Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಹೆರಿಗೆಯ ನಂತರ ಬೊಜ್ಜು ಕರಗಿಸುವುದು ಹೇಗೆ?

ಹೆರಿಗೆಯ ನಂತರದ ವ್ಯಾಯಾಮ:
ಹೆರಿಗೆಯಾಗಿ 3 ತಿಂಗಳು ವಿಶ್ರಾಂತಿ ಪಡೆದ ಬಳಿಕ ಈ ಕೆಳಗಿನಂತೆ ವ್ಯಾಯಾಮ ಮಾಡಿದರೆ ಬೊಜ್ಜು ಹೊಟ್ಟೆ ಕರಗಿ ಆಕರ್ಷಕ ಮೈಕಟ್ಟು ನಿಮ್ಮದಾಗುವುದು.
1. ನೇರವಾಗಿ ನಿಂತು ಹೊಕ್ಕಳು ಒಳ ಬರುವಂತೆ ಉಸಿರು ಎಳೆದುಕೊಂಡು ನಂತರ ನಿಧಾನಕ್ಕೆ ಉಸಿರಾಡಬೇಕು. ಈ ರೀತಿ 5 ನಿಮಿಷ ಮಾಡಬೇಕು.
2. ನೆಲದ ಮೇಲೆ ಬೆನ್ನು ನೆಲಕ್ಕೆ ತಾಗುವಂತೆ ಮಲಗಬೇಕು. ಪಾದಗಳು ನೆಲಕ್ಕೆ ಮುಟ್ಟಿರುವಂತೆ ಕಾಲುಗಳನ್ನು ಮಡಚಬೇಕು. ನಂತರ ಮೆಲ್ಲನೆ ತಲೆಯನ್ನು ಎತ್ತಿ ಮೊಣಕಾಲಿಗೆ ತಾಗಿಸಬೇಕು.
3. ಕಾಲುಗಳನ್ನು ಹಿಂದೆಕ್ಕೆ ಇಟ್ಟು ಬೆನ್ನು ನೆಲಕ್ಕೆ ತಾಗುವಂತೆ ಮಲಗಬೇಕು. ಕೈಗಳನ್ನು ತಲೆಯ ಹಿಂದೆ ಇಟ್ಟುಕೊಳ್ಳಬೇಕು. ಈಗ ದೇಹವನ್ನು ಸ್ವಲ್ಪ ಮೇಲಕ್ಕೆ ಎತ್ತಿ ಎಡ ಕೈಯಿಂದ ಬಲಭಾಗದ ಮೊಣಕಾಲನ್ನು ಮುಟ್ಟಬೇಕು.ಬಲ ಕೈಯಿಂದ ಎಡಭಾಗದ ಮೊಣಕಾಲನ್ನು ಮುಟ್ಟಬೇಕು.
4. ನೆಲಕ್ಕೆ ಬೆನ್ನು ತಾಗುವಂತೆ ಮಲಗಿ ಕೈಗಳನ್ನು ಸೊಂಟಕ್ಕೆ ಬಲ ಸಿಗುವಂತೆ ಇಟ್ಟು ಕಾಲುಗಳನ್ನು 10 ಇಂಚು ಎತ್ತಿ ಸ್ವಲ್ಪ ಹೊತ್ತು ಹಾಗೇ ಹಿಡಿಯಬೇಕು. ನಂತರ ಎಂದು ಕಾಲನ್ನು ನಿಧಾನಕ್ಕೆ ಕೆಳಕ್ಕೆ ಇಳಿಸುವಾಗ ಮತ್ತೊಂದು ಕಾಲನ್ನು ಮೇಲಕ್ಕೆ ಎತ್ತುವ ವ್ಯಾಯಾಮವನ್ನು 5 ನಿಮಿಷ ಮಾಡಬೇಕು.
ಈ ರೀತಿಯ ವ್ಯಾಯಾಮ ಮಾಡಿದರೆ ಬೊಜ್ಜು ಹೊಟ್ಟೆ ಕರಗಿ ಹಿಂದಿನ ಆಕರ್ಷಕ ಮೈಕಟ್ಟು ನಿಮ್ಮದಾಗುವುದು.



Click it and Unblock the Notifications