For Quick Alerts
ALLOW NOTIFICATIONS  
For Daily Alerts

ಅಂತರ್ಮುಖಿ ಗೆಳೆಯನೊಂದಿಗೆ ಮೊದಲ ಭೇಟಿ ಹೀಗಿರಲಿ

By poornima heggade
|

ನಮ್ಮ ಗೆಳೆಯರ ಬಳಗದಲ್ಲಿ ಎಲ್ಲರೂ ಒಂದೇ ರೀತಿ ಇರಲಾರರು. ಕೆಲವರು ಬಹಳ ಹೆಚ್ಚು ಮಾತನಾಡಿದರೆ ಇನ್ನೂ ಕೆಲವರು ಎಷ್ಟೇ ಮಾತನಾಡಿಸಿದರೂ ಹೌದು ಅಥವಾ ಇಲ್ಲ ಎಂದಷ್ಟೇ ಮಾತನಾಡಬಹುದು. ಹಾಗೆಂದು ಅವರು ನಮ್ಮ ಜೊತೆ ಸೇರುವುದಿಲ್ಲ ಅಥವಾ ಗೆಳೆಯರ ಬಳಗದಲ್ಲಿ ಅವರಿಗೆ ಖುಷಿ ಇಲ್ಲ ಎಂದಲ್ಲ, ಅವರ ಗುಣವೇ ಹಾಗೆ. ಇವರು ಅಂತರ್ಮುಖಿಗಳು. ಇವರು ತಮ್ಮಷ್ಟಕ್ಕೆ ತಾವೇ ಇರುತ್ತಾರೆ. ಇವರಿಗೆ ತಮ್ಮ ಸುತ್ತ ಹೆಚ್ಚಿನ ಜನರು ಬೇಕಾಗಿಲ್ಲ. ಅವರು ಯಾರ ಮೇಲೂ ಹೆಚ್ಚಾಗಿ ಏನಕ್ಕೂ ಅವಲಂಬಿತರಾಗುವುದಿಲ್ಲ. ಹೆಚ್ಚಿನ ಗೆಳೆಯರನ್ನು ಹೊಂದಿರಬೇಕು, ಸಮಾಜ ಮುಖಿಯಾಗಿರಬೇಕು ಎಂಬೆಲ್ಲಾ ತತ್ವಗಳಿಗೆ ಅವರು ಹೆಚ್ಚು ಬೆಂಬಲ ಕೊಡುವುದಿಲ್ಲ. ಕೆಲವರು ಇತರರಿಗೆ ಸಹಾಯ ಮಾಡುವುದರಲ್ಲೂ ಬಹಳ ಹಿಂಜರಿಯಬಹುದು ಅಥವಾ ಸ್ವಾರ್ಥಿಗಳಂತೆ ಸಹಾಯ ಮಾಡದೆಯೂ ಇರಬಹುದು.

ಇದೇ ರೀತಿ ಅಂತರ್ಮುಖಿಗಳ ಜೊತೆಗೆ ಡೇಟಿಂಗ್ ಹೋಗುವಾಗಲೂ ಸನ್ನಿವೇಶಗಳು ಭಿನ್ನವಾಗಿರುತ್ತವೆ. ಸಾಮಾನ್ಯ ಡೇಟಿಂಗ್ ನಲ್ಲಿ ನೀವು ಯಾರನ್ನೋ ಆಕರ್ಷಿಸಬೇಕು ಎಂದು ಪಡುವ ಪ್ರಯತ್ನಗಳೆಲ್ಲಾ ಇಲ್ಲಿ ವ್ಯರ್ಥವಾಗುತ್ತವೆ. ಬೇರೆಯವರ ಮುಂದೆ ಮಾಡಿದರೆ ಭೇಷ್ ಅನ್ನಿಸುವ ಕೆಲವು ಕೆಲಸಗಳು ಅಂತರ್ಮುಖಿಗಳ ಮುಂದೆ ಹಾಗನ್ನಿಸದೇ ಇರಬಹುದು. ಅದರಲ್ಲೂ ನೀವೊಬ್ಬ ಬಹಿರ್ಮುಖಿ ವ್ಯಕ್ತಿಯಾಗಿದ್ದು ಅಂತರ್ಮುಖಿ ವ್ಯಕ್ತಿಯ ಜೊತೆಗೆ ಡೇಟಿಂಗ್ ಗೆ ಹೋದಾಗಲಂತೂ ಇದು ಮತ್ತೂ ಬಹಳ ವಿಚಿತ್ರ ಸನ್ನಿವೇಶಗಳನ್ನು ಸೃಷ್ಟಿಸಬಹುದು. ಆದರೆ ಇದರ ಅರ್ಥ ನಿಮ್ಮ ಸಂಬಂಧ ಹೀಗೆಯೇ ಮುಂದುವರಿಯುತ್ತದೆ ಎಂದಲ್ಲ. ಅಂತರ್ಮುಖಿ ಮತ್ತು ಬಹಿರ್ಮುಖಿಗಳು ಜೊತೆಗಿರಲಾರರು ಎಂದೂ ಅಲ್ಲ. ಆದರೆ ಮೊದಲ ಭೇಟಿಯ ವೇಳೆ ಸ್ವಭಾವದ ಭಿನ್ನತೆಯಿಂದ ಸ್ವಲ ಇರುಸು ಮುರುಸಾದರೆ ಆಶ್ಚರ್ಯವಿಲ್ಲ.

Dating an introverted man? Tips

ಇದಕ್ಕಾಗಿಯೇ ಒಬ್ಬ ಅಂತರ್ಮುಖಿಯೊಂದಿಗೆ ಹೇಗೆ ಮೊದಲ ಭೇಟಿಯಲ್ಲಿ ತೊಡದಬೇಕು ಎಂಬ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ.

1. ಭೇಟಿಯ ಸ್ಥಳ: ನೀವು ಒಬ್ಬ ಅಂತರ್ಮುಖಿಯನ್ನು ಡೇಟಿಂಗ್ ಗೆ ಕರೆದೊಯ್ಯುವ ಸ್ಥಳ ಹೆಚ್ಚು ಜನಭರಿತವಾಗಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಹೆಚ್ಚು ಜನರು ಮಾತಾಡುತ್ತಿದ್ದರೆ ಜೋರಾಗಿ ಸಂಗೀತ ಕೇಳಿಬರುತ್ತಿದ್ದರೆ ನಿಮ್ಮ ಮಾತಿಗೆ ಸುತ್ತಲ ಮಾತುಗಳು ತೊಂದರೆ ಮಾಡುತ್ತಿವೆ ಎಂದಾದರೆ ಅಂತಹ ಜಾಗವನ್ನು ಆರಿಸದಿರಿ. ಇಂತಹ ಸ್ಥಳವೇ ಅವರಿಗೆ ಇಷ್ಟವಾಗದು ಹಾಗಾಗಿ ಅಲ್ಲಿ ಅವರು ತಮ್ಮ ನೈಜ ಸ್ವಭಾವವನ್ನು ತೋರಿಸಲಾರರು. ಮೊದಲ ಭೇಟಿಯ ಸ್ಥಳವು ನೀವಿಬ್ಬರು ಮತ್ತೆ ಮತ್ತೆ ಭೇಟಿ ಆಗಬೇಕು ಎಂದು ಇಬ್ಬರಿಗೂ ಅನ್ನಿಸುವ ಹಾಗಿರಬೇಕು. ಅಲ್ಲಿ ನಿಮ್ಮಿಬ್ಬರಿಗೆ ಬೇಕಾದ ಏಕಾಂತ ಇರಲಿ.

2. ನಿಮ್ಮ ಗುಂಪು: ನಿಮ್ಮ ಅಂತರ್ಮುಖಿ ಸಂಗಾತಿಗೆ ತಿಳಿದಿರದ ನಿಮ್ಮ ಗೆಳೆಯರು ಡೇಟ್ ನಲ್ಲಿ ಬಾರದಿರಲಿ. ತಮ್ಮ ಸುತ್ತ ಬಹಳ ಮಂದಿ ಆಗಂತುಕರು ಇದ್ದರೆ ಅವರಿಗೆ ಇಷ್ಟವಾಗುವುದಿಲ್ಲ. ಅಲ್ಲಿ ಅವರು ಬಹಳವೇ ಯೋಚನೆ ಮಾಡಿ ಮಾತನ್ನಾಡಬಹುದು ಇದರಿಂದ ಅವರಿಗೆ ಕಿರಿಕಿರಿಯೂ ಆಗಬಹುದು. ನೀವಿಬ್ಬರೂ ಸೇರಿ ಮೊದಲೇ ನಿರ್ಧಾರ ಮಾಡಿದ ಜನರಷ್ಟೇ ಇದ್ದರೆ ಸಾಕು.

3. ಅಳೆದು ತೂಗಿ ಮಾತನಾಡಿ: ನೀವು ಹೆಚ್ಚು ಮಾತನಾಡುವ ಸ್ವಭಾದವರೇ ಆಗಿದ್ದರೂ, ನೀವು ಮಾತಿಗೆ ಆರಂಭಿಸಿದರೆ ಜಗತ್ತಿನ ಎಲ್ಲವೂ ಚರ್ಚೆಯ ವಿಷಯವೇ ಆಗಿದ್ದರೂ ಈ ಡೇಟ್ ನಲ್ಲಿ ಹಾಗಿರಬೇಡಿ. ನಿಮ್ಮ ಬದುಕಿನ ಬಗ್ಗೆ ಹೇಳುವಾಗಲೂ ಎಷ್ಟು ಬೇಕೋ ಅಷ್ಟೇ ಮಾತನಾಡಿ. ಉದ್ದನೆಯ ಕಥೆ ಹೇಳುವ ಬದಲು ಚುಟುಕಾಗಿ ಮುಗಿಸಿದರೆ ಬಹಳ ಉತ್ತಮ. ಈ ನಿಮ್ಮ ಸಣ್ಣ ಸಣ್ಣ ಮಾತುಗಳೇ ಮುಂದೆ ಮಹತ್ವದ ದೊಡ್ಡ ಮಾತುಗಳಿಗೆ ಬುನಾದಿ. ಇಬ್ಬರೂ ಸಮಾನವಾಗಿ ಮಾತನಾಡಿ. ಮುಂದಿನವರು ಮಾತನಾಡುವಾಗ ನಿಮಗೆ ನಡುವಲ್ಲಿ ಏನೇ ಅನ್ನಿಸಿದರೂ ಕೂಡಲೇ ಹೇಳಿಬಿಡಬೇಡಿ. ಅವರಿಗೆ ಮಾತನ್ನು ಮುಗಿಸಲು ಅವಕಾಶ ಕೊಡಿ. ನಂತರ ಮಾತನಾಡಿ.

4. ಸಮಯ ಕೊಡಿ: ಅಂತರ್ಮುಖಿಗಳು ಬೇಗನೇ ಇನ್ನೊಬರ ಬಳಿ ತೆರೆದುಕೊಳ್ಳುವುದಿಲ್ಲ. ನೀವು ನಿಮ್ಮ ಬದುಕಿನ ಬಗ್ಗೆ ಹೇಳಿದ ಮೇಲೂ ರು ತಮ್ಮ ಬದುಕಿನ ಬಗೆ ಹೇಳೇ ಇರಬಹುದು ಹಾಗೆಂದು ಅವರಿಗೆ ಹೇಳಲೇ ಬೇಕು ಎಂದು ಒತ್ತಾಯ ಮಾಡಬೇಡಿ. ಸಮಯಾವಕಾಶ ಕೊಡಿ. ಮುಂದೆ ಅವರೂ ತಮ್ಮ ಬಗ್ಗೆ ಹೇಳುತ್ತಾರೆ.

5. ನೀವಾಗಿಯೇ ಇರಿ: ಅಂತರ್ಮುಖಿ ಗೆಳೆಯ ನಿಮಗಾಗಿ ಬದಲಾಗಿ ಎಲ್ಲಾ ಪಾರ್ಟಿಗಳಿಗೆ ತಾವಾಗಿಯೇ ನಿಮ್ಮನ್ನು ಹೇಗೆ ಕರೆದೊಯ್ಯುವುದಿಲ್ಲವೋ ನೀವೂ ಹಾಗೆಯೇ ಅವರಿಗಾಗಿ ಬಹಳ ಬದಲಾಗಬೇಡಿ. ನೀವಾಗಿಯೇ ಇರಲು ಕಲಿಯಿರಿ. ಒಬ್ಬರು ಇನ್ನೊಬ್ಬರ ಸ್ವಭಾವವನ್ನು ಗೌರವಿಸಲು ಕಲಿಯಿರಿ.

English summary

Dating an introverted man? Tips

Introverts are the category of people who are happy with themselves and do not need many folks around them to be happy in life. They are hardly dependent on anybody for anything in life.
X
Desktop Bottom Promotion