For Quick Alerts
ALLOW NOTIFICATIONS  
For Daily Alerts

ಮೊಟ್ಟೆಯ ಹಳದಿ ತಿಂದರೆ ಆರೋಗ್ಯಕ್ಕೆ ನಾನಾ ಲಾಭ!

|

ಮೊಟ್ಟೆಯ ಬಿಳಿ ಮಾತ್ರ ಒಳ್ಳೆಯದು, ಮೊಟ್ಟೆಯ ಹಳದಿ ತಿಂದರೆ ದೇಹದ ತೂಕ ಹೆಚ್ಚಾಗುವುದರ ಹೊರತು ಮತ್ಯಾವ ಪ್ರಯೋಜನವಿಲ್ಲ ಎಂಬ ಭಾವನೆ ನಮ್ಮಲ್ಲಿದೆ. ಆದರಲ್ಲೂ ಡಯಟ್ ಮಾಡುವವರು ಮೊಟ್ಟೆಯ ಹಳದಿಯನ್ನು ತಿನ್ನುವುದೇ ಇಲ್ಲ.

ಆದರೆ ಮೊಟ್ಟೆಯ ಹಳದಿಯಲ್ಲಿ ಬರೀ ಕೊಲೆಸ್ಟ್ರಾಲ್ ಮಾತ್ರವಲ್ಲ ದೇಹದ ಅಗತ್ಯವಾದ ಅನೇಕ ಅಂಶಗಳಿವೆ. ಇದು ಆರೋಗ್ಯ ವೃದ್ಧಿಯಲ್ಲಿ ಯಾವ ರೀತಿಯಲ್ಲಿ ಸಹಕಾರಿ ಎಂದು ನೋಡೋಣ ಬನ್ನಿ:

Do Egg Yolks Have Health Benefits?

ಪುರುಷ ಹಾರ್ಮೋನ್ ಹೆಚ್ಚಿಸುತ್ತದೆ: ಮೊಟ್ಟೆಯ ಹಳದಿ ಪುರುಷ ಹಾರ್ಮೋನ್ (testosterone) ಹೆಚ್ಚಿಸುತ್ತದೆ.

ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ: ಮೊಟ್ಟೆಯ ಹಳದಿಯಲ್ಲಿ ಕೊಲೆಸ್ಟ್ರಾಲ್ ಇದ್ದರೂ ಇದರಲ್ಲಿ ಪ್ರೊಟೀನ್ ಅಂಶ ಕೂಡ ಇರುವುದರಿಂದ ಇದು ಶರೀರದಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡುತ್ತದೆ.

ನೋವು ನಿವಾರಕ: ಸಂಧಿ ನೋವು ಇರುವವರು ಮೊಟ್ಟೆ ಮೊಟ್ಟೆಯ ಹಳದಿ ತಿನ್ನುವುದರಿಂದ ಸಂಧಿ ನೋವು ಕಡಿಮೆಯಾಗುತ್ತದೆ.

ಕಣ್ಣಿಗೆ ಒಳ್ಳೆಯದು:
ಮೊಟ್ಟೆಯ ಹಳದಿ ಕಣ್ಣಿನ ಆರೋಗ್ಯ ಹೆಚ್ಚಿಸುವ ಆಹಾರವಾಗಿದೆ. ಅದರಲ್ಲೂ ಬೆಳೆಯುವ ಮಕ್ಕಳಲ್ಲಿ ಅವರ ಕಣ್ಣಿನ ದೃಷ್ಟಿ ಸಾಮರ್ಥ್ಯ ಹೆಚ್ಚಿಸುವಂತೆ ಮಾಡುತ್ತದೆ.

ಸ್ನಾಯು ನೋವು ನಿವಾರಿಸುತ್ತದೆ:
ಸ್ನಾಯು ನೋವು ಕಾಣಿಸಿಕೊಂಡರೆ ಮೊಟ್ಟೆಯ ಹಳದಿ ತಿಂದರೆ ಗುಣಮುಖವಾಗುವುದು.

ವಿಟಮಿನ್ ಬಿ12: ನರಗಳು ತಮ್ಮ ಕಾರ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ವಿಟಮಿನ್ ಬಿ12 ಅಗತ್ಯ. ಈ ವಿಟಮಿನ್ ಬಿ12 ಮೊಟ್ಟೆಯ ಹಳದಿಯಲ್ಲಿದೆ.

ಕಬ್ಬಿಣದಂಶ: ಗರ್ಭೀಣಿಯರಲ್ಲಿ ಕಬ್ಬಿಣದಂಶದ ಕೊರತೆ ಉಂಟಾದರೆ ಮೊಟ್ಟೆಯನ್ನು ತಿಂದು ಆ ಕೊರತೆಯನ್ನು ನೀಗಿಸಬಹುದು.

ಅಧಿಕ ರಕ್ತದೊತ್ತಡವಿರುವವರು, ಹೃದಯದ ಸಮಸ್ಯೆ ಇರುವವರು ಮೊಟ್ಟೆಯ ಹಳದಿಯನ್ನು ತಿನ್ನದಿರುವುದು ಒಳ್ಳೆಯದು.

English summary

Do Egg Yolks Have Health Benefits? | Tips For Health | ಮೊಟ್ಟೆಯ ಹಳದಿಯಲ್ಲಿ ಆರೋಗ್ಯಕರ ಗುಣವಿದೆಯೇ? | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Egg yolks also have health benefits. The yolk is the food for a growing chicken or duck embryo. Thus, egg yolks are rich in vital nutrients. That is why, in spite of its hazards, egg yolks can still be healthy.
X
Desktop Bottom Promotion