Latest Updates
-
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ!
ಬಾಯ್‌ಫ್ರೆಂಡ್ ಪ್ರೇತಾತ್ಮ ಮದುವೆಯಾದ ಯುವತಿ, ಹೃದಯ ಭಾರವಾಗಿಸುತ್ತೆ ಇವರ ಲವ್ ಸ್ಟೋರಿ
ಕೆಲವೊಂದು ಪ್ರೀತಿ ನೋಡುವಾಗ ನಾವು ಓದಿದ ರೋಮಿಯೋ ಜೂಲಿಯಟ್‌ಗಿಂತ ಈ ಜೋಡಿ ಪ್ರೀತಿ ಹೆಚ್ಚು ಎಂದನಿಸುವುದು, ಇಂಥ ಒಳ್ಳೆಯ ಜೋಡಿಯನ್ನು ಜೊತೆಯಾಗಿ ಬದುಕಲು ಬಿಡದ ಆ ವಿಧಿ ಎಷ್ಟೊಂದು ಕ್ರೂರಿ ಅನಿಸುವುದು, ಕೆಲವರು ಪ್ರೀತಿಸಿ ಮದುವೆಯಾಗಿ ಬೇರೆಯಾದರೆ, ಉಸಿರು ನಿಂತರೂ ನಿನ್ನ ಜೊತೆಯೇ ಬಾಳುತ್ತೇನೆ ಎನ್ನುವವರನ್ನು ಆ ವಿಧಿ ಜೊತೆಗೆ ಬಾಳಲು ಬಿಡುವುದಿಲ್ಲ. ಈ ಕತೆಯೂ ಅದೇ ರೀತಿ ಇದೆ, ಈ ಹುಡುಗಿ ತಾನು ಜೀವಕ್ಕಿಂತ ಹೆಚ್ಚು ಪ್ರೀತಿಸಿದ ಪ್ರಿಯತಮನ ಜೊತೆ ಮದುವೆಯಾಗಿದ್ದಾಳೆ, ಆದರೆ ಅವಳು ಮದುವೆಯಾಗಿರುವುದು ಅವನನ್ನಲ್ಲ, ಅವನ ಪ್ರೇತವನ್ನು!

ಇಂಥ ಒಂದು ಮದುವೆಗೆ, ಅಮರ ಪ್ರೀತಿಗೆ ಸಾಕ್ಷಿಯಾಗಿರುವುದು ತೈವಾನ್. ಒಂದು ಭೀಕರ ಅಪಘಾತದಲ್ಲಿ ಆಕೆಯ ಪ್ರಿಯತಮ ಸತ್ತು ಹೋಗುತ್ತಾನೆ, ಆ ಸಂದರ್ಭದಲ್ಲಿ ಈಕೆಯೂ ಆತನ ಜೊತೆ ಇದ್ದಳು ಆದರೆ ಈಕೆ ಮಾತ್ರ ಪ್ರಾಣಾಪಾಯದಿಂದ ಪಾರಾಗುತ್ತಾಳೆ. ಆತನಿಲ್ಲ ಎಂದು ತಿಳಿಯುತ್ತಿದ್ದಂತೆ ಈ ಹುಡುಗಿಗೆ ಆತನಿಲ್ಲದ ಬದುಕು ಸಹಿಸಲು ಸಾಧ್ಯವೇ ಆಗುವುದಿಲ್ಲ. ಪ್ರತಿದಿನ ಅವನ ನೆನಪಿನಲ್ಲಿರುತ್ತಾಳೆ.
ಸ್ವಲ್ಪ ದಿನವಾದ ಬಳಿಕ ನಾನು ಮದುವೆಯಾಗುವ ನಿರ್ಧಾರಕ್ಕೆ ಬರುತ್ತಾಳೆ, ಆದರೆ ಆಕೆ ತೆಗೆದುಕೊಂಡ ನಿರ್ದಾರ ನೋಡಿ, ಮನೆಯವರು, ಆಕೆಯ ಸ್ನೇಹಿತರು ಬೆಚ್ಚಿ ಬೀಳುತ್ತಾರೆ, ಏಕೆಂದರೆ ಆಕೆ ಪ್ರೇತಾತ್ಮ ಜೊತೆ ಮದುವೆಯಾಗುತ್ತೇನೆ, ನನ್ನ ಬಾಯ್‌ಫ್ರೆಂಡ್ ಜೀವಂತವಾಗಿ ಇರದಿರಬಹುದು, ಆದರೆ ಆತನ ಪ್ರೇತಾತ್ಮ ಎಂಬುವುದು ಇದೆ ಎಂದು ನಂಬುತ್ತೇನೆ, ಹಾಗಾಗಿ ಪ್ರೇತಾತ್ಮ ಜೊತೆ ಮದುವೆಯಾಗುತ್ತೇನೆ ಎಂದು ಹೇಳುತ್ತಾಳೆ.
ಆಕೆಯ ಹೆಸರು ಜೂ ಇದೇ ಜುಲೈ 15ಕ್ಕೆ ಅವಳ ಬದುಕಿನಲ್ಲ ಕರಳಾ ಘಟನೆ ನಡೆಯಿತು, ಆಕೆಯ ಉಸಿರಾಗಿದ್ದ ಬಾಯ್‌ಫ್ರೆಂಡ್‌ನ ಕಳೆದುಕೊಂಡಳು, ಇದೀಗ ಆತನ ಜೊತೆ ಮದುವೆಯಾಗುವ ನಿರ್ಧಾರ ಮಾಡಿದ್ದು ಯಾರು ಏನೇ ಹೇಳಿದರೂ ಹಿಂದೆ ಸರಿಯುತ್ತಿಲ್ಲ, ಹೀಗಾಗಿ ಎಲ್ಲರೂ ಇವಳ ಹಠದ ಮುಂದೆ ಸೋತಿದ್ದಾರೆ, ಪ್ರೇತ ಜೊತೆಗೆ ಮದುವೆ ಮಾಡಿಸಲು ಒಪ್ಪಿಕೊಂಡಿದ್ದಾರೆ, ಇವರ ಬದುಕಿನಲ್ಲಿ ವಿಧಿ ಆಟವಾಡಿರಬಹುದು, ಆದರೆ ಆ ಕ್ರೂರ ವಿಧಿಗೂ ಇವರ ಪ್ರೀತಿ ಕೊಲ್ಲಲು ಸಾಧ್ಯವಾಗಿಲ್ಲ, ಈ ಜೋಡಿಯ ಪ್ರೀತಿ ಗೆದ್ದಿದೆ.
ಇಲ್ಲ ಎಂದರೂ ಇರುವಂತೆ ಕಲ್ಪನೆಯಲ್ಲಿ ಜೀವಿಸುವವರು ಹಲವರು ಇದ್ದಾರೆ
ತಮಗೆ ಅತ್ಯಾಪ್ತವಾದ ವ್ಯಕ್ತಿ ತೀರಿ ಹೋದಾಗ ಅದನ್ನು ಸ್ವೀಕರಿಸಲು ಮನಸ್ಸು ಸಿದ್ಧವಿರಲ್ಲ, ಅವರು ನಮ್ಮ ಜೊತೆ ಇಲ್ಲವಾದರೂ ಅವರು ಇನ್ನೂ ಇದ್ದಾರೆ ಕಲ್ಪಿಸಿ ಬಾಳುವ ಎಷ್ಟೋ ಜನರಿದ್ದಾರೆ. ಕಳೆದುಕೊಂಡ ಮಕ್ಕಳನ್ನು, ಕಳೆದುಕೊಂಡ ತಾಯಿ, ತಂದೆ, ಸಂಗಾತಿ ಹೀಗೆ ಅವರ ನೆನಪಿನಲ್ಲಿ ಬಾಳುವವರು ಅನೇಕರಿದ್ದಾರೆ.



Click it and Unblock the Notifications
