Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಯೋಧ್ಯೆ ರಾಮ ಮಂದಿರ ಕುರಿತ 12 ಆಸಕ್ತಿಕರ ಸಂಗತಿಗಳು
ಅಯೋಧ್ಯೆ ರಾಮ ಮಂದಿರ ಬಗ್ಗೆ ಕೋಟ್ಯಾಂತರ ಹಿಂದೂಗಳು ಬಹುವರ್ಷಗಳಿಂದ ಕಾಣುತ್ತಿರುವ ಕನಸು ನನಸಾಗುವ ಸಮಯ ಬಂದಿದೆ. ಜನವರಿಯಲ್ಲಿ ಶ್ರೀರಾಮ ಮಂದಿರದಲ್ಲಿ ಮರ್ಯಾದ ಪುರುಷೋತ್ತಮನನ್ನು ಕಣ್ತುಂಬಿಕೊಳ್ಳಬಹುದು. ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿದೆ.
ವಿಜಯ ದಶಮಿ ಆಚರಣೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ ಮುಂದಿನ ವರ್ಷ ಅಯೋಧ್ಯೆ ಶ್ರೀರಾಮಮಂದಿರದಲ್ಲಿ ವಿಜಯ ದಶಮಿ ಆಚರಿಸಲಿದ್ದೇವೆ ಎಂದು ಹೇಳಿರುವುದರಿಂದ ಶ್ರೀರಾಮ ಮಂದಿರದ ಉದ್ಘಾಟನೆ ಕುರಿತು ಚರ್ಚೆ ನಡೆಯುತ್ತಿದೆ, ಶ್ರೀರಾಮ ಭಕ್ತರು ಆದಷ್ಟು ಬೇಗ ಆ ಮಂದಿರದಲ್ಲಿ ಶ್ರೀರಾಮನನ್ನು ಕಣ್ತುಂಬಿಕೊಳ್ಳುವ ಭಾಗ್ಯ ದೊರೆಯುವಂತಾಗಲಿ ಎಂದು ಆಸೆ ಪಡುತ್ತಿದ್ದಾರೆ.
ಈ ಲೇಖನದಲ್ಲಿ ಮುಂದಿನ ವರ್ಷ ಉದ್ಭಾಟನೆಯಾಗಲಿರುವ ಶ್ರೀರಾಮ ಮಂದಿರದ ಕುರಿತು ಆಸಕ್ತಿಕರ ಸಂಗತಿ ಹೇಳಲಾಗಿದೆ ನೋಡಿ:

* 10 ಎಕರೆ ಭೂಮಿಯಲ್ಲಿ ಈ ಮಂದಿರ ನಿರ್ಮಿಸಲಾಗಿದೆ, ಉಳಿದ 57 ಎಕರೆಯಲ್ಲಿ ದೇವಾಸ್ಥಾನಕ್ಕೆ ಸಂಬಂಧಿಸಿದ ಕಾಂಪ್ಲೆಕ್ಸ್‌ಗಳಿರಲಿವೆ.
* ಹಿಂದೂಗಳ ನಂಬಿಕೆಯಂತೆ ಈ ದೇವಾಲಯವನ್ನು ನಿರ್ಮಿಸಲಾಗುತ್ತಿದೆ.
* ಈ ದೇವಾಲಯ ಬಾಳಿಕೆ ಬರಲು ರಾಜಾಸ್ಥಾನದ ಬನ್ಸಿ ಪರ್ವತದಿಂದ ತಂದ ಕಲ್ಲುಗಳನ್ನು ಬಳಸಲಾಗುತ್ತಿದೆ
* ಪ್ರಮುಖ ದೇವಾಲಯದ ಸುತ್ತ 4 ದೇವಾಲಯಗಳಿವೆ
* ಫೌಂಡೇಷನ್‌ಗೆ ಬಳಸಿದ ಇಟ್ಟಿಗೆಯಲ್ಲಿ ಶ್ರೀರಾಮ್ ಎಂದು ಕೆತ್ತಲಾಗಿದೆ
ಎತ್ತರವನ್ನು 141 ಅಡಿಯಿಂದ 161 ಅಡಿ ಎತ್ತರಕ್ಕೆ ಏರಿಸಲಾಗಿದೆ. ಉದ್ದ 270 ಮೀ ಅಗಲ 140 ಮೀಟರ್ ಇದೆ.
* ಈ ದೇವಾಲಯ ನಿರ್ಮಿಸಲು ಭೂಮಿ ಪೂಜೆ ಮಾಡುವಾಗ 40 ಕೆಜಿ ಬೆಳ್ಳಿಯ ಇಟ್ಟಿಗೆಯನ್ನು ಬಳಸಲಾಗುವುದು.
* ಈ ದೇವಾಲಯ ನಿರ್ಮಿಸುವಾಗ 2000 ಧಾರ್ಮಿಕ ಸ್ಥಳಗಳಿಂದ ಮಣ್ಣು, 100 ಪುಣ್ಯ ನದಿಗಳಿಂದ ನೀರನ್ನು ತಂದು ಬಳಸಲಾಯ್ತು.
* ಈ ದೇವಾಲಯದ 221 ಸ್ತಂಭಗಳಿವೆ. ಪ್ರತಿಯೊಂದು ಕಂಬದಲ್ಲಿ 12 ದೇವ-ದೇವತೆಗಳ ಚಿತ್ರವನ್ನು ಕೆತ್ತಲಾಗಿದೆ.
* ಒಂದೇ ಬಾರಿಗೆ 10,000 ಭಕ್ತಾದಿಗಳು ಒಂದೇ ಬಾರಿಗೆ ದೇವರ ದರ್ಶನ ಪಡೆಯಬಹುದು.
* ಭೂಕಂಪನ ಸಂಭವಿಸಿದರೂ ಈ ದೇವಾಲಯಕ್ಕೆ ಅಷ್ಟು ಬೇಗ ಏನೂ ಆಗುವುದಿಲ್ಲ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 8-10 ಇದ್ದರೂ ಈ ದೇವಾಲಯಕ್ಕೆ ಏನೂ ಆಗುವುದಿಲ್ಲ.
* ಈ ದೇವಾಲಯವನ್ನು ನಗರಾ ಶೈಲಿಯಲ್ಲಿ ಕಟ್ಟಲಾಗಿದೆ, ಈ ದೇವಾಲಯವನ್ನು ವಾಸ್ತು ಶಾಸ್ತ್ರ ಪ್ರಕಾರ ಕಟ್ಟಲಾಗಿದೆ.
* ಅಯೋಧ್ಯೆ ರೈಲ್ವೆ ಸ್ಟೇಷನ್ ಅನ್ನು ಶ್ರೀರಾಮ ಮಂದಿರದಂತೆಯೇ ವಿನ್ಯಾಸಗೊಳಿಸಲಾಗಿರುವುದು ಇಲ್ಲಿಯ ವಿಶೇಷಗಳಲ್ಲಿ ಒಂದು.
ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಹಿಂದಿರುವ ಕತೆ'
ಮೊಘಲ್ ಚಕ್ರವರ್ತಿ 1528 ಮತ್ತು 1529 ರ ನಡುವೆ ಬಾಬರಿ ಮಸೀದಿ ನಿರ್ಮಾಣ ಮಾಡಿದನು. ಆದರೆ ಹಿಂದೂಗಳು ಅದು ಶ್ರೀರಾಮನ ಜನ್ಮಸ್ಥಳವಾಗಿದ್ದು ಅದು ಹಿಂದೂಗಳಿಗೆ ಬೇಕೆಂದು ಸುದೀರ್ಘ ಕಾನೂನು ಹೋರಾಟ ಮಾಡಿದ ಬಳಿಕ 2019 ನವೆಂಬರ್ 9ಕ್ಕೆ ಸುಪ್ರೀಂಕೋರ್ಟ್ ವಿವಾದಿತ ಸ್ಥಳ ಹಿಂದೂಗಳಿಗೆ ಸೇರಿದ್ದು ಎಂದು ತೀರ್ಪು ನೀಡಿದ ಬಳಿಕ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ. ಆಗಸ್ಟ್ 5, 2020ರಲ್ಲಿ ಶಂಕುಸ್ಥಾಪನೆ ಮಾಡಿ ದೇವಾಲಯ ನಿರ್ಮಾಣ ಕಾರ್ಯ ಶುರು ಮಾಡಲಾಯ್ತು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications