Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
3ನೇ ಹಂತದಲ್ಲಿ ಪ್ರೀತಿ ಮುರಿದು ಬೀಳೋದಕ್ಕೆ ಕಾರಣ ಏನು ಗೊತ್ತಾ?
ಪ್ರೀತಿ ಆಗೋದು ದೊಡ್ಡ ವಿಚಾರವೇನಲ್ಲ. ಹೆಚ್ಚಿನವರು ಸೌಂದರ್ಯಕ್ಕೆ ಸೋತು ಪ್ರೀತಿ ಮಾಡಿದ್ರೆ, ಇನ್ನೂ ಕೆಲವರು ಗುಣಕ್ಕೆ ಸೋತು ಪ್ರೀತಿ ಮಾಡುತ್ತಾರೆ. ಎಲ್ಲಾ ಸಂಬಂಧಗಳು ಕೊನೆಯವರೆಗೂ ಉಳಿಯೋದಿಲ್ಲ. ಕೆಲವರ ಸಂಬಂಧವಂತೂ ಆರಂಭದಲ್ಲೇ ಮುರಿದು ಬೀಳುತ್ತದೆ. ಇನ್ನೂ ಕೆಲವರು ಅನೇಕ ವರ್ಷಗಳ ಕಾಲ ಪ್ರೀತಿ ಮಾಡಿ ಇನ್ನೇನು ಮದುವೆಯಾಗಬೇಕು ಅನ್ನುವಷ್ಟರಲ್ಲಿ ಸಂಬಂಧ ಮುರಿದುಕೊಳ್ಳುತ್ತಾರೆ.
ಅಷ್ಟಕ್ಕು ಸಂಬಂಧಗಳು ಮುರಿದು ಬೀಳೋದಕ್ಕೆ ಕಾರಣವೇನು? 5 ಹಂತದ ಪ್ರೀತಿಯಲ್ಲಿ ಹೆಚ್ಚಿನವರ ಪ್ರೀತಿ ಮೂರನೇ ಹಂತಕ್ಕೆ ನೆಲ ಕಚ್ಚೋದು ಯಾಕೆ? ಮೂರನೇ ಹಂತಕ್ಕೆ ಪ್ರೀತಿ ಮುರಿದು ಬೀಳೋದಕ್ಕೆ ಕಾರಣಗಳು ಏನು ಅನ್ನೋದನ್ನು ತಿಳಿದುಕೊಳ್ಳೋಣ.

ವ್ಯಾಮೋಹ
ಈ ವಿಚಾರಗಳು ಎಲ್ಲರಿಗೂ ಅನ್ವಯವಾಗದಿದ್ದರೂ ಕೂಡ ಹೆಚ್ಚಿನವರು ಇದೇ ರೀತಿ ಪ್ರೀತಿಯೊಂದಿಗೆ ಆಕರ್ಷಿತರಾಗಿ ಇರುತ್ತಾರೆ. ನಾವು ಇಷ್ಟ ಪಟ್ಟವರನ್ನು ಎಷ್ಟು ಆಳವಾಗಿ ಪ್ರೀತಿಸುತ್ತಿದ್ದರು ದೈಹಿಕ ಆಕರ್ಷಣೆ ಅನ್ನೋದು ನಮಗೆ ಇದ್ದೇ ಇರುತ್ತದೆ. ಅದ್ರಲ್ಲೂ ಪ್ರೀತಿಯ ಆರಂಭದಲ್ಲಿ ನಮಲ್ಲಿ ದೈಹಿಕ ಆಕರ್ಷಣೆ ಹೆಚ್ಚಾಗಿರುತ್ತದೆ. ಪ್ರಥಮ ಹಂತದಲ್ಲಿ ಹೆಚ್ಚಿನವರ ಪ್ರೀತಿ ಉಳಿಯೋದಕ್ಕೆ ಇದು ಕೂಡ ಒಂದು ಕಾರಣವಾಗುತ್ತದೆ.
ಭಾವನಾತ್ಮಕ ಸ್ಪಂದನೆ
ಈ ಹಂತದ ಪ್ರೀತಿಯಲ್ಲಿ ನಾವು ಒಬ್ಬರ ಭಾವನೆಗೆ ಮತ್ತೊಬ್ಬರು ಸ್ಪಂದಿಸುತ್ತೇವೆ. ನಮ್ಮ ನೋವುಗಳನ್ನು ನಾವು ಪ್ರೀತಿಸಿದವರ ಜೊತೆಯಲ್ಲಿ ಹೇಳಿಕೊಳ್ಳುತ್ತೇವೆ. ಅವರ ನೋವುಗಳನ್ನು ನಮ್ಮ ಬಳಿ ಹೇಳಿಕೊಳ್ಳುತ್ತಾರೆ. ಪರಸ್ಪರ ಒಬ್ಬರಿಗೊಬ್ಬರು ಸಮಾಧಾನ ಪಡಿಸಿ ಅವರಿಗೆ ದೈರ್ಯ ತುಂಬುವ ಕೆಲಸವನ್ನು ಮಾಡುತ್ತೇವೆ. ಹೀಗಾಗಿ ಈ ಹಂತದಲ್ಲಿಯೂ ಪ್ರೀತಿಯ ಬಂಧ ಗಟ್ಟಿಯಾಗಿಯೇ ಇರುತ್ತದೆ.
ನಂಬಿಕೆ, ಪರಸ್ಪರ ಅರ್ಥ ಮಾಡಿಕೊಳ್ಳುವುದು
ಈ ಹಂತದಲ್ಲಿ ಪ್ರೇಮಿಗಳು ತಮ್ಮ ಪ್ರೀತಿಗೆ ಬದ್ಧವಾಗಿ ಇರುತ್ತಾರೆ. ಅವರಿಬ್ಬರ ನಡುವಿನ ಬಾಂಧವ್ಯ ತುಂಬಾನೇ ಗಟ್ಟಿಯಾಗಿರುತ್ತದೆ. ಒಬ್ಬರಿಗೊಬ್ಬರು ಪರಸ್ಪರ ಅರ್ಥ ಮಾಡಿಕೊಳ್ಳುತ್ತಾರೆ. ತಮ್ಮ ಮಧ್ಯೆ ಒಂದು ಉತ್ತಮ ನಂಬಿಕೆಯನ್ನು ಉಳಿಸಿಕೊಳ್ಳುತ್ತಾರೆ. ಹೀಗಾಗಿ ಪ್ರೀತಿಯ ಬಂಧ ಮತ್ತಷ್ಟು ಗಟ್ಟಿಯಾಗುತ್ತಾ ಸಾಗುತ್ತದೆ.
ಸಂಘರ್ಷ
ಇಬ್ಬರ ಸಂಬಂಧದಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ ಬರು ಬರುತ್ತಾ ಚಿಕ್ಕ-ಪುಟ್ಟ ವಿಚಾರಗಳಿಗೂ ಜಗಳ, ಮನಸ್ಥಾಪ ಹುಟ್ಟಿಕೊಳ್ಳುತ್ತದೆ. ನನ್ನ ಮಾತೇ ಮೇಲಾಗಬೇಕು ಎನ್ನುವ ಅಹಂ ಹೆಚ್ಚಾದಾಗ ಪ್ರೀತಿಯಲ್ಲಿ ಬಿರುಕು ಕಾಣಿಸಿಕೊಳ್ಳೋದಕ್ಕೆ ಶುರುವಾಗುತ್ತದೆ. ಪ್ರತಿಬಾರಿ ಒಂದಲ್ಲ ಒಂದು ವಿಚಾರಕ್ಕೆ ಕಿರಿಕಿರಿ, ಮುನಿಸು ಉಂಟಾಗುತ್ತದೆ. ಪ್ರೀತಿ ಈ ಹಂತಕ್ಕೆ ತಲುಪಿದಾಗ ಈ ಸಂಬಂಧ ಬೇಡ ಎನ್ನುವ ಭಾವನೆ ಉಂಟಾಗುತ್ತದೆ.
ಪ್ರೀತಿಯ ಕೊನೆಯ ಹಂತ
ಪ್ರೀತಿ ಆರಂಭವಾಗಿನಿಂದ ಹಿಡಿದು ಪ್ರೀತಿಯ ಎಲ್ಲಾ ಘಟ್ಟಗಳನ್ನು ನೀವು ದಾಟಿ ಬಂದಿರುತ್ತೀರಿ. ಈ ಕೊನೆಯ ಘಟ್ಟದವರೆಗೂ ನಿಮ್ಮ ಸಂಬಂಧ ಬಂದಿದೆ ಎಂದರೆ ಅದಕ್ಕಾಗಿ ನೀವು ಸಾಕಷ್ಟು ತ್ಯಾಗ ಮಾಡಿರುತ್ತೀರಿ. ಜಗಳಗಳಾದಾಗ ಅದನ್ನು ಸರಿದೂಗಿಸಿಕೊಂಡು ಹೋಗುವ ಸಾಮರ್ಥ್ಯ ನಿಮ್ಮಲ್ಲಿತ್ತು. ಒಬ್ಬರ ಮೇಲೆ ಮತ್ತೊಬ್ಬರಿಗೆ ಗೌರವವಿತ್ತು. ಒಬ್ಬರನ್ನೊಬ್ಬರನ್ನು ಅರ್ಥ ಮಾಡಿಕೊಂಡು ಈ ಹಂತದವರೆಗೂ ನಿಮ್ಮ ಪ್ರೀತಿಯನ್ನು ತಂದಿದ್ದೀರಿ ಎಂದರೆ ಖಂಡಿತ ನೀವು ಪ್ರೀತಿಯಲ್ಲಿ ಗೆದ್ದಿದ್ದೀರಿ ಎಂದರ್ಥ.
ಪ್ರೇಮಿಗಳು 3ನೇ ಹಂತದಲ್ಲಿ ಪ್ರೀತಿಯನ್ನು ಕೈ ಚೆಲ್ಲೋದ್ಯಾಕೆ?
ಹೆಚ್ಚಿನ ಪ್ರೇಮಿಗಳು ಮೂರನೇ ಹಂತದಲ್ಲಿ ಪ್ರೀತಿಯನ್ನು ಕೈ ಚೆಲ್ಲೋದ್ಯಾಕೆ ಅನ್ನೋದನ್ನು ತಿಳಿಯೋಣ:
ನೀರೀಕ್ಷೇಗಳು ಪೂರೈಕೆ ಆಗದಿದ್ದಾಗ
ಗಂಡಾಗಲಿ ಅಥವಾ ಹೆಣ್ಣಾಗಲಿ ಪ್ರೀತಿಯಲ್ಲಿ ಅನೇಕ ನಿರೀಕ್ಷೇಗಳನ್ನು ಇಟ್ಟುಕೊಂಡಿರುತ್ತಾರೆ. ಹುಡುಗನ ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಇಲ್ಲದಿದ್ದಾಗ ಹುಡುಗಿಯ ಎಲ್ಲಾ ಆಸೆ ಹಾಗೂ ನಿರೀಕ್ಷೇಗಳನ್ನು ಪೂರೈಸಲು ಸಾಧ್ಯವಾಗೋದಿಲ್ಲ. ಇನ್ನೂ ದೈಹಿಕ ನಿರೀಕ್ಷೇಗಳು ಸಂತೃಪ್ತಿ ಕೊಡದಿದ್ದಾಗ ಕೂಡ ಪ್ರೀತಿ ಮುರಿದು ಬೀಳುತ್ತದೆ.
ಸಂವಹನದ ಕೊರತೆ
ಸಂವಹನ ಅನ್ನೋದು ಯಾವುದೇ ಸಂಬಂಧದ ಮುಖ್ಯವಾದ ಸೇತುವೆ ಇದ್ದ ಹಾಗೆ. ನಿಮ್ಮ ಸಂಬಂಧದಲ್ಲಿ ಏನು ಸಮಸ್ಯೆಗಳಿದ್ದರೂ ಕೂಡ ಸಂವಹನ ಸರಿ ಇದ್ದಾಗ ಮಾತ್ರ ಅದನ್ನು ಬಗೆ ಹರಿಸೋದಕ್ಕೆ ಸಾಧ್ಯವಾಗುತ್ತದೆ.
ಕೌಟುಂಬಿಕ ಒತ್ತಡ
ಮನೆಯವರಿಗೆ ತಮ್ಮ ಮಕ್ಕಳ ಮದುವೆಯನ್ನು ಇದೇ ರೀತಿ ಮಾಡಬೇಕು ಅಂತ ನೂರಾರು ಆಸೆ, ಕನಸುಗಳು ಇರುತ್ತದೆ. ಆದರೆ ಮಕ್ಕಳು ಪ್ರೀತಿಯಲ್ಲಿ ಬಿದ್ದಿದ್ದಾರೆ ಅಂತ ಗೊತ್ತಾದಾಗ ಅವರ ಎದೆ ಒಡೆದು ಹೋಗುತ್ತದೆ. ಹಾಗೂ ಅವರು ಪ್ರೀತಿಗೆ ಒಪ್ಪಿಗೆ ಸೂಚಿಸೋದಿಲ್ಲ. ಜಾತಿ, ಅಂತಸ್ತು ಎಲ್ಲವೂ ಅಡ್ಡಿಯಾದಾಗಲೂ ಕೂಡ ಪ್ರೀತಿ ಮುರಿದು ಬೀಳುತ್ತದೆ.
ನಮಗೆ ನಮ್ಮ ಮೇಲೆ ಹಾಗೂ ಪ್ರೀತಿಯ ಮೇಲೆ ನಂಬಿಕೆ ಇದ್ದಾಗ ಯಾವ ಕಾರಣಕ್ಕೂ ಆ ಪ್ರೀತಿ ಮುರಿದು ಬೀಳೋದಿಲ್ಲ. ಪ್ರೀತಿಸಿದವರೇ ಬೇಕು ಅನ್ನೋ ಹಠ ನಮ್ಮಲ್ಲಿದ್ದರೆ ಆ ಪ್ರೀತಿಯನ್ನು ಯಾರಿಂದಲೂ ಬೇರೆ ಮಾಡೋದಕ್ಕೆ ಸಾಧ್ಯವಿಲ್ಲ.



Click it and Unblock the Notifications


