Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಹನಿಮೂನ್‌ಗೆ ಗೋವಾಗೆ ಕರೆದುಕೊಂಡು ಹೋಗುತ್ತೇನೆ ಎಂದ ಪತಿ ಕರೆದುಕೊಂಡು ಹೋಗಿದ್ದು ಅಯೋಧ್ಯೆಗೆ : ವಿಚ್ಛೇದನ ಕೇಳಿದ ಪತ್ನಿ
ಇತ್ತೀಚಿನ ದಿನಗಳಲ್ಲಿ ಚಿತ್ರ-ವಿಚಿತ್ರ ಕಾರಣಕ್ಕೆ ವಿಚ್ಛೇದನ ಆಗುತ್ತಿದೆ, ಆದರೆ ಈ ವಿಚ್ಛೇದನಕ್ಕೆ ಕಾರಣ ಮಾತ್ರ ವಿಚಿತ್ರದಲ್ಲಿ ವಿಚಿತ್ರವಾಗಿದೆ. ಗಂಡ ಹನಿಮೂನ್‌ಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಅಯೋಧ್ಯೆಗೆ ಕರೆದುಕೊಂಡು ಹೋಗಿದ್ದಕ್ಕೆ ಇವರ ದಾಂಪತ್ಯ ಜೀವನ ಕೋರ್ಟ್ ಕಟೆಕಟೆ ಹತ್ತಿದೆ, ಅಷ್ಟಕ್ಕೂ ಏನಿದು ಈ ಸಂಸಾರ ವಿಚಿತ್ರ ಕತೆ ವ್ಯಥೆ ನೋಡೋಣ ಮಾಡೋಣ ಬನ್ನಿ...

ಹನಿಮೂನ್ ಕನಸು ಚಮರಿದಾಗ
ಮದುವೆಯಾದ ಬಹುತೇಕ ಜೋಡಿಗೆ ಸ ಹನಿಮೂನ್‌ಗೆ ಹೋಗಬೇಕು ಎಂಬ ಆಸೆ ಇರುತ್ತದೆ, ಗಂಡ ನನ್ನನ್ನು ಯಾವುದಾದರು ಸ್ಥಳದ ಹೆಸರು ಹೇಳಿ ಅಲ್ಲಿಗೆ ಕರೆದುಕೊಂಡು ಹೋಗುತ್ತೀನಿ ಎಂದಾಗ ನೂರಾರು ಕನಸುಗಳು ಗರಿಕೆದರುವುದು. ಹನಿಮೂನ್‌ಗಾಗಿ ಶಾಪಿಂಗ್ ಎಲ್ಲಾ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ರೊಮ್ಯಾಂಟಿಕ್ ಫೋಟೋಗಳನ್ನು ಅಪ್ಲೋಟ್ ಮಾಡಬೇಕು ಎಂದೆಲ್ಲಾ ಕನಸು ಕಂಡಿರುತ್ತಾರೆ, ಅದೇ ಹನಿಮೂನ್‌ಗೆ ಹೋಗದೇ ಇದ್ದಾಗ ಬರುವ ಕೋಪ ಅಷ್ಟಿಷ್ಟಲ್ಲ, ಆದರೆ ಈಕೆ ಮಾತ್ರ ಒಂದು ಸ್ಟೆಪ್ ಮುಂದೆ ಹೋಗಿ ವಿಚ್ಛೇದನ ಬೇಕೆಂದು ಕೇಳಿದ್ದಾಳೆ.
ಮದುವೆಯಾಗಿ 5 ತಿಂಗಳಾಗಿತ್ತು ಅಷ್ಟೇ
ಈ ಜೋಡಿ 2023 ಆಗಸ್ಟ್‌ನಲ್ಲಿ ಮದುವೆಯಾಗಿದ್ದರು. ಭೋಪಲ್‌ನ ಪಿಪ್ಲಾನಿ ಎಂಬಲ್ಲಿ ವಾಸಿಸುತ್ತಿರುವವರು. ಗಂಡ ಹನಿಮೂನ್‌ಗೆ ಗೋವಾಗೆ ಕರೆದುಕೊಂಡು ಹೋಗುತ್ತೇನೆ ಎಂದಿದ್ದ, ಈಕೆಯೂ ಗೋವಾದಲ್ಲಿ ಬೀಚ್‌ನಲ್ಲಿ ಗಂಡನ ಕೈ ಕೈ ಹಿಡಿದು ನಡೆಯುವ ಕನಸು ಕಂಡಿದ್ದಳು, ಆದರೆ ಗಂಡ ಕರೆದುಕೊಂಡು ಹೋಗಿದ್ದು ಅಯೋಧ್ಯೆಗೆ!
ಕೈತುಂಬಾ ಸಂಬಳ ಪಡೆಯುತ್ತಿದ್ದ ಗಂಡ
ಗಂಡ ಐಟಿ ಕೆಲಸ ಮಾಡುತ್ತಿರುವುದರಿಂದ ಸಂಬಳ ಚೆನ್ನಾಗಿಯೇ ಇತ್ತು, ಮೊದಲಿಗೆ ಆಕೆ ವಿದೇಶಕ್ಕೆ ಟ್ರಿಪ್ ಹೋಗುವ ಆಸೆ ವ್ಯಕ್ತಪಡಿಸಿದ್ದಳು, ಅವನು ನನ್ನ ಪೋಷಕರಿಗೆ ಹುಷಾರಿಲ್ಲ ವಿದೇಶಕ್ಕೆ ಬೇಡ ಗೋವಾ, ದಕ್ಷಿಣ ಭಾರತಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದಿದ್ದ, ಆಕೆಯೂ ಒಪ್ಪಿಕೊಂಡಿದ್ದಳು, ಆದರೆ ಆತ ಕೊನೆಗೆ ತನ್ನ ಪ್ಲ್ಯಾನ್ ಚೇಂಜ್ ಮಾಡಿ ಅಯೋಧ್ಯೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿಂದ ಬಂದವಳೇ ಸೀದಾ ಫ್ಯಾಮಿಲಿ ಕೋರ್ಟ್‌ಗೆ ಹೋಗಿ ವಿಚ್ಛೇಧನಕ್ಕೆ ಅರ್ಜಿ ಹಾಕಿದ್ದಾಳೆ, ಇದೀಗ ಕೋರ್ಟ್ ಇವರಿಬ್ಬರಿಗೆ ಕೌನ್ಸಿಲಿಂಗ್ ನೀಡಿ ಮನವೊಲಿಸಲು ಪ್ರಯತ್ನ ಮಾಡಿದೆ.
ಹೊಂದಾಣಿಕೆಯೇ ಸಂಸಾರದ ಗುಟ್ಟು
ಇಬ್ಬರು ಒಬ್ಬರನ್ನೊಬ್ಬರು ಹೊಂದಿಕೊಂಡು ಹೋಗಲು ಪ್ರಯತ್ನಸಬೇಕು, ಅಲ್ಲದೆ ಆತ ಅಯೋಧ್ಯೆಗೆ ಕರೆದುಕೊಂಡು ಹೋಗುವ ಮುನ್ನ ಪತ್ನಿಯ ಮನವೊಲಿಸಬೇಕಿತ್ತು ಅಥವಾ ಅಯೋಧ್ಯೆಯಿಂದ ಬಂದ ತಕ್ಷಣ ಗೋವಾ ಪ್ಲ್ಯಾನ್ ಮಾಡಬೇಕಾಗಿತ್ತು, ಆದರೆ ಆತ ಅವಳ ಭಾವನೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾನೆ, ಆಕೆಗೆ ಅಯೋಧ್ಯೆಗೆ ಹೋದ ಬಗ್ಗೆ ಬೇಸರವಿರಲ್ಲ, ಬಹುಶಃ ಆತನ ವರ್ತನೆ ಬಗ್ಗೆ ಬೇಸರವಿದ್ದಿರಬೇಕು, ಹಾಗಾಗಿ ಅವಳ ವಿಚ್ಛೇದನ ಪಡೆಯಲು ಬಯಸಿರಬಹುದು.



Click it and Unblock the Notifications
