For Quick Alerts
ALLOW NOTIFICATIONS  
For Daily Alerts

ಮುಟ್ಟಿನ ಸಮಯದಲ್ಲಿ ವ್ಯಾಯಾಮ ಮಾಡಬಹುದೇ?

|

ಮುಟ್ಟಾಗುವುದು ಮಹಿಳೆಯರಲ್ಲಿ ಕಂಡು ಬರುವ ನೈಸರ್ಗಿಕ ಪ್ರಕ್ರಿಯೆ. ಮುಟ್ಟಾದರೆ ಮನೆಯಿಂದ ಹೊರಗಡೆ ಕೂರಬೇಕು, ಅಡುಗೆ ಮನೆಗೆ ಹೋಗಬಾರದು, ಶ್ರಮದ ಕೆಲಸ ಮಾಡಬಾರದು ಹೀಗೆ ಅನೇಕ ಮಿಥ್ಯೆಗಳು ನಮ್ಮ ನಡುವೆ ಇವತ್ತಿಗೂ ಪ್ರಾಮುಖ್ಯತೆಯನ್ನು ಪಡೆದಿದೆ. ಅದರಲ್ಲೊಂದು ವ್ಯಾಯಾಮ.

ಮುಟ್ಟಿನ ಸಮಯದಲ್ಲಿ ವ್ಯಾಯಾಮ ಮಾಡಬಹುದಾ? ಎಂಬ ಸಂಶಯ ಹೆಚ್ಚಿನವರಲ್ಲಿದೆ. ಕೆಲವರು ಮುಟ್ಟಿನ ಸಮಯದಲ್ಲಿ ಸಂಪೂರ್ಣವಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರೆ, ಮತ್ತೆ ಕೆಲವರು 'ಇಲ್ಲ ಯಾವುದೇ ವ್ಯಾಯಾಮ ಬೇಕಾದರೂ ಮಾಡಬಹುದು' ಎಂದು ಹೇಳುತ್ತಾರೆ.

ಗೊಂದಲವೇಕೆ? ಇದರ ಬಗ್ಗೆ ಕೂಲಂಕಷವಾಗಿ ನೋಡೋಣವೇ?

ಮುಟ್ಟಿನ ಸಮಯ ಮತ್ತು ವ್ಯಾಯಾಮ

ಮುಟ್ಟಿನ ಸಮಯ ಮತ್ತು ವ್ಯಾಯಾಮ

1. ಮುಟ್ಟಿನ ಸಮಯದಲ್ಲಿ ವ್ಯಾಯಾಮ ಮಾಡಬಾರದೆನ್ನುವುದು ಶುದ್ಧ ಸುಳ್ಳು. ಈ ಸಮಯದಲ್ಲಿ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಕೆಲವರಿಗೆ ವಿಪರೀತ ಹೊಟ್ಟೆ ನೋವಿನ ಸಮಸ್ಯೆ ಇರುತ್ತದೆ. ಆ ರೀತಿಯಿದ್ದರೆ ವ್ಯಾಯಾಮ ಮಾಡುವುದು, ಬಿಡುವುದು ನಿಮ್ಮ ನಿರ್ಧಾರಕ್ಕೆ ಬಿಟ್ಟದ್ದು, ಆದರೆ ಎಲ್ಲಾ ಬಗೆಯ ವ್ಯಾಯಾಮ ಮಾಡಬಹುದೇ ಎನ್ನುವುದನ್ನು ತಿಳಿಯಲು ಮುಂದೆ ಓದಿ.

2. ಎಲ್ಲಾ ಬಗೆಯ ವ್ಯಾಯಾಮ ಮಾಡಬಹುದೇ?

2. ಎಲ್ಲಾ ಬಗೆಯ ವ್ಯಾಯಾಮ ಮಾಡಬಹುದೇ?

ಕೆಲವರೂ ಎಲ್ಲಾ ಬಗೆಯ ವ್ಯಾಯಾಮ ಮಾಡಬಹುದು ಅಂತಾರೆ, ಆದರೆ ಅದು ಕೂಡ ತಪ್ಪು, ಮುಟ್ಟಿನ ಸಮಯದಲ್ಲಿ ಸರಳವಾದ ವ್ಯಾಯಾಮ ಮಾಡಿ, ನಡೆಯುವ ವ್ಯಾಯಾಮ, ಓಡುವ ವ್ಯಾಯಾಮ ಇವೆಲ್ಲಾ ಒಳ್ಳೆಯದು. ಮುಟ್ಟಿನ ಸಮಯದಲ್ಲಿ ಜಿಮ್ ಗೆ ಹೋಗುವವರು ಮುಂದಿನ ಸ್ಲೈಡ್ ನಲ್ಲಿ ಹೇಳಿರುವ ವಿಷಯವನ್ನು ಮರೆಯಬೇಡಿ.

3. ಮುಟ್ಟಿನ ಸಮಯದಲ್ಲಿ ಭಾರ ಎತ್ತಬಹುದೇ?

3. ಮುಟ್ಟಿನ ಸಮಯದಲ್ಲಿ ಭಾರ ಎತ್ತಬಹುದೇ?

ಜಿಮ್ ಗೆ ಹೋದರೆ ಭಾರವಾದ ವಸ್ತುಗಳನ್ನು ಎತ್ತಬೇಡಿ. ಮುಟ್ಟಿನ ಸಮಯದಲ್ಲಿ ಭಾರ ಎತ್ತುವ ವ್ಯಾಯಾಮ ಒಳ್ಳೆಯದಲ್ಲ. ಭಾರ ಎತ್ತುವ ವ್ಯಾಯಾಮವನ್ನು ಮುಟ್ಟಾದ 3-4 ದಿನಗಳ ಬಳಿಕ ಮಾಡುವುದು ಒಳ್ಳೆಯದು.

4. ಮೈ ತೂಕ ಬೇಗನೆ ಕಮ್ಮಿಯಾಗುವುದೇ?

4. ಮೈ ತೂಕ ಬೇಗನೆ ಕಮ್ಮಿಯಾಗುವುದೇ?

ಮುಟ್ಟಿನ ಸಮಯದಲ್ಲಿ ವ್ಯಾಯಾಮ ಮಾಡಿದರೆ ಮೈ ತೂಕ ಬೇಗನೆ ಕಮ್ಮಿಯಾಗುವುದು ಎಂದು ಕೆಲವರು ಹೇಳುವುದನ್ನು ಕೇಳಿದ್ದೇನೆ, ಆದರೆ ಹಾಗೇನು ಇಲ್ಲ, ವ್ಯಾಯಾಮ ಇತರ ಸಮಯದಲ್ಲು ನಿಮ್ಮ ಕ್ಯಾಲೋರಿಯನ್ನು ಎಷ್ಟು ಕರಗಿಸುತ್ತದೆಯೋ ಅಷ್ಟೇ ಕ್ಯಾಲೋರಿ ಮುಟ್ಟಿನ ಸಮಯದಲ್ಲೂ ಕರಗುವುದು. ಕ್ಯಾಲೋರಿ ಬೇಗನೆ ಕರಗುವುದು -ಬಿಡುವುದು ನೀವು ಮಾಡುವ ವ್ಯಾಯಾಮದಲ್ಲಿ ಇದೆಯೇ ಹೊರತು ಮುಟ್ಟಿನಿಂದಾಗಿ ಕರಗುವುದು ಎಂಬ ಮಾತಲ್ಲಿ ಹುರುಳಿಲ್ಲ.

ಯೋಗ ಮಾಡಬಹುದೇ

ಯೋಗ ಮಾಡಬಹುದೇ

5. ಇನ್ನು ಯೋಗ ಮಾಡಬಹುದೇ? ಎಂಬ ಸಂಶಯ ಮತ್ತೆ ಕೆಲವರಲ್ಲಿದೆ. ಯೋಗ ಮಾಡಬಹುದು, ಆದರೆ ತುಂಬಾ ಕ್ಲಿಷ್ಟಕರವಾದ ಯೋಗ ಮಾಡದಿರುವುದು ಒಳ್ಳೆಯದು. ಯೂಟ್ರಸ್ ಮೇಲೆ ಒತ್ತಡ ಬೀಳದಿರುವ ಯಾವುದೇ ವ್ಯಾಯಾಮ ಮಾಡಬಹುದು.

6. ಯೋಗದಿಂದ ರಕ್ತಸ್ರಾವ ಅಧಿಕವಾಗುವುದೇ?

6. ಯೋಗದಿಂದ ರಕ್ತಸ್ರಾವ ಅಧಿಕವಾಗುವುದೇ?

ಯೋಗ ಮಾಡಿದರೆ ರಕ್ತಸ್ರಾವ ಅಧಿಕವಾಗುವುದು ಎಂದು ಹೇಳುತ್ತಾರೆ, ಆದರೆ ಈ ಸಮಯದಲ್ಲಿ ಕಾಡುವ ಸ್ನಾಯು ಸೆಳೆತ ವ್ಯಾಯಾಮ ಮಾಡುವುದರಿಂದ ಕಡಿಮೆಯಾಗುವುದು ಎಂದು ವೈದ್ಯರು ಸಲಹೆ ನೀಡುತ್ತಾರೆ.

 7. ಮುಟ್ಟಿನ ಸಮಯದಲ್ಲಿ ವ್ಯಾಯಾಮದಿಂದ ಲಾಭ

7. ಮುಟ್ಟಿನ ಸಮಯದಲ್ಲಿ ವ್ಯಾಯಾಮದಿಂದ ಲಾಭ

ಮುಟ್ಟಿನ ಸಮಯದಲ್ಲಿ ವ್ಯಾಯಾಮ ಮಾಡಿದರೆ Menstrual Cycle ಸರಿಯಾಗಿ ನಡೆಯಲು ಸಹಾಯವಾಗುವುದು.

English summary

Can We Do Exercise, Yoga When We Have Periods?

Your menstrual cycle may be a drag on your mood, but it doesn't have to slow down your workout schedule. It is totally wrong, in fact i would say that it is a myth that one should do anything during those days.
X
Desktop Bottom Promotion