ಸವಿರುಚಿಯಾದ ಬೆಂಡೆಕಾಯಿ ಪಲ್ಯ

By:
Give your rating:

ಬೆಂಡೆಕಾಯಿ ಪಲ್ಯ ಅಥವಾ ಸಾರು ಮಾಡುವಾಗ ಬೆಂಡೆಕಾಯಿಯನ್ನು ಚೆನ್ನಾಗಿ ಎಣ್ಣೆಯಲ್ಲಿ ಹುರಿಯಬೇಕು. ಅಂದರೆ ಮಾತ್ರ ಬೆಂಡೆಕಾಯಿ ಪದಾರ್ಥ ರುಚಿಕರವಾಗಿರುತ್ತದೆ. ಇದರಿಂದ ಪಲ್ಯವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಾಡುತ್ತಾರೆ. ಇವತ್ತು ನಾವು ಬೆಂಡೆಕಾಯಿ ಜೊತೆ ಟೊಮೆಟೊ ಹಾಕಿ ಮಾಡುವ ಬೆಂಡೆಕಾಯಿ ಪಲ್ಯ ಮಾಡುವ ವಿಧಾನ ತಿಳಿಯೋಣ:

ಬೇಕಾಗುವ ಸಾಮಾಗ್ರಿಗಳು:
ಬೆಂಡೆಕಾಯಿ ಕಾಲು ಕೆಜಿ ಕೆಜಿ
ಚಾಟ್ ಮಸಾಲ 1 ಚಮಚ
ಆಮೆಚ್ಯೂರ್ ( ಒಣ ಮಾವಿನ ಪುಡಿ) 1 ಚಮಚ
ಅರಿಶಿಣ ಪುಡಿ ಅರ್ಧ ಚಮಚ
ಕೊತ್ತಂಬರಿ ಪುಡಿ 1 ಚಮಚ
ಕೆಂಪು ಮೆಣಸಿನ ಪುಡಿ 1 ಚಮಚ
ಜೀರಿಗೆ ಅರ್ಧ ಚಮಚ
ಮೆಂತೆ ಅರ್ಧ ಚಮಚ
ಈರುಳ್ಳಿ 1
ಶುಂಠಿ ಪೇಸ್ಟ್ 1 ಚಮಚ
ಟೊಮೆಟೊ 2
ಹಸಿಮೆಣಸಿನಕಾಯಿ 3
ರುಚಿಗೆ ತಕ್ಕ ಉಪ್ಪು
ಎಣ್ಣೆ
ತೆಂಗಿನ ತುರಿ ಕಾಲು ಕಪ್

ತಯಾರಿಸುವ ವಿಧಾನ:

1. ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ, ಜೀರಿಗೆ, ಚಾಟ್ಸ್ ಮಸಾಲ ಮತ್ತು ಒಣ ಮಾವಿನ ಪುಡಿ ಹಾಕಿ ಮಿಶ್ರ ಮಾಡಬೇಕು.

2. ಈಗ ಕತ್ತರಿಸಿದ ಬೆಂಡೆಕಾಯಿಗೆ ಈ ಮಸಾಲೆ ಹಾಕಿ ಮಿಶ್ರಣ ಮಾಡಿ 15-20 ಇಡಬೇಕು.

3. ಈಗ ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಜೀರಿಗೆ ಮತ್ತು ಮೆಂತೆ ಕಾಳು ಹಾಕಿ 2-3 ನಿಮಿಷ ಹುರಿಯಬೇಕು.

4. ಈಗ ಕತ್ತರಿಸಿದ ಹಾಕಿ ಕಡಿಮೆ ಉರಿಯಲ್ಲಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.

5. ಈಗ ಮಸಾಲೆಯಲ್ಲಿ ಮಿಶ್ರಣ ಮಾಡಿದ ಬೆಂಡೆಕಾಯಿ ಹಾಕಿ ಕಡಿಮೆ ಉರಿಯಲ್ಲಿ 5-7 ನಿಮಿಷ ಹುರಿಯಬೇಕು. ನಂತರ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಬೇಕು.

6. ನಂತರ ಟೊಮೆಟೊ ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ, ಬೇಕಿದ್ದರೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕಡಿಮೆ ಉರಿಯಲ್ಲಿ ಟೊಮೆಟೊ ಮೆತ್ತಗಾಗುವವರೆಗೆ ಹುರಿದು ನಂತರ ತೆಂಗಿನ ತುರಿ ಹಾಕಿ ಮಿಶ್ರ ಮಾಡಿ ಉರಿಯಿಂದ ತೆಗೆದರೆ ರೊಟ್ಟಿ ಅಥವಾ ಚಪಾತಿ ಜೊತೆ ಮಾಡಲು ಬೆಂಡೆಕಾಯಿ ಪಲ್ಯ ರೆಡಿ.

Read more about: ಪಲ್ಯ, ಅಡುಗೆ, palya, cookery
English summary

Okra Palya Recipe | Variety Of Palya Recipe | ಬೆಂಡೆಕಾಯಿ ಪಲ್ಯ ರೆಸಿಪಿ | ಅನೇಕ ಬಗೆಯ ಪಲ್ಯ ರೆಸಿಪಿ

By using Okra you can prepare curry or palya. Whenever you prepare food from okara you need to fry okara in a proper way. If you want to prepare palya from this here is a recipe of Okara palya read on.
Story first published: Monday, September 10, 2012, 15:32 [IST]
Please Wait while comments are loading...
Subscribe Newsletter