎಂದು ಕರೆಯಲಾಗುತ್ತದೆ. ದುರ್ಗಾ ದೇವಿಯ ಎರಡನೇ ರೂಪವನ್ನು ಅಂದರೆ ಬ್ರಹ್ಮಚಾರಿಣಿ ಮಾತೆಯನ್ನು ಪೂಜಿಸುವುದರಿಂದ, ದೀರ್ಘಾಯುಷ್ಯ ಲಭಿಸುತ್ತದೆ ಮನೆಯಲ್ಲಿ ಶಾಂತಿ ನೆಲೆಸುವುದು ಎಂದು ಹೇಳಲಾಗುವುದು.
ಬ್ರಹ್ಮಚಾರಿಣಿ ಪೂಜೆಗೆ ಶುಭ ಮುಹೂರ್ತ
ಬ್ರಹ್ಮಚಾರಿಣಿಗೆ ಶುಭ ಮುಹೂರ್ತ ಬೆಳಗ್ಗೆ 11:44ರಿಂದ ಮಧ್ಯಾಹ್ನ 12:29ರವರೆಗೆ
ರಾಹುಕಾಲ: ಬೆಳಗ್ಗೆ 07:48ರಿಂದ 09:14ರವರೆಗೆ (ಈ ಸಮಯದಲ್ಲಿ ಪೂಜೆ ಮಾಡಬಾರದು)
ಬ್ರಹ್ಮಚಾರಿಣಿಯನ್ನು ಹೇಗೆ ಪೂಜಿಸಬೇಕು?
ನೀವು ಹಾಲು, ಮೊಸರು, ಜೇನನ್ನು ದೇವಿಗೆ ಅರ್ಪಿಸಬೇಕು. ನೀವು ದೇ
* ನೀವು ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಬಟ್ಟೆ ಧರಿಸಿ
* ದೇವಿಗೆ ಹೂ, ಹಣ್ಣುಗಳನ್ನು ಅರ್ಪಿಸಿ
* ಬ್ರಹ್ಮಚಾರಿಣಿ ಪೂಜೆಗೆ ಕಮಲದ ಹೂವುಗಳು, ದಾಸವಾಳದ ಹೂವುಗಳನ್ನು ಅರ್ಪಿಸಿ
* ಕರ್ಪೂರದಿಂದ ಆರತಿ ಬೆಳಗಿ.
ದೇವರ ನೈವೇದ್ಯಕ್ಕೆ ಹಳದಿ ನೈವೇದ್ಯಗಳನ್ನು ಅರ್ಪಿಸಿ
ನೀವು ಬ್ರಹ್ಮಚಾರಿಣಿ ದೇವಿಗೆ ಹಳದಿ ಬಣ್ಣದ ನೈವೇದ್ಯಗಳನ್ನು ಅರ್ಪಿಸಿ. ಬಾಳೆಹಣ್ಣನ್ನು ತಪ್ಪದೆ ಅರ್ಪಿಸಿ. ಅಲ್ಲದೆ ಬ್ರಹ್ಮಚಾರಿಣಿಗೆ ಸಕ್ಕರೆ ಅರ್ಪಿಸುವುದರಿಂದ ಆಯುಸ್ಸು ಹೆಚ್ಚಾಗುವುದು ಎಂಬ ನಂಬಿಕೆ.
ಬ್ರಹ್ಮಚಾರಿಣಿಯ ಆರಾಧನೆ ಮಾಡಿದರೆ ಸಂತಾನ ಭಾಗ್ಯ ದೊರೆಯುವುದು
ಮಕ್ಕಳಿಲ್ಲದ ದಂಪತಿ ಬ್ರಹ್ಮಚಾರಿಣಿಯನ್ನು ಭಕ್ತಿಯಿಂದ ಆರಾಧಿಸಿದರೆ ಸಂತಾನ ಭಾಗ್ಯ ದೊರೆಯುತ್ತದೆ ಎಂದು ಅವಳನ್ನು ನಂಬಿದ ಭಕ್ತರ ಅಚಲ ನಂಬಿಕೆಯಾಗಿದೆ.
ಬ್ರಹ್ಮಚಾರಿಣಿ ದೇವಾಲಯ ಎಲ್ಲಿದೆ?
ಕಾಶಿಯಲ್ಲಿರುವ ಗಂಗಾ ನದಿಯ ತೀರದಲ್ಲಿರುವ ಬಾಲಾಜಿ ಗಾಟ್‌ನಲ್ಲಿ ಬ್ರಹ್ಮಚಾರಿಣಿ ದೇವಿಯ ದೇವಾಲಯವಿದೆ. ನವರಾತ್ರಿಯ ಸಮಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು.
ಬ್ರಹ್ಮಚಾರಿಣಿ ಮಂತ್ರ
ಯಾ ದೇವಿ ಸರ್ವ ಭೂತೇಷು ಬ್ರಹ್ಮಚಾರಿಣಿ ರೂಪೇಣ ಸಂಸ್ಥಿತ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
- ಓಂ ದೇವಿ ಬ್ರಹ್ಮಚಾರಿಣ್ಯೈ ನಮಃ
- ದಧನಾಕರ ಪದ್ಮಭಯಂ ಅಕ್ಷಮಾಲಾ ಕಮಂಡಲಂ,
ದೇವೀ ಪ್ರಸಾದಿತು ಮಯಿ ಬ್ರಹ್ಮಚಾರಿಣಿಯನುತ್ತಮ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
