For Quick Alerts
ALLOW NOTIFICATIONS  
For Daily Alerts

ನಿಜವಾಗಲೂ ಭಾರತ ಸಿಂಗಾಪುರ್ ನಂತೆ ಆಗಲು ಸಾಧ್ಯವೇ?

|

ಭಾರತ ವೈವಿಧ್ಯಮಯವಾದ ನಾಡು. ಇಲ್ಲಿಯ ಸಂಸ್ಕೃತಿ, ಪ್ರಕೃತಿ ತಾಣಗಳು, ಸ್ಮಾರಕಗಳು, ದೇಗುಲಗಳು ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಭಾರತದಲ್ಲಿ ಎಲ್ಲಾ ವರ್ಗದ ಜನರನ್ನು ಕಾಣಬಹುದು. ಪ್ರಪಂಚದ ಅತೀ ದೊಡ್ಡ ಶ್ರೀಮಂತರ ಪಟ್ಟಿಯಲ್ಲಿ ನಮ್ಮ ಭಾರತೀಯರು ಇದ್ದಾರೆ, ವಿಪರ್ಯಾಸವೆಂದರೆ ಕಿತ್ತು ತಿನ್ನುವ ಬಡತನವನ್ನೂ ಭಾರತದಲ್ಲಿ ಕಾಣಬಹುದು.

ಚಿಕ್ಕ ಡಾಬಾದಿಂದ ಹಿಡಿದು ಐಷಾರಾಮಿ ಹೋಟಲ್ ಗಳು, ದೊಡ್ಡ-ದೊಡ್ಡ ಕಂಪನಿಗಳು, ಅರಮನೆಗಳು ಎಲ್ಲವೂ ಭಾರತದಲ್ಲಿದೆ. ಆದರೆ ನಾಣ್ಯದ ಎರಡು ಮುಖಗಳಂತೆ ಭಾರತದಲ್ಲಿರುವ ಎರಡು ಸ್ಥಿತಿಗಳು ನೋಡುಗರ ಕಣ್ಣಿಗೆ ಪಕ್ಕನೆ ಗೋಚರಿಸುತ್ತದೆ. ಈ ರೀತಿಯ ಸ್ಥಿತಿ ಬೇರೆ ದೇಶದಲ್ಲಿ ಕಾಣ ಸಿಗುವುದು ಕಮ್ಮಿ, ಏಕೆಂದರೆ ಒಂದೋ ಆ ದೇಶ ಶ್ರೀಮಂತ ರಾಷ್ಟ್ರವಾಗಿರುತ್ತದೆ, ಇಲ್ಲದಿದ್ದರೆ ಬಡ ರಾಷ್ಟ್ರವಾಗಿರುತ್ತದೆ.

ಭಾರತವನ್ನು ಸಿಂಗಾಪುರ್ ನಂತೆ ಕಾಣಬೇಕೆಂಬ ಆಸೆ ಪ್ರತಿಯೊಬ್ಬ ಭಾರತೀಯರಲ್ಲಿದೆ. ನಮ್ಮ ರಾಜಕಾರಣಿಗಳೂ ಪೊಳ್ಳು ಆಶ್ವಾಸನೆ ನೀಡುತ್ತಾ ಬಂದಿದ್ದಾರೆ... ಆದರೆ ಸಿಂಗಾಪುರ್ ನಂತೆ ಆಗಲು ಇನ್ನೂ ಎಷ್ಟು ಸಮಯ ತೆಗೆದುಕೊಳ್ಳುತ್ತದೋ ದೇವರಿಗೇ ಗೊತ್ತು. ಅದು ಏನೇ ಇರಲಿ ನಮ್ಮ ದೇಶವು ಈ ಕೆಳಗಿನ ಸಮಸ್ಯೆಗಳಿಂದ ಮುಕ್ತವಾದರೆ ಭಾರತ ಸಿಂಗಾಪುರ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಅಂತ ನನ್ನ ಅನಿಸಿಕೆ. ಅಲ್ಲದೆ ಭಾರತದಲ್ಲಿ ಕಂಡು ಬರುವ ಈ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ದೊರೆಯಲಿ ಅನ್ನುವುದು ಒಬ್ಬ ಸಾಮಾನ್ಯ ಭಾರತೀಯ ಪ್ರಜೆಯ ಆಶಯವಾಗಿದೆ:

 ಭಿಕ್ಷುಕರು

ಭಿಕ್ಷುಕರು

ಭಿಕ್ಷುಕರ ಕಾಟ ಮಾತ್ರ ತುಂಬಾ ಕಿರಿಕಿರಿ ಉಂಟು ಮಾಡುವ ವಿಷಯವಾಗಿದೆ. ಕೆಲವರು ವಿಧಿಯಿಲ್ಲದೆ ಭಿಕ್ಷಾಟನೆ ಮಾಡಿದರೆ ಮತ್ತೆ ಕೆಲ ಮೈ ಮುರಿದು ದುಡಿಯದ ಸೋಮಾರಿಗಳಿಗೆ ಅದೇ ಕಸುಬು. ಈ ಸಮಸ್ಯೆಗೆ ಸರ್ಕಾರ ಆದಷ್ಟು ಬೇಗ ಪರಿಹಾರ ಕಂಡು ಹಿಡಿಯುವುದು ಒಳ್ಳೆಯದು.

ತ್ರಿಬಲ್ ರೈಡ್

ತ್ರಿಬಲ್ ರೈಡ್

ಈ ಬಗ್ಗೆ ಕಾನೂನು ಮತ್ತಷ್ಟು ಬಿಗಿಯಾಗಬೇಕು. ನಗರ ಪ್ರದೇಶದಲ್ಲಿ ಈ ರೀತಿ ಓಡಾಡುವುದು ಕಡಿಮೆ. ಆದರೆ ಹಳ್ಳಿ ಕಡೆ ಹೋದರೆ ಒಂದು ಬೈಕಿನಲ್ಲಿ ಮೂರು ಜನ ಕೂತುಕೊಂಡು ಹೋಗುವುದನ್ನು ಕಾಣಬಹುದು. ಕೆಲವು ಹಳ್ಳಿಗಳಲ್ಲಿ ರಸ್ತೆಗಳು ಅಷ್ಟೇನು ಚೆನ್ನಾಗಿರುವುದಿಲ್ಲ. ಅದರಲ್ಲಿ ತ್ರಿಬಲ್ ಹೋಗುವುದರಿಂದ ಅಪಾಯ ಹೆಚ್ಚು.

ಕೊಟ್ಟಿಗೆಯಲ್ಲಿ ಬಿಟ್ಟು, ಎಲ್ಲಾ ಕಡೆ ದನಗಳನ್ನು ಕಾಣಬಹುದು

ಕೊಟ್ಟಿಗೆಯಲ್ಲಿ ಬಿಟ್ಟು, ಎಲ್ಲಾ ಕಡೆ ದನಗಳನ್ನು ಕಾಣಬಹುದು

ದನಗಳನ್ನು ಬೀದಿಯಲ್ಲಿ ಬಿಡಬಾರದು, ಇದರಿಂದ ಉಳಿದವರಿಗೆ ತೊಂದರೆ, ಕೆಲವೊಮ್ಮೆ ದನಗಳು ರಸ್ತೆ ಮಧ್ಯೆ ನಿಂತು ಟ್ರಾಫಿಕ್ ಜಾಮ್ ಉಂಟು ಮಾಡಿ ಬಿಡುತ್ತವೆ. ಹಳ್ಳಿಗಳಲ್ಲಿ ಬೇರೆಯವರ ಗದ್ದೆಗೆ ನುಗ್ಗಿ ಬೆಳೆ ಹಾಳು ಮಾಡುತ್ತವೆ. ದನಗಳನ್ನು ಸಾಕುವವರು ಅದನ್ನು ಬೀದಿಯಲ್ಲಿ ಬಿಚ್ಚಿ ಬಿಡದೆ ಚೆನ್ನಾಗಿ ಸಾಕುವಂತಹ ಕಾನೂನು ಬರಬೇಕು.

ಓವರ್ ಲೋಡ್ ವಾಹನಗಳು

ಓವರ್ ಲೋಡ್ ವಾಹನಗಳು

ಇಲ್ಲಿನ ಬಹುತೇಕ ಟ್ರೈನ್ ಬಸ್ ಗಳು, ಜೀಪ್ ಗಳು ಜನರಿಂದ ತುಂಬಿ ತುಳುಕುತ್ತಿರುತ್ತದೆ. ಗಾಡಿಯ ಟಾಪ್ ಮೇಲೆ ಹತ್ತಿ ಕೂತಿರುತ್ತಾರೆ. ಗಾಡಿ ಓವರ್ ಲೋಡ್ ಆದರೆ ಅಪಘಾತ ಆಗುವ ಸಾಧ್ಯತೆ ಹೆಚ್ಚು. ಇದನ್ನು ತಪ್ಪಿಸಲು ಸರ್ಕಾರ ಇನ್ನು ಹೆಚ್ಚಿನ ಬಸ್ ಹಾಗೂ ರೈಲ್ವೆ ಸೌಲಭ್ಯ ನೀಡಬೇಕಾಗಿದೆ.

ಕೊಳೆಗೇರಿ, ಗಲೀಜು ರಸ್ತೆ

ಕೊಳೆಗೇರಿ, ಗಲೀಜು ರಸ್ತೆ

ಗಲೀಜಾಗಿರುವ ರೋಡ್, ಕೊಳೆಗೇರಿ ಪ್ರದೇಶಗಳು ವಿದೇಶಿಯರು ನಮ್ಮ ಬಗ್ಗೆ ತಪ್ಪು ತಿಳಿಯುವಂತೆ ಮಾಡುತ್ತದೆ. ಜನರಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಸರ್ಕಾರದ ಪ್ರಯತ್ನ ಸಾಲದು ಅನಿಸುತ್ತದೆ. ಅಲ್ಲದೆ ಜನರು ಕೂಡ ತಮ್ಮ ಸುತ್ತ, ಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಇಡಬೇಕು.

ಟ್ರಾಫಿಕ್

ಟ್ರಾಫಿಕ್

ನಗರ ಪ್ರದೇಶದಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹಚ್ಚಾಗುತ್ತಿದೆ. ಈ ಟ್ರಾಫಿಕ್ ನಲ್ಲಿ ನಮ್ಮ ಕೆಲಸ, ಮನಸ್ಸಿನ ನೆಮ್ಮದಿ ಎಲ್ಲವೂ ಹಾಳಾಗಿ ಹೋಗುತ್ತಿದೆ.

ಕೆಲ ಒರಟು ಆಟೋಡ್ರೈವರ್

ಕೆಲ ಒರಟು ಆಟೋಡ್ರೈವರ್

ಆಟೋ ಡ್ರೈವರ್ ಗಳಲ್ಲಿ ಕೆಲವರು ತುಂಬಾ ಒಳ್ಳೆಯವರು, ಮತ್ತೆ ಕೆಲವರು ಅಷ್ಟೇ ಒರಟು. ಈ ಒರಟು ಮನುಷ್ಯರಿಂದಾಗಿ ಒಟ್ಟು ಮೊತ್ತ ಆಟೋ ಡ್ರೈವರ್ ಗೆ ಕೆಟ್ಟ ಹೆಸರು. ಮೀಟರ್ ಗೆ ಮೇಲೆ ಚಾರ್ಜ್ ಕೇಳುವುದು, ಸಂಜೆ ಆದರೆ ಸಾಕು "ಮೀಟರ್ ಹಾಕಲ್ಲ ಡಬಲ್ ರೇಟ್ ಕೊಡಿ" ಅನ್ನುವುದು ಇವೆಲ್ಲಾ ಅವರ ಮೇಲೆ ಜನ ಸಾಮಾನ್ಯರಿಗೆ ಬೇಸರಿಕೆಯನ್ನು ಉಂಟು ಮಾಡುವಂತೆ ಮಾಡಿದೆ.

ಬೀದಿಯಲ್ಲ ತರಕಾರಿ ಮಾರುವವರು

ಬೀದಿಯಲ್ಲ ತರಕಾರಿ ಮಾರುವವರು

ಬೀದಿಯಲ್ಲಿ ತರಕಾರಿ ಗುಡ್ಡೆ ಹಾಕಿ ಮಾರಾಟ ಮಾಡುವ ದೃಶ್ಯ ಸರ್ವೇ ಸಾಮಾನ್ಯ. ಆದರೆ ಇದರಿಂದ ಅಲ್ಲಿ ನಡೆದಾಡುವವರಿಗೆ ತೊಂದರೆಯಾಗುತ್ತದೆ. ತರಕಾರಿ ಮಾರ್ಕೆಟ್ ಇರುತ್ತದೆ, ಅಲ್ಲಿ ಹೋಗಿ ಮಾರಬೇಕು, ಬೀದಿಯಲ್ಲಿ ಕುಳಿತು ಮಾರಲು ಪೋಲಿಸರು ಅವಕಾಶ ಕೊಡಬಾರದು.

ಎಲ್ಲಿಂದರಲ್ಲಿ ಉಗುಳುವುದು

ಎಲ್ಲಿಂದರಲ್ಲಿ ಉಗುಳುವುದು

ನಮ್ಮ ಮನೆ ಮಾತ್ರ ಶುದ್ಧವಾಗಿದ್ದರೆ ಸಾಕು, ರೋಡ್ ನಮ್ಮ ಆಸ್ತಿಯಲ್ಲ ಅನ್ನುವ ಧೋರಣೆ ಅನೇಕರಲ್ಲಿರುತ್ತದೆ. ಪಾನ್ ಜಗಿದು ಕಂಡ ಕಂಡಲ್ಲಿ ಉಗಿಯುವ ಅಭ್ಯಾಸವನ್ನು ನಮ್ಮ ಜನ ಬಿಡಬೇಕು ಹಾಗೂ ಹೀಗೆ ಉಗುಳುವವರ ಹತ್ತಿರ ಅತೀಯಾದ ದಂಡ ಕಟ್ಟಿಸಿಕೊಳ್ಳಬೇಕು. ಆದರೆ ಮಾತ್ರ ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತದೆ.

ಕಸ

ಕಸ

ಓದು, ಬರಹ ಬರದವರಿಂದ ಹಿಡಿದು ತುಂಬಾ ಓದಿ ದೊಡ್ಡ ಹುದ್ದೆಯಲ್ಲಿರುವವರು ಈ ತಪ್ಪು ಮಾಡುತ್ತಾರೆ. ಏನಾದರೂ ತಿಂದರೆ, ಕುಡಿದರೆ ಕಸವನ್ನು ರೋಡ್ ನಲ್ಲಿ ಹಾಕಿ ಬಿಡುತ್ತಾರೆ. ಈ ಪ್ರವೃತ್ತಿ ಬಿಟ್ಟರೆ ಹಾಗೂ ಕಸ ವಿಲೇವಾರಿ ಸರಿಯಾದ ರೀತಿಯಲ್ಲಿ ಆದರೆ ಭಾರತ ಸಿಂಗಾಪುರ್ ನಂತೆ ಶೀಘ್ರವೇ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

English summary

10 Things You Would Hate About India | India And Lifestyle | ಭಾರತದಲ್ಲಿ ನಾವು ದ್ವೇಷ ಪಡುವ 10 ವಿಷಯಗಳು | ಭಾರತ ಮತ್ತು ಜೀವನ ಶೈಲಿ

There are various good and bad things about India. Like the two sides of a coin, we will be amused to see few good as well as bad things about the country.
X
Desktop Bottom Promotion