For Quick Alerts
ALLOW NOTIFICATIONS  
For Daily Alerts

ಸೂರ್ಯ ನಮಸ್ಕಾರದಿಂದ ಉಂಟಾಗುವ 12 ಪ್ರಯೋಜನಗಳು

|

ಸೂರ್ಯ ನಮಸ್ಕಾರ ಅಥವಾ ಸೂರ್ಯನಿಗೆ ಅಭಿವಂದಿಸುವುದು ಯೋಗ ಭಂಗಿಗಳಲ್ಲಿ ಅತ್ಯಂತ ಪ್ರಮುಖ ಮತ್ತು ಮಹತ್ವಪುರ್ಣವಾದುದು. ಸೂರ್ಯ ನಮಸ್ಕಾರ ಮಾಡುವುದರಿಂದ ನಮಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ನೆಮ್ಮದಿ ಸಂತೋಷ ಸಿಗುತ್ತದೆ. ಇದರಿಂದಲೇ ಸಾಕಷ್ಟು ಸೆಲೆಬ್ರಿಟಿಗಳು ತಮ್ಮ ಸುಂದರವಾದ ಅಂಗಸೌಷ್ಠವವನ್ನು ಕಾಪಾಡಿಕೊಂಡಿರುವುದು.

ಬಾಲಿವುಡ್ ನಟಿ ಕರೀನಾ ಕಪೂರ್ ಹೇಳುವಂತೆ ಸೂರ್ಯ ನಮಸ್ಕಾರ ಆಕೆಯ ಸುಂದರ ಮೈಕಟ್ಟಿನ ರಹಸ್ಯವಾಗಿದೆಯಂತೆ. ನಿಮ್ಮ ದೇಹ ತೂಕ ಮಾತ್ರ ಕಡಿಮೆಯಾಗದೇ ಜೊತೆಗೆ ಕೆಲವೊಂದು ಆಧ್ಯಾತ್ಮಿಕ ಪ್ರಯೋಜನಗಳೂ ಸೂರ್ಯನಮಸ್ಕಾರದಿಂದ ನಮಗುಂಟಾಗುತ್ತದೆ. ಸೂರ್ಯ ನಮಸ್ಕಾರ ಎಂದರೆ ದಿನದ ಬೆಳಗನ್ನು ಸೂರ್ಯನಿಗೆ ವಂದಿಸಿ ಮಾಡುವಂಥದ್ದು. ಇದು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.

ಸೂರ್ಯನ ಪ್ರಭಾತ ಕಿರಣಗಳಿಗೆ ಮೈಯೊಡ್ಡಿ ಸೂರ್ಯ ನಮಸ್ಕಾರವನ್ನು ಮಾಡುವುದೊಳಿತು. ಇದರಿಂದ ನಿಮಗೆ ಮಾನಸಿಕ ನೆಮ್ಮದಿ ದೊರೆತು ಮನ ಪ್ರಫುಲ್ಲಗೊಳ್ಳುತ್ತದೆ.

ನಿಮ್ಮ ಕ್ಯಾಲೋರಿಗಳನ್ನು ಕರಗಿಸಿ ನಿಮ್ಮ ದೇಹಕ್ಕೆ ಶಕ್ತಿಯನ್ನು ನವಚೈತನ್ಯವನ್ನು ನೀಡುವ ಹನ್ನೆರಡು ಭಂಗಿಗಳನ್ನು ಈ ಲೇಖನದಲ್ಲಿ ನಾವು ನೀಡುತ್ತಿದ್ದೇವೆ. ನೀವು ಈ ಲೇಖನದಲ್ಲಿ ತಿಳಿಯಬೇಕಾದ್ದು ನೀವು ಸೂರ್ಯನಿಗೆ ನಮಸ್ಕಾರ ಏಕೆ ಮಾಡಬೇಕೆಂಬುದನ್ನು. ಹಾಗಿದ್ದರೆ ಸೂರ್ಯ ನಮಸ್ಕಾರದಿಂದ ಉಂಟಾಗುವ ಪ್ರಯೋಜನಗಳನ್ನು ಇಲ್ಲಿ ತಿಳಿದುಕೊಳ್ಳಿ.

ಸೂರ್ಯ ನಮಸ್ಕಾರದ ನಿಯಮ ಮತ್ತು ಪ್ರಯೋಜನಗಳು

ಸ್ಟ್ರೆಚ್ಚಿಂಗ್

ಸ್ಟ್ರೆಚ್ಚಿಂಗ್

ನೀವು ಪ್ರತಿಯೊಂದು ವ್ಯಾಯಾಮ ಮಾಡುವ ಮುನ್ನ ಸ್ಟ್ರೆಚ್ಚಿಂಗ್ ಅನ್ನು ಮಾಡಬೇಕು. ಇದರಿಂದ ನಿಮ್ಮ ಸ್ನಾಯುಗಳು ಸಡಿಲಗೊಳ್ಳುತ್ತವೆ. ಇತರ ಯೋಗ ಭಂಗಿಗಳಿಂದ ನಿಮಗುಂಟಾಗುವ ವಿಶೇಷ ಪ್ರಯೋಜನವನ್ನು ಸೂರ್ಯ ನಮಸ್ಕಾರದ ಸ್ಟ್ರೆಚ್ಚಿಂಗ್ ಭಂಗಿ ಒದಗಿಸುತ್ತದೆ.

ತೂಕ ಇಳಿಸಲು

ತೂಕ ಇಳಿಸಲು

ನಿಮ್ಮ ದೇಹದ ಪ್ರತಿಯೊಂದು ಸ್ನಾಯುವಿಗೂ ವ್ಯಾಯಾಮವನ್ನು ನೀಡುವ ಸೂರ್ಯ ನಮಸ್ಕಾರ ನಿಮ್ಮ ಥೈರೋಯಿಡ್ ಗ್ರಂಥಿಗೆ ಆರೋಗ್ಯವನ್ನು ನೀಡುತ್ತದೆ.

ಭಂಗಿ ಹಾಗೂ ನಿಯಂತ್ರಣ

ಭಂಗಿ ಹಾಗೂ ನಿಯಂತ್ರಣ

ನಿಮ್ಮ ಭಂಗಿಯಲ್ಲಿನ ಸಮಸ್ಯೆಗಳನ್ನು ದೂರ ಮಾಡಿ ನಿಮ್ಮ ದೇಹದ ನಿಯಂತ್ರಣವನ್ನು ಸಮರ್ಪಕಗೊಳಿಸುವಲ್ಲಿ ಸೂರ್ಯ ನಮಸ್ಕಾರ ಸಹಕಾರಿ. ನಿಮ್ಮ ಕೆಟ್ಟ ಭಂಗಿಯಿಂದ ದೇಹಕ್ಕುಂಟಾಗುವ ನೋವು ದೂರವಾಗುತ್ತದೆ.

ಜೀರ್ಣಕ್ರಿಯೆಗೆ ಉತ್ತಮ

ಜೀರ್ಣಕ್ರಿಯೆಗೆ ಉತ್ತಮ

ಆಧುನಿಕತೆಯ ಜೀವನವು ಹಲವಾರು ಕಾಯಿಲೆಗಳನ್ನು ದೇಹಕ್ಕೆ ಉಣಬಡಿಸುತ್ತದೆ. ಇದರಲ್ಲಿ ಅಜೀರ್ಣ ಕೂಡ ಒಂದು. ಸೂರ್ಯ ನಮಸ್ಕಾರವನ್ನು ನಿತ್ಯವೂ ಮಾಡುವುದ ಅಜೀರ್ಣ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಗಟ್ಟಿ ಮುಟ್ಟು ಮೂಳೆಗಳು

ಗಟ್ಟಿ ಮುಟ್ಟು ಮೂಳೆಗಳು

ನಿತ್ಯವೂ ಸೂರ್ಯನಿಗೆ ಎದುರಾಗಿ ಮಾಡುವ ಸೂರ್ಯ ನಮಸ್ಕಾರವು ನಿಮ್ಮ ಮೂಳೆಗಳನ್ನು ಸ್ನಾಯುಗಳನ್ನು ಬಲಪಡಿಸಿ ನಿಮ್ಮನ್ನು ಫಿಟ್‌ಗೊಳಿಸುತ್ತದೆ.

ಒತ್ತಡದಿಂದ ಮುಕ್ತಿ

ಒತ್ತಡದಿಂದ ಮುಕ್ತಿ

ನಿಮ್ಮ ದೇಹದಲ್ಲಿ ಒತ್ತಡ ಇದ್ದಲ್ಲಿ ಇದು ಮಾನಸಿಕ ಕಾಯಿಲೆಗೆ ಕಾರಣವಾಗುತ್ತದೆ. ಸೂರ್ಯ ನಮಸ್ಕಾರ ನಿಮ್ಮ ದೇಹದಲ್ಲಿನ ಒತ್ತಡವನ್ನು ದೂರ ಮಾಡಿ ಮನಸ್ಸನ್ನು ಪ್ರಶಾಂತಗೊಳಿಸುತ್ತದೆ. ಶಾಂತ ಜೀವನ ನಿಮ್ಮದಾಗುತ್ತದೆ.

ಕರುಳ ಚಲನೆಗೆ ಉತ್ತಮ

ಕರುಳ ಚಲನೆಗೆ ಉತ್ತಮ

ಕರುಳ ಚಲನೆಯನ್ನು ಸಮರ್ಪಕಗೊಳಿಸಿ ಮಲಬದ್ಧತೆ ಹಾಗೂ ಮೂಲವ್ಯಾಧಿಯನ್ನು ನಿವಾರಿಸುತ್ತದೆ.

ಇನ್ಸೋಮ್ನಿಯಾವನ್ನು ಗುಣಪಡಿಸುತ್ತದೆ

ಇನ್ಸೋಮ್ನಿಯಾವನ್ನು ಗುಣಪಡಿಸುತ್ತದೆ

ಈ ದಿನಗಳಲ್ಲಿ ನಿದ್ರೆಯ ಸಮಸ್ಯೆ ಹದಿಹರೆಯದವರನ್ನು ಹೆಚ್ಚು ಕಾಡುತ್ತಿರುತ್ತದೆ. ಸೂರ್ಯ ನಮಸ್ಕಾರ ನಿದ್ದೆಯ ತೊಂದರೆಗಳನ್ನು ನಿವಾರಿಸಿ ನಿಮಗೆ ಪ್ರಶಾಂತ ಆರೋಗ್ಯವನ್ನು ನೀಡುತ್ತದೆ.

 ರಕ್ತಸಂಚಲನೆಯನ್ನು ಅಭಿವೃದ್ಧಿಗೊಳಿಸುತ್ತದೆ

ರಕ್ತಸಂಚಲನೆಯನ್ನು ಅಭಿವೃದ್ಧಿಗೊಳಿಸುತ್ತದೆ

ಸೂರ್ಯ ನಮಸ್ಕಾರ ಮಾಡುವಾಗ ನಿಮ್ಮ ದೇಹದ ಪ್ರತಿಯೊಂದು ಭಾಗವೂ ಈ ಯೋಗಕ್ಕೆ ಒಳಪಟ್ಟಿರುತ್ತದೆ. ಇದು ನಿಮ್ಮ ದೇಹದ ರಕ್ತಸಂಚಲನೆಯನ್ನು ಸಲೀಸುಗೊಳಿಸಿ ನಿಮ್ಮನ್ನು ಇನ್ನಷ್ಟು

ಶಕ್ತಿಶಾಲಿಯನ್ನಾಗಿಸುತ್ತದೆ.

ಋತುಚಕ್ರ ಸಮಸ್ಯೆ ನಿವಾರಣೆ

ಋತುಚಕ್ರ ಸಮಸ್ಯೆ ನಿವಾರಣೆ

ಇಂದಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಯುವತಿಯರು ಮುಟ್ಟಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ನಿಮ್ಮ ಮುಟ್ಟಿನ ಸಮಸ್ಯೆಯನ್ನು ಹಗುರಗೊಳಿಸಿ ಮಗುವಿನ ಜನನಕ್ಕೆ ದಾರಿ ಮಾಡಿಕೊಡುತ್ತದೆ. ನಿಮ್ಮ ಹೆರಿಗೆಯನ್ನು ಸ್ವಾಭಾವಿಕ ವಿಧಾನದಲ್ಲಿ ಸೂರ್ಯನಮಸ್ಕಾರ ಸುಲಭಗೊಳಿಸುತ್ತದೆ.

ಹೊಳೆಯುವ ತ್ವಚೆ

ಹೊಳೆಯುವ ತ್ವಚೆ

ನಿಮ್ಮ ದೈಹಿಕ ಆರೋಗ್ಯದೊಂದಿಗೆ ತ್ವಚೆಯ ಹೊಳಪೂ ವೃದ್ಧಿಯಾಗಿ ನೀವು ಇನ್ನಷ್ಟು ಸುಂದರಿಯಾಗುವುದು ಸೂರ್ಯ ನಮಸ್ಕಾರದಿಂದ ಸಾಧ್ಯ. ನಿಮ್ಮ ಮುಖದಲ್ಲಿನ ಸುಕ್ಕುಗಳು, ಕಲೆಗಳು ಮಾಯವಾಗಿ ನೀವು ಹೊಳೆಯುವ ತ್ವಚೆಯಿಂದ ಇನ್ನಷ್ಟು ಕಾಂತಿಪೂರ್ಣವಾಗುತ್ತೀರಿ.

ಆಧ್ಯಾತ್ಮಿಕ ಮಹತ್ವ

ಆಧ್ಯಾತ್ಮಿಕ ಮಹತ್ವ

ನಿಮ್ಮ ಆತ್ಮ ಹಾಗೂ ದೇಹಕ್ಕೆ ಯೋಗ ಪರಿಣಾಮಕಾರಿ. ಸೂರ್ಯ ನಮಸ್ಕಾರ ನಿಮ್ಮ ದೇಹದ ಮೂರು ಪ್ರಮುಖ ಭಾಗಗಳನ್ನು ನಿಯಂತ್ರಿಸಲು ಸಹಕಾರಿ. ವಾಂತಿ, ಪಿತ್ತ ಮತ್ತು ಕಫ. ಇದು ಆಂತರಿಕವಾಗಿ ನಿಮ್ಮನ್ನು ಸದೃಢಗೊಳಿಸಿ ಎಲ್ಲಾ ಪ್ರಕಾರದ ಒತ್ತಡಗಳನ್ನು ದೂರ ಮಾಡಿ ನಿಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ.

English summary

12 Benefits Of Doing Surya Namaskar Every Morning

Surya Namaskar or sun salutation is a very versatile yoga pose. There are several benefits of doing Surya Namaskar and even celebrities swear by it. Many celebrities begin their day by doing Surya Namaskar early in the morning.
Story first published: Monday, June 9, 2014, 9:30 [IST]
X
Desktop Bottom Promotion