Latest Updates
-
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್! -
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ -
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು!
ಬಿಸಿ-ಬಿಸಿ ಅಪ್ಪುಗೆಯಲ್ಲಿ ಅಡಗಿದೆ ಹತ್ತಾರು ಪ್ರಯೋಜನ
ಒಂದು ಬಿಸಿ ಅಪ್ಪುಗೆ ನಮ್ಮ ಪ್ರೀತಿಪಾತ್ರರಿಂದ ಪಡೆಯಬೇಕೆಂಬ ಆಸೆ ಯಾರಿಗೆ ಇರುವುದಿಲ್ಲ. ಅಮ್ಮ-ಅಪ್ಪನ ಅಪ್ಪುಗೆ ಮಗುವಿಗೆ, ಸಂಗಾತಿಯ ಅಪ್ಪುಗೆ, ಸ್ನೇಹಿತರ ಅಪ್ಪುಗೆ ಹೀಗೆ ಪ್ರತಿ ಅಪ್ಪುಗೆಗೂ ಪದಗಳಿಗೆ ನಿಲುಕದ ಹಲವು ಭಾವನೆಗಳು ಇರುತ್ತವೆ. ವೈದ್ಯರು ಮತ್ತು ಮನೋವಿಜ್ಞಾನಿಗಳು ಸಹ ಅಪ್ಪುಗೆಯ ಪರ ವಕಾಲತ್ತು ವಹಿಸುತ್ತಾರೆ ಎಂದರೆ, ಅಪ್ಪುಗೆಗೆ ನಮಗೆ ತಿಳಿಯದ ಹಲವಾರು ಮಹತ್ವಗಳು ಇರುತ್ತವೆ.
ಮನೋವಿಜ್ಞಾನಿಯೊಬ್ಬರ ಪ್ರಕಾರ "ಸ್ಪರ್ಶ ಎಂಬುದು ನಾವು ಅನುಭವಿಸುವ ಮೊದಲ ಸಂವೇದನೆ, ಇದು ನಾವು ವೀಕ್ಷಿಸುವುದನ್ನು ಕಲಿಯುವ ಮೊದಲು ಅಥವಾ ಮಾತನಾಡುವ ಮೊದಲೇ ನಮಗೆ ಕರಗತವಾಗಿರುತ್ತದೆ".

ಅಪ್ಪುಗೆಯು ಸಹ ಒಂದು ಸಂವಹನ, ತ್ವಚೆಗೆ ತ್ವಚೆಗೆ ಬೆಸೆದುಕೊಂಡರೆ ಮಗು ಮತ್ತು ತಾಯಿಯ ನಡುವೆ ಸಂಬಂಧ ಸದೃಢವಾಗುತ್ತಾ ಸಾಗುತ್ತದೆ. ಹೀಗೆ ಇದೇ ನೆನಪು ಎಂದಿಗೂ ಮಗುವಿನ ಜೊತೆಗೆ ಉಳಿದುಕೊಳ್ಳುತ್ತದೆ.
ಅಪ್ಪುಗೆ ಎಂಬುದು ಕೇವಲ ದೈಹಿಕ ಸ್ಪರ್ಶವಲ್ಲ, ಮಾತುಗಳು ಹೇಳಲು ಆಗದೆ ಇರುವ ಅನೇಕ ಸಂಗತಿಗಳನ್ನು ಅಪ್ಪುಗೆಯು ತಿಳಿಸಿಬಿಡುತ್ತದೆ. ಅಪ್ಪಿಕೊಳ್ಳಲು ಸಹ ಜಿಪುಣತನ ಮಾಡುವುದು ಬೇಡ. ನಿಮ್ಮ ಪ್ರೀತಿ ಪಾತ್ರರನ್ನು ಅಥವಾ ಸಂಗಾತಿಯನ್ನು ಅಪ್ಪಿಕೊಳ್ಳಲು ನಾವು ಹಲವಾರು ಕಾರಣಗಳನ್ನು ನಿಮಗೆ ನೀಡುತ್ತೇವೆ. ಓದಿ, ಹೋಗಿ ನಿಮ್ಮ ಸಂಗಾತಿಗೆ ಒಂದು ಬಿಸಿ ಅಪ್ಪುಗೆ ನೀಡಿ.



Click it and Unblock the Notifications
