Latest Updates
-
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ
ಮಹಿಳೆಯರಿಗೆ ತಿಳಿದಿರಲೇಬೇಕಾದ ಆಫೀಸ್ ನಿಯಮಗಳಿವು
ಮಹಿಳೆಯರ ಸುರಕ್ಷಿತ ದೊಡ್ಡ ಪ್ರಶ್ನೆಯಾಗಿ ನಮ್ಮ ಮುಂದಿದೆ. ಪುರುಷರಿಗೆ ಸರಿಸಮವಾಗಿ ದುಡಿಯುವ ತುಡಿತ ಈಗೀನ ಮಹಿಳೆಯರಲ್ಲಿದೆ. ಆದರೆ ನಿರಂತರವಾಗಿ ಕೇಳಿ ಬರುತ್ತಿರುವ ಅತ್ಯಾಚಾರ ಪ್ರಕರಣಗಳು ಮಹಿಳೆಯರ ಮಾನಸಿಕ ಸ್ಥೈರ್ಯವನ್ನು ಕಮ್ಮಿ ಮಾಡುತ್ತಿದೆ ಅಂದರೆ ತಪ್ಪಾಗಲಾರದು. ಯಾರನ್ನು ನಂಬಬೇಕು, ಯಾರನ್ನು ಬಿಡಬೇಕೆಂದು ಗೊತ್ತಾಗದಿರುವ ಕಾಲವಿದು.
ತಮ್ಮ ಮಗಳು ಹೊರಗೆ ಹೋದರೆ ಮನೆಗೆ ಬರುವವರೆಗೆ ಹೆತ್ತವರು ಉಸಿರನ್ನು ಬಿಗಿದುಕೊಟ್ಟುಕೊಂಡು ಕಾಯುವಂತಹ ಪರಿಸ್ಥಿತಿ ಬಂದಿದೆ. ಛೇ... ಕಾಮ ಪಿಶಾಚಿಗಳನ್ನು ಸರಕಾರ ಗಲ್ಲಿಗೆ ಹಾಕುವ ಕಾನೂನು ಇನ್ನೂ ಬಂದಿಲ್ಲ. ಬೇಗನೆ ಬಂದರೆ ಹೆಣ್ಣು ಮಕ್ಕಳು ನೆಮ್ಮದಿಯಾಗಿ ಉಸಿರಾಡಬಹುದು.

ಮಹಿಳೆಯರು ಸುರಕ್ಷತೆಗಾಗಿ ಬಜೆಟ್ ಮಂಡನೆಯಾಗಿದೆ, ಆದರೂ ಅತ್ಯಾಚಾರಿಗಳೂ ವಿಜೃಂಭಿಸುತ್ತಿದ್ದಾರೆ! ಮಾರ್ಚ್ 8. ಮಹಿಳೆಯರ ದಿನಾಚರಣೆ. ಆದರೆ ಈ ಆಚರಣೆ ಅರ್ಥಪೂರ್ಣವಾಗಿದೆಯೇ? ನೀವೇ ಹೇಳಬೇಕು.
ಮಹಿಳೆಯರು ಮೇಲೆ ಅಕ್ರಮಗಳು ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ತಿಳಿಯದೇ ಇರುವುದರಿಂದ ಆಗುತ್ತದೆ. ಹೊರಗಡೆ ಮಹಿಳೆಯರ ಸುರಕ್ಷತೆಗೆ ಸರಕಾರ ಕೆಲವೊಂದು ನಿಯಮಗಳನ್ನು ತಂದಿದೆ. ಆ ನಿಯಮಗಳಾವುವು ಎಂದು ನೋಡೋಣ ಬನ್ನಿ:'
ನೈಟ್ ಶೀಫ್ಟ್
ರಾತ್ರಿ ಪಾಳಿ ಮಾಡುವ ಮಹಿಳೆಯರಿಗೆ ತಿಂಗಳಿನಲ್ಲಿ 50% ಕ್ಕಿಂತ ಅಧಿಕ ನೈಟ್ ಶೀಫ್ಟ್ ಕೊಡುವಾಗಿಲ್ಲ. ನೈಟ್ ಶೀಫ್ಟ್ ಸಂಜೆ 7 ಗಂಟೆಯಿಂದ ಪ್ರಾರಂಭವಾಗುತ್ತದೆ.
ಕ್ಯಾಬ್
ಅನೇಕ ಅತ್ಯಾಚಾರಗಳು ಕ್ಯಾಬ್ ಗಳಲ್ಲಿ ನಡೆದ ನಿದರ್ಶನಗಳು ನಮ್ಮ ಕಣ್ಣು ಮುಂದಿದೆ. ಮಹಿಳೆಯರು ಸುರಕ್ಷಿತವಾಗಿ ಮನೆ ಸೇರಲು ಸರ್ಕಾರವು ಒಂದು ಕಾನೂನು ತಂದಿದೆ. ಅದರ ಪ್ರಕಾರ ಆಫೀಸ್ ಕ್ಯಾಬ್ ನಲ್ಲಿರುವವರಲ್ಲಿ ಕೊನೆಯಲ್ಲಿ ಇಳಿಯಲು ಒಬ್ಬ ಮಹಿಳೆ ಮಾತ್ರ ಇದ್ದರೆ, ಅವರನ್ನು ಮಾತ್ರ ಕ್ಯಾಬ್ ಡ್ರೈವರ್ ಜೊತೆ ಕಂಪನಿ ಕಳುಹಿಸುವಾಗಿಲ್ಲ. ಕಂಪನಿ ಒಬ್ಬ ಸೆಕ್ಯೂರಿಟಿ ಪರ್ಸನ್ ಅನ್ನು ಅವರನ್ನು ಬಿಟ್ಟು ಬರಲು ಕಳುಹಿಸಿಕೊಡಬೇಕಾಗುತ್ತದೆ.
ರಾತ್ರಿ
ಯಾವುದೇ ಕಂಪನಿಯು ಮಹಿಳೆಯರನ್ನು ಕೆಲಸ ಮುಗಿದಿಲ್ಲವೆಂದು ರಾತ್ರಿ 7.30 ಗಂಟೆಯ ನಂತರ ಕೆಲಸ ಮಾಡು ಎಂದು ಒತ್ತಾಯ ಮಾಡುವಂತಿಲ್ಲ.
ಹೆರಿಗೆಯ ರಜೆ
ಒಂದು ಕಂಪನಿಯಲ್ಲಿರುವ ಗರ್ಭಿಣಿ ಮಹಿಳೆಗೆಗೆ ಹೆರಿಗೆಯ ಸಮಯದಲ್ಲಿ 3 ತಿಂಗಳವರೆಗೆ , ಸಂಬಳ ಸಹಿತ ರಜೆ ಕೊಡಬೇಕು, ಬೇಕಿದ್ದರೆ ಇನ್ನೂ 3 ತಿಂಗಳು ಸಂಬಳ ರಹಿತ ರಜೆಯನ್ನು ಹಾಕಬೇಕು. ಕೆಲವರಿಗೆ ವರ್ಕ್ ಫ್ರಂ ಹೋಂ (ಮೆನಯಿಂದಲೇ ಆಫೀಸ್ ಕೆಲಸ ಮಾಡುವುದು)ಆಯ್ಕೆ ಕೂಡ ಕೆಲ ಕಂಪನಿಗಳಲ್ಲಿ ಇರುತ್ತದೆ.
ಆಫೀಸ್ ನಲ್ಲಿರುವ ಮಹಿಳೆಯರ ಅಂಕಿ ಅಂಶ
ಒಂದು ಆಫೀಸ್ ನಲ್ಲಿರುವ ಒಟ್ಟು ಮೊತ್ತ ನೌಕರರ ಸಂಖ್ಯೆಯಲ್ಲಿ ಸೇ. 30ರಷ್ಟಾದರೂ ಮಹಿಳೆಯರು ಇರಬೇಕು.
ಸಮಾನ
ಲಿಂಗದ ಕಾರಣ ಹೇಳಿ ಸಂಬಳವನ್ನು ಕಮ್ಮಿ ಕೊಡುವ ಅಧಿಕಾರ ಯಾವುದೇ ಕಂಪನಿಗಳಿಗಿಲ್ಲ. ನಿಮ್ಮ ಕೆಲಸಕ್ಕೆ ತಕ್ಕ ಸಂಬಳ ಪಡೆದುಕೊಳ್ಳುವುದು ನಿಮ್ಮ ಹಕ್ಕು.
ವಿವಾಹಿತೆ
ಕೆಲವು ಕಂಪನಿಗಳು ಮದುವೆಯಾದವರನ್ನು ಕೆಲಸಕ್ಕೆ ನೇಮಕಾತಿ ಮಾಡಿಕೊಳ್ಳಲು ರೆಡಿ ಇರುವುದಿಲ್ಲ. ಏಕೆಂದರೆ ನಂತರ ಹೆರಿಗೆಯ ರಜೆ ಕೊಡಬೇಕಾಗುತ್ತದೆ ಅನ್ನುವುದು ಕಂಪನಿಯವರ ಆಲೋಚನೆಯಾಗಿರುತ್ತದೆ. ಆದರೆ ಕಾನೂನಿನ ಪ್ರಕಾರ ಈ ರೀತಿ ಮಾಡುವುದು ತಪ್ಪು.



Click it and Unblock the Notifications
