For Quick Alerts
ALLOW NOTIFICATIONS  
For Daily Alerts

ರಂಜಾನ್ ವಿಶೇಷ ಖಾದ್ಯ ಶಿರ್ಮಲ್ ಸಿಹಿ ಬ್ರೆಡ್ ತಿನಿಸು

|

ರಂಜಾನ್ ಖಾದ್ಯದಲ್ಲಿ ಮಾಂಸಾಹಾರ ಪ್ರಮುಖವಾಗಿರುತ್ತದೆ. ಸಿಹಿ ತಿನ್ನುವವರು ಕೂಡ ಈ ಸಮಯದಲ್ಲಿ ಸಿಹಿ ತಿಂಡಿಯನ್ನು ಸೇವಿಸುತ್ತಾರೆ. ಆದರೆ ನಾವಿಲ್ಲಿ ಸಿಹಿತಿಂಡಿಯ ಖಾದ್ಯ ತಯಾರಿ ವಿಧಾನವನ್ನು ನೀಡುತ್ತಿಲ್ಲ. ನೀವು ಶಿರ್ಮಲ್ ಬಗ್ಗೆ ಕೇಳಿದ್ದೀರಾ? ಭಾರತೀಯ ಮುಸ್ಲಿಂ ಮನೆಗಳಲ್ಲಿ ಬಹು ಪ್ರಸಿದ್ಧವಾಗಿರುವ ಈ ತಿಂಡಿ ಮಾಡಲು ತುಂಬಾ ಸರಳವಾಗಿದೆ.

ಶಿರ್ಮಾಲ್ ಎನ್ನುವಂಥದ್ದು ಸಿಹಿ ಬ್ರೆಡ್ ಆಗಿದ್ದು ಇದನ್ನು ದಾಲ್ ಅಥವಾ ಕರಿಯೊಂದಿಗೆ ಸೇವಿಸಲಾಗುತ್ತದೆ. ನೀವು ಸ್ವಲ್ಪ ಪ್ರಯತ್ನಿಸಿದರೆ ಸಾಕು ಈ ರುಚಿಯಾದ ಖಾದ್ಯವನ್ನು ತಯಾರಿಸಬಹುದಾಗಿದೆ. ಇದು ಕೇವಲ ರಂಜಾನ್ ರೆಸಿಪಿಯಾಗಿದ್ದರೂ ಎಲ್ಲಾ ಸಮಯದಲ್ಲೂ ತಯಾರಿಸಬಹುದಾಗಿದೆ. ನಿಮ್ಮ ಇಫ್ತಾರ್ ಕೂಟದ ಸವಿಯನ್ನು ಹೆಚ್ಚಿಸಲು ಈ ಖಾದ್ಯ ಹೇಳಿಮಾಡಿಸಿದ್ದು.

Sheermal: Ramzan Spl Sweet Bread Recipe

ಬನ್ನಿ ನಾವಿಲ್ಲಿ ನೀಡಿರುವ ಶಿರ್ಮಾಲ್ ಪಾಕ ವಿಧಾನವನ್ನು ತಿಳಿದುಕೊಂಡು ಅದನ್ನು ತಯಾರಿಸಿ ಮತ್ತು ನಿಮ್ಮ ಮನೆಮಂದಿಯಿಂದ ಶಹಬ್ಬಾಷ್ ಹೇಳಿಸಿಕೊಳ್ಳಿ. ಮಕ್ಕಳಿಗಂತೂ ತುಂಬಾ ಪ್ರಿಯವಾಗಿರುವ ಈ ಖಾದ್ಯ ಬಾಯಲ್ಲಿ ನೀರೂರುವಂತೆ ಮಾಡುವುದು ಖಂಡಿತ.

ರಂಜಾನ್‌ ಹಬ್ಬಕ್ಕಾಗಿ ರುಚಿಕರವಾದ ಬಾದಾಮ್ ಫಿರ್ನಿ ಖಾದ್ಯ

ಪ್ರಮಾಣ: 4
ಸಿದ್ಧತಾ ಸಮಯ: 1 ಗಂಟೆ
ಅಡುಗೆಗೆ ಬೇಕಾದ ಸಮಯ: 30 ನಿಮಿಷಗಳು

ಸಾಮಾಗ್ರಿಗಳು
1. ಗೋಧಿ - 2 1/2 ಕಪ್
2. ಕ್ಯಾಸ್ಟರ್ ಸಕ್ಕರೆ - 1 ಚಮಚ
3. ದಪ್ಪ ಹಾಲು - 1/2 ಕಪ್
4. ಇನ್‌ಸ್ಟಂಟ್ ಯೀಸ್ಟ್ - 2 1/2 ಚಮಚ
5. ಕೇವ್ರಾ ವಾಟರ್ - 1 ಚಮಚ
6. ಕರಗಿಸಿದ ಬೆಣ್ಣೆ - 3 ಚಮಚ
7. ಕ್ರೀಮ್ - 3 ಚಮಚ
8. ಮೊಟ್ಟೆ - 1 (ಬೀಟ್)
9. ಹಾಲಿನ ಪುಡಿ - 4 ಚಮಚ
10.ಲ್ಯೂಕ್ ವಾರ್ಮ್ ವಾಟರ್ - 2 ಕಪ್‌

ಮಾಡುವ ವಿಧಾನ
*ಗೋಧಿ, ಉಪ್ಪು, ಸಕ್ಕರೆ, ಗಟ್ಟಿ ಹಾಲು, ಇನ್‌ಸ್ಟಂಟ್ ಯೀಸ್ಟ್, ಕೇವ್ರಾ ವಾಟರ್, ಕರಗಿಸಿದ ಬೆಣ್ಣೆ ಅನ್ನು ತೆಗೆದುಕೊಳ್ಳಿ, ಇದಕ್ಕೆ ಕ್ರೀಮ್, ಸಕ್ಕರೆ, ಮೊಟ್ಟೆ ಮತ್ತು ಹಾಲಿನ ಪುಡಿ ಅನ್ನು ಪಾತ್ರೆಯಲ್ಲಿ ಮಿಶ್ರ ಮಾಡಿ.
* ಇನ್ನು ಈ ಮಿಶ್ರಣಕ್ಕೆ ಲ್ಯೂಕ್‌ವಾರ್ಮ್ ನೀರನ್ನು ಸೇರಿಸಿ ಮತ್ತು ಮಿಶ್ರ ಮಾಡಿ. ಒದ್ದೆ ಬಟ್ಟೆಯಿಂದ ಹಿಟ್ಟನ್ನು ಮುಚ್ಚಿ ಮತ್ತು 1 ಗಂಟೆಗಳ ಕಾಲ ಈ ಮಿಶ್ರಣವನ್ನು ಹಾಗೆಯೆ ಇಡಿ.
*ಈಗ ಹಿಟ್ಟಿನಿಂದ ಉಂಡೆಗಳನ್ನು ಮಾಡಿಕೊಂಡು ಲಟ್ಟಿಸಿಕೊಳ್ಳಿ
*ಬೆಣ್ಣೆಯೊಂದಿಗೆ ಖಾದ್ಯವನ್ನು ಸವರಿ. ಬೇಯಿಸಿದ ಖಾದ್ಯ ಮೇಲೆ ಶಿರ್ಮಲ್ ಅನ್ನು ಇರಿಸಿ. ಮತ್ತು ಪ್ಲಾಸ್ಟಿಕ್ ಕವರ್‌ನಿಂದ ಇದನ್ನು ಮುಚ್ಚಿ.
*ಓವನ್‌ನಲ್ಲಿ ಈ ಶಿರ್ಮಾಲ್ ಅನ್ನು ಬೇಯಿಸಿಕೊಳ್ಳಿ
*ಹಾಲನ್ನು ಶಿರ್ಮಾಲ್ ಮೇಲೆ ಸಿಂಪಡಿಸಿ ಮತ್ತು ಪರಿಮಳಕ್ಕಾಗಿ ಎಳ್ಳನ್ನು ಉದುರಿಸಿ.

ಇದು ಸಿಹಿಯಾದ ರುಚಿಯನ್ನು ನಿಮಗೆ ನೀಡಬಹುದು, ಅಲ್ಲದೆ ಈ ಶಿರ್ಮಾಲ್ ಅನ್ನು ಯಾವುದೇ ಮಾಂಸದ ಪದಾರ್ಥದೊಂದಿಗೆ ನಿಮಗೆ ಸೇವಿಸಬಹುದು.

X
Desktop Bottom Promotion