For Quick Alerts
ALLOW NOTIFICATIONS  
For Daily Alerts

ಊಟ ಮಾಡಿದ ತಕ್ಷಣ ಮಾಡಬಾರದ 7 ಕಾರ್ಯಗಳು!

|

ನಮ್ಮಲ್ಲಿ ಕೆಲವೊಂದು ಅಭ್ಯಾಸಗಳಿರುತ್ತದೆ. ನಾವು ಯೋಚಿಸುತ್ತೇವೆ ಒಳ್ಳೆಯ ಅಭ್ಯಾಸಗಳಿಂದ ಯಾವುದೇ ಹಾನಿ ಉಂಟಾಗುವುದಿಲ್ಲ, ಧೂಮಪಾನ, ಮದ್ಯಪಾನ ಈ ರೀತಿಯ ಕೆಟ್ಟ ಅಭ್ಯಾಸಗಳಿದ್ದರೆ ಮಾತ್ರ ದೇಹದ ಆರೋಗ್ಯ ಹಾಳಾಗುತ್ತದೆ ಎಂದು ಯೋಚಿಸುತ್ತೇವೆ. ಆದರೆ ಕೆಲವೊಂದು ನಮ್ಮ ಒಳ್ಳೆಯ ಅಭ್ಯಾಸಗಳು ಕೂಡ ದೇಹಕ್ಕೆ ಅಪಾಯವನ್ನು ತರಬಹುದು!

ಹೌದು ಹಣ್ಣು ತಿನ್ನುವುದು ಒಳ್ಳಯ ಅಭ್ಯಾಸ ತಾನೇ, ಆದರೆ ಊಟದ ನಂತರ ಹಣ್ಣು ತಿಂದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇಲ್ಲಿ ನಾವು ಊಟ ಮಾಡಿದ ನಂತರ ತಕ್ಷಣ ಮಾಡಬಾರದಂತಹ ಕೆಲವೊಂದು ಕಾರ್ಯಗಳ ಬಗ್ಗೆ ಮಾಹಿತಿಯನ್ನು ಈ ಕೆಳಗೆ ನೀಡಿದ್ದೇವೆ.

1. ಧೂಮಪಾನ

1. ಧೂಮಪಾನ

ಊಟ ಆದ ತಕ್ಷಣ ಧೂಮಪಾನ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ, ಧೂಮಪಾನ ಮಾಡುವುದೇ ಅನಾರೋಗ್ಯಕರ. ಆದರೆ ಊಟ ಆದ ತಕ್ಷಣ 1 ಸಿಗರೇಟ್ ಸೇದಿದರೆ ಅದು 10 ಸಿಗರೇಟ್ ಗೆ ಸಮವಾಗಿರುತ್ತದೆ.

2. ಹಣ್ಣುಗಳನ್ನು ತಿನ್ನುವುದು

2. ಹಣ್ಣುಗಳನ್ನು ತಿನ್ನುವುದು

ಹೆಚ್ಚಿನವರಿಗೆ ಊಟ ಮಾಡಿದ ತಕ್ಷಣ ಹಣ್ಣುಗಳನ್ನು ತಿನ್ನುವ ಅಭ್ಯಾಸವಿರುತ್ತದೆ. ಆದರೆ ಈ ಅಭ್ಯಾಸ ಒಳ್ಳೆಯದಲ್ಲ. ಊಟ ಆದ ತಕ್ಷಣ ಹಣ್ಣು ತಿಂದರೆ ಹೊಟ್ಟೆಯಲ್ಲಿ ಗಾಳಿ ತುಂಬಿ, ಹೊಟ್ಟೆ ದಪ್ಪಗಾಗುವುದು. ಆದ್ದರಿಂದ ಊಟ ಮಾಡುವ 1 ಗಂಟೆ ಮೊದಲು ಅಥವಾ ಊಟ ಮಾಡಿ 2-3 ಗಂಟೆಯ ಬಳಿಕ ಹಣ್ಣುಗಳನ್ನು ತಿನ್ನಿ.

3. ಟೀ ಕುಡಿಯುವುದು

3. ಟೀ ಕುಡಿಯುವುದು

ಟೀಯಲ್ಲಿ ಆಸಿಡ್ ಅಂಶವಿರುತ್ತದೆ. ಟೀ ಕುಡಿದರೆ ಆಹಾರದಲ್ಲಿರುವ ಪ್ರೊಟೀನ್ ಜೀರ್ಣವಾಗಲು ತೊಂದರೆ ಉಂಟಾಗುತ್ತದೆ. ಆದ್ದರಿಂದ ಊಟ ಮಾಡಿದ ತಕ್ಷಣ ಟೀ ಕುಡಿಯವುದು ಒಳ್ಳೆಯ ಅಭ್ಯಾಸವಲ್ಲ.

6. ನಡೆಯುವುದು

6. ನಡೆಯುವುದು

ಊಟದ ನಂತರ ನಡೆಯುವುದು ಒಳ್ಳೆಯದು ಎಂದು ಹೇಳುವುದನ್ನು ಕೇಳಿರಬಹುದು. ಆದರೆ ಊಟ ಆದ ತಕ್ಷಣ ನಡೆಯುವುದರಿಂದ ದೇಹಕ್ಕೆ ಆಹಾರದಲ್ಲಿರುವ ಪೋಷಕಾಂಶಗಳನ್ನು ಸಂಪೂರ್ಣವಾಗಿ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಊಟ ಮಾಡಿ ಸ್ವಲ್ಪ ಹೊತ್ತಿನ ಬಳಿಕ ನಡೆಯುವುದು ಒಳ್ಳೆಯದು.

5. ಸ್ನಾನ ಮಾಡುವುದು

5. ಸ್ನಾನ ಮಾಡುವುದು

ಊಟ ಮಾಡಿದ ನಂತರ ಸ್ನಾನ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಊಟ ಮಾಡಿದ ನಂತರ ಸ್ನಾನ ಮಾಡಿದಾಗ ಕೈ ಮತ್ತು ಕಾಲುಗಳಲ್ಲಿ ರಕ್ತ ಸಂಚಾರ ಹೆಚ್ಚಾಗಿ ಹೊಟ್ಟೆಭಾಗದಲ್ಲಿ ರಕ್ತ ಸಂಚಾರ ಕಡಿಮೆಯಾಗುತ್ತದೆ. ಇದರಿಂದ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗುತ್ತದೆ.

6. ಬೆಲ್ಟ್ ಅನ್ನು ಸಡಿಲಗೊಳಿಸುವುದು

6. ಬೆಲ್ಟ್ ಅನ್ನು ಸಡಿಲಗೊಳಿಸುವುದು

ಸ್ವಲ್ಪ ಅಧಿಕ ಊಟ ಮಾಡಿದಾಗ ಹೊಟ್ಟೆ ತುಂಬಿ ಬೆಲ್ಟ್ ಸ್ವಲ್ಪ ಬಿಗಿಯಾದಂತೆ ಅನಿಸಿದರು, ಬೆಲ್ಟ್ ಬಿಚ್ಚಬೇಡಿ. ಬೆಲ್ಟ್ ಸಡಿಲಗೊಳಿಸಿದರೆ ದೊಡ್ಡ ಕರುಳು ಸ್ವಲ್ಪ ತಿರುಗಿದಂತಾಗಿ ನೋವು ಕಂಡು ಬರಬಹುದು.

7. ನಿದ್ದೆ

7. ನಿದ್ದೆ

ಊಟದ ನಂತರ ನಿದ್ದೆ ಮಾಡಿದರೆ ಜೀರ್ಣಕ್ರಿಯೆ ತೊಂದರೆ ಉಂಟಾಗುತ್ತದೆ. ಈ ರೀತಿ ಮಾಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ.

English summary

7 Dangerous Things Should Not Do After A Meal | Tips For Health | ಊಟದ ನಂತರ ಮಾಡಬಾರದ 7 ಕಾರ್ಯಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

There are things that we should not do after meals. example eating fruits, sleep..ext. These things will do adverse effect on digestive system.
X
Desktop Bottom Promotion