Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
ತಮಾಷೆಗೂ ಕೂಡ ಈ ಮಾತುಗಳನ್ನು ನಿಮ್ಮ ಸಂಗಾತಿಗೆ ಹೇಳಬೇಡಿ, ಮನಸ್ಸು ಒಡೆದುಹೋಗಬಹುದು..
ಪ್ರತಿಯೊಂದು ಸಂಬಂಧದಲ್ಲಿ, ಕೋಪ-ಮನಸ್ತಾಪಗಳು ಸಾಮಾನ್ಯ. ಆದರೆ ಆ ಕೋಪದ ಸಂದರ್ಭವನ್ನು ಹೇಗೆ ನಿಭಾಯಿಸುತ್ತೇವೆ ಎಂಬುದರ ಮೇಲೆ ನಮ್ಮ ಸಂಬಂಧ ನಿಂತಿದೆ. ಏಕೆಂದರೆ, ಕೋಪದಲ್ಲಿ ಆಡಿದ ಮಾತುಗಳು ನಿಮ್ಮ ಸಂಗಾತಿಯ ಮನಸ್ಸು ಮುರಿಯಲು ಕಾರಣವಾಗಬಹುದು. ಆದ್ದರಿಂದ ಬಹಳ ಜಾಗರೂಕರಾಗಿ ಮಾತನಾಡಬೇಕು.
'ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು' ಎಂಬ ಮಾತಿನಂತೆ, ಕೋಪದಲ್ಲಿ ಆಡಿದ ಮಾತು, ನಿಮ್ಮ ಸಂಬಂಧ ಮುರಿದುಹೋಗಲು ಕಾರಣವಾಗಬಹುದು. ಕೆಲವು ವಿಷಯಗಳು, ಕೋಪ ತಣ್ಣಗಾದ ಮೇಲೆ ಕ್ಷಮೆ ಕೇಳಿಕೊಂಡು ಸರಿಹೋಗುತ್ತದೆ. ಆದರೆ ಇನ್ನೂ ಕೆಲವು ವಿಚಾರಗಳು, ನಿಮ್ಮ ಸಂಗಾತಿಯ ಮನಸ್ಸಲ್ಲಿ ಗದ್ದಲವನ್ನು ಹುಟ್ಟಿಸಿರುತ್ತದೆ. ಆದ್ದರಿಂದ ಅಂತಹ ವಿಷಯಗಳನ್ನು ಮಾತನಾಡದೇ ಇರುವುದೇ ಉತ್ತಮ. ಅವುಗಳಾವುವು ಎಂಬುದನ್ನು ಇಲ್ಲಿ ನೋಡೋಣ.
ಎಷ್ಟೇ ಕೋಪಗೊಂಡರೂ ನಿಮ್ಮ ಸಂಗಾತಿಗೆ ಹೇಳಲೇಬಾರದ ಮಾತುಗಳನ್ನು ಈ ಕೆಳಗೆ ನೀಡಲಾಗಿದೆ:

ಐ ಹೇಟ್ ಯೂ:
ಐ ಲವ್ ಯೂ, ಸಂಬಂಧಕ್ಕೆ ನಾಂದಿಯಾದರೆ, ಈ ಐ ಹೇಟ್ ಯೂ ಅದೇ ಸಂಬಂಧದ ಅಂತ್ಯಕ್ಕೆ ಕಾರಣೀಭೂತವಾಗಬಹುದು. ಐ ಲವ್ ಯೂಗೆ ಇರುವಷ್ಟೇ ಮಹತ್ವ ಈ ಐ ಹೇಟ್ ಯೂ ಗೂ ಇದೆ. ನಿಮ್ಮ ಜಗಳದ ನಡುವೆ ಈ ಮೂರು ಪದವನ್ನು ಎಂದಿಗೂ ತರಬೇಡಿ, ಅದ ತಮಾಷೆಗಾದರೂ ಸರಿ. ನೀವು ತಮಾಷೆಗಾಗಿ ಆಡಿದ ಮಾತು, ನಿಮ್ಮ ಸಂಗಾತಿಯ ಮನಸ್ಸನ್ನು ಚುಚ್ಚಬಹುದು. ಆದ್ದರಿಂದ ಎಷ್ಟೇ ಕೋಪಗೊಂಡಿದ್ದರೂ, ನಿಮ್ಮ ಜಗಳದ ಮಧ್ಯೆ ಈ ಮಾತನ್ನು ನಿಮ್ಮ ಸಂಗಾತಿಗೆ ಹೇಳದೇ ಇರುವುದು ಉತ್ತಮ. ಆರೋಗ್ಯಕರ ಸಂಬಂಧ ಕಾಪಾಡಿಕೊಳ್ಳಲು ಇಂತಹ ಮಾತುಗಳ ಮೇಲೆ ಹಿಡಿತವಿದ್ದರೆ ಒಳ್ಳೆಯದು.

ನನ್ನಿಂದನೇ ಎಲ್ಲಾ:
ಸಂಬಂಧದಲ್ಲಿ 'ನಾನು', 'ನನ್ನಿಂದಲೇ' ಎಂಬ ಪದಗಳು ಬರಲೇಬಾರದು. ಏಕೆಂದರೆ ಜೀವನದಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ಇಬ್ಬರೂ ಸೇರಿ ಎದುರಿಸಿ, ಒಂದು ಸ್ಥಾನಕ್ಕೆ ಬಂದಿರುತ್ತೀರಿ. ಈ ಸಾದನೆಯಲ್ಲಿ ಇಬ್ಬರ ಪಾತ್ರವೂ ಸಮಾನಾಗಿರುತ್ತದೆ, ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ. ಆದರೆ ಕೋಪದಲ್ಲಿ ಅಥವಾ ಯಾವುದಾದರೂ ಒಂದು ಸಂದರ್ಭದಲ್ಲಿ, ನಿನ್ನಿಂದ ಏನೂ ಆಗಿಲ್ಲ, ನಾನೇ ಎಲ್ಲವನ್ನೂ ಮಾಡಿದ್ದು ಎಂಬ ಅಹಂಕಾರದ ಮಾತುಗಳನ್ನಾಡಿದರೆ, ನಿಮ್ಮ ಸಂಗಾತಿಯ ಮನಸ್ಸು ಒಡೆಯುವುದು ಖಂಡಿತ. ಸಂಬಂಧದಲ್ಲಿ ನಾನು ಎನ್ನುವ ಬದಲು, ನಾವು ಎಂದರೆ ಇಬ್ಬರೂ ಸುಖವಾಗಿರಬಹುದು, ಸಂತೋಷವಾಗಿಯೂ ಇರಬಹುದು. ಬರುವ ಸವಾಲುಗಳನ್ನು ಇಬ್ಬರೂ ಸೇರಿ ಎದುರಿಸಬಹುದು.

ನಿನಗಿಂತ ಆಕೆಯೇ ಚೆನ್ನಾಗಿದ್ದಳು/ಚೆನ್ನಾಗಿದ್ದನು:
ಪ್ರತಿಯೊಬ್ಬರಿಗೂ ಒಂದು ಗತಕಾಲವಿರುತ್ತದೆ. ಜೀವನದಲ್ಲಿ ಮುಂದೆ ಸಾಗುವಾಗ ಹಳೆಯ ವಿಚಾರಗಳನ್ನು ಅಲ್ಲೇ ಬಿಟ್ಟು ಮುಂದೆ ಸಾಗುತ್ತಿರಬೇಕು. ಅದರಲ್ಲೂ ಪ್ರೀತಿಯಲ್ಲಿ ಇದು ತುಂಬಾ ಮುಖ್ಯ. ಮಾಜಿ ಪ್ರೇಮಿ ಅಥವಾ ಮಾಜಿ ಸಂಬಂಧವನ್ನು ಎಂದಿಗೂ ಪ್ರಸ್ತು ಜೀವನದ ಮಧ್ಯೆ ತರಲೇಬೇಡಿ. ಇದು ನೀವು ಮಾಡುವ ಮೂರ್ಖತನದ ಕೆಲಸ. ಏಕೆಂದರೆ ಇದರಿಂದ ನಿಮ್ಮ ನೆಮ್ಮದಿ ಹಾಳಾಗುವುದಂತೂ ಖಂಡಿತ. ನಿಮ್ಮ ಪ್ರಸ್ತುತ ಸಂಬಂಧ ಈಗಷ್ಟೇ ಗಟ್ಟಿಯಾಗುತ್ತಿದೆ ಎನ್ನುವ ಸಮಯದಲ್ಲಿ' ನಿನಗಿಂತ ಮಾಜಿ ಸಂಗಾತಿಯೇ ಉತ್ತಮವಿದ್ದಳು' ಎಂದು ಕೋಪದಲ್ಲಿ ಹೇಳಿಬಿಟ್ಟರೆ ಅಷ್ಟೇ ಮುಗಿಯಿತು. ನಿಮ್ಮ ನಡುವೆ ಬಿರುಕು ಹುಟ್ಟಿಯೇ ಹುಟ್ಟುತ್ತದೆ. ಇದು ಏನನ್ನು ಬಿಂಬಿಸುತ್ತದೆ ಎಂದರೆ, ನೀವು ಇನ್ನೂ ಮಾಜಿ ಸಂಬಂಧದ ಬಗ್ಗೆ ಯೋಚಿಸುತ್ತಿದ್ದೀರಿ ಎಂದು.

ನೀನು ಅಳುವ ಅಭ್ಯಾಸ ಹೊಂದಿದ್ದೀಯಾ?;
ಒಬ್ಬ ವ್ಯಕ್ತಿಯು ತನ್ನ ಸಂತೋಷವನ್ನು ಯಾರೊಂದಿಗೂ ಹಂಚಿಕೊಳ್ಳುತ್ತಾನೆ, ಆದರೆ ತನ್ನ ದುಃಖವನ್ನು ಯಾರ ಬಳಿಯೂ ಅಷ್ಟು ಬೇಗ ಹಂಚಿಕೊಳ್ಳುವುದಿಲ್ಲ, ಒಂದು ವೇಳೆ ನಿಮ್ಮ ಬಳಿ ದುಃಖವನ್ನು ಹಂಚಿಕೊಳ್ಳುತ್ತಿದ್ದಾರೆ ಅಂದರೆ, ಅವರಿಗೆ ನೀವು ಬಹಳ ವಿಶೇಷ ಹಾಗೂ ಅವರ ಪ್ರಾಮುಖ್ಯತರ ನೀಡುವ ವ್ಯಕ್ತಿ ಎಂದರ್ಥ. ಹೀಗಿದ್ದಾಗ, ನಿಮ್ಮ ಸಂಗಾತಿಯು ತನ್ನ ಯಾವುದೇ ಸಮಸ್ಯೆಗಳನ್ನು ನಿಮಗೆ ಹೇಳಿದರೆ ಅಥವಾ ಅವರ ದುಃಖವನ್ನು ಹಂಚಿಕೊಂಡರೆ, ಅದನ್ನು ಎಚ್ಚರಿಕೆಯಿಂದ ಆಲಿಸಿ ಮತ್ತು ಅವನರಿಗೆ ಸಲಹೆ ನೀಡಿ. ಅದನ್ನು ಬಿಟ್ಟು, ಇದೇ ವಿಚಾರವನ್ನು ಇಟ್ಟುಕೊಂಡು, ಜಗಳದ ಸಮಯದಲ್ಲಿ ಅವರನ್ನು ನಿಂದಿಸಬೇಡಿ. ನಿನಗೆ ಅಳುವುದು ಒಂದು ಅಭ್ಯಾಸ ಎಂದು ನೋಯಿಸಬೇಡಿ. ಇದು ಅವರಿಗೆ ಮತ್ತಷ್ಟು ಬೇಜಾರು ಮಾಡುವುದು.

ದೈಹಿಕ ನೋಟದ ಬಗ್ಗೆ ಪ್ರತಿಕ್ರಿಯಿಸಬೇಡಿ:
ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ನ್ಯೂನತೆಗಳು ಇದ್ದೇ ಇರುತ್ತವೆ. ಆದರೆ ಅದನ್ನು ಹಿಡಿದು, ನಿಂದಿಸಬೇಡಿ. ಆ ಕುರಿತು ಮಾತನಾಡಲೇಬೇಡಿ. ಮುಖ್ಯವಾಗಿ ಪ್ರೀತಿಯಲ್ಲಿರುವಾಗ ಇಂತಹ ನ್ಯೂನತೆಗಳ ಬಗ್ಗೆ ಮಾತು ಬೇಡವೇ ಬೇಡ. ಆ ಯೋಚನೆ ಮನಸ್ಸಿಗೆ ಬಾರದಂತೆ ನೋಡಿಕೊಳ್ಳಿ. ಉದಾಹರಣೆಗೆ, ಎತ್ತರ, ಮೈಬಣ್ಣ, ಬೊಜ್ಜು ಇತ್ಯಾದಿಗಳನ್ನು ಪರಿಗಣಸಿಬೇಡಿ. ಏಕೆಂದರೆ ಪ್ರೀತಿಗೂ ಮುನ್ನ ಕಣ್ಣಿಗೆ ಕಾಣಿಸಿದ ಈ ವಿಚಾರಗಳು, ಜಗಳದ ನಡುವೆ ಬಂದರೆ, ನೋವು ಯಾರಿಗಾದರೂ ಖಂಡಿತವಾಗಿ ಆಗುತ್ತದೆ.



Click it and Unblock the Notifications