For Quick Alerts
ALLOW NOTIFICATIONS  
For Daily Alerts

ಸೌತೆಕಾಯಿಯಲ್ಲಿದೆ ಕೆಲವು ಅಚ್ಚರಿಯ ಗುಣಗಳು

|

ಬಾಯಾರಿಕೆಯಾದಾಗ ಸೌತೆಕಾಯಿ ಕಂಡರೆ ಸಾಕು ಅದನ್ನು ತಿನ್ನಬೇಕೆನಿಸುತ್ತದೆ, ಉಪ್ಪು ಖಾರ ಉದುರಿಸಿ ತಿನ್ನುವ ಸೌತೆಕಾಯಿಯನ್ನು ತಿನ್ನುವ ಮಜಾನೇ ಬೇರೆ, ಆರೋಗ್ಯದ ದೃಷ್ಟಿಯಿಂದ ಉಪ್ಪನ್ನು ಸ್ವಲ್ಪ ತಿಂದರೆ ಒಳ್ಳೆಯದು.

ಸೌತೆಕಾಯಿ ತಿಂದರೆ ಅದರಲ್ಲಿ ನೀರಿನಂಶ ಅಧಿಕವಿರುವುದರಿಂದ ಬಾಯಾರಿಕೆಯನ್ನು ಕಡಿಮೆ ಮಾಡುತ್ತದೆ, ದೇಹದಲ್ಲಿ ನೀರಿನಂಶ ಕಡಿಮೆ ಮಾಡುತ್ತದೆ ಅನ್ನುವ ವಿಷಯ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಇದಲ್ಲದೆ ಸೌತೆ ಕಾಯಿಯಲ್ಲಿ ಹತ್ತು ಹಲವು ಆರೋಗ್ಯಕರ ಗುಣಗಳಿವೆ, ಆ ಗುಣಗಳಾವುವು ಎಂದು ಗೊತ್ತಿದೆಯೇ? ಇಲ್ಲಿ ಅಂದರೆ, ಅವುಗಳ ಮಾಹಿತಿ ತಿಳಿಯಲು ಮುಂದೆ ಓದಿ:

 ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುತ್ತದೆ

ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುತ್ತದೆ

ಇದರಲ್ಲಿ ಶೇ. 96ರಷ್ಟು ನೀರಿನಂಶವಿದ್ದು, ಇದನ್ನು ತಿಂದರೆ ದೇಹದ ಉಷ್ಟತೆ ಕಡಿಮೆಯಾಗುವುದರಿಂದ ತುಂಬಾ ಸೆಕೆಯಾಗುವುದಿಲ್ಲ. ನೀರಿನಂಶವಿರುವ ಅಹಾರಗಳು ಬೇಸಿಗೆಗೆ ತುಂಬಾ ಸೂಕ್ತವಾದ ಆಹಾರವಾಗಿದೆ.

ತ್ವಚೆ ಆರೈಕೆಯನ್ನು ಮಾಡುತ್ತದೆ

ತ್ವಚೆ ಆರೈಕೆಯನ್ನು ಮಾಡುತ್ತದೆ

ಇದು ತ್ವಚೆಯಲ್ಲಿರುವ ಬೇಡದ ರಾಸಾಯನಿಕಗಳನ್ನು ಹೊರಹಾಕಲು ಸಹಾಯ ಮಾಡುವುದರಿಂದ, ಇದನ್ನು ತ್ವಚೆ ಆರೈಕೆಯಲ್ಲಿ ಬಳಸಿದರೆ ಉತ್ತಮ ಫಲಿತಾಂಶ ಕಾಣುವಿರಿ.

 ಕಣ್ಣೆಗೆ ಒಳ್ಳೆಯದು

ಕಣ್ಣೆಗೆ ಒಳ್ಳೆಯದು

ಕಣ್ಣಿನಲ್ಲಿ ನೀರಿನಂಶ ಕಡಿಮೆಯಾದರೆ ಕಣ್ಣಿನ ಕೆಳಭಾಗ ಊದಿಕೊಳ್ಳುತ್ತದೆ. ಸೌತೆಕಾಯಿ ತಿಂದರೆ ಕಣ್ಣಿನಲ್ಲಿ ನೀರಿನ ಪಸೆ ಇರುವಂತೆ ನೋಡಿಕೊಳ್ಳುತ್ತದೆ. ಅಲ್ಲದೆ ಇದನ್ನು ಕಣ್ಣಿನ ಸುತ್ತ ಇಟ್ಟರೆ ಡಾರ್ಕ್ ಸರ್ಕಲ್ ಹೋಗಲಾಡಿಸುತ್ತದೆ.

 ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಪ್ರತೀದಿನ ಸೌತೆಕಾಯಿ ತಿನ್ನುವವರಿಗೆ ಕ್ಯಾನ್ಸರ್ ರೋಗ ಬರುವುದಿಲ್ಲ. ಇದು ಎಲ್ಲಾ ರೀತಿಯ ಕ್ಯಾನ್ಸರ್ ಗಳ ವಿರುದ್ಧ ಹೋರಾಡುತ್ತದೆ.

 ಹಲ್ಲು ಹಾಗೂ ವಸಡುಗಳ ಆರೋಗ್ಯಕ್ಕೆ

ಹಲ್ಲು ಹಾಗೂ ವಸಡುಗಳ ಆರೋಗ್ಯಕ್ಕೆ

ಸೌತೆಕಾಯಿ ತಿಂದರೆ ಹಲ್ಲು ಹಾಗೂ ವಸಡುಗಳು ಗಟ್ಟಿಯಾಗುತ್ತದೆ, ಬಾಯಿ ದುರ್ವಾಸನೆ ಬೀರದಂತೆ ತಡೆಯುತ್ತದೆ.

ಜೀರ್ಣಕ್ರಿಯೆಗೆ ಒಳ್ಳೆಯದು

ಜೀರ್ಣಕ್ರಿಯೆಗೆ ಒಳ್ಳೆಯದು

ಮಲಬದ್ಧತೆ ಸಮಸ್ಯೆ ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಈ ಸಮಸ್ಯೆ ಇರುವವರು ತಂಪಾದ ಪದಾರ್ಥಗಳನ್ನು ಸೇವಿಸಬೇಕು, ಸೌತೆಕಾಯಿ ಕೂಡ ತುಂಬಾ ತಂಪಾದ ಅಹಾರವಾಗಿದೆ.

ಮೂಳೆಗಳನ್ನು ಬಲಪಡಿಸುತ್ತದೆ

ಮೂಳೆಗಳನ್ನು ಬಲಪಡಿಸುತ್ತದೆ

ಸಂಧಿನೋವು ಇರುವವರು ಇದನ್ನು ತಿಂದರೆ ಒಳ್ಳೆಯದು. ಏಕೆಂದರೆ ಸೌತೆಕಾಯಿಗೆ ಮೂಳೆಗಳನ್ನು ಬಲಪಡಿಸುವ ಸಾಮರ್ಥ್ಯವಿದೆ. ಇದು ಯೂರಿಕೆ ಅಸಿಡ್ ಅನ್ನು ಕಡಿಮೆ ಮಾಡುವುದರಿಂದ ಸಂಧಿ ನೋವು ಕಡಿಮೆಯಾಗುತ್ತದೆ.

 ಜಂತು ಹುಳಗಳನ್ನು ಹೋಗಲಾಡಿಸಲು

ಜಂತು ಹುಳಗಳನ್ನು ಹೋಗಲಾಡಿಸಲು

ಜಂತು ಹುಳಗಳನ್ನು ಹೋಗಲಾಡಿಸಲು ಸೌತೆಕಾಯಿಯ ಬೀಜವನ್ನು ಬಳಸಲಾಗುವುದು. ಸೌತೆಕಾಯಿ ಬೀಜವನ್ನು ರುಬ್ಬಿ ತಿಂದರೆ ಜಂತುಹುಳಗಳನ್ನು ಹೊರ ಹಾಕುತ್ತದೆ. ಮಕ್ಕಳಿಗೂ ಈ ವಿಧಾನ ಪಾಲಿಸಬಹುದು.

ಉಗುರಿನ ಆರೈಕೆಗೆ

ಉಗುರಿನ ಆರೈಕೆಗೆ

ಉಗುರುಗಳು ಮುರಿಯುವುದನ್ನು ತಡೆಗಟ್ಟುತ್ತದೆ, ಉಗುರುಗಳಲ್ಲಿ ಹೊಳಪನ್ನು ಹೆಚ್ಚಿಸುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ

ಮಧುಮೇಹವನ್ನು ನಿಯಂತ್ರಿಸುತ್ತದೆ

ಇದು ದೇಹದಲ್ಲಿರುವ ಇನ್ಸುಲಿನ್ ಸಮಪ್ರಮಾಣದಲ್ಲಿರುವಂತೆ ಮಾಡುತ್ತದೆ, ಇದರಿಂದ ಮಧುಮೇಹವನ್ನು ನಿಯಂತ್ರಿಸಬಹುದು.

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ಕೊಲೆಸ್ಟ್ರಾಲ್ ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ಕೂದಲಿಗೆ ಒಳ್ಳೆಯದು

ಕೂದಲಿಗೆ ಒಳ್ಳೆಯದು

ಸೌತೆಕಾಯಿಯಲ್ಲಿ ಸಿಲಿಕಾನ್ ಹಾಗೂ ಗಂಧಕದ ಅಂಶವಿರುವುದರಿಂದ ಕೂದಲಿನ ಪೋಷಣೆಯನ್ನೂ ಮಾಡುತ್ತದೆ.

ಕಿಡ್ನಿಗೆ ಒಳ್ಳೆಯದು

ಕಿಡ್ನಿಗೆ ಒಳ್ಳೆಯದು

ಇದನ್ನು ಪ್ರತೀದಿನ ತಿಂದರೆ ಕಿಡ್ನಿಯಲ್ಲಿರುವ ಕಲ್ಲನ್ನು ಹೋಗಲಾಡಿಸಲು ಸಹಾಯಮಾಡುತ್ತದೆ.

English summary

Surprise Health Benefit In Cucumber |Tips For Health | ಸೌತೆಕಾಯಿಯಲ್ಲಿರುವ ಕೆಲವು ಅಚ್ಚರಿಯ ಗುಣಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Cucumber is not just a piece of adding attraction or taste to salad, but it is a treasure of health benefits a person can get by its consumption.
X
Desktop Bottom Promotion