ನಿಗೂಢ ಜಗತ್ತು: ಆಕೆ ಸತ್ತು 42 ವರ್ಷ ಬಳಿಕ ಪತ್ತೆಯಾದಳು!

ಕೆಲವರು ಸತ್ತ ಒಂದು ವರ್ಷವೋ ಅಥವಾ ಎರಡು ವರ್ಷದ ಬಳಿಕವೋ ಅವರ ಅಸ್ಥಿ ಪಂಜರಗಳು ಸಿಗುತ್ತದೆ....ಆದರೆ ಕೆಲವೊಂದು ಶವಗಳು ವರ್ಷಾನುಗಟ್ಟಲೆ ಕಳೆದ ಮೇಲೆ ಸಿಗುತ್ತಿರುವುದು ಮಾತ್ರ ನಮ್ಮನ್ನು ಇನ್ನಷ್ಟು ಮೂಕವಿಸ್ಮಿತಗೊಳಿಸುತ್ತವೆ.... ಮುಂದೆ ಓದಿ..

By: manu
Subscribe to Boldsky

ಯಾವುದೇ ಧರ್ಮವಾಗಲಿ ವ್ಯಕ್ತಿ ಹೇಗೆ ಇದ್ದರೂ ಆತ ಸತ್ತಾಗ ಅವನ ಅಂತ್ಯಕ್ರಿಯೆಯನ್ನು ವಿಧಿವತ್ತಾಗಿ ಮಾಡಲಾಗುತ್ತದೆ. ದೇಹಕ್ಕೊಂದು ಮುಕ್ತಿಯನ್ನು ನೀಡಲಾಗುತ್ತದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಎಷ್ಟೋ ಅನಾಥ ಶವಗಳು ಸರಕಾರಿ ಶವಾಗಾರದಲ್ಲಿ ಬಿದ್ದಿರುತ್ತದೆ. ಇದರ ವಾರಿಸುದಾರರು ಇರುವುದೇ ಇಲ್ಲ.     ಇದು ಸಾವಿನ ನಂತರ ನಡೆಯುವ ಕಥೆ! ಹೀಗೂ ಉಂಟೇ?

ಕೆಲವರು ಸತ್ತ ಒಂದು ವರ್ಷವೋ ಅಥವಾ ಎರಡು ವರ್ಷದ ಬಳಿಕವೋ ಅವರ ಅಸ್ಥಿ ಪಂಜರಗಳು ಸಿಗುತ್ತದೆ. ಈ ವೇಳೆ ಮನೆಯವರು ಯಾವುದೋ ವಸ್ತುವಿನಿಂದ ಇದನ್ನು ಗುರುತಿಸಿದರೆ ಅದಕ್ಕೊಂದು ಮುಕ್ತಿ. ಇಲ್ಲದಿದ್ದರೆ ಅದು ಅನಾಥವಾಗಿಯೇ ಇರುತ್ತದೆ.    ವಿಸ್ಮಯ ಜಗತ್ತು: ಸಾವಿನ ನಂತರ ನಡೆಯುವುದೆಲ್ಲ ವಿಚಿತ್ರ!

ಎಷ್ಟೋ ಮಂದಿಯ ಶವವು ಅವರು ಕಾಣೆಯಾದ ಹಲವು ವರ್ಷಗಳ ಬಳಿಕ ಸಿಗುವುದಿದೆ. ನಮ್ಮ ಪ್ರೀತಿ ಪಾತ್ರರು, ಸಂಬಂಧಿಕರು ಮತ್ತು ಸ್ನೇಹಿತರ ಬಗ್ಗೆ ನಾವು ಎಷ್ಟರ ಮಟ್ಟಿಗೆ ಕಾಳಜಿ ವಹಿಸುತ್ತೇವೆ ಎನ್ನುವುದು ಇವುಗಳಿಂದ ತಿಳಿದುಬರುತ್ತದೆ. ಸತ್ತು ಕೆಲವು ವರ್ಷಗಳ ಬಳಿಕ ಪತ್ತೆಯಾದ ವ್ಯಕ್ತಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.   ಸವಾಲಾಗಿರುವ ಈ ಭೂತ, ಪ್ರೇತಗಳ ನಿಗೂಢ ರಹಸ್ಯ

ಆದರೆ ವಿಪರ್ಯಾಸವೆಂದರೇ ಇಂತಹ ವ್ಯಕ್ತಿಗಳನ್ನು ಅಧಿಕಾರಿಗಳು ಎಷ್ಟೇ ಹುಡುಕಿದರೂ ಯಾವುದೇ ಸುಳಿವೇ ಸಿಗದಿರುವುದು ಮತ್ತಷ್ಟು ಬೇಸರ ಮೂಡಿಸುವಂತಹ ವಿಷಯವಾಗಿದೆ.... ಅಂತೂ ಕೊನೆಗೆ ಕಾಡುವ ಪ್ರಶ್ನೆ ಒಂದೇ ಇದು ಎಂತಹ ಲೋಕವಯ್ಯಾ! 

ಹೆಡವಿಗ್ ಗೊಲಿಕ್

ಆಕೆ ಸತ್ತ 42 ವರ್ಷಗಳ ಬಳಿಕ ಆಕೆಯನ್ನು ಪತ್ತೆ ಮಾಡಲಾಯಿತು. ಇದನ್ನು ಕೇಳಿದರೆ ನಿಮಗೆ ಅಚ್ಚರಿಯಾಗುವುದು ಖಚಿತ. ಆದರೆ 1966ರ ಬಳಿಕ ಈ ಮಹಿಳೆಯ ಬಗ್ಗೆ ಯಾರಿಗೂ ತಿಳಿದೇ ಇರಲಿಲ್ಲ...!!

ಹೆಡವಿಗ್ ಗೊಲಿಕ್

ಆದರೆ 42 ವರ್ಷಗಳ ಬಳಿಕ ಆಕೆ ಕುಳಿತಲ್ಲೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಕಪ್ಪುಬಿಳುಪು ಟಿವಿ ಆಕೆಯ ಮುಂದಿತ್ತು ಮತ್ತು ಚಹಾ ಕುಡಿದ ಕಪ್ ಕೂಡ ಆಕೆಯ ಬದಿಯಲ್ಲಿಯೇ ಇತ್ತು. ಹೀಗೂ ಉಂಟೆ?

15 ವರ್ಷ ಬಳಿಕ ಪತ್ತೆಯಾದ ವೃದ್ಧ

ಮನೆಯನ್ನು ತಪಾಸನೆ ಮಾಡಲು ಆರೋಗ್ಯ ಅಧಿಕಾರಿಯೊಬ್ಬರು ಭೇಟಿ ನೀಡಿದಾಗ ಅಲ್ಲಿ ಅಸ್ಥಿಪಂಜರವೊಂದು ಕೇವಲ ಪೈಜಾಮಾದಲ್ಲಿ ಕಂಡುಬಂದಿದೆ. ಯಾವುದೇ ವ್ಯಕ್ತಿ ಕಾಣಿಯಾದ ಬಗ್ಗೆ ದೂರು ದಾಖಲಾಗಿಲ್ಲ. ಈ ವೃದ್ಧನಿಗೆ ಕುಟುಂಬದವರು ಮತ್ತು ಸಂಬಂಧಿಕರು ಯಾರೂ ಇರಲಿಲ್ಲವೆಂದು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಸತ್ತ ಏಳು ವರ್ಷಗಳ ಬಳಿಕ ಪತ್ತೆಯಾದ ಜರ್ಮನಿಯ ಪ್ರಜೆ!

ಹಿಂದಿನ ಪ್ರಕರಣದಂತೆ ಜರ್ಮನಿಯಲ್ಲಿ 54 ವರ್ಷದ ವ್ಯಕ್ತಿಯೊಬ್ಬನ ಅಸ್ಥಿಪಂಜರವು ಸತ್ತ ಏಳು ವರ್ಷಗಳ ಬಳಿಕ ಪತ್ತೆಯಾಗಿದೆ. ಅಸ್ಥಿಪಂಜರ ಬಳಿಯಲ್ಲಿ ಸಿಗರೇಟ್ ಮತ್ತು ಆಹಾರದ ತಟ್ಟೆಗಳು ಪತ್ತೆಯಾಗಿದ್ದವು. ಸಹಜ ಸಾವಿನಿಂದ ವ್ಯಕ್ತಿ ಮೃತಪಟ್ಟಿದ್ದಾನೆಂದು ಶವಪರೀಕ್ಷೆಯಿಂದ ತಿಳಿದುಬಂದಿತ್ತು.

ಸತ್ತ ಏಳು ವರ್ಷಗಳ ಬಳಿಕ ಪತ್ತೆಯಾದ ಜರ್ಮನಿಯ ಪ್ರಜೆ!

ವಿಪರ್ಯಾಸವೆಂದರೆ ತುಂಬಾ ಜನಜಂಗುಳಿಯಿರುವ ಪ್ರದೇಶದಲ್ಲಿ ಮೃತ ವ್ಯಕ್ತಿಯ ಫ್ಲ್ಯಾಟ್ ಇದೆ. ಆದರೆ ಯಾರಿಗೂ ವಾಸನೆ ಬರದಿರುವುದು ಮತ್ತು ಗೊತ್ತಾಗದಿರುವುದು ಅಚ್ಚರಿ ಮೂಡಿಸಿದೆ.

8 ವರ್ಷದ ಬಳಿಕ ಪತ್ತೆಯಾದ ಮಹಿಳೆ

ಮನೆಯ ಬಾಗಿಲು ಭೇದಿಸಿ ಒಳಗೆ ಪ್ರವೇಶಿಸಿದ ಆಸ್ಟ್ರೇಲಿಯಾದ ಅಧಿಕಾರಿಗಳಿಗೆ ಮಹಿಳೆಯ ಅಸ್ಥಿಪಂಜರವು ಸಿಕ್ಕಿದೆ. ಮಹಿಳೆಗೆ ಸರಕಾರಿ ಸವಲತ್ತುಗಳು ಸಿಗುತ್ತಲಿತ್ತು. ಆದರೆ ಹಲವಾರು ವರ್ಷಗಳಿಂದ ಇದನ್ನು ಪಡೆದಿರಲಿಲ್ಲ. ಆಕೆ ಕೂಡ ಸಹಜ ಸಾವಿಗೀಡಾಗಿದ್ದಳು.

4 ವರ್ಷ ಬಳಿಕ ಪತ್ತೆಯಾದ ಡೇವಿಡ್ ವಾಕರ್!

ಡೇವಿಡ್‌ಗೆ ಒಳ್ಳೆಯ ಕುಟುಂಬ ಮತ್ತು ಸ್ನೇಹಿತರು ಇದ್ದರು. ಒಂದು ದಿನ ತಾನು ಬೇರೆ ರಾಜ್ಯಕ್ಕೆ ತೆರಳುತ್ತಿದ್ದೇನೆಂದು ಕುಟುಂಬದವರಲ್ಲಿ ಹೇಳಿ ಹೋದ ಆತ ಮತ್ತೆ ಪತ್ತೆಯಾಗಿದ್ದು ನಾಲ್ಕು ವರ್ಷದ ಬಳಿಕ ಹೆಣವಾಗಿ. ಆತ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Story first published: Monday, November 28, 2016, 12:16 [IST]
English summary

People Who Were Found Dead...Years After Their Deaths

There are so many such cases of dead people who were found years after their death. This makes us wonder as to what type of world we live in, where a person gets to know about the death of their friends or family members only years later, and this is no joke! Check out the stories of these sad people who had to literally wait for years before they were finally discovered.
Please Wait while comments are loading...
Subscribe Newsletter