For Quick Alerts
ALLOW NOTIFICATIONS  
For Daily Alerts

ಒಂಟಿ ಪೋಷಕರ ಡೇಟಿಂಗ್ ನ ಸಾಮಾನ್ಯ ಭೀತಿಗಳು

By Hemanth P
|

ನೀವು ಒಂಟಿ ಪೋಷಕರಾಗಿದ್ದು ಸ್ವತಃ ಮಗುವಿನ ಲಾಲನೆಪಾಲನೆ ಮಾಡುತ್ತಿದ್ದರೆ ಆಗ ನಿಮಗೆ ಡೇಟಿಂಗ್ ಬಗ್ಗೆ ಮತ್ತೊಂದು ಸಲ ಯೋಚಿಸುವಂತೆ ಮಾಡುತ್ತದೆ. ಮೊದಲ ಸಲ ನೀವು ಡೇಟಿಂಗ್ ಮಾಡಿದ್ದಾಗ ಇದ್ದ ಪರಿಸ್ಥಿತಿ ಮತ್ತು ಈಗ ನಿಮ್ಮ ಜೀವನದಲ್ಲಿ ಆಗಿರುವ ಮಹತ್ತರ ಬದಲಾವಣೆಗಳು ನಿಮಗೆ ನಿರ್ಧಾರ ತೆಗೆದುಕೊಳ್ಳಲು ತುಂಬಾ ಕಠಿಣವಾಗಬಹುದು. ಮತ್ತೆ ಡೇಟಿಂಗ್ ಮಾಡುವಾಗ ಪ್ರತಿಯೊಬ್ಬ ಒಂಟಿ ಪೋಷಕರಿಗೂ ಇದೇ ರೀತಿಯ ಅನುಭವವಾಗುತ್ತದೆ.

ಒಮ್ಮೆ ನಿಮಗೆ ಮಕ್ಕಳಾದರೆ ಆಗ ಎಲ್ಲವೂ ಬದಲಾಗುತ್ತದೆ. ಮತ್ತೆ ಅದು ಯಾವತ್ತೂ ಮೊದಲಿನಂತಾಗದು. ಹೆಚ್ಚಿನ ಒಂಟಿ ಪೋಷಕರು ಎದುರಿಸುವಂತಹ ಕೆಲವೊಂದು ಸಾಮಾನ್ಯ ಭೀತಿಯನ್ನು ನೀವು ಎದುರಿಸಬೇಕಾಗುತ್ತದೆ. ಆದರೆ ನೀವು ಭೀತಿಯಿಂದ ಮೇಲೆದ್ದು ಬಂದು ನಿಮ್ಮ ಜೀವನ ಹಾಗೂ ಜೀವನಶೈಲಿ ಸುಧಾರಿಸಲು ಧನಾತ್ಮಕವಾಗಿ ಯೋಚಿಸಬೇಕು. ಮಕ್ಕಳು ಇರುವುದರಿಂದ ಡೇಟಿಂಗ್ ನ ಸಮೀಕರಣವನ್ನೇ ಜಟಿಲವಾಗಿಸಬಹುದು. ಇದು ವಿಶ್ವದ ಅಂತ್ಯವೆಂದರ್ಥವಲ್ಲ. ಒಂಟಿ ಪೋಷಕರಾಗಿ ನೀವು ಟೇಟಿಂಗ್ ಮಾಡಲು ಹೋಗುವಾಗ ಎದುರಿಸುವ ಸಾಮಾನ್ಯ ಭೀತಿ ಹೋಗಲಾಡಿಸಲು ನಿಮ್ಮ ಮನಸ್ಥಿತಿ ಬದಲಾಯಿಸಬೇಕಾಗುತ್ತದೆ.

ತುಂಬಾ ಸಾಮಾನ್ಯ ಭೀತಿಯೆಂದರೆ ನಿಮ್ಮ ಮಕ್ಕಳು ಇದನ್ನು ಸ್ವೀಕರಿಸುತ್ತಾರೆಯಾ ಎನ್ನುವುದು. ಒಂಟಿ ಪೋಷಕರು ಮತ್ತೆ ಡೇಟಿಂಗ್ ಮಾಡಲು ನಿರ್ಧರಿಸಿದಾಗ ಮಕ್ಕಳ ಪ್ರತಿಕ್ರಿಯೆ ಹೇಗಿರುತ್ತದೆ ಮತ್ತು ಇದನ್ನು ಅವರು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಭೀತಿಯಿರುತ್ತದೆ. ನೀವು ಪ್ರೀತಿಸುವ ಸಂಗಾತಿಯನ್ನು ಕಳಕೊಂಡರೆ ಆಗ ಪಶ್ಚಾತ್ತಾಪದ ಭೀತಿಯಿರುತ್ತದೆ.

Common fears of single parents dating

1. ಮಕ್ಕಳು
ಒಮ್ಮೆ ನಿಮಗೆ ಮಕ್ಕಳಾದರೆ ಆಗ ನಿಮ್ಮ ಗಮನವೆಲ್ಲಾ ಅವರ ಸುತ್ತಲೇ ತಿರುಗುತ್ತಾ ಇರುತ್ತದೆ. ಯಾವುದೇ ನಿರ್ಧಾರ ಅಥವಾ ಬದಲಾವಣೆ ಮಾಡುವ ಮೊದಲು ನಿಮ್ಮ ಆದ್ಯತೆಗಿಂತ ಹೆಚ್ಚಾಗಿ ಮಕ್ಕಳ ಆದ್ಯತೆ ಬಗ್ಗೆ ಮೊದಲು ಯೋಚಿಸುತ್ತೀರಿ. ಮತ್ತೆ ಡೇಟಿಂಗ್ ಮಾಡುವಾಗ ಇದರಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಡೇಟಿಂಗ್ ಗೆ ಹೋಗುವಾಗ ಮಕ್ಕಳು ಯಾವ ರೀತಿ ಯೋಚಿಸುತ್ತಾರೆ ಎನ್ನುವುದು ಒಂಟಿ ಪ್ರೇಕ್ಷಕರನ್ನು ಕಾಡುವಂತಹ ಸಾಮಾನ್ಯ ಭೀತಿ.

2. ನಿಮ್ಮ ಸಂಗಾತಿ ಮತ್ತು ಮಕ್ಕಳು
ನಿಮ್ಮ ಮಕ್ಕಳು ಡೇಟಿಂಗ್ ವಿಷಯವನ್ನು ಒಪ್ಪಿಕೊಂಡರೂ ಅವರು ನಿಮ್ಮ ಹೊಸ ಸಂಗಾತಿಯನ್ನು ಸ್ವೀಕರಿಸುತ್ತಾರೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ನೀವು ಮೊದಲ ಸಂಗಾತಿಯಿಂದ ಬೇರ್ಪಟ್ಟಿರುವುದು ಅಥವಾ ಅವರ ಜನ್ಮದಾತನಿಂದ ಬೇರೆಯಾಗಿರುವುದರಿಂದ ಮಕ್ಕಳ ಮನಸ್ಸು ಛಿದ್ರಗೊಂಡಿರಬಹುದು. ನಿಮ್ಮ ಹೊಸ ಸಂಗಾತಿಯನ್ನು ಮಕ್ಕಳು ಸ್ವೀಕರಿಸುತ್ತಾರೆಯಾ ಎನ್ನುವ ಸಾಮಾನ್ಯ ಭೀತಿ ಇರುವುದು ನಿಜವಾಗಿಯೂ ಸತ್ಯ.

3. ಸೂಕ್ತ ಸಮಯ ಮೀಸಲಿಡುವ ಭೀತಿ
ಒಂಟಿ ಪೋಷಕರಾಗಿರುವ ಕಾರಣ ನಿಮ್ಮ ಜೀವನ ಮಕ್ಕಳ ಕೆಲಸ ಮತ್ತು ಜೀವನದ ಮಧ್ಯೆಯೇ ವ್ಯಸ್ತವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಒಬ್ಬರೊಂದಿಗೆ ನೀವು ಡೇಟಿಂಗ್ ಮಾಡಿದರೆ ಆಗ ಅವರಿಗಾಗಿ ಸೂಕ್ತ ಸಮಯ ಮೀಸಲಿಡಲಾಗುತ್ತದೆಯಾ ಎನ್ನುವ ಭೀತಿ ಇದ್ದೇ ಇರುತ್ತದೆ. ಒಂಟಿ ಪೋಷಕರಾಗಿರುವ ಕಾರಣ ನೀವು ಕುಟುಂಬದ ಸಂಪೂರ್ಣ ಆರ್ಥಿಕ ಜವಾಬ್ದಾರಿ ನೋಡಿಕೊಳ್ಳಬೇಕೆನ್ನುವುದು ಕೂಡ ಸತ್ಯ.

4. ಆದ್ಯತೆಗಳ ಭೀತಿ
ಹೊಸ ಸಂಗಾತಿ ಜತೆಗೆ ಡೇಟಿಂಗ್ ಮಾಡಲು ಎಷ್ಟು ಸನಿಹ ಬಂದಿದ್ದರೂ ನಿಮ್ಮ ಮೊದಲ ಆದ್ಯತೆ ಮಕ್ಕಳಾಗಿರಬೇಕು. ಮಕ್ಕಳು ಮತ್ತು ಹೊಸ ಸಂಗಾತಿಯ ನಡುವಿನ ಆಯ್ಕೆ ತುಂಬಾ ಕಠಿಣ. ನಿಮ್ಮ ಸಂಗಾತಿ ಪರಿಸ್ಥಿತಿ ಅರ್ಥ ಮಾಡಿಕೊಳ್ಳದಿದ್ದರೆ ಆಗ ಆ ಘಟ್ಟದಲ್ಲಿ ಏನಾಗುತ್ತದೆ ಎನ್ನುವ ಬಗ್ಗೆ ಹೇಳಲು ಸಾಧ್ಯವಿಲ್ಲ.

5. ತಪ್ಪಾಗುವ ಭೀತಿ

ಹಿಂದಿನ ಸಂಗಾತಿಯೊಂದಿಗಿನ ಸಂಬಂಧ ಅಷ್ಟೊಂದು ಒಳ್ಳೆಯದಿಲ್ಲದ ಕಾರಣ ನೀವು ಒಂಟಿ ಪೋಷಕರಾಗಿದ್ದರೆ ಆಗ ಜೀವನದ ಬಗ್ಗೆ ತುಂಬಾ ಭೀತಿಯಿಂದ ಯೋಚಿಸುವ ಸಾಧ್ಯತೆ ಹೆಚ್ಚು. ಮತ್ತೆ ಅದೇ ರೀತಿಯ ಕೆಟ್ಟ ಪರಿಸ್ಥಿತಿ ಮರುಕಳಿಸಬಾರದೆಂದು ನೀವು ಬಯಸುತ್ತೀರಿ. ಹೆಚ್ಚಿನ ಒಂಟಿ ಪೋಷಕರು ಮತ್ತೆ ಡೇಟಿಂಗ್ ಮಾಡುವ ಮೊದಲು ಕೌನ್ಸಿಲಿಂಗ್ ನಂತಹ ವೃತ್ತಿಪರ ಸಲಹೆ ಪಡೆಯುತ್ತಾರೆ. ಇದರಿಂದ ಅವರಿಗೆ ಹೊಸ ಸಂಬಂಧದಲ್ಲಿ ಮುಂದುವರಿಯಲು ಮಹತ್ವದ ಹೆಜ್ಜೆಯನ್ನಿಡಲು ನೆರವಾಗುತ್ತದೆ.

English summary

Common fears of single parents dating

If you are a single parent raising one more child on your own, you would most probably be out of touch with dating and will have lots of second thoughts in deciding whether to date again. The decision is a tough one to make due changed dynamics of your life compared to earlier time when you used to date.
Story first published: Monday, December 30, 2013, 10:52 [IST]
X
Desktop Bottom Promotion