For Quick Alerts
ALLOW NOTIFICATIONS  
For Daily Alerts

ಓವರ್ ಪೊಸೆಸಿವ್ ಅನ್ನು ಪ್ರೀತಿ ಅನ್ನಬಹುದೇ?

|

ಪ್ರೀತಿಯಲ್ಲಿ ಪೊಸೆಸಿವ್ ಇರುತ್ತದೆ, ಆದರೆ ಅದು ಹೆಚ್ಚಾದಾಗ ಕುತ್ತಿಗೆಗೆ ನೇಣು ಬಿಗಿದ ಅನುಭವ ಉಂಟಾಗಾಗುವುದು. ಏಕಪ್ಪಾ ಇವನ/ ಇವಳ ಪ್ರೀತಿಸಿದೆ? ಎಂದು ಅನಿಸುವುದು. ಈ ರೀತಿ ಅನಿಸಲಾರಂಭಿಸಿದಾಗ ಅವರ ಮೇಲೆ ಆಸಕ್ತಿ ಕಮ್ಮಿಯಾಗಿ ಕೋಪ, ಜಿಗುಪ್ಸೆ ಬರುವುದು. ಆದರೆ ಎಂದಾದರೂ ಯೋಚಿಸಿದ್ದೀರಾ? ಅವರ ಪೊಸೆಸಿವ್ ನೆಸ್ ಗೆ ಕಾರಣ ಏನಂದು? ಕಾರಣ ಸಿಂಪಲ್ insecurity ಅಂದರೆ ಅಭದ್ರತೆ!

ಹೌದು ಅವರಿಗೆ ಸಂಬಂಧದಲ್ಲಿ ಅಭದ್ರತೆ ಕಾಣಿಸಿದರೆ ತುಂಬಾ ಪೊಸೆಸಿವ್ ಆಗುತ್ತಾರೆ. ನೀವು ಯಾರ ಜೊತೆ ಹೊರಗಡೆ ಹೋಗಬಾರದು, ಪ್ರತಿಯೊಂದು ವಿಷಯವನ್ನು ಅವರ ಜೊತೆ ಹೇಳಿಕೊಳ್ಳಬೇಕು. ಫ್ರೆಂಡ್ಸ್ ಜೊತೆ ಹೊರಗಡೆ ಹೋಗಿದ್ದೆ ಅಂದರೆ ಸಾಕು ಕೋಪ ಮಾಡಿಕೊಂಡು ಬಿಡುತ್ತಾರೆ. ಎಷ್ಟೋ ಫ್ರೆಂಡ್ಸ್ ಅವರ ಕಾರಣದಿಂದ ದೂರ ಆಗುತ್ತಾರೆ. ಮೊದಲೆಲ್ಲಾ ಇದನ್ನು ಖಂಡಿಸುವುದೇ ಇಲ್ಲ, ಸುಮ್ಮೆನೆ ಇರುತ್ತೇವೆ, ಆದರೆ ಅವರ ಪೊಸೆಸಿವ್ ನೆಸ್ ಎಲ್ಲೆ ಮೀರುತ್ತದೆ ಹೊರತು ಕಮ್ಮಿಯಾಗುವುದಿಲ್ಲ, ಕೊನೆಗೆ ಓವರ್ ಪೊಸೆಸಿವ್ ಜೊತೆಗೆ ಸಂಶಯ ಕೂಡ ಬೆಳೆಯಲಾರಂಭಿಸುತ್ತದೆ, ಇದರಿಂದಾಗಿ ಸಂಬಂಧ ಮುರಿದು ಹೋಗುವುದು.

Signs Of An Over-Possessive

ಆದ್ದರಿಂದ ಓವರ್ ಪೊಸೆಸಿವ್ ನಡುವಳಿಕೆ ನಿಮ್ಮ ಪ್ರೇಮಿಯಲ್ಲಿ ಕಂಡು ಬಂದರೆ ಅವರನ್ನು ಬಿಟ್ಟು ನೀವು ಎಂದಿಗೂ ದೂರ ಹೋಗಲ್ಲ ಎಂಬ ನಂಬಿಕೆ ಅವರಿಗೆ ಬರುವಂತೆ ಮಾಡಿ, ಆಗ ಓವರ್ ಪೊಸೆಸಿವ್ ನೆಸ್ ಕಮ್ಮಿಯಾಗುವುದು. ಓವರ್ ಪೊಸೆಸಿವ್ ನೆಸ್ ನ ಲಕ್ಷಣಗಳು ಈ ರೀತಿ ಇರುತ್ತದೆ:

* ಎಲ್ಲಾ ಸಮಯ ನಿಮ್ಮ ಜೊತೆ ಕಳೆಯ ಬಯಸುತ್ತಾರೆ. ಆಗಾಗ ಪೋನ್ ಮಾಡುವುದು, ಮೆಸೇಜ್ ಮಾಡುವುದು ಮಾಡುತ್ತಾ ಇರುತ್ತಾರೆ. ತಕ್ಷಣ ರಿಪ್ಲೈ ಸಿಗಲಿಲ್ಲ ಎಂದರೆ ಕೋಪಮಾಡಿಕೊಳ್ಳುತ್ತಾರೆ. ಇದನ್ನೇ ಪ್ರೀತಿ ಎಂದು ಸುಮ್ಮೆನೆ ಕೂರಬೇಡಿ. ಈ ನಡುವಳಿಕೆಯಿಂದ ಒಂದಲ್ಲಾ ಒಂದುದಿನ ತೊಂದರೆ ಕಟ್ಟಿಟ್ಟ ಬುತ್ತಿ.

* ಕೆಲವರು ಎಷ್ಟು ವಿಚಿತ್ರವಾಗಿ ವರ್ತಿಸುತ್ತಾರೆ ಅಂದರೆ ನಿಮ್ಮ ಫ್ರೆಂಡ್ ಲಿಸ್ಟ್ ನಲ್ಲಿ ಹುಡುಗಿಯರ ಹೆಸರಿದ್ದರೆ ನಿಮ್ಮ ಗರ್ಲ್ ಫ್ರೆಂಡ್ ಅನ್ ಫ್ರೆಂಡ್ ಮಾಡಲು ಹೇಳಬಹುದು, ಕೆಲ ಬಾಯ್ ಫ್ರೆಂಡ್ ತನ್ನ ಗರ್ಲ್ ಫ್ರೆಂಡ್ ಗೆ ಬಾಯ್ ಫ್ರೆಂಡ್ಸ್ ಇರುವುದು ಸಹಿಸುವುದಿಲ್ಲ. ಅಂತಹವರಿಗೆ ಫ್ರೆಂಡ್ಸ್ ಬೇರೆ-ಅವರು ಬೇರೆ ಎರಡನ್ನೂ ಒಂದೇ ರೀತಿ ನೋಡಬೇಡ ಎಂದು ಆರಂಭದಲ್ಲಿಯೇ ತಿಳಿವಳಿಕೆ ಹೇಳುವುದು ಒಳ್ಳೆಯದು.

* ನಿಮ್ಮ ಬದುಕಿನ ಪ್ರತಿಯೊಂದು ವಿಷಯಕ್ಕೆ ತಲೆ ಹಾಕುತ್ತಾರೆ. ನೀವು ಯಾವ ಡ್ರೆಸ್ ಹಾಕಬೇಕು, ಡ್ರೆಸ್ಸಿಂಗ್ ಹೇಗಿರಬೇಕು ಎಲ್ಲವನ್ನು ಅವಳೇ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಅದಕ್ಕೆ ನೀವು ತಾಳ ಹಾಕುತ್ತಾ ಹೋದರೆ ಮುಂದೆ ಕಷ್ಟವಾಗಬಹುದು. ಅವರು ಆಸೆ ಪಟ್ಟಂತೆ ನೀವು ಇರುವುದು ತಪ್ಪಲ್ಲ, ಆದರೆ ಅವರು ನೀವು ಹೀಗೇ ಇರಬೇಕೆಂದು ಆರ್ಡರ್ ಕೊಡುವುದು ತಪ್ಪು.

* ನೀವು ಅವಳ/ಅವನ ಮಾತು ಕೇಳದಿದ್ದಾಗ ಅವರಿಗೆ ಅವರೇ ನೋವು ಮಾಡಿಕೊಂಡು ನೀವು ಪಶ್ಚಾತಾಪ ಪಡುವಂತೆ ಮಾಡಬಹುದು.

ಈ ಗುಣ ಬದಲಾಗದಿದ್ದರೆ ಅಂತವರ ಜೊತೆ ಸಂಬಂಧ ತುಂಬಾ ಕಷ್ಟವಾಗುವುದು.

English summary

Signs Of An Over-Possessive | Love And Relationship | ಓವರ್ ಪೊಸೆಸಿವ್ ನ ಲಕ್ಷಣಗಳು | ಪ್ರೀತಿ ಮತ್ತು ಸಂಬಂಧ

Possessiveness is natural in any relationship, but some girlfriends take it too far. Check out these signs of an over-possessive girlfriend and see if your relationship borders are unhealthy.
X
Desktop Bottom Promotion