Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಗಂಡ ಸರಿ ಇಲ್ಲ ಅಂತಾ ಗೊತ್ತಾದ ಮೇಲೂ ಹೆಂಡತಿ ಆತನ ಜೊತೆ ಬದುಕೋದು ಯಾಕೆ ಗೊತ್ತಾ?
ದಾಂಪತ್ಯ ಆಗಲಿ ಅಥವಾ ಬೇರ್ಯಾವುದೇ ರೀತಿಯ ಸಂಬಂಧವಾಗಿರಲಿ ಅದ್ರಲ್ಲಿ ಪ್ರೀತಿಯೇ ತುಂಬಿಕೊಂಡಿರಬೇಕೆಂದೇನಿಲ್ಲ. ಕೆಲವೊಂದು ಸಲ ಜಗಳ, ಮನಸ್ಥಾಪಗಳು ಬರುತ್ತದೆ. ಆದರೆ ಇನ್ನೂ ಕೆಲವು ಸಂಬಂಧಗಳಂತೂ ತುಂಬಾನೇ ಕೆಟ್ಟಿರುತ್ತದೆ. ಹೆಸರಿಗೆ ಮಾತ್ರ ಜೀವನ ಸಾಗಿಸಬೇಕು ಅನ್ನೋ ಉದ್ದೇಶದಿಂದ ದಂಪತಿಗಳು ದಿನವನ್ನು ದೂಡುತ್ತಿರುತ್ತಾರೆ.
ಅದ್ರಲ್ಲಿ ಒಬ್ಬರಿಗೆ ತಮ್ಮ ಸಂಗಾತಿಯ ಜೊತೆಗೆ ಬದುಕೋದಕ್ಕೆ ಒಂಚೂರು ಇಷ್ಟವಿರೋದಿಲ್ಲ. ಆದರೆ ಇನ್ನೊಬ್ಬರು ಸಂಬಂಧ ಎಷ್ಟೇ ಹಾಳಾಗಿದ್ದರೂ ಪರವಾಗಿಲ್ಲ. ಆದರೆ ಅವರು ಆ ಸಂಬಂಧವನ್ನು ಬಿಟ್ಟು ಹೋಗೋದಕ್ಕೆ ಇಷ್ಟ ಪಡೋದಿಲ್ಲ. ಅಷ್ಟಕ್ಕು ಅನೇಕ ಜನ ಕೆಟ್ಟಿರುವ ಸಂಬಂಧದ ಜೊತೆಗೆ ಬದುಕೋದಕ್ಕೆ ಯಾಕೆ ಇಷ್ಟ ಪಡುತ್ತಾರೆ ಅನ್ನೋದನ್ನು ತಿಳಿಯೋಣ.

1. ಭಯ
ಮನೆಯವರ ಒತ್ತಾಯಕ್ಕೆ ಹೇಗೋ ಮದುವೆಯಾಗಿ ಆಯ್ತು. ಆದ್ರೆ ಗಂಡ ಅನ್ನಿಸಿಕೊಂಡವನು ಹೆಂಡತಿಯನ್ನು ಒಂದು ದಿನವೂ ಕೂಡ ಖುಷಿಯಾಗಿ ಇಟ್ಟುಕೊಂಡಿದ್ದೇ ಇಲ್ಲ. ಆಕೆಯ ಭಾವನೆಗಳಿಗೆ ಬೆಲೆಯಿಲ್ಲ. ಅತ್ತಾಗ ಅವಳೇ ಕಣ್ಣೊರಿಸಿಕೊಳ್ಳಬೇಕು. ಹೆಜ್ಜೆ ಹೆಜ್ಜೆಗೂ ಹೆಂಡತಿಗೆ ಚಿತ್ರ ಹಿಂಸೆ ನೀಡುತ್ತಾನೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಹೆಂಡತಿಯನ್ನು ಹಿಂಸಿಸುತ್ತಾನೆ. ಇಂತಹ ಸಂದರ್ಭದಲ್ಲಿ ಅಸಹಾಯಕ ಹೆಂಡತಿಯು ಗಂಡನನ್ನು ಬಿಟ್ಟು ಹೋಗಲಾಗದೇ ಭಯದಿಂದಲೇ ಬದುಕುತ್ತಾಳೆ.
2. ಸ್ವಾಭಿಮಾನ ಇಲ್ಲದಿದ್ದಾಗ
ಸ್ವಾಭಿಮಾನ ಅನ್ನೋದು ಮನುಷ್ಯನಿಗೆ ತುಂಬಾನೇ ಮುಖ್ಯ. ಆದರೆ ಇನ್ನೂ ಕೆಲವರಿಗೆ ಸ್ವಾಭಿಮಾನ ಬೇಕಾಗಿರೋದಿಲ್ಲ. ಅವರು ಜೀವನ ಪೂರ್ತಿ ಮತ್ತೊಬ್ಬರಿಗೆ ಬಕೆಟ್ ಹಿಡಿದು ಜೀವನ ಸಾಗಿಸುತ್ತಾರೆ. ಕೆಲವು ಸಂಬಂಧಗಳಲ್ಲಿ ಹೆಂಡತಿ ಕೆಲಸಕ್ಕೆ ಹೋಗುತ್ತಾಳೆ. ಆದರೆ ಗಂಡ ಅನ್ನಿಸಿಕೊಂಡವನು ಕೆಲಸಕ್ಕೂ ಹೋಗದೇ ಹೆಂಡತಿಯ ದುಡ್ಡಿನಲ್ಲಿ ಮಜಾ ಮಾಡಿ ಜೀವನ ಸಾಗಿಸುತ್ತಾನೆ. ಆತನಿಗೆ ಸ್ವಾಭಿಮಾನ ಅನ್ನೋದೇ ಇರೋದಿಲ್ಲ. ಬದುಕು ನಡೆದರೆ ಸಾಕು. ಯಾರ ದುಡ್ಡಾದರೇನು ಆತನ ಚಿಂತಿಸೋದಿಲ್ಲ.
3. ಗಂಡನ ಮೇಲೆ ಅವಲಂಬಿತವಾಗಿದ್ದಾಗ
ಕೆಲವೊಂದು ಸಂಬಂಧಗಳಲ್ಲಿ ಹೇಗಾಗುತ್ತೆ ಎಂದರೆ ಗಂಡನ ಬಳಿ ಬೇಕಾದಷ್ಟು ದುಡ್ಡಿರುತ್ತದೆ. ಆದರೆ ಹೆಂಡತಿಯನ್ನು ಆತ ಕಾಳಜಿ ಮಾಡೋದಿಲ್ಲ. ಮನೆಯಲ್ಲಿ ಕೆಲಸಕ್ಕೆ ಆಳು, ಕಾಳು, ಬೇಕಾದ ಎಲ್ಲಾ ಸೌಕರ್ಯಗಳು ಇದ್ದರೂ ಕೂಡ ಗಂಡನ ಪ್ರೀತಿ ಮಾತ್ರ ಸಿಕ್ಕಿರೋದಿಲ್ಲ. ಆದರೆ ಗಂಡನನ್ನು ಬಿಟ್ಟು ಹೋಗೋದಕ್ಕೆ ಆಕಗೆ ಆಗೋದಿಲ್ಲ. ಯಾಕಂದ್ರೆ ಆಕೆಯ ಸಂಪೂರ್ಣ ಜೀವನ, ಮಕ್ಕಳ ಜೀವನ ಗಂಡನನ್ನೇ ಅವಲಂಬಿಸಿರುತ್ತದೆ.
4. ಸಮಾಜದ ಮುಂದೆ ಗೌರವ ಕಾಪಾಡಿಕೊಳ್ಳಲು
ಗಂಡ ಬಿಟ್ಟ ಹೆಣ್ಣನ್ನು ಈ ಸಮಾಜ ಯಾವ ರೀತಿ ನೋಡಿಕೊಳ್ಳುತ್ತೆ ಅನ್ನೋದು ನಮಗೆ ಖಂಡಿತ ಗೊತ್ತಿರುತ್ತದೆ. ವಿಷಯ ಏನು ಅನ್ನೋದನ್ನು ತಿಳಿದುಕೊಳ್ಳದೇ ಆಕೆಯ ಬಗ್ಗೆ ಚುಚ್ಚು ಮಾತುಗಳನ್ನು ಆಡುವವರೇ ಹೆಚ್ಚು. ಇಂತಹ ಸಂದರ್ಭದಲ್ಲಿ ಗಂಡ ಹೊಡೆದರೂ, ಬೈದರೂ ಏನೇ ಮಾಡಿದರೂ ಆತನನ್ನು ಬಿಟ್ಟು ಹೋಗೋದಕ್ಕೆ ಆಗೋದಿಲ್ಲ. ಎಷ್ಟು ಕಷ್ಟವಾದ್ರೂ ಸರಿ ಅವನ ಜೊತೆಯಲ್ಲಿಯೇ ದಿನ ದೂಡುತ್ತಾಳೆ ಹೆಂಡತಿ.
5. ಮಕ್ಕಳ ಭವಿಷ್ಯಕ್ಕಾಗಿ
ಗಂಡ ಒಳ್ಳೆಯವನಲ್ಲ, ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳದೇ ಇದ್ದರೂ ಕೂಡ ಆಕೆ ಆತನ ಜೊತೆಯಲ್ಲೇ ಬದುಕೋದಕ್ಕೆ ಇಷ್ಟ ಪಡುತ್ತಾಳೆ. ಗಂಡನಿಗೆ ಆಕೆಯ ಬಗ್ಗೆ ಕಿಂಚಿತ್ತೂ ಪ್ರೀತಿ ಇರೋದಿಲ್ಲ. ಆದರೂ ಕೂಡ ಅಂತಹ ನೋವಿನಲ್ಲೂ ಗಂಡನ ಜೊತೆಯಲ್ಲೇ ಇರುತ್ತಾಳೆ. ಕಾರಣ ತನ್ನ ಮಕ್ಕಳಿಗಾಗಿ ಉತ್ತಮ ಭವಿಷ್ಯ ರೂಪಿಸಲು. ಕೋಪಕ್ಕೆ ಬಿದ್ದು ಗಂಡನನ್ನು ಬಿಟ್ಟು ಬಂದರೆ ಮಕ್ಕಳಿಗೆ ಭವಿಷ್ಯವೇ ಇಲ್ಲದಂತಾಗಿಬಿಡಬಹುದು. ಇದೇ ಭಯ ಆಕೆಯನ್ನು ಕಾಡುತ್ತಿರುತ್ತದೆ.
6. ಪತಿಯೇ ಪರದೈವ ಅನ್ನೋ ನಂಬಿಕೆ
ಅನೇಕ ಮುಗ್ಧ ಮಹಿಳೆಯರಿಗೆ ಪತಿಯನ್ನು ಬಿಟ್ಟು ಬೇರೆ ಜಗತ್ತು ಗೊತ್ತಿಲ್ಲ. ಮದುವೆಯಾದ ಮೇಲೆ ಅವರು ಪತಿಯೇ ಪರದೈವ ಅಂತ ಅವರು ನಂಬಿಕೊಂಡಿರುತ್ತಾರೆ. ಗಂಡ ಎಷ್ಟೇ ಕೆಟ್ಟವನಾಗಿರಲಿ, ಕುಡುಕನಾಗಿರಲಿ, ಆಕೆಗೆ ಹೊಡೆಯಲಿ, ಬಡಿಯಲಿ ಆದರೂ ಕೂಡ ಗಂಡನ ಮೇಲಿನ ಪ್ರೀತಿ ಆಕೆಗೆ ಕಡಿಮೆಯಾಗೋದಿಲ್ಲ. ಸಾಯುವವರೆಗೂ ಆತನ ಜೊತೆಗೆ ಬದುಕೋದಕ್ಕೆ ಆಕೆ ಇಷ್ಟ ಪಡುತ್ತಾಳೆ.
ಸಂಬಂಧಗಳು ಎಂದರೆ ಹಾಗೆನೇ ಏನೇ ಮಾಡಿದರೂ ಕೂಡ ಅಷ್ಟು ಸುಲಭವಾಗಿ ಅದನ್ನು ಮುರಿಯೋದಕ್ಕೆ ಸಾಧ್ಯವಾಗೋದಿಲ್ಲ. ಅದ್ರಲ್ಲೂ ಹೆಚ್ಚಿನ ಮಹಿಳೆಯರು ತಮ್ಮ ಕೊನೆಯ ಉಸಿರು ಇರುವವರೆಗೂ ಆ ಸಂಬಂಧವನ್ನು ಕಾಪಾಡಿಕೊಳ್ಳೋದಕ್ಕೆ ಪ್ರಯತ್ನಿಸುತ್ತಾರೆ. ಕೆಲವೊಂದು ಕಾರಣಗಳಿಂದ ಸಂಬಂಧ ಎಷ್ಟೇ ಹಾಳಾಗಿದ್ದರೂ ಕೂಡ ಅದರಿಂದ ಹೊರ ಬರೋದಕ್ಕೆ ಅವರಿಗೆ ಇಷ್ಟವಿರೋದಿಲ್ಲ.



Click it and Unblock the Notifications

