For Quick Alerts
ALLOW NOTIFICATIONS  
For Daily Alerts

ಗಾಳಿಸುದ್ದಿಗಳನ್ನು ನಂಬುವ ಮೊದಲು, ತಪ್ಪದೇ ಈ ಲೇಖನ ಓದಿ...

ದೇಶದ ಬಗ್ಗೆ ಇಂತಹ ಗಾಳಿಸುದ್ದಿಗಳು ಬಂದರೆ ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಮೊದಲು ಅದರ ಸತ್ಯಾಸತ್ಯತೆಯನ್ನು ತಿಳಿದು ಮುಂದೆ ಅದು ಹಬ್ಬದಂತೆ

By Deepu
|

ಭಾರತೀಯರಲ್ಲಿ ದೇಶ ಭಕ್ತಿ ಮೂಡಿ ಬರಬೇಕಂದರೆ ಒಂದೋ ಪಾಕಿಸ್ತಾನ ವಿರುದ್ಧ ಯುದ್ಧ ಘೋಷಣೆಯಾಗಬೇಕು ಅಥವಾ ಅಗಸ್ಟ್ ತಿಂಗಳು ಬರಬೇಕು....! ಇಲ್ಲದಿದ್ದರೆ ದೇಶದ ಬಗ್ಗೆ ಚಿಂತಿಸಲು ಅವರಿಗೆ ಪುರುಸೊತ್ತು ಇರುವುದಿಲ್ಲ. ದಿನ ಬೆಳಗಾದರೆ ಅದೇ ರಾಜೀಯ ದೊಂಬರಾಟವೇ ನೋಡಿ, ನೋಡಿ ಸಾಕಾಗಿ ಬಿಡುತ್ತವೆ! ಎಲ್ಲೂ ಕಾಣದ ಅನೂಹ್ಯ ಸಂಸ್ಕೃತಿ- ನಮ್ಮ ಭಾರತ

ಅದು ಏನೇ ಇರಲಿ, ಆದರೆ ಭಾರತದ ಪ್ರಜೆಯಾಗಿರುವ ನಮಗೆಲ್ಲರಿಗೂ ದೇಶದ ಬಗ್ಗೆ ಪ್ರೀತಿ ಹಾಗೂ ಗೌರವಿರಬೇಕು ಅಷ್ಟೇ... ಬನ್ನಿ ಇಂದಿನ ಲೇಖನದಲ್ಲಿ ಭಾರತದ ಬಗ್ಗೆ ಹರಡಿರುವಂತಹ ಕೆಲವೊಂದು ಗಾಳಿಸುದ್ದಿಗಳ ಬಗ್ಗೆ ಈ ಲೇಖನದಲ್ಲಿ ನಾವು ತಿಳಿಸಿಕೊಡಲಿದ್ದೇವೆ. ಇದು ವಿಶ್ವವನ್ನು ಅಚ್ಚರಿಗೊಳಪಡಿಸಿದೆ ಮತ್ತು ಹೆಚ್ಚಿನವರು ಇಂತಹ ಗಾಳಿಸುದ್ದಿಯನ್ನು ನಂಬಿದ್ದಾರೆ. ನಿಜವಾಗಲೂ ಭಾರತ ಸಿಂಗಾಪುರ್ ನಂತೆ ಆಗಲು ಸಾಧ್ಯವೇ?

ನಮ್ಮ ದೇಶದ ಬಗ್ಗೆ ಇಂತಹ ಗಾಳಿಸುದ್ದಿಗಳು ಬಂದರೆ ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಮೊದಲು ಅದರ ಸತ್ಯಾಸತ್ಯತೆಯನ್ನು ತಿಳಿದು ಮುಂದೆ ಅದು ಹಬ್ಬದಂತೆ ನೋಡಿಕೊಳ್ಳಿ ಎಂಬುದೇ ನಮ್ಮ ಆಶಯ, ಮುಂದೆ ಓದಿ..


ಮೂರು ತಲೆಯ ಹಾವು

ಮೂರು ತಲೆಯ ಹಾವು

ಇದು ಫೋಟೋಶಾಪ್‌ನಲ್ಲಿ ಎಡಿಟ್ ಮಾಡಿರುವಂತಹ ಚಿತ್ರವಲ್ಲದೆ ಬೇರೇನೂ ಅಲ್ಲ. ಈ ಚಿತ್ರವನ್ನು ತುಂಬಾ ಹತ್ತಿರದಿಂದ ಗಮನಿಸಿದರೆ ಹೆಬ್ಬಾವಿನ ಎಲ್ಲಾ ಮೂರು ತಲೆಗಳು ಒಂದೇ ಗಾತ್ರದಲ್ಲಿರುವುದು ತಿಳಿಯುತ್ತದೆ. ಇದು ತುಂಬಾ ಕೆಟ್ಟ ಚಾಳಿ. ಹೆಚ್ಚಿನವರು ಇದನ್ನು ನಂಬಿದ್ದಾರೆ.

ಭಾರತದ ರಾಷ್ಟ್ರಗೀತೆ ಉತ್ತಮವೆಂದು ಯುನೆಸ್ಕೋ ಘೋಷಣೆ

ಭಾರತದ ರಾಷ್ಟ್ರಗೀತೆ ಉತ್ತಮವೆಂದು ಯುನೆಸ್ಕೋ ಘೋಷಣೆ

ಈ ಗಾಳಿಸುದ್ದಿಯು ಹರಡುತ್ತಾ ಇದ್ದಾಗ ಜನರು ಭಾವನಾತ್ಮಕವಾಗಿ ದೇಶದ ಬಗ್ಗೆ ಹೆಮ್ಮೆಯಿಂದ ಇದನ್ನು ಪ್ರತಿಯೊಬ್ಬರೊಂದಿಗೆ ಹಂಚಿಕೊಳ್ಳಲು ಆರಂಭಿಸಿದರು. ಆದರೆ ಇದು ಕೇವಲ ಗಾಳಿಸುದ್ದಿ ಮಾತ್ರ. ನಾವು ಈ ರೀತಿಯ ಘೋಷಣೆ ಮಾಡಿಲ್ಲವೆಂದು ಯುನೆಸ್ಕೋ ಹೇಳಿದೆ.

ಹನುಮಂತನ ಗದೆ ಪತ್ತೆ!

ಹನುಮಂತನ ಗದೆ ಪತ್ತೆ!

ಶ್ರೀಲಂಕಾದಲ್ಲಿ ಹನುಮಂತನ ಗದೆ ಸಿಕ್ಕಿದೆ ಎಂದು ಕೆಲವು ವರದಿ ಬಂದರೆ ಗುಜರಾತ್‌ನಲ್ಲಿ ಸಿಕ್ಕಿದೆ ಎಂದು ಇನ್ನು ಕೆಲವು ವರದಿಗಳು ಹೇಳಿದವು. ಈ ಚಿತ್ರ ನಿಜವೆಂದು ಅನಿಸುತ್ತದೆ. ಯಾಕೆಂದರೆ ಇದು ನಿಜವಾದ ಗದೆ. ಆದರೆ ಈ ಗದೆ ಇಂದೋರ್‌ನಲ್ಲಿರುವ ಬೃಹತ್ತಾಕಾರದ ಹನುಮಂತನ ಮೂರ್ತಿಯ ಕೈಯಲ್ಲಿ ಇರುವಂತದ್ದಾಗಿದೆ.

ಕುಡಿದು ಅಮಲೇರಿದ ವ್ಯಕ್ತಿಯನ್ನು ಹೆಬ್ಬಾವು ನುಂಗಿತು!

ಕುಡಿದು ಅಮಲೇರಿದ ವ್ಯಕ್ತಿಯನ್ನು ಹೆಬ್ಬಾವು ನುಂಗಿತು!

ಕೇರಳದ ಅಟ್ಟಪಾಡಿಯಲ್ಲಿ ಕುಡಿದು ನಶೆಏರಿ ಶರಾಬು ಅಂಗಡಿ ಬದಿಯಲ್ಲಿಯೇ ಮಲಗಿದ್ದ ಕುಡುಕನೊಬ್ಬನನ್ನು ಹೆಬ್ಬಾವು ನುಂಗಿದೆ ಎನ್ನುವ ಸುದ್ದಿಯನ್ನು ಕೇಳಿ ಹೆಚ್ಚಿನವರು ಭಯಭೀತರಾಗಿದ್ದರು. ಇದು ಗಾಳಿಸುದ್ದಿ. ಯಾಕೆಂದರೆ ಈ ಚಿತ್ರದಲ್ಲಿರುವ ಹೆಬ್ಬಾವು ನಾಯಿ ಅಥವಾ ಬೇರೆ ಯಾವುದೇ ಪ್ರಾಣಿಯನ್ನು ನುಂಗಿದೆ. ಇದು ಭಾರತದ್ದೇ ಚಿತ್ರವೆಂದು ಹೇಳಲು ಸಾಧ್ಯವಿಲ್ಲ.

11 ಮಕ್ಕಳಿಗೆ ಜನ್ಮ ನೀಡಿದ ಭಾರತೀಯ ಮಹಿಳೆ!

11 ಮಕ್ಕಳಿಗೆ ಜನ್ಮ ನೀಡಿದ ಭಾರತೀಯ ಮಹಿಳೆ!

ಈ ಫೋಟೋ ನಿಜವಾದದ್ದು. ಆದರೆ ಇದರ ಹಿಂದಿರುವ ಕಥೆ ಮಾತ್ರ ಗಾಳಿಸುದ್ದಿ. ಸೂರತ್ ನ 21 ಸೆಂಚೂರಿ ಹಾಸ್ಪಿಟಲ್ ಆ್ಯಂಡ್ ಟೆಸ್ಟ್ ಟ್ಯೂಬ್ ಬೇಬಿ ಸೆಂಟರ್ ನಲ್ಲಿ 11.11.11 ರಂದು ಒಂದೇ ದಿನ ಜನಿಸಿದ 11 ಮಕ್ಕಳ ಚಿತ್ರವಿದು. ಇವುಗಳು ಒಂದೇ ತಾಯಿಯ ಮಕ್ಕಳಲ್ಲ.

ಅಸ್ಸಾಂನಲ್ಲಿ ಅತ್ಯಾಚಾರ ಹಬ್ಬ

ಅಸ್ಸಾಂನಲ್ಲಿ ಅತ್ಯಾಚಾರ ಹಬ್ಬ

ಅಸ್ಸಾಂನಲ್ಲಿ ಅತ್ಯಾಚಾರದ ಹಬ್ಬ ನಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹಾಗೂ ಲೇಖನಗಳು ಪ್ರಕಟವಾಗಿದ್ದವು. ಸ್ಥಳೀಯ ಜನರು ಇದನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಅಸ್ಸಾಂನ ಅಪರಾಧ ತನಿಖಾ ತಂಡವು ಇಂತಹ ಗಾಳಿಸುದ್ದಿ ಹರಡುವವರನ್ನು ಹಿಡಿದು ಸರಿಯಾಗಿ ಬುದ್ದಿ ಕಳುಹಿಸಿದೆ.

ಬಾಹ್ಯಾಕಾಶದಿಂದ ತೆಗೆದ ಭಾರತದ ಚಿತ್ರ

ಬಾಹ್ಯಾಕಾಶದಿಂದ ತೆಗೆದ ಭಾರತದ ಚಿತ್ರ

ಪ್ರತೀ ಸಲ ದೀಪಾವಳಿ ಬಂದಾಗ ಈ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಾ ಇರುತ್ತದೆ. ದೀಪಾವಳಿಗೆ ಭಾರತವು ದೀಪಗಳಿಂದ ಬೆಳಗಿರುವುದನ್ನು ಈ ಚಿತ್ರವು ತೋರಿಸುತ್ತದೆ. ಈ ಚಿತ್ರ ನಿಜವಾಗಿರುವುದು. 1992ರಿಂದ 2003ರ ತನಕ ರಾತ್ರಿಯ ಚಿತ್ರಣ ಹಾಗೂ ಬೆಳೆಯುತ್ತಿರುವ ಜನಸಂಖ್ಯೆಯನ್ನು ತೋರಿಸಲು ತೆಗೆದಿರುವುದು. ಇದು ಬಾಹ್ಯಾಕಾಶದಿಂದ ತೆಗೆದಿರುವ ಚಿತ್ರವಲ್ಲ.

English summary

Top Hoaxes About India

Here in this article, we are about to share the list of top hoaxes about India, which we sure have heard of. These are the hoaxes that shook the world and spread like wildfire and people actually believed them.
X
Desktop Bottom Promotion