ಸೋದರ ಸಂಬಂಧಿಗಳೊಂದಿಗೆ ಸ್ನೇಹಿತರಾಗಿರುವುದು ಹೇಗೆ?

By:
Subscribe to Boldsky

ಸೋದರ ಸಂಬಂಧಿಗಳೊಂದಿಗೆ ಹೇಗೆ ಸ್ನೇಹಿತರಾಗಿರುವುದು ಎಂಬುದು ಸಂಬಂಧ ಹೊಸತಾಗಿರಲಿ ಅಥವಾ ಹಳೆಯದಾಗಿರಲಿ ಒಂದು ಕಷ್ಟಕರವಾದ ಸವಾಲು. ಇಲ್ಲಿ ಕೆಳಗೆ ನೀಡಲಾದ ಸಲಹೆಗಳು ನಿಮ್ಮನ್ನು ಒಬ್ಬ ಉತ್ತಮ ಹಿನ್ನೆಲೆಯಿಂದ ಬಂದ ವ್ಯಕ್ತಿ ಎಂದು ಸೂಚಿಸುತ್ತದೆ ಮತ್ತು ನಿಮ್ಮ ಯಾವುದೇ ಸೋದರ ಸಂಬಂಧಿಯ ಜೊತೆಗೆ ಉತ್ತಮ ಸಂಬಂಧ ಹೊಂದಿರಲು ಸಹಾಯ ಮಾಡುತ್ತದೆ.

ಹಂತಗಳು:

1. ಯಾವಾಗಲೂ ವಿಧೇಯರಾಗಿರಿ. ಆದರೆ ತೀರಾ ಹೆಚ್ಚು ಪ್ರಯತ್ನಿಸಬೇಡಿ. ನಿಮ್ಮ ಸೋದರ ಸಂಬಂಧಿಗಳನ್ನು ಗೌರವಯುತವಾಗಿ ಬಹುವಚನದಲ್ಲೇ ಸಂಬೋಧಿಸಿ. ಅವರೇ ಹಾಗೆ ಕರೆಯಬೇಡ ಎಂದಾಗಲಷ್ಟೇ ಬಿಟ್ಟು ಬಿಡಿ.

How to Become Friends With Your in Laws

2. ನಿಮ್ಮ ಕುಟುಂಬದವರ ಮನೆಗೆ ಮೊದಲ ಭೇಟಿ ನೀಡುವಾಗ ಗಂಡಂದಿರಾದರೆ ಸ್ವಲ್ಪ ನವೀನ ಮಾದರಿಯ ಉಡುಪು ತೊಟ್ಟು ಹೋಗಿ. ಹೆಚ್ಚಿನ ಆಲಂಕಾರಿಕ ವಸ್ತ್ರಗಳನ್ನು ತೊಡದಿರಿ. ದೊಡ್ಡ ಗಾತ್ರದ ಬಟ್ಟೆಗಳೂ ಬೇಡ. ಹೆಂಗಸರು ಜಾಸ್ತಿ ಮೈ ಕಾಣುವಂತಹ ಬಟ್ಟೆಗಳನ್ನು ಧರಿಸದಿರಿ. ಆಧುನಿಕ ಕುಟುಂಬಗಳಿಗೆ ಭೇಟಿ ನೀಡುವಾಗ ಮೊಣಕಾಲಿನ ಸ್ವಲ್ಪ ಮೇಲಿರುವ ಸ್ಕರ್ಟ್ ಆದರೆ ಪರವಾಗಿಲ್ಲ. ಸಂಪ್ರದಾಯಸ್ಥ ಕುಟುಂಬಕ್ಕೆ ಭೇಟಿ ನೀಡುವಾಗ ಮೊಣಕಾಲಿಗಿಂತ ಸ್ವಲ್ಪ ಕೆಳಗೆ ತನಕ ಬರುವ ಸ್ಕರ್ಟ್ ಇರಲಿ. ಜೀನ್ಸ್ ತೊಟ್ಟು ಹೋಗುವುದು ಒಂದು ಉತ್ತಮ ಆಯ್ಕೆ. ಇದು ತುಂಬಾ ಬಿಗಿ ಮತ್ತು ಲೋ ಕಟ್ ಆಗದೇ ಇರಲಿ. ಜೊತೆಗೆ ಸುಂದರವಾದ ಟೀ - ಶರ್ಟ್ ಅಥವಾ ಯಾವುದೇ ಟಾಪ್ ಚೆನ್ನಾಗಿರುತ್ತದೆ. ಮೇಕ್ ಅಪ್ ಹೆಚ್ಚು ಎಂದು ಯಾರಿಗೂ ಅನ್ನಿಸದಂತಿರಲಿ.

3. ಅವರು ಮಾತನಾಡುವ ರೀತಿಯನ್ನು ಆಲಿಸಿ ಮತ್ತು ಅನುಸರಿಸಿ. ಆದರೆ ನೆನಪಿಡಿ ಅದು ಅವರನ್ನು ಅಣಕಿಸುವ ರೀತಿಯಲ್ಲಿ ಇರಬಾರದು. ಕೆಲವು ಕುಟುಂಬಗಳಲ್ಲಿ ಮಕ್ಕಳು ಏನೇ ಮಾಡಿದರೂ ತೆರೆದ ಹೃದಯದಿಂದ ಸ್ವಾಗತಿಸುತ್ತಾರೆ ಮತ್ತು ಇಂತಹ ಸನ್ನಿವೇಶಗಳನ್ನು ಆನಂದಿಸುತ್ತಾರೆ. ಆದರೆ ಕೆಲವು ಕುಟುಂಬಗಳು ಹೀಗಿರುವುದಿಲ್ಲ. ಎಲ್ಲವೂ ಒಂದು ಸಭ್ಯತೆಯ ಚೌಕಟ್ಟಿನಲ್ಲಿರುವಂತೆ ಗಮನವಿಡಿ. 'ದಯವಿಟ್ಟು' 'ಧನ್ಯವಾದ' ಮುಂತಾದ ಶಬ್ದಗಳು ಯಾವಾಗಲೂ ನಿಮ್ಮ ಘನತೆಯನ್ನು ಹೆಚ್ಚಿಸುತ್ತವೆ.

4. ಹೊಸ ಮನೆಗಳಲ್ಲಿ ಯಾವುದೇ ಕೋಣೆಗೆ ಅದರಲ್ಲೂ ಮುಖ್ಯವಾಗಿ ಸ್ನಾದನ ಕೋಣೆಗೆ ಹೋಗುವಾಗ ಬಾಗಿಲು ಬಡಿದು ಒಳಗೆ ಹೋಗಿ. ನಿಮ್ಮ ಸಂಗಾತಿಯ ತಂದೆ ತಾಯಿಯ ಕೋಣೆಗೆ ನೇರವಾಗಿ ಪ್ರವೇಶಿಸುವುದನ್ನು ಎಂದೆಂದಿಗೂ ಮಾಡದಿರಿ.

5. ನಿಮ್ಮ ಕುಟುಂಬದ ಸಮಾರಂಭಗಳಲ್ಲಿ ಪಾಲ್ಗೊಳ್ಳದೇ ಇರುವುದು ನೀವು ಅವರನ್ನು ಇಷ್ಟ ಪಡುವುದಿಲ್ಲ ಎನ್ನುವ ಸೂಚನೆ ನೀಡುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಹೆಚ್ಚಿನ ಸಮಾರಂಭಗಳಲ್ಲಿ ಭಾಗವಹಿಸಿ. ಅವರನ್ನು ಅವರ ಕುಟುಂಬವನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿ. ಹೆಂಗಸರು ನಿಮ್ಮ ಸಂಗಾತಿಯ ಅಮ್ಮನ ಬಳಿ ಅದೇ ರೀತಿ ಪುರುಷರು ನಿಮ್ಮ ಸಂಗಾತಿಯ ತಂದೆಯ ಬಳಿ ಮಾತನಾಡಿ. ಈ ರೀತಿ ನಿಮಗೆ ಆಸಕ್ತಿ ಇರುವ ವಿಷಯಗಳನ್ನು ನೀವು ಹಂಚಿಕೊಳ್ಳಬಹುದು. ಕ್ರೀಡೆ, ಧಾರಾವಾಹಿಗಳು, ಇಂತಹವುಗಳ ಬಗ್ಗೆ ಆರಂಭಿಸಿ. ನಿಮ್ಮ ಅತ್ತೆ ನೋಡುವ ಧಾರಾವಾಹಿ ನಿಮ್ಮ ಇಷ್ಟದ ಧಾರಾವಾಹಿ ಆಗಿದ್ದಲ್ಲಿ ಅದರ ಬಗ್ಗೆ ಅದರ ಪಾತ್ರಗಳ ಬಗ್ಗೆ ಚರ್ಚಿಸಿ. ಆದರೆ ಮಾತನಾಡಲೇಬೇಕು ಎಂಬ ಕಾರಣಕ್ಕೆ ಮಾತನಾಡುವಂತೆ ಅನ್ನಿಸದಿರಲಿ.

6. ಕೆಲವು ಸಾಮಾನ್ಯ ಮತ್ತು ಸರಳ ಪ್ರಶ್ನೆಗಳ ಮೂಲಕ ಅವರನ್ನು ತಿಳಿಯುವ ಪ್ರಯತ್ನ ಮಾಡಿ. ಇದು ನಿಮ್ಮ ಸಂಗಾತಿಯ ಬಾಲ್ಯದ ಚಟುವಟಿಕೆಗಳ ಬಗ್ಗೆ ಇರಬಹುದು. ಸಾಮಾನ್ಯವಾಗಿ ಇದು ಎಲ್ಲರ ಕುಟುಂಬಗಳಲ್ಲಿ ಇರುವಂತಹವು. ತಂದೆ ತಾಯಿ ತಮ್ಮ ಮಕ್ಕಳ ಬಾಲ್ಯದ ನಡೆ ನುಡಿಗಳ ಬಗ್ಗೆ ನೆನಪಿಟ್ಟುಕೊಂಡಿರುತ್ತಾರೆ. ಅಥವಾ ನಿಮ್ಮ ಸಂಗಾತಿಯ ಬಾಲ್ಯದ ಭಾವಚಿತ್ರ ಎಲ್ಲಿಯಾದರೂ ಕಂಡರೆ ಆ ಸನ್ನಿವೇಶ ಏನು? ಆಗ ನಿಮ್ಮ ಸಂಗಾತಿಯ ವಯಸ್ಸೆಷ್ಟು ಮುತಾದ ಪ್ರಶ್ನೆಗಳೊಂದಿಗೆ ಮಾತಿಗೆ ತೊಡಗಿ.

7. ಸೂಕ್ತ ಸಂದರ್ಭಗಳಲ್ಲಿ ಅಭಿನಂದಿಸುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳಬೇಡಿ ನಿಮ್ಮ ಅತ್ತೆ, ಮಾವನವರ ಹೊಸ ಕೇಶ ವಿನ್ಯಾಸದ ಬಗ್ಗೆ ಮಾತನಾಡಿ ಅಥವಾ ಅವರೇನಾದರೂ ಹೊರಗೆ ಹೊರಟಿದ್ದರೆ ಇವತ್ತು ನೀವು ತುಂಬಾನೇ ಚೆನ್ನಾಗಿ ಕಾಣುತ್ತಿದ್ದೀರಿ ಎಂದು ಹೇಳಲು ಮರೆಯದಿರಿ. ಆದರೆ ಇವತ್ತು ನಿಮ್ಮನ್ನು ನೋಡಿದವರು ಖಂಡಿತ ಕ್ಲೀನ್ ಬೌಲ್ಡ್ ಆಗುತ್ತಾರೆ ಎಂಬ ಮಾತುಗಳನ್ನಾಡಬೇಡಿ. ಅದು ತೀರಾ ಖಾಸಗಿ ಅನ್ನಿಸಿ ಬಿಡುತ್ತದೆ. ಊಟದ ಟೇಬಲಿನ ಮೇಲೂ ಮಾತು ಆರಂಭಿಸಲು ಹಲವು ದಾರಿಗಳಿವೆ. ನೀವು ಚೆನ್ನಾಗಿ ಅಡುಗೆ ಮಾಡುವವರಾಗಿದ್ದರೆ ಅತ್ತೆ ಮಾಡಿದ ಅಡುಗೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ " ಇಂತಹ ಅಡುಗೆ ನಾನು ಈ ವರೆಗೆ ತಿಂದಿಲ್ಲ ಇದನ್ನು ನನಗೂ ಹೇಳಿ ಕೊಡಿ" ಅಥವಾ "ನಮ್ಮ ಕಡೆ ಇದನ್ನು ಹೀಗೆ ಮಾಡುವುದಿಲ್ಲ ಆದರೆ ನೀವು ಮಾಡಿದ ಅಡುಗೆಯೇ ಹೆಚ್ಚು ರುಚಿಕರ" ಎಂದು ಹೇಳಿ. ನಿಮಗೆ ಅಡುಗೆ ಮಾಡಲು ಬರುವುದಿಲ್ಲ ಎಂದಾದರೆ ಅತ್ತೆಗೆ ಅಡುಗೆ ಮನೆಯಲ್ಲಿ ಸಹಕರಿಸಿ. ಇದು ಅಡುಗೆಯ ಜೊತೆ ಮಾತಿನಲ್ಲೇ ಅತ್ತೆಯನ್ನು ಅರಿಯಲು ಸಹಾಯಕ. ಅವರು ಚೆನ್ನಾಗಿ ಅಡುಗೆ ಮಾಡುತ್ತಿದ್ದರೆ "ನನಗೆ ಅಡುಗೆ ಮಾಡಲು ಬರುವುದಿಲ್ಲ ಆದರೆ ಕಲಿಯಬೇಕು ಅಂತ ತುಂಬಾ ಆಸೆ ಇದೆ ನನಗೂ ಕಲಿಸಿಕೊಡಿ ಪ್ಲೀಸ್" ಎಂದು ಮಾತಿಗೆ ಮೊದಲುಗೊಳ್ಳಿ. ಆದರೆ ಧಾರ್ಮಿಕ ವಿಷಯಗಳ ಬಗ್ಗೆ ಮಾತನಾಡುವಾಗ ನಿಮ್ಮ ಮತ್ತು ಅತ್ತೆಯ ಧಾರ್ಮಿಕ ಭಾವನೆಗಳು ಒಂದೇ ಆಗಿವೆ ಎಂದು ಖಾತರಿ ಪಡಿಸಿಕೊಂಡು ಮಾತನಾಡಿ ಇಲ್ಲವಾದರೇ ಮಾತನಾಡದಿರುವುದೇ ಲೇಸು.

8. ಅವರ ಮನೆಗೆ ಭೇಟಿ ನೀಡಿದ ಸಂದರ್ಭಗಳಲ್ಲಿ ನೀವು ನಿಮ್ಮ ಸಂಗಾತಿಯ ಕೋಣೆಯಲ್ಲೇ ಇಡಿ ದಿನ ಇರುವುದನ್ನು ನಿಲ್ಲಿಸಿ.

9. ಬಹುಮುಖ್ಯವಾಗಿ ನೀವೊಬ್ಬ ಸ್ವತಂತ್ರ ವ್ಯಕ್ತಿತ್ವ ಇರುವ ವ್ಯಕ್ತಿ ಎಂದು ತೋರಿಸಿಕೊಳ್ಳಿ. ರಾತ್ರಿ ಬಹಳ ತಡವಾಗಿ ಅವರ ಮನೆಯಿಂದ ಹೊರಡಬೇಡಿ. ಮುಂಚಿತವಾಗಿ ಸೂಚಿಸದೇ ಅವರ ಮನೆಗೆ ಹೋಗಬೇಡಿ. ನೀವು ಏನಾದರೂ ಶಿಕ್ಷಣ ಪೂರೈಸುತ್ತಿದ್ದರೆ ಪುಸ್ತಕಗಳೊಂದಿಗೆ ತೆರಳಿ. ಅವರಿಗೆ ನೀವು ನಿಮ್ಮ ಅಭ್ಯಾಸದ ವಿಷಯದಲ್ಲಿ ಎಷ್ಟು ಕಾಳಜಿ ವಹಿಸುತ್ತೀರಿ ಎಂದು ತಿಳಿಯಲಿ. ಯಾವಾಗಲೂ ಮುಗುಳ್ನಗೆ ಮತ್ತು ಆಹ್ಲಾದಕರ ಮುಖಭಾವ ಇರಲಿ. ಅವರಿಗೆ ಸಹಾಯ ಮಾಡುವ ಯಾವುದೇ ಅವಕಾಶ ಕಳೆದುಕೊಳ್ಳಬೇಡಿ.

English summary

How to Become Friends With Your in Laws | ಸೋದರ ಸಂಬಂಧಿಗಳೊಂದಿಗೆ ಸ್ನೇಹಿತರಾಗಿರುವುದು ಹೇಗೆ ?

How to become friends with the in laws, this may seem to be a hard challenge for any relationships, new or old the guidelines below reflects a person of good upbringing and any in law will be pleased to have you.
Please Wait while comments are loading...
Subscribe Newsletter