For Quick Alerts
ALLOW NOTIFICATIONS  
For Daily Alerts

ಪಾದಗಳಲ್ಲಿ ಸಮಸ್ಯೆಯೇ? ಇಲ್ಲಿದೆ ಪರಿಹಾರ

|
Foot Problem And Solution
ಹೆಚ್ಚಿನವರಲ್ಲಿ ಪಾದಗಳಲ್ಲಿ ಸಮಸ್ಯೆ ಕಂಡು ಬರುತ್ತದೆ. ಪಾದಗಳಲ್ಲಿ ಬಿರುಕು, ತುರಿಕೆ, ಪಾದ ತನ್ನ ಮೃದುತ್ವವನ್ನು ಕಳೆದುಕೊಳ್ಳುವುದು ಈ ರೀತಿಯ ಸಮಸ್ಯೆಗಳು ನಾನಾ ಕಾರಣಗಳಿಂದ ಉಂಟಾಗಬಹುದು.

ಪಾದಗಳ ಆರೈಕೆ ಸರಿಯಾಗಿ ಮಾಡದಿದ್ದರೆ ಕಾಯಿಲೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಹೀಗೆ ನಾನಾ ಕಾರಣಗಳಿಂದ ಪಾದಗಳಲ್ಲಿ ಸಮಸ್ಯೆ ಕಂಡು ಬರುತ್ತದೆ. ಅದರಲ್ಲೂ ಈ ಕೆಳಗಿನ ಸಮಸ್ಯೆಗಳು ಕಂಡು ಬಂದರೆ ಪರಿಹಾರವೇನು ಎಂದು ನೋಡೋಣ ಬನ್ನಿ.

1. ಪಾದಗಳಲ್ಲಿ ಬಿರುಕು: ಪಾದಗಳಲ್ಲಿ ಬಿರುಕು ಉಂಟಾದರೆ ರಕ್ತ ಬರಬಹುದು ಮತ್ತು ಕಾಲು ತುಂಬಾ ನೋವಾಗುತ್ತದೆ. ಈ ರೀತಿಯ ಬಿರುಕು ಉಂಟಾದರೆ ಕಾಲುಗಳನ್ನು ಚೆನ್ನಾಗಿ ತೊಳೆದು ಎಣ್ಣೆ ಹಚ್ಚಿ ಮಸಾಜ್ ಮಾಡಬೇಕು. ತುಂಬಾ ದೂಳಿನಲ್ಲಿ ಓಡಾಡಬಾರದು ಮತ್ತು ಕಾಲಿಗೆ ಸಾಕ್ಸ್ ಹಾಕಿದರೆ ಒಳ್ಳೆಯದು. ಈ ರೀತಿ ಮಾಡಿದರೆ ಪಾದಗಳಲ್ಲಿ ಬಿರುಕು ಕಂಡು ಬರುವುದಿಲ್ಲ.

2. ಬೆರಳುಗಳ ನಡುವಿನ ಚರ್ಮ ಕೊಳೆಯುವುದು: ತುಂಬಾ ಹೊತ್ತು ನೀರಿನಲ್ಲಿ ನಿಂತು ಕೆಲಸ ಮಾಡುವವರಿಗೆ ಮತ್ತು ತುಂಬಾ ಬೆವರುವವರಲ್ಲಿ ಎರಡು ಬೆರಳುಗಳ ಮಧ್ಯೆ ಚರ್ಮವು ಕೊಳೆಯಲಾರಂಭಿಸುತ್ತದೆ. ಈ ರೀತಿ ಸಮಸ್ಯೆ ಇದ್ದರೆ ಹೊರಗಡೆ ಹೋಗಿ ಬಂದ ತಕ್ಷಣ ಕಾಲುಗಳನ್ನು ತೊಳೆದು ಬೆರಳುಗಳ ಮಧ್ಯೆ ಕೂಡ ಟವಲ್ ನಿಂದ ಉಜ್ಜಿ ಮುಲಾಮ್ ಅಥವಾ ಎಣ್ಣೆ ಹಚ್ಚಿ ಬೆರಳುಗಳು ಒಂದಕ್ಕೊಂದು ಅಂಟದಿರಲು ಮಧ್ಯೆದಲ್ಲಿ ಹತ್ತಿಯನ್ನು ಉಂಡೆ ಮಾಡಿ ಇಡಬೇಕು. ಈ ರೀತಿ ಮಾಡಿದರೆ ಈ ರೀತಿಯ ಸಮಸ್ಯೆ ಬೇಗನೆ ಗುಣಮುಖವಾಗುತ್ತದೆ.

3. ಒಣ ತ್ವಚೆ: ತ್ವಚೆಯಲ್ಲಿ ಸ್ವಲ್ಪವೂ ಎಣ್ಣೆ ಪಸೆ ಇಲ್ಲದಿದ್ದರೆ ತ್ವಚೆ ಮತ್ತು ಪಾದ ತುಂಬಾ ಒಣಗುವುದು. ಪಾದ ಒಣಗಿದರೆ ಬಿರುಕಿನ ಸಮಸ್ಯೆಗಳು ಕಂಡು ಬರುತ್ತದೆ. ಆದ್ದರಿಂದ ಪಾದಗಳಿಗೆ ಎಣ್ಣೆಯಿಂದ ಮಸಾಜ್ ಮಾಡಿದರೆ ಒಳ್ಳೆಯದು. ಸ್ನಾನ ಮಾಡುವ ನೀರಿಗೆ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಸ್ನಾನ ಮಾಡಿದರೆ ತ್ವಚೆ ಎಣ್ಣೆಯಂಶವನ್ನು ಹೀರಿಕೊಂಡು ತ್ವಚೆ ಒಣಗುವ ಸಮಸ್ಯೆ ಕಡಿಮೆಯಾಗುವುದು.

4. ಚಪ್ಪಲಿ ಕಚ್ಚಿ ಗಾಯ: ಹೊಸ ಚಪ್ಪಲಿ ತಂದಾಗ ಕೆಲವೊಂದು ಚಪ್ಪಲಿಗಳು ಅಥವಾ ಶೂ ಕಾಲಿಗೆ ಕಚ್ಚುತ್ತದೆ. ಅದರಲ್ಲೂ ತುದಿ ಸ್ವಲ್ಪ ಚೂಪಾಗಿರುವ ಶೂ ತಂದರೆ ಮೊದಲ ಒಂದು ವಾರಗಳ ಕಾಲ 3 ಗಂಟೆಯವರೆಗೆ ಮಾತ್ರ ಈ ಶೂ ಬಳಸಿ. ದಿನಾ ಪೂರ್ತಿ ಬಳಸಿದರೆ ಶೂ ಕಚ್ಚಿ ಗಾಯವಾಗುವುದು. ಒಂದು ವಾರದಲ್ಲಿ ಶೂ ಕಾಲಿಗೆ ಸರಿಯಾಗಿರುತ್ತದೆ. ಆಗ ದಿನಪೂರ್ತಿ ಬಳಸಿದರೂ ಎನೂ ಆಗುವುದಿಲ್ಲ.

5. ಬೆರಳುಗಳಲ್ಲಿ ಕೊಳೆ ತುಂಬುವುದು: ದಿನಾ ಶೂ ಹಾಕುವವರು ಉಗುರಗಳ ಬಗ್ಗೆ ಸ್ವಲ್ಪ ಗಮನ ಕೊಡಬೇಕು. ಇಲ್ಲದಿದ್ದರೆ ಉಗುರುಗಳಲ್ಲಿ ಕೊಳೆ ತುಂಬಿಕೊಂಡು ಆ ಉಗುರು ಹಾಳಾಗುತ್ತದೆ. ಆದ್ದರಿಂದ ಉಗುರುಗಳಲ್ಲಿ ಕೊಳೆ ನಿಲ್ಲದಿರಲು ದಿನ ಬ್ರೆಷ್ ಹಾಕಿ ಉಜ್ಜಬೇಕು. ಉಗುರನ್ನು ನೀಟಾಗಿ ಕತ್ತರಿಸಬೇಕು.

ಸಲಹೆ: ಶೂಗಳಿಗೆ ಸ್ವಲ್ಪ ಅಡುಗೆ ಸೋಡಾ ಚಿಮುಕಿಸಿ ಒಣಗಿಸಿ ನಂತರ ಹಾಕಿದರೆ ಶೂ ಕೆಟ್ಟ ವಾಸನೆ ಬೀರುವುದಿಲ್ಲ.

English summary

Foot Problem And Solution | Tips For Beauty | ಪಾದಗಳಲ್ಲಿ ಸಮಸ್ಯೆ ಮತ್ತು ಪರಿಹಾರ | ಸೌಂದರ್ಯಕ್ಕಾಗಿ ಕೆಲ ಸಲಹೆ

Having a clean and soft feet is a dream of every one. There are few foot skin problems that are commonly faced by women. Lets check out...
X
Desktop Bottom Promotion