Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೌನ್ ಬನೇಗಾ ಕರೋಡ್ ಪತಿಯಲ್ಲಿ ಗುರುವಾರ ಏನೆಲ್ಲ ನಡೆಯಿತು, ಗೊತ್ತಾ?

ಕೆಬಿಸಿ ನಿನ್ನೆಗೆ ಯಶಸ್ವಿಯಾಗಿ ಮೊದಲ ವಾರ ಪೂರೈಸಿದೆ. 'ಕೌನ್ ಬನೇಗಾ ಕರೋಡ್ ಪತಿ'ಯ ಅಧಿಪತಿ ಅಮಿತಾಬ್ ಬಚ್ಚನ್ ಸಾಮಾನ್ಯವಾಗಿ ದಕ್ಷಿಣ ಭಾರತದವರನ್ನು ಹಾಟ್ ಸೀಟ್ ಸಮೀಪಕ್ಕೂ ಬಿಟ್ಟುಕೊಳ್ಳುವುದಿಲ್ಲ ಎಂಬ ಅಪವಾದದ ನಡುವೆಯೂ ಮೊದಲ ವಾರದಲ್ಲಿ ಕನ್ನಡತಿ ರಾಜಲಕ್ಷ್ಮಿ ಕುಮಾರ್ 6.4 ಲಕ್ಷ ರುಪಾಯಿ ಗೆದ್ದುಕೊಂಡಿದ್ದಾರೆ. ರಾಜಲಕ್ಷ್ಮಿ ಪ್ರಸ್ತುತ ಗುಜರಾತಿನ ವಾಪಿಯಲ್ಲಿ ಪತಿ ಮತ್ತು ಪುತ್ರನೊಂದಿಗೆ ವಾಸವಾಗಿದ್ದಾರೆ.
3ನೇ ಪ್ರಶ್ನೆಯ ವೇಳೆಗೇ ರಾಜಲಕ್ಷ್ಮಿ 'ಆಡಿಯನ್ಸ್ ಪೋಲ್ ಲೈಫ್ ಲೈನ್' ನೆರವು ಪಡೆದರು. ಅದೂ ಪ್ರಶ್ನೆ ಯಾವುದರ ಬಗ್ಗೆ ಅಂತ ಕೇಳ್ತೀರಾ? ನಮ್ಮ ನಿಮ್ಮ ಅಚ್ಚುಮೆಚ್ಚಿನ ಉಪ್ಪಿಟ್ಟು ಬಗ್ಗೆ ಕಣ್ರಿ. ಈ ಪ್ರಶ್ನೆಯ ಮೂಲಕ ಮಹಾನ್ ತಿಂಡಿಯಾದ ಉಪ್ಪಿಟ್ಟಿನ ಬಗ್ಗೆ ಮಹಾನ್ ನಟ ಅಮಿತಾಬ್ ಒಂದು ಕುತೂಹಲಕಾರಿ ಸಂಗತಿಯನ್ನು ತಿಳಿಸಿದರು. ಉಪ್ಪು ಮತ್ತು ಹಿಟ್ಟು ಸೇರಿದರೆ ಉಪ್ಪಿಟ್ಟು ಆಗುತ್ತದೆ. ಆದರೆ ಇದನ್ನು ತಮಿಳಿನಲ್ಲಿ ಕೇಳಿದ್ದರಿಂದ ರಾಜಲಕ್ಷ್ಮಿ ಸ್ವಲ್ಪ ಎಡವಿದರು. ಅಮಿತಾಬ್ ರ ಪ್ರಶ್ನೆಗೆ ಡಿ. ಉಪ್ಪಮಾ ರೈಟ್ ಆನ್ಸರ್ ಆಗಿತ್ತು!
ಇರ್ಲಿ ಬಿಡಿ ಮುಂದೇನಾಯಿತು ಕೇಳಿ: ಮತ್ತೊಂದು ಪ್ರಶ್ನೆಗೆ ಕನ್ನಡದವರೇ ಆದ ಡಾ. ಅಜಿತ್ ರಾನಡೆ ಅವರು 'ಎಕ್ಸ್ ಪರ್ಟ್ ಒಪೀನಿಯನ್' ನೀಡಿ ರಾಜಲಕ್ಷ್ಮಿ ಅವರನ್ನು ಪಾರು ಮಾಡಿದರು. ಹೀಗೇ ಪ್ರಶ್ನಾವಳಿ ಸಾಗಿದ್ದಾಗ ಸ್ಪರ್ಧಾಳು ಒಂದು ಕಡೆ ಬಂತು ಥಟ್ಟನೆ ನಿಂತುಬಿಟ್ಟರು. ಆಗ ಅವರಿಗೆ ಥಟ್ಟಂತ ಜ್ಞಾಪಕಕ್ಕೆ ಬಂದಿದ್ದು ಮತ್ತೊಬ್ಬ ಕನ್ನಡಿಗ. 'ಕನ್ನಡದ ಕ್ವಿಜ್ ಮಾಸ್ಟರ್' ಅಮಿತಾಭ್ ಅಥವಾ ಸಿದ್ಧಾರ್ಥ ಬಸು ಎಂದೂ ಇವರನ್ನು ಕರೆಯಬಹುದು. ಅವರೇ ಚಂದನ ವಾಹಿನಿಯ 'ಥಟ್ ಅಂತ ಹೇಳಿ' ಕಾರ್ಯಕ್ರಮದ ಮೂಲಕ ಇತಿಹಾಸ ನಿರ್ಮಿಸಿರುವ ಡಾ. ನಾ. ಸೋಮೇಶ್ವರ್ ಅವರು.
ಯಾಕೋ ನಾ. ಸೋಮೇಶ್ವರ್ ಅವರೂ ಎಡವಿದರು. ಅದರೊಂದಿಗೆ ರಾಜಲಕ್ಷ್ಮಿ ಅವರು 6.4 ಲಕ್ಷ ಬಹುಮಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕಾರ್ಯಕ್ರಮದಲ್ಲಿ ಉತ್ತಮ ಸ್ಪರ್ಧೆ ನೀಡಿದ ರಾಜಲಕ್ಷ್ಮಿಗೆ ಶುಭಾಶಯಗಳು.



Click it and Unblock the Notifications
