For Quick Alerts
ALLOW NOTIFICATIONS  
For Daily Alerts

ವಿಸ್ಮಯ ಜಗತ್ತು: ಸಾವಿನ ನಂತರ ನಡೆಯುವುದೆಲ್ಲ ವಿಚಿತ್ರ!

By Super
|

ಹುಟ್ಟು ಸಾವು ಎರಡರ ನಡುವೆ ಮೂರು ದಿನದ ಬಾಳು ಎಂದು ಕವಿ ಹೇಳುತ್ತಾನೆ. ಹುಟ್ಟುವ ಮುನ್ನ ಏನಾಗಿದ್ದೆವು, ಸಾವಿನ ನಂತರ ಎಲ್ಲಿಗೆ ಹೋಗುವೆವು ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ, ಏಕೆಂದರೆ ಸಾವಿನ ಬಳಿಕ ಈ ಭೂಮಿಗೆ ಹಿಂದಿರುಗಿದವರು ಯಾರೂ ಇಲ್ಲ.

ಆದರೆ ಸಾವಿನ ಬಳಿಕ ಮೂರನೆಯ ಜಗತ್ತನ್ನು ಪ್ರವೇಶಿಸುತ್ತೇವೆ ಎಂದು ಸಾಮಾನ್ಯವಾಗಿ ಜಗತ್ತಿನ ಎಲ್ಲಾ ಧರ್ಮಗಳೂ ಹೇಳುತ್ತವೆ. ಕೆಲವು ಧರ್ಮಗಳು ಇದನ್ನು ಸ್ವರ್ಗ ನರಕ ಗಳೆಂಬ ಲೋಕಗಳನ್ನಾಗಿಸಿದರೆ ಕೆಲವು ಧರ್ಮಗಳಲ್ಲಿ ಇದು ಏಳು ಆಕಾಶಗಳ ಲೋಕವಾಗಿದೆ. ಎಂತಹ ಧೈರ್ಯವಂತನ ಎದೆ ನಡುಗಿಸುವ ಭಯಂಕರ ಸ್ಥಳಗಳು!

ಆದರೆ ಆಧಾರವಿಲ್ಲದ ಯಾವುದನ್ನೂ ನಂಬದ ವಿಜ್ಞಾನ ಸಾವಿನಾಚೆಯ ಬದುಕನ್ನೂ ತಿರಸ್ಕರಿಸಿದೆ. ಆದರೆ ಅತ್ಯಂತ ಕುತೂಹಲ ಕೆರಳಿಸುವ ವಿಷಯವೆಂದರೆ ಮರಣಾನಂತರ ಭೂತಗಳಾಗುವುದು. ಇದನ್ನು ಮಿಥ್ಯೆ ಎಂದು ಒಂದೇ ಪದದಲ್ಲಿ ತಿರಸ್ಕರಿಸುವವರಿಗೆ ಗಾಬರಿಹುಟ್ಟಿಸುವಂತೆ ವಿಶ್ವದಾದ್ಯಂತ ಲಕ್ಷಾಂತರ ಪ್ರಕರಣಗಳು ಭೂತಗಳ ಇರುವಿಕೆಯ ಬಗ್ಗೆ ಮಾಹಿತಿಯನ್ನು ನೀಡುತ್ತವೆ.

ಇಂದು ಭೂತಗಳ ಬಗ್ಗೆ ಅಚ್ಚರಿ ಹುಟ್ಟಿಸುವಕೆಲವು ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡುತ್ತಿದ್ದೇವೆ. ಆದರೆ ಇದನ್ನು ನಂಬುವುದೂ ಬಿಡುವುದೂ ನಿಮ್ಮ ಆಯ್ಕೆಗೆ ಬಿಟ್ಟ ವಿಚಾರ..

ಹುಟ್ಟು ಮತ್ತು ಸಾವಿನ ಆವರ್ತ

ಹುಟ್ಟು ಮತ್ತು ಸಾವಿನ ಆವರ್ತ

ವೇದಗಳ ಪ್ರಕಾರ ಶರೀರಕ್ಕೆ ಮಾತ್ರ ಸಾವಿದ್ದು ಆತ್ಮಕ್ಕೆ ಸಾವಿಲ್ಲ. ಮನುಷ್ಯರ ಜೀವಿತಾವಧಿ ತೀರಿದ ಬಳಿಕ ಆತ್ಮವು ಈ ಶರೀರವನ್ನು ತ್ಯಜಿಸಿ ಗಾಳಿಯಲ್ಲಿರುವ ಒಂದು ನಿರ್ದಿಷ್ಟ ಸ್ಥಳದಲ್ಲಿ ವಿರಮಿಸುತ್ತವೆ. ವಿಧಿಯ ಕರೆ ಬಂದ ಬಳಿಕ ಗರ್ಭದಲ್ಲಿರುವ ಮನುಷ್ಯ ಶಿಶುವಿನ ಶರೀರವನ್ನು ಪ್ರವೇಶಿಸುತ್ತದೆ. ಈ ಹಂತದಲ್ಲಿರುವಾಗ ಆತ್ಮ ಗಾಢನಿದ್ದೆಯಲ್ಲಿರುತ್ತದೆ. ಮುಂದೆ ಓದಿ

ಹುಟ್ಟು ಮತ್ತು ಸಾವಿನ ಆವರ್ತ

ಹುಟ್ಟು ಮತ್ತು ಸಾವಿನ ಆವರ್ತ

ಗರ್ಭವನ್ನು ಪ್ರವೇಶಿಸಿದ ಬಳಿಕ ಆತ್ಮ ತನ್ನ ಮೂಲಸ್ಥಾನವನ್ನು ತಲುಪುತ್ತದೆ. ಈಗ ಆತ್ಮಕ್ಕೆ ಹಿಂದಿನ, ಈಗಿನ ಅಥವಾ ಮುಂದಿನ ಯಾವುದೇ ವಿಷಯ ತಿಳಿದಿರುವುದಿಲ್ಲ. ಹುಟ್ಟುವ ಮಗುವಿನ ಶರೀರದ ಮೂಲಕ ಪ್ರತಿಯೊಂದನ್ನೂ ಹೊಸದಾಗಿಯೇ ಕಲಿಯಬೇಕಾಗುತ್ತದೆ.

ಆತ್ಮಗಳ ವಿಧಗಳು

ಆತ್ಮಗಳ ವಿಧಗಳು

ವೇದಗಳು ಮತ್ತು ಪುರಾಣಗಳಲ್ಲಿ ವಿವರಿಸಿರುವ ಪ್ರಕಾರ ಆತ್ಮಗಳು ಮೂರು ರೀತಿಯದ್ದಾಗಿವೆ. ಅವೆಂದರೆ ಜೀವಾತ್ಮ, ಪ್ರೇತಾತ್ಮ ಮತ್ತು ಸೂಕ್ಷ್ಮಾತ್ಮ. ಜೀವ ಇರುವ ಶರೀರದಲ್ಲಿರುವ ಆತ್ಮವೇ ಜೀವಾತ್ಮ. ಒಂದು ವೇಳೆ ಇಹಲೋಕದ ಬಯಕೆಗಳು ತೀರದೇ ದೇಹ ತ್ಯಜಿಸಿದರೆ ಜೀವಾತ್ಮ ಪ್ರೇತಾತ್ಮವಾಗಿ ಪರಿವರ್ತಿತವಾಗುತ್ತದೆ. ಮುಂದೆ ಓದಿ

ಆತ್ಮಗಳ ವಿಧಗಳು

ಆತ್ಮಗಳ ವಿಧಗಳು

ಈ ಪ್ರೇತಾತ್ಮ ಬೇರೆ ದೇಹಗಳನ್ನು ಆವರಿಸಿ ತನ್ನ ಬಯಕೆಗಳನ್ನು ತೀರಿಸಿಕೊಳ್ಳಲು ಯತ್ನಿಸುತ್ತದೆ. ಇಹಲೋಕದ ಸವಾರಿಯನ್ನು ಶಾಂತರೀತಿಯಲ್ಲಿ ಪೂರೈಸಿ ಮುಂದಿನ ಜೀವಕ್ಕೆ ಪಯಣಿಸುವ ಆತ್ಮವೇ ಸೂಕ್ಷ್ಮಾತ್ಮ. ಇದು ಹೆಬ್ಬೆರಳಿನ ಗಾತ್ರದಲ್ಲಿರುತ್ತದೆ ಹಾಗೂ ವಿಧಿಯ ಕ್ರಮದಂತೆ ಹೊಸ ದೇಹವನ್ನು ಸೇರುತ್ತದೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ.

ಭೂತಗಳ ವಿಧಗಳು

ಭೂತಗಳ ವಿಧಗಳು

ಜೀವಿತ ವ್ಯಕ್ತಿಗಳಿಗೆ ಖಚಿತವಾದ ಭೂತಕಾಲ, ವರ್ತಮಾನ ಕಾಲ ಮತ್ತು ಅಖಚಿತವಾದ ಭವಿಷ್ಯತ್ ಕಾಲವಿದೆ. ಆದರೆ ಭೂತಗಳಿಗೆ ಕೇವಲ ಭೂತಕಾಲವಿದೆ. ಅವುಗಳಿಗೆ ವರ್ತಮಾನಕಾಲವೆಂಬುದೇ ಇಲ್ಲ. ಯಾವುದೋ ಒಂದು ಭೂತಕಾಲದ ಹೊತ್ತಿನಲ್ಲಿ ನಿಂತ ಅವುಗಳ ಕಾಲಗಣನೆ ಭೂತಗಳನ್ನು ಆ ಸಮಯದಲ್ಲಿಯೇ ನಿಲ್ಲಿಸಿಬಿಡುತ್ತದೆ. ಸಮಯ ನಿಂತಿರುವುದರಿಂದ ಅವುಗಳಿಗೆ ವಯಸ್ಸಾಗುವುದೂ ಇಲ್ಲ, ಬೆಳೆಯುವುದೂ ಇಲ್ಲ. ಇದ್ದ ಸ್ಥಿತಿಯಲ್ಲಿಯೇ ಇರುತ್ತವೆ. ಮುಂದೆ ಓದಿ

ಭೂತಗಳ ವಿಧಗಳು

ಭೂತಗಳ ವಿಧಗಳು

ಎಲ್ಲಿಯವರೆಗೆ ಎಂದರೆ ಮುಕ್ತಿ ಸಿಗುವವರೆಗೆ. ಆಯುರ್ವೇದದ ಪ್ರಕಾರ ಆತ್ಮಗಳಲ್ಲಿ ಒಟ್ಟು ಹದಿನೆಂಟು ವಿಧಗಳಿದ್ದು ಅದರಲಿ ಪ್ರಥಮವಾದುದು ಭೂತವಾಗಿದೆ. ಶರೀರದಿಂದ ಪ್ರಾಣ ಹೋದಾಕ್ಷಣ ಆತ್ಮ ಭೂತವಾಗಿ ಮಾರ್ಪಡುತ್ತದೆ. ಮುಂದೆ ಓದಿ

ಭೂತಗಳ ವಿಧಗಳು

ಭೂತಗಳ ವಿಧಗಳು

ಆದರೆ ಮಹಿಳೆಯರ ದೇಹದಿಂದ ಹೊರಹೋದ ಭೂತಗಳಿಗೆ ಮೃತದೇಹದ ವಯಸ್ಸಿಗನುಗುಣವಾದ ಹೆಸರುಗಳಿವೆ. ಚಿಕ್ಕವಯಸ್ಸಿನ ದೇಹವಾಗಿದ್ದರೆ ಚುಡೇಲ್, ಅವಿವಾಹಿತ ಮಹಿಳೆಯಾಗಿದ್ದರೆ ದೇವಿ, ವ್ಯಭಿಚಾರಿ ಮಹಿಳೆಯಾಗಿದ್ದರೆ ದಾಯನ್ ಎಂಬ ಹೆಸರುಗಳಿಂದ ಈ ಭೂತಗಳು ಕರೆಯಲ್ಪಡುತ್ತವೆ.

ಯಾರು ಮತ್ತು ಹೇಗೆ ಭೂತಗಳಾಗುತ್ತಾರೆ?

ಯಾರು ಮತ್ತು ಹೇಗೆ ಭೂತಗಳಾಗುತ್ತಾರೆ?

ಒಂದು ವೇಳೆ ಸಾವಿಗೆ ಹಸಿವು, ಬಾಯಾರಿಕೆ, ಮನೋಕಾಮನೆ ಪೂರ್ತಿಯಾಗದಿರುವುದು, ಜೀವನದಲ್ಲಿ ಒಮ್ಮೆಯೂ ಲೈಂಗಿಕ ಸಂರ್ಪಕವನ್ನೇ ಹೊಂದಿಲ್ಲದವರು, ಸದಾ ಸಿಟ್ಟಿನಿಂದಲೇ ಇರುತ್ತಿದ್ದವರು, ಅತಿ ಲೋಭಿಯಾಗಿರುವವರು, ಅತಿಯಾಸೆಯ ವ್ಯಕ್ತಿಗಳೇ ಭೂತಗಳಾಗುತ್ತಾರೆ. ಮುಂದೆ ಓದಿ

ಯಾರು ಮತ್ತು ಹೇಗೆ ಭೂತಗಳಾಗುತ್ತಾರೆ?

ಯಾರು ಮತ್ತು ಹೇಗೆ ಭೂತಗಳಾಗುತ್ತಾರೆ?

ಒಂದು ವೇಳೆ ಅಪಘಾತ, ಕೊಲೆ, ಆತ್ಮಹತ್ಯೆಯ ಮೂಲಕ ಜೀವಿತ ಕಾಲಕ್ಕೂಮುನ್ನವೇ ಸಾವು ಸಂಭವಿಸಿದರೂ ಭೂತಗಳಾಗುತ್ತಾರೆ. ಈ ವ್ಯಕ್ತಿಗಳ ಆತ್ಮಕ್ಕೆ ಶಾಂತಿ ನೀಡಲು ಕೆಲವು ಪುನಸ್ಕಾರಗಳನ್ನು ನಡೆಸುವುದು ಅಗತ್ಯವಾಗಿದೆ.

Pic Courtesy

ಭೂತಗಳು ಎಲ್ಲಿ ವಾಸಿಸುತ್ತವೆ?

ಭೂತಗಳು ಎಲ್ಲಿ ವಾಸಿಸುತ್ತವೆ?

ಗರುಡ ಪುರಾಣದ ಪ್ರಕಾರ ಭೂತಗಳಿಗಾಗಿಯೇ ಒಂದು ವಿಶಿಷ್ಟ ಪ್ರದೇಶವಿದೆ. ಒಂದು ವೇಳೆ ಸತ್ತ ಬಳಿಕ ಶಾಂತಿಗಾಗಿ ಯಾವುದೇ ಪೂಜೆ ಪುನಸ್ಕಾರಗಳು ನಡೆದಿರದೇ ಇದ್ದರೆ ಅವು ಈ ಪ್ರದೇಶದಲ್ಲಿ ಹೆಚ್ಚೂ ಕಡಿಮೆ ಶಾಶ್ವತವಾಗಿ ನೆಲೆಸುತ್ತವೆ. ಇಲ್ಲಿಂದ ಅವು ವಿಶ್ವದಾದ್ಯಂತ ಅಲೆದಾಡುತ್ತಾ ತಮ್ಮ ಮುಕ್ತಿಗಾಗಿ ಕಾಯುತ್ತಿರುತ್ತವೆ. ಮುಂದೆ ಓದಿ

Pic courtesy

ಭೂತಗಳು ಎಲ್ಲಿ ವಾಸಿಸುತ್ತವೆ?

ಭೂತಗಳು ಎಲ್ಲಿ ವಾಸಿಸುತ್ತವೆ?

ಭೂತಗಳಿಗೆ ಸದ್ದು ಮತ್ತು ಪ್ರಖರ ಬೆಳಕೆಂದರೆ ಆಗದು. ಇವು ತಮ್ಮ ಹಿಂದಿನ ಸಂಬಂಧಗಳನ್ನು ಮರುಕಳಿಸಲು ಅಥವಾ ತಮಗೆ ಮುಕ್ತಿ ನೀಡಲು ಸಾಧ್ಯವಿರುವ ಜನರ ಅಕ್ಕಪಕ್ಕದಲ್ಲಿಯೇ ಸುಳಿದಾಡಿಕೊಂಡಿರುತ್ತವೆ. ವಿರಮಿಸಲು ಇವು ಬಹುಕಾಲದಿಂದ ಪಾಳು ಬಿದ್ದಿರುವ ಮನೆಗಳನ್ನು ಆಶ್ರಯಿಸುತ್ತವೆ.

Pic Courtesy

ಭೂತಗಳು ಏನನ್ನು ಬಯಸುತ್ತವೆ ಮತ್ತು ಅವು ಏನು ಮಾಡುತ್ತವೆ?

ಭೂತಗಳು ಏನನ್ನು ಬಯಸುತ್ತವೆ ಮತ್ತು ಅವು ಏನು ಮಾಡುತ್ತವೆ?

ಭೂತಗಳಿಗೆ ಮುಕ್ತಿ ಬೇಕಾಗಿದೆ. ಮುಕ್ತಿಯನ್ನು ಹುಡುಕುತ್ತಾ ಅವು ಅಲೆಯುತ್ತಿರುತ್ತವೆ. ಅವುಗಳಿಗೆ ತಿನ್ನುವ ಮತ್ತು ಕುಡಿಯುವ ಬಯಕೆ ಅತೀವವಾಗಿರುತ್ತದೆ. ಭೂತಗಳು ಸದಾ ಬೇಸರದಲ್ಲಿಯೇ ಇರುತ್ತವೆ ಹಾಗೂ ಸಿಡುಕಿನ, ಶೀಘ್ರಕೋಪದ ಸ್ವಭಾವ ಹೊಂದಿರುತ್ತವೆ. ಮುಂದೆ ಓದಿ

Pic courtesy

ಭೂತಗಳು ಏನನ್ನು ಬಯಸುತ್ತವೆ ಮತ್ತು ಅವು ಏನು ಮಾಡುತ್ತವೆ?

ಭೂತಗಳು ಏನನ್ನು ಬಯಸುತ್ತವೆ ಮತ್ತು ಅವು ಏನು ಮಾಡುತ್ತವೆ?

ಸಾಮಾನ್ಯವಾಗಿ ಹಗಲಿನಲ್ಲಿ ಹೊರಬರದ ಇವು ಕತ್ತಲೆಯ ಹೊತ್ತಿನಲ್ಲಿ ಅಥವಾ ಕಾಡಿನೊಳಗೆ ನೆರಳಿನಲ್ಲಿ ಅಥವಾ ಖಾಲಿ ಮನೆಗಳಲ್ಲಿ ಹೆಚ್ಚಾಗಿ ಅಡ್ಡಾಡಿಕೊಂಡಿರುತ್ತವೆ. ಅಳ್ಳೆದೆಯ ಮತ್ತು ಅಂಜುಬುರುಕ ವ್ಯಕ್ತಿಗಳನ್ನೇ ಇವು ಆವರಿಸಿ ತಮ್ಮ ಶಕ್ತಿಯನ್ನು ಪ್ರದರ್ಶಿಸುತ್ತವೆ.

Pic courtesy

ಕುಂಡಲಿಯಲ್ಲಿ ಆತನಿಗೆ/ಆಕೆಗೆ ಪ್ರೇತಯೋಗವಿದೆ ಎಂದು ಬರೆದಿದ್ದರೆ

ಕುಂಡಲಿಯಲ್ಲಿ ಆತನಿಗೆ/ಆಕೆಗೆ ಪ್ರೇತಯೋಗವಿದೆ ಎಂದು ಬರೆದಿದ್ದರೆ

*ಇವರು ಹೆಚ್ಚಾಗಿ ಏಕಾಂಗಿಗಳಾಗಿರುತ್ತಾರೆ

* ಇವರು ಹೆಚ್ಚಾಗಿ ಮನೆಯಲ್ಲಿ ವಾಸಪಡಲು ಇಚ್ಛಿಸುವುದಿಲ್ಲ

* ಇವರು ದೇವರ ಪ್ರಾರ್ಥನೆಯಲ್ಲಿ ಭಾಗಿಯಾಗುವುದಿಲ್ಲ

* ಇವರು ಯಾವಾಗಲೂ ಅಸ್ವಚ್ಛವಾಗಿಯೇ ಇರುತ್ತಾರೆ.

* ಇವರು ರಾತ್ರಿಯಿಡೀ ಎಚ್ಚರವಾಗಿದ್ದು ಚಿತ್ರವಿಚಿತ್ರ ಸದ್ದುಗಳನ್ನು ಮಾಡುತ್ತಿರುತ್ತಾರೆ.

ಕುಂಡಲಿಯಲ್ಲಿ ಆತನಿಗೆ/ಆಕೆಗೆ ಪ್ರೇತಯೋಗವಿದೆ ಎಂದು ಬರೆದಿದ್ದರೆ

ಕುಂಡಲಿಯಲ್ಲಿ ಆತನಿಗೆ/ಆಕೆಗೆ ಪ್ರೇತಯೋಗವಿದೆ ಎಂದು ಬರೆದಿದ್ದರೆ

* ಇವರಿಗೆ ಅನಾರೋಗ್ಯ ಸದಾ ಬಾಧಿಸುತ್ತಿರುತ್ತದೆ.

* ಇವರು ಯಾವುದೇ ಕಾರ್ಯವನ್ನು ಒಂಟಿಯಾಗಿಯೇ ಮಾಡಲಿಚ್ಛಿಸುತ್ತಾರೆ.

* ಇವರು ಮುಂಗೋಪಿಗಳಾಗಿದ್ದು ಚಿಕ್ಕ ಕೋಪಕ್ಕೂ ಮುಖ ಕೆಂಪೇರುತ್ತದೆ.

English summary

What happens to people after death?

Apart from the world we all live in, there is another world, which is extremely mysterious. This world is known as ‘the third world’ or the world of ghosts. While voodoo and exorcism experts believe that such a world exists, science has always rejected it. Despite being a debatable topic, we are going to reveal a few secrets about this place and discuss how it affects each individual. It is up to you to believe in it or not.
X
Desktop Bottom Promotion