Latest Updates
-
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ -
ಎಸ್ಪಿಎಫ್ ಸ್ಟಿಕ್: ಬಿಸಿಲ ಬೇಗೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್: ಅಯೋಧ್ಯೆಯಲ್ಲಿ ಯೋಗದ ಅದ್ಭುತ ಕೌಶಲ ಪ್ರದರ್ಶನ -
ಗುಜರಾತ್ ಲಿವ್-ಇನ್ ಜೋಡಿಗಳೇ, ಈ ಹೊಸ ನಿಯಮ ಮಿಸ್ ಮಾಡ್ಬೇಡಿ! -
ಹಬ್ಬದ ಅಲಂಕಾರ: ಕಡಿಮೆ ಖರ್ಚಿನಲ್ಲಿ ನಿಮ್ಮ ಮನೆ ಕಂಗೊಳಿಸಲಿ ಹೀಗೆ! -
ಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ಈ ಪಾನೀಯಗಳು ನಿಮ್ಮನ್ನು ಕಾಪಾಡುತ್ತವೆ -
ಬಿಸಿಗಾಳಿ ಕಾಟ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು! -
ಅನುಷ್ಕಾ ಶರ್ಮಾ ಫ್ಲೋರಲ್ ಲುಕ್: ಸ್ಟೇಡಿಯಂನಲ್ಲಿ ಮಿಂಚಲು ಹೀಗೆ ಮಾಡಿ
ಆಕ್ಸೀಸ್ ಬ್ಯಾಂಕ್ ಜಾಹೀರಾತಿಗಾಗಿ ಝಾರಾ ಧಿರಿಸಿನಲ್ಲಿ ದೀಪಿಕಾ
ದೀಪಿಕಾ ಪಡುಕೋಣೆ ತಮ್ಮ ಸ್ಟೈಲ್‌ನಿಂದಲೇ ಬಾಲಿವುಡ್‌ನಲ್ಲಿ ಹೆಸರು ಮಾಡಿದವರು. ಕರ್ನಾಟಕದ ಉಡುಪಿಯ ಈ ಬೆಡಗಿ ಬಾಲಿವುಡ್‌ನಲ್ಲಿ ಖ್ಯಾತಿವೆತ್ತ ನಾಯಕಿಯಾಗಿದ್ದಾರೆ. ಮುಟ್ಟಿದ್ದೆಲ್ಲಾ ಚಿನ್ನವೆಂಬಂತೆ ಅದೃಷ್ಟ ದೀಪಿಕಾರ ಹಿಂದೆಯೇ ಬರುತ್ತಿದೆ.
ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ಪ್ರತಿಷ್ಟಿತ ಜಾಹೀರಾತುಗಳಲ್ಲಿ ಕೂಡ ಮಿಂಚುತ್ತಿರುವ ಈ ಚೆಲುವೆ ಆಕ್ಸೀಸ್ ಬ್ಯಾಂಕಿಗಾಗಿ ಒಂದು ಜಾಹೀರಾತಿನಲ್ಲಿ ಭಾಗವಹಿಸುತ್ತಿದ್ದು ಇದಕ್ಕಾಗಿ ವಿವಿಧ ಭಂಗಿಗಳಲ್ಲಿ ಫೋಸನ್ನು ನೀಡಿ ಜನರ ಮನವನ್ನು ಗೆಲ್ಲಹೊರಟಿದ್ದಾರೆ. ಆಕ್ಸೀಸ್ ಬ್ಯಾಂಕ್‌ಗಾಗಿನ ಜಾಹೀರಾತೊಂದರಲ್ಲಿ ಝಾರಾ ವಿನ್ಯಾಸದ ಧಿರಿಸಿನಲ್ಲಿ ಡಿಪ್ಸ್ ಸರಳ ಮತ್ತು ಸುಂದರಿಯಾಗಿ ಕಾಣಿಸಿಕೊಂಡಿದ್ದಾರೆ.

ಆಕ್ಸೀಸ್ ಬ್ಯಾಂಕಿನ ಜಾಹೀರಾತಿಗಾಗಿ ಅವರು ನೀಡಿದ ಭಂಗಿ ನಮಗೆ ತುಂಬಾ ಇಷ್ಟವಾಯಿತು. ಜಾಹೀರಾತಿಗಾಗಿ ವಿಶೇಷವಾದ ಲುಕ್‌ನಲ್ಲಿ ಕಾಣಿಸಿಕೊಂಡಿರುವ ದೀಪಿಕಾ ದೇಹದ ವಿನ್ಯಾಸಕ್ಕೆ ಹೊಂದಿಕೊಂಡಂತಿರುವ ಧಿರಿಸಿನನ್ನು ಇದಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ತಮ್ಮ ಸುಂದರ ಮೈಕಟ್ಟಿಗಾಗಿಯೇ ಈ ಬೆಡಗಿ ಈ ಧಿರಿಸನ್ನು ಆಯ್ಕೆ ಮಾಡಿಕೊಂಡಿರುವಂತಿದೆ. ತಮ್ಮ ಎತ್ತರಕ್ಕೆ ಸೂಕ್ತವಾಗಿರುವ ಈ ಧಿರಿಸು ದೀಪಿಕಾರನ್ನು ಸೆಕ್ಸೀ ಮತ್ತು ಆಕರ್ಷಣೀಯವಾಗಿ ಮಾಡಿದೆ.
ಅಮೇಜಿಂಗ್ ಲುಕ್‌ನಲ್ಲಿ ಹೃದಯ ಕದ್ದ ದೀಪಿಕಾ!
ಆಕ್ಸೀಸ್ ಬ್ಯಾಂಕ್ ಜಾಹೀರಾತಿಗಾಗಿ, ಇನ್ನೊಂದು ಭಂಗಿಯಲ್ಲೂ ದೀಪಿಕಾ ಕಾಣಿಸಿಕೊಂಡಿದ್ದಾರೆ. ತಿಳಿ ಆಕಾಶ ನೀಲಿ ಬಣ್ಣದ ಸ್ವೆಟ್ಟರ್‌ನಲ್ಲಿ ಸರಳ ಫ್ಲೋರಲ್ ಧಿರಿಸಿನಲ್ಲಿ ದೀಪಿಕಾ ಕಂಡುಬಂದಿದ್ದಾರೆ. ಈ ಎರಡೂ ಜಾಹೀರಾತಿನಲ್ಲಿ ದೀಪಿಕಾ ತಮ್ಮ ಕೂದನ್ನು ಇಳಿಬಿಟ್ಟಿದ್ದಾರೆ. ಆಕೆಯ ಕಂದು ತುಟಿಗಳು ಇನ್ನಷ್ಟು ಪ್ರಚೋದನೀಯವಾಗಿ ಕಂಡುಬಂದಿದ್ದು ದೀಪಿಕಾ ಸುರ ಸುಂದರಿ ಎಂಬುದನ್ನು ಒತ್ತಿ ಹೇಳುವಂತಿದೆ.
ವಿಶೇಷವಾಗಿ ಝಾರಾ ಟ್ಯೂಬ್ ಬೋಡಿ ಕೋನ್ ಧಿರಿಸು ಇನ್ನಷ್ಟು ಮನಸೆಳೆಯುವಂತಿದ್ದು ದೀಪಿಕಾರ ಸುಂದರ ಅಂಗಸೌಷ್ಟವವನ್ನು ಸರಿಯಾಗಿ ತೋರಿಸಿದೆ. ಬ್ಯಾಂಕಿನ ಜಾಹೀರಾತಿಗಾಗಿ ದೀಪಿಕಾ ಮಾಡಿಕೊಂಡಿರುವ ಮೇಕಪ್ ಸರಳವಾಗಿದ್ದು ಮೆಚ್ಚುವಂತಿದೆ. ಆಕೆಯ ನೈಜ ಸೌಂದರ್ಯ ದೀಪಿಕಾರಿಗೆ ಕಲಶಪ್ರಾಯದಂತಿದೆ.
ಇದೊಂದು ಕೇವಲ ಜಾಹೀರಾತು ಮಾತ್ರವಾಗಿರದೆ ಬ್ಯಾಂಕ್‌ನ ಒಂದು ಭಾಗವಾಗಿ ದೀಪಿಕಾ ಕಂಡುಬಂದಿದ್ದಾರೆ. ಆಕೆಯ ಇತ್ತೀಚಿನ ಪ್ರಾಜೆಕ್ಟ್‌ಗಳು ಆಕೆಯನ್ನು ಇತರ ವಿಭಿನ್ನ ಸ್ಟೈಲ್‌ಗಳಲ್ಲೂ ತೋರಿಸಿಕೊಟ್ಟಿದೆ. ಆದರೆ ಆಕ್ಸೀಸ್ ಬ್ಯಾಂಕ್‌ನ ಜಾಹೀರಾತಿನಲ್ಲಿ ಕಂಡುಬಂದ ದೀಪಿಕಾರ ಈ ಲುಕ್ ಮಾತ್ರ ತುಂಬಾ ಸರಳವಾಗಿದೆ. ಆಕೆಯ ಕೆಂಪು ತುಟಿಗಳು ಹಾಗೂ ಚಿನ್ನದ ಆಭರಣಗಳು ಮಾತ್ರ ಸರಳತೆಯನ್ನು ತೋರಿಸಿಲ್ಲ ಆಕೆಯ ಸಂಪೂರ್ಣ ನೋಟವೇ ಸರಳ ಮತ್ತು ಸುಂದರವಾಗಿದೆ.
ಎಚ್‌ಪಿ ವಾಯ್ಸ್‌ಟ್ಯಾಬ್ ಸಿರೀಸ್‌ನಲ್ಲಿ ದೀಪಿಕಾ ಪಡುಕೋಣೆ
ಒಟ್ಟಾರೆ, ಆಕ್ಸಿಸ್ ಬ್ಯಾಂಕಿನ ಜಾಹೀರಾತಿಗಾಗಿ ದೀಪಿಕಾರ ಈ ಸರಳ ಲುಕ್ ನಮಗೆ ತುಂಬಾ ಇಷ್ಟವಾಗಿದ್ದು ಚೇತೋಹಾರಿಯಾಗಿದೆ. ಆಕೆ ಇದಕ್ಕಿಂತಲೂ ಬೇರೆ ಉಡುಪುಗಳನ್ನು ಧರಿಸಿದ್ದರೆ ಇನ್ನಷ್ಟು ಕ್ಯೂಟ್ ಆಗಿ ದೀಪಿಕಾ ಕಂಡುಬರುತ್ತಿದ್ದರು ಎಂಬುದು ನಿಮ್ಮ ಅಭಿಪ್ರಾಯವಾಗಿದೆಯೇ?



Click it and Unblock the Notifications











