ಸಂಗಾತಿಯ ಅನೈತಿಕತೆ ಬಗ್ಗೆ ಹೇಗೆ ವರ್ತಿಸಬೇಕು?

By:
Subscribe to Boldsky

ನಿಮ್ಮ ಸಂಗಾತಿಯ ವಿವಾಹೇತರ ಸಂಬಂಧದ ಬಗ್ಗೆ ನಿಮಗೆ ಸಾಕ್ಷಿ ಸಿಕ್ಕಿದೆ, ನಿಮಗೆ ಸತ್ಯಾಂಶ ತಿಳಿದಿದೆ. ಹಾಗೂ ನೀವೀಗ ಹದೆಗೆಟ್ಟ ನಿಮ್ಮ ಸಂಬಂಧವನ್ನು ಸರಿಪಡಿಸುವ ದಾರಿ ಹುಡುಕುತ್ತಿದ್ದೀರಾ. ನನಗೆ ಇನ್ನೊಮ್ಮೆ ಹಿಂದಿನಂತೆಯೇ ಪ್ರೀತಿಸಲು ಸಾಧ್ಯವೇ? ಅಥವಾ ಈಗ ಪಡೆದಿರುವ ನೋವಿನಿಂದ, ಸಿಟ್ಟಿನಿಂದ ಅಥವಾ ಅಸೂಯೆಯಿಂದ ಹೊರಬರಲು ಸಾಧ್ಯವೇ ಎಂಬ ಭಾವನೆಗಳು ನಿಮ್ಮಲ್ಲಿದ್ದರೆ ಅವು ಸಂಪೂರ್ಣ ಸಾಮಾನ್ಯ.

ಈ ನಿಮ್ಮ ಬೇಸರದಲ್ಲಿ ಬಹಳ ಏಕಾಂಗಿ ಅನುಭವ ಹೊಂದುವುದು ಮತ್ತು ಮುಂದೇನಾಗುತ್ತದೆ ಎಂಬ ಚಿಂತೆಯಲ್ಲಿರಬೇಡಿ. ಈ ಲೇಖನವು ನೀವು ನಡೆಯುತ್ತಿರುವ ಕತ್ತಲಿನ ಹಾದಿಯ ಕೊನೆಗೆ ಆಶಾಕಿರಣದಂತಿದೆ. ನೀವು ನಡೆಯಬೇಕಾಗಿರುವ ದಾರಿಗೆ ದಾರಿ ದೀಪದಂತಿದೆ.

How to Recover from an Affair

ನೀವು ನಡೆಯಬೇಕಾಗಿರುವ ದಾರಿಯ ಹಂತಗಳು ಹೀಗಿವೆ:

1. ನೀವು ಆಘಾತದಲ್ಲಿದ್ದೀರಿ ಎಂದು ಒಪ್ಪಿಕೊಳ್ಳಿ. ನಿಮ್ಮ: ಸಂಗಾತಿ ಬೇರೊಬ್ಬರೊಂದಿಗೆ ದೈಹಿಕ ಮತ್ತು ಮಾನಸಿಕ ಸಂಬಂಧದಲ್ಲಿದ್ದಾರೆ ನಿಮ್ಮ ದಾರಿಗೆ ಈ ವ್ಯಕ್ತಿ ಅಡ್ಡ ಬರುತ್ತಿದ್ದಾರೆ ಹಾಗೂ ಇವೆಲ್ಲ್ಲ ನಿಜವಾಗಿಯೂ ನಿಮ್ಮ ಜೀವನದಲ್ಲಿ ನಡೆಯುತ್ತಿದೆ ಎಂದು ಒಪ್ಪಿಕೊಳ್ಳಿ. ಒಂಟಿಯಾಗಿ ಅಪರಿಚಿತ ಪ್ರದೇಶದಲ್ಲಿ ನಿಂತ ನಿಮ್ಮ ಸುತ್ತ ಮಂಜು ಆವರಿಸಿ ಮುಂದಡಿ ಇಡಲು ಆಗದಂತೆ ಒದ್ದಾಡುವ ಸ್ಥಿತಿಯಲ್ಲಿ ನೀವಿರುತ್ತೀರಿ. ಇದೊಂದು ಕೆಟ್ಟ ಕನಸಾಗುತ್ತಿದ್ದರೆ ಎಂದು ನೀವು ಬಯಸುತ್ತಿರುತ್ತೀರಿ.

2. ಇಂತಹ ಸ್ಥಿತಿಯಲ್ಲಿ ಸ್ವಲ್ಪ ಸಿಟ್ಟು, ಆಕ್ರೋಶ ಸಾಮಾನ್ಯ: ಇದು ನಿಜವಾಗಿಯೂ ನನ್ನ ಜೀವನದಲ್ಲಿ ನಡೆಯುತ್ತಿದೆ. ಇದು ಕೇವಲ ಒಂದು ಕನಸು ಅಥವಾ ಭ್ರಮೆಯಲ್ಲ ಎಂದು ಮನದಟ್ಟು ಮಾಡಿಕೊಳ್ಳಿ. ಇಂತಹ ಸ್ಥಿತಿಯಲ್ಲಿ ದೈಹಿಕ ಬಳಲಿಕೆ ಸಾಮಾನ್ಯ. ಸಾಮಾನ್ಯವಾಗಿ ಕೆಲಸಕ್ಕೆ ಹೋಗುವಂತೆ ಗೆಳೆಯರೊಂದಿಗೆ ಬೆರೆಯುವಂತೆ ಬೆರೆಯಲಾರಿರಿ. ಅತಿಯಾದ ಸಿಟ್ಟು, ಅಳು, ವಸ್ತುಗಳನ್ನು ಎಸೆಯುವುದು, ಒಡೆಯುವುದು ಚೀರಾಟ, ಮನಸ್ಸಿನ ಸ್ಥಿಮಿತ ಕಳೆದುಕೊಂಡಂತೆ ವರ್ತಿಸುವುದು ಸಾಮಾನ್ಯ. ಆದರೆ ನನ್ನ ಈ ಸ್ಥಿತಿಯಿಂದ ನಾನು ಹೊರಬರುತ್ತೇನೆ ಎಂಬ ಧೈರ್ಯ ನಿಮ್ಮಲ್ಲಿರಲಿ. ಮತ್ತು ಈ ಸಮಯದಲ್ಲಿ ತೆಗೆದ್ಕೊಳ್ಳುವ ಆತುರದ ನಿರ್ಧಾರಗಳು ಮುಂದೆ ಹೆಚ್ಚು ನೋವನ್ನು ನೀಡುತ್ತವೆ ಎಂದು ನೆನಪಿರಲಿ.

3. ಸಿಟ್ಟನ್ನು ಆದಷ್ಟು ಹೊರಹಾಕಿ: ಈ ಸಮಯದಲ್ಲಿ ನೀವು ಮಾನಸಿಕವಾಗಿ ಬಹಳ ನೊಂದಿರುತ್ತೀರಿ. ಒಂದೋ ಮದುವೆಯನ್ನು ಹೇಗೆ ಮುರಿದು ಹಾಕುವುದು ಅಥವಾ ಮತ್ತೆ ಹೇಗೆ ಒಂದಾಗಿ ಜೀವನ ನಡೆಸುವುದು ಎಂಬ ಯೋಚನಗಳಷ್ಟೇ ನಿಮ್ಮನ್ನು ಆವರಿಸುತ್ತವೆ. ಸಿಟ್ಟು ಮತ್ತು ನಿಮ್ಮ ಸಂಗಾತಿಯ ಬಗ್ಗೆ ಸೇಡಿನ ಯೋಚನೆಗಳ ಬದಲು ನಿಮ್ಮ ಜೀವನವನ್ನು ಹೇಗೆ ಮುಂದುವರೆಸಬೇಕು ನಿಮ್ಮ ಮುಂದಿರುವ ಗುರಿಗಳು ಏನು ಅವನ್ನು ಹೇಗೆ ತಲುಪಬಹುದು ಎಂಬ ಯೋಚನೆಗಳೇ ನಿಮ್ಮ ಮುಂದಿರುತ್ತವೆ. ಈ ಸಮಯದಲ್ಲಿ ಅಳಲು, ಜಗಳವಾಡಲು ಅಥವಾ ೨೪ ಗಂಟೆಗಳೂ ಅದನ್ನೇ ಯೋಚಿಸರಾದಷ್ಟು ಸುಸ್ತಾಗಿರುತ್ತೀರಿ.

4. ಒಂದಾಗುವ ಯೋಚನೆ ಮಾಡಿ: ನೀವು ನಿಮ್ಮ ಹದೆಗೆಟ್ಟ ಸಂಬಂಧವನ್ನು ಪುನಃ ಸರಿದಾರಿಗೆ ತರಲು ಪ್ರಯತ್ನಿಸುತ್ತೀರಿ ಎಂದಾದರೆ ಈ ಸಂದರ್ಭದಲ್ಲಿ ನಿಮಗೆ ಮೋಸಗಾರರಿಂದ ಸಂಪೂರ್ಣ ಸಹಾಯ ಬೇಕು. ಅವರು ನಿಮ್ಮಿಬ್ಬರ ಸಂಬಂಧ ಸರಿಪಡಿಸಲಿ ಮುಂದಾಗದಿದ್ದರೆ ಇದೊಂದು ಎಂದೂ ಮುಗಿಯದ ಕಥೆಯಾಗುತ್ತದೆ ಎಂದು ಮನವರಿಕೆ ಮಾಡಿ ಕೊಡಿ.

5. ನಂಬಿಕೆಯನ್ನು ಪುನಃ ಗಟ್ಟಿಗೊಳಿಸಿ: ನೀವು ಹೊಸ ಸಂಬಂಧದ ಬಗ್ಗೆ ಯೋಚಿಸುತ್ತಿದ್ದರೂ ಮದುವೆಯ ಸಂಬಂಧವನ್ನು ಗಟ್ಟಿಗೊಳಿಸಲು ಪ್ರಯತ್ನಪಡುತ್ತಿದ್ದರೂ ಇದೊಂದು ಕ್ಲಿಷ್ಟಕರ ಸನ್ನಿವೇಶ. ಹೊಸ ಸಂಬಂಧ ಆರಂಭಿಸಲು ಇದು ಸೂಕ್ತ ಸಮಯ ಅಲ್ಲವೇ ಅಲ್ಲ. ನಿಮ್ಮ ಮಾನಸಿಕ ಸ್ಥಿತಿ ಸರಿಯಾಗಲು ಸಮಯ ತೆಗೆದುಕೊಳ್ಳಿ. ಅಲ್ಲಿಯ ತನಕ ನಿಮ್ಮ ಬಾಳಲ್ಲಿ ಹೊಸ ವ್ಯಕ್ತಿಯ ಆಗಮನ ಅಷ್ಟೊಂದು ಸಮಂಜಸವಲ್ಲ. ನೀವು ನಿಮ್ಮ ಮದುವೆಯ ಬಂಧವನ್ನು ಸರಿಪಡಿಸುವ ಕೆಲಸದಲ್ಲಿದ್ದರೆ ಮೋಸಗಾರರು ಹೇಗೆ ತಮ್ಮ ಜೀವನವನ್ನು ತೆರೆದ ಪುಸ್ತಕವನ್ನಾಗಿಸಿದ್ದಾರೆ ಎಂದು ಯೋಚಿಸಿ. ಇದೊಂದು ದೀರ್ಘಕಾಲಿಕ ಮತ್ತು ನಿಧಾನಗತಿಯ ಪ್ರಕ್ರಿಯೆಯಾಗಿದ್ದು ಸಮಯವೇ ಇದಕ್ಕೆ ತಕ್ಕ ಉತ್ತರ ನೀಡಬೇಕು.

6. ಪ್ರಚೋದಕಗಳನ್ನು ಎದುರಿಸಿ: ನಿಮ್ಮ ಸಂಗಾತಿ ಹೊಂದಿದ್ದ ಅನೈತಿಕ ಸಂಬಂಧದ ಜೊತೆ ನಂಟು ಹೊಂದಿರುವ ಹೆಸರು, ಸ್ಥಳ, ಮತ್ತು ಘಟನೆಗಳೇ ಪ್ರಚೋದಕಗಳು. ನಿಮ್ಮ ಸಂಗಾತಿಯ ಬೇರೊಂದು ಸಂಬಂಧದ ಸಮಯದಲ್ಲಿನ ಪ್ರಸಿದ್ಧವಾದ ಹಾಡುಗಳು, ಅವರು ಹೋಗಿದ್ದ ಹೊಟೇಲುಗಳು ಅಥವಾ ನಿಮ್ಮಿಬ್ಬರಿಗೂ ಸಾಮಾನ್ಯ ಪರಿಚಯ ಇರುವ ವ್ಯಕ್ತಿಗಳೇ ಪ್ರಚೋದಕಗಳು. ಇವುಗಳ ಜೊತೆಗೆ ಹೊಂದಿಕೊಳ್ಳಲು ಪ್ರಾರಂಭಿಸಿ.

7. ನೈಜತೆಗೆ ಸಮೀಪವಿರುವ ಗುರಿಗಳನ್ನು ಇಟ್ಟುಕೊಳ್ಳಿ: ಈ ಸಮಯದಲ್ಲಿ ನೀವು ನಿಮ್ಮ ಸಂಗಾತಿಯ ಜೊತೆಗೆ ನಿಜವಾಗಿಯೂ ಸಂಬಂಧ ಮುಂದುವರೆಸಲು ಇಷ್ಟಪಡುತ್ತೀರಾ? ಪುನಃ ಆರಂಭವಾಗುವ ಸಂಬಂಧ ಮೊದಲಿನಂತೆಯೇ ಇರದು ಆದರೆ ಈ ವಿಷಯಗಳ ಬಗ್ಗೆ ಗಮನ ಕೊಡಿ,

ಇದೇ ರೀತಿ ಬದುಕಲು ಸಾಧ್ಯವೇ? ಹಳೆಯ ಸಂಬಂಧದ ಬಗ್ಗೆ ಮಾತುಗಳು ಬಂದಾಗ ನೀವು ಮಾಮೂಲಾಗಿ ವರ್ತಿಸಬಹುದೇ? ನಿಮ್ಮ ಸಂಗಾತಿ ತಮ್ಮ ತಪ್ಪನ್ನು ಒಪ್ಪಿ ಮುನ್ನಡೆಯುತ್ತಾರಾ? ಉತ್ತರ ಹೌದು ಎಂದಾದರೆ ನಿಮ್ಮ ಸಂಬಂಧ ಮತ್ತೆ ಮುಂದುವರೆಯಬಹುದು.

ಆದರೆ ನಿಮ್ಮ ಸಂಗಾತಿ ತನ್ನ ತಪ್ಪನ್ನು ಒಪ್ಪದಿದ್ದರೆ, ಪ್ರಶ್ನೆಗಳಿಗೆ ಮೌನವೇ ಉತ್ತರ ಎಂದಾದರೆ, ನಡತೆ ಅನುಮಾನಾಸ್ಪದವಾಗಿದ್ದರೆ ಅಥವಾ ಆ ಸಂಬಂಧದ ಜೊತೆಗೆ ಮುಂದುವರೆಯುವ ಸೂಚನೆಗಳು ಇದ್ದರೆ ಅಂತಹ ಸ್ಥಿತಿಯಲ್ಲಿ ನೀವು ನಿಮ್ಮ ಸಂಗಾತಿಯ ಜೊತೆಗೆ ಇರಬಲ್ಲೆನೇ ಎಂದು ನಿರ್ಧರಿಸಿ ಇಲ್ಲ ಎಂದಾದರೆ ನಿಮ್ಮ ಹೊಸ ಬದುಕನ್ನು ಕಟ್ಟಿಕೊಳ್ಳಿ.

8. ಎಲ್ಲಾ ಮರೆತು ಹೊಸ ಬಾಳು ಆರಂಭಿಸಿ: ಅವನ/ಅವಳ ಹೊರತಾಗಿಯೂ ನೀವು ಚೆನ್ನಾಗಿರಬಲ್ಲೆ ಎಂದು ಧೈರ್ಯವಾಗಿರಿ. ಸಮಯ ಬೇಕು ನಿಜ ಆದರೆ ಸಾಧ್ಯ. ಇದರೊಂದಿಗೆ ನೀವು ಮತ್ತಷ್ಟು ಸದೃಢ ಮನಸ್ಸಿನ ವ್ಯಕ್ತಿಯಾಗಿ ರೂಪುಗೊಳ್ಳುತ್ತೀರಿ ಎನ್ನುವ ಭರವಸೆಯಿರಲಿ. ನಿಮ್ಮ ಖುಷಿಗೆ ನೀವು ಇನ್ನೊಬ್ಬರ ಮೇಲೆ ಸಂಪೂರ್ಣ ಅವಲಂಬಿತರಾಗಬಾರದು ಎನ್ನುವ ಪಾಠ ಕಲಿಯುತ್ತೀರಿ. ಹೀಗಾಗದೇ ಇರಲು ನಾನೇನಾದರೂ ಮಾಡಬಲ್ಲೆನಾಗಿದ್ದೆನೆ? ನನ್ನ ತಪ್ಪೇನಾದರೂ ಇತ್ತೇ? ಸನ್ನಿವೇಶವನ್ನು ಮತ್ತಷ್ಟು ಹಾಳು ಮಾಡಲು ನಾನೂ ಕಾರಣಕರರ್ತನೇ ಎಂದು ಯೋಚಿಸಿ.

9. ಹೊಸ ಆರಂಭಕ್ಕೆ ಸರಿಯಾದ ಮುನ್ನುಡಿ ಬರೆಯಿರಿ: ನಿಮ್ಮ ಬಗ್ಗೆ, ನಿಮ್ಮ ಸಂಗಾತಿಯ ಬಗ್ಗೆ, ಹಾಗೂ ಆ ಸಂಬಂಧದ ಬಗ್ಗೆ ನೀವು ತಿಳಿಯಬೇಕಾದ್ದು ಬಹಳಷ್ಟಿದೆ ಎಂದು ತಿಳಿದುಕೊಳ್ಳಿ. ಈ ಸನ್ನಿವೇಶದ ಪಾಠ ನೋವಿನ ಜೊತೆಗೆ ಕೊನೆಗೊಳ್ಳದಿರಲಿ.

ನೆನಪಿಡಿ: ನಮ್ಮನ್ನು ಕೆಡವಲಾಗದ್ದು ನಮ್ಮನ್ನು ಮತ್ತಷ್ಟು ಗಟ್ಟಿ ಕಟ್ಟುತ್ತದೆ. (ನಾವು ಸಾಧ್ಯವಾಗಿಸಬೇಕಷ್ಟೆ).

Story first published: Saturday, December 22, 2012, 11:34 [IST]
English summary

How to Recover from an Affair | How to do tips | ನಿಮ್ಮ ಸಂಗಾತಿಯ ವಿವಾಹೇತರ ಸಂಬಂಧ ತಿಳಿದ ಮೇಲೆ ನೀವು ಮಾಡಬೇಕಾದದ್ದು

You've found the evidence, you've confronted your spouse, and you're now trying to figure out if the marriage can be repaired. If you're wondering if you will ever love and trust again, or be able to get over the hurt, rage, and jealousy that result from discovering your mate had an affair, your feelings and concerns are perfectly normal.
Please Wait while comments are loading...
Subscribe Newsletter