Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಇದ್ಯಾವ ನ್ಯಾಯ, ನ್ಯಾ.ನಿಟ್ಟೆ ಸಂತೋಷ್ ಹೆಗಡೆ ಅವರೇ, ಉತ್ತರಿಸಿ...

ಯುವರ್ ಆನರ್. ನನಗೆ ನಿಮ್ಮ ಬಗ್ಗೆಯೇ ಸ್ವಲ್ಪ ಸಂಶಯ ಮೂಡಿದೆ. ದಯವಿಟ್ಟು ಅದನ್ನು ದೂರ ಮಾಡಿ. ಅಲ್ಲ ನೀವೇ ಹೇಳಿದ್ದೀರಿ. ನೀವು ತನಿಖೆ ನಡೆಸಿದ ಅವಧಿಯಲ್ಲಿ ರಾಜ್ಯದಲ್ಲಿ 16,085 ಕೋಟಿ ರುಪಾಯಿ ಮೌಲ್ಯದ ಗಣಿ ಲೂಟಿ ಆಗಿದೆ ಎನ್ನುತ್ತಿದ್ದೀರಿ. ಅದರಲ್ಲಿ 'ಯಡಿಯೂರಪ್ಪ ಸಂಶಯಾಸ್ಪದ ರೀತಿಯಲ್ಲಿ 40 ಕೋಟಿ ರುಪಾಯಿ ಪಡೆದಿದ್ದಾರೆ' ಎಂದು ಹೇಳಿದ್ದೀರಿ.
ಸೋ, ಇಡೀ ವರದಿಯಲ್ಲಿ ನೀವು ಹೇಳುತ್ತಿರುವುದು ಯಡಿಯೂರಪ್ಪಗೆ ಅಕ್ರಮ ಗಣಿಯಿಂದ 40 ಕೋಟಿ ರು ಮಾತ್ರ ಸಂದಾಯವಾಗಿದೆ ಎಂದೇ? ಅಲ್ಲಿಗೆ ಯಡಿಯೂರಪ್ಪಗೆ 40 ಕೋಟಿ ಬಿಟ್ಟರೆ ಒಂದು ನಯಾ ಪೈಸೆಯೂ ಸಂದಾಯವಾಗಿಲ್ಲವೇ? ಅಂದರೆ ನಿಮ್ಮ 16,085 ಕೋಟಿ ರುಪಾಯಿ ಮೊತ್ತದಲ್ಲಿ ಯಡ್ಡಿ ಹೊಡೆದಿದ್ದು ಕೇವಲ 40 ಕೋಟಿ ಮಾತ್ರವೇ?
ಸ್ವಾಮಿ ಇಡೀ ಪ್ರಪಂಚಕ್ಕೆ ಗೊತ್ತಿರುವ ಗುಟ್ಟೊಂದನ್ನು ನಿಮಗೆ ಹೇಳುವೆ ಕೇಳಿಸಿಕೊಳ್ಳಿ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದುಕೊಂಡು 'ಗಣಿಗಾರಿಕೆ' ಯಿಂದ ಕೋಟ್ಯಂತರ ರುಪಾಯಿ ಗಳಿಸಿದ್ದಾರೆ. ಇದರಲ್ಲಿ ರಾಜ್ಯದ ಜನತೆಗೆ ಯಾವುದೇ ಅನುಮಾನವಿಲ್ಲ. ಅಂತಹುದರಲ್ಲಿ ನೀವ್ಯಾಕೆ ಬರೀ 40 ಕೋಟಿ ಎಂದು ಹೇಳುತ್ತಿದ್ದೀರಿ.



Click it and Unblock the Notifications
