For Quick Alerts
ALLOW NOTIFICATIONS  
For Daily Alerts

ಬೇಗ ಮಾಡಬಹುದು ಬೇಬಿ ಕಾರ್ನ್ ಪಲಾವ್

|
Baby Corn Pulao
ಬೇಬಿ ಕಾರ್ನ್ ಮಕ್ಕಳಿಂದಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುತ್ತೆ. ಅದರಲ್ಲೂ ಈ ಚಳಿಗಾಲದಲ್ಲಿ ಬಿಸಿ ಬಿಸಿ ಬೇಬಿ ಕಾರ್ನ್ ಪಲಾವ್ ಇದ್ದರೆ ಇನ್ನೂ ಚೆಂದ. ಆದ್ದರಿಂದ ಬೇಬಿ ಕಾರ್ನ್ ಉಪಯೋಗಿಸಿ ಪಲಾವ್ ಮಾಡುವುದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.

ಬೇಬಿ ಕಾರ್ನ್ ಪಲಾವ್ ಗೆ ಬೇಕಾಗುವ ಸಾಮಾನು:
* 1 ಕಪ್ ಬಾಸುಮತಿ ಅಕ್ಕಿ (ತೊಳೆದು 30 ನಿಮಿಷ ನೆನೆಸಿರಬೇಕು)
* 2 ಈರುಳ್ಳಿ (ಉದ್ದುದ್ದವಾಗಿ ಕತ್ತರಿಸಿರಬೇಕು)
* 6 ಬೇಬಿ ಕಾರ್ನ್ ದಿಂಡು
* 1 ಚಿಕ್ಕ ಕಪ್ ಬಟಾಣಿ
* 5-6 ಎರಡು ಭಾಗವಾಗಿ ಕತ್ತರಿಸಿದ ಮೆಣಸಿನಕಾಯಿ
* 1 ಚಮಚ ಮೆಣಸಿನಕಾಯಿ ಪುಡಿ
* 1 ಚಮಚ ಬೆಳ್ಳುಳ್ಳಿ ಶುಂಠಿ ಪೇಸ್ಟ್
* 1 ಚೆಕ್ಕೆ ತುಂಡು, ಸ್ವಲ್ಪ ಏಲಕ್ಕಿ ಪುಡಿ
* 2-3 ಲವಂಗ
* 1 ಚಮಚ ಗರಂ ಮಸಾಲ ಪುಡಿ
* 1 ಚಮಚ ಧನಿಯಾ ಪುಡಿ
* 1 ಚಮಚ ಜೀರಿಗೆ ಪುಡಿ
* ಪಲಾವ್ ಎಲೆ, ಎಣ್ಣೆ

ಬೇಬಿ ಕಾರ್ನ್ ಪಲಾವ್ ಮಾಡುವ ವಿಧಾನ:

* ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದರಲ್ಲಿ ಬೇಬಿ ಕಾರ್ನ್ ಅನ್ನು ಸ್ವಲ್ಪ ಕೆಂಪಗಾಗುವವರೆಗೂ ಹುರಿದು ಒಂದೆಡೆ ಇಡಬೇಕು.

* ಅದೇ ಬಾಣಲೆಯಲ್ಲಿ ಈರುಳ್ಳಿ ಹುರಿದು ನಂತರ ಬೆಳ್ಳುಳ್ಳಿ ಶುಂಠಿ ಪೇಸ್ಟ್, ಹಸಿರು ಮೆಣಸಿನಕಾಯಿ ಮತ್ತು ಬಟಾಣಿಯನ್ನು ಹಾಕಿ ಹುರಿದುಕೊಳ್ಳಬೇಕು.

* ನಂತರ ಅದಕ್ಕೆ ಕೆಂಪು ಮೆಣಸಿನಕಾಯಿ ಪುಡಿ, ಜೀರಿಗೆ ಪುಡಿ, ಲವಂಗ ಮತ್ತು ಧನಿಯಾ ಪುಡಿ, ಗರಂ ಮಸಾಲೆ ಪುಡಿ ಹಾಕಬೇಕು.

* ಇದಾದ ಮೇಲೆ ಬೇಬಿ ಕಾರ್ನ್, ಅಕ್ಕಿಯನ್ನು ಹಾಕಿ ಅವಶ್ಯಕವಿದ್ದಷ್ಟು ನೀರು ಹಾಕಿ ಅನ್ನವಾಗುವವರೆಗೂ ಬೇಯಿಸಬೇಕು.

* ಕೊನೆಯಲ್ಲಿ ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಮತ್ತು ಪುದೀನಾ ಎಲೆಯನ್ನು ಉದುರಿಸಿದರೆ ಬೇಬಿ ಕಾರ್ನ್ ಪಲಾವ್ ತಿನ್ನಲು ರೆಡಿ.

English summary

Baby Corn Pulao | Masala Rice Recipe | ಬೇಬಿ ಕಾರ್ನ್ ಪಲಾವ್ ಮಾಡುವ ವಿಧಾನ | ಮಸಾಲೆ ಅನ್ನದ ಅಡುಗೆ

Corn is this season's hot favorite, specially as an evening snack. corn makes an extremely delicious snack, and a healthy one too! Baby Corn can also be used to prepare a main course dish like baby corn pulao. Have a look at this baby corn pulao recipe.
Story first published: Thursday, November 10, 2011, 11:05 [IST]
X
Desktop Bottom Promotion