For Quick Alerts
ALLOW NOTIFICATIONS  
For Daily Alerts

ಎಣ್ಣೆ ಬದನೆಕಾಯಿ ಜೊತೆ ಸವಿಯಿರಿ ಬಿಳಿ ಹೋಳಿಗೆ

By ಪಲ್ಲವಿ ಧನ್ ರಾಜ್
|

ಹಬ್ಬ ಹರಿದಿನಗಳಲ್ಲಿ ಸಿಹಿಯಾದ ಹೋಳಿಗೆಯನ್ನು ಮಾಡಲಾಗುವುದು. ಆದರೆ ಇಲ್ಲಿ ನಾವು ಹೇಳಿರುವುದು ಹಬ್ಬದ ಹೋಳಿಗೆ ಬಗೆಯಲ್ಲ, ದಿನನಿತ್ಯದ ಅಡುಗೆಯಲ್ಲಿ ಮಾಡಬಹುದಾದ ಹೋಳಿಗೆ ಬಗ್ಗೆ . ಇದು ನೋಡಲು ಅಕ್ಕಿ ರೊಟ್ಟಿಯಂತೆ ಇದ್ದರು ರುಚಿಯಲ್ಲಿ ಭಿನ್ನವಾಗಿರುತ್ತದೆ. ಬಿಳಿ ಹೋಳಿಗೆ ಮತ್ತು ಎಣ್ಣೆ ಬದನೆಕಾಯಿ ಸೂಪರ್ ಕಾಂಬಿನೇಷನ್, ತಿಂದಷ್ಟೂ ತಿನ್ನಬೇಕೆನಿಸುವುದು.

ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

White Holige Recipe

ಬೇಕಾಗಿರುವ ಸಾಮಾಗ್ರಿಗಳು
ಅಕ್ಕಿಹಿಟ್ಟು 2 ಕಪ್
ಮೈದಾ ಹಿಟ್ಟು 1ಕಪ್
ಚಿರೋಟಿ ರವೆ 1ಕಪ್
ಉಪ್ಪು ರುಚಿಗೆ
ಎಣ್ಣೆ

ಮಾಡುವ ವಿಧಾನ:

* ಮೊದಲಿಗೆ ಮೈದಾ ಹಿಟ್ಟು,ಚಿರೋಟಿ ರವೆ ಉಪ್ಪು,ಎಣ್ಣೆ ನೀರು ಹಾಕಿ ಕಲಸಿ ಕಣಕ ತಯಾರಿಸಿ ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಘಂಟೆ ನೆನೆಯಲು ಇಡಬೇಕು. ಬಣಲೆಯಲ್ಲಿ ಕಪ್ ನೀರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಯುತ್ತಿರುವಾಗ ಅಕ್ಕಿ ಹಿಟ್ಟು ಹಾಕಿ ಮುದ್ದೆ ತರಹ ತಿರುಗಿಸಿಕೊಳ್ಳ ಬೇಕು.

* ನಂತರ ಕೆಳಗೆ ಇಳಿಸಿಕೊಂಡು ಚನ್ನಾಗಿ ನಾದಿ ಕೊಳ್ಳಬೇಕು ಈ ಹಿಟ್ಟನ್ನು ಉಂಡೆ ಮಾಡಿ ನೆನೆಯಲು ಇಟ್ಟ ಕಣಕದಲ್ಲಿ ಇಟ್ಟು ಮುಚ್ಚಿ ಪ್ಲಾಸ್ಟಿಕ್ ಹಾಳೆಯ ಮೇಲೆ ಕೈ ಯಿಂದ ಅಥವಾ ಲಟ್ಟಣಿಗೆಯಿಂದ ಲಟ್ಟಿಸಿ ತವಾ ಮೇಲೆ ಎಣ್ಣೆ ಹಾಕಿ ಎರಡು ಕಡೆ ಬೇಯಿಸಿದರೆ ಬಿಳಿಹೋಳಿಗೆ ತರಾವರಿ ಗ್ರೇವಿ,ಬದನೆ ಕಾಯಿ ಎಣ್ಣೆಗಾಯಿ ಜೊತೆ ಸವಿಯಲು ಸಿದ್ದ.

ಡಯಟ್ ಕಾನ್ಶಿಯಸ್ ಇರುವವರು ಮಧುಮೇಹಿಗಳು,ಅಕ್ಕಿಹಿಟ್ಟು ಬದಲಿಗೆ ಬರೀ ರವೆ ಬಳಸಿ ಮುದ್ದೆಮಾಡಿ ಸಹ ಈ ಹೋಳಿಗೆ ಮಾಡಬಹುದು.

English summary

White Holige Recipe

This is not a holige what you have prepare at festival time. This holige you can prepare for breakfast or dinner. Lets check out the recipe.
X
Desktop Bottom Promotion