Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Valentines Day: ನನ್ನಲ್ಲಿ ಮೂಡಿದ್ದು ಸ್ನೇಹನಾ, ಪ್ರೀತಿನಾ...ನೀವೇ ಹೇಳಿ
ವ್ಯಾಲೆಂಟೈನ್ಸ್ ಡೇ ಸ್ಪೆಷಲ್ ಆಗಿ ಕನ್ನಡ ಬೋಲ್ಡ್ ಸ್ಕೈಗೆ ಓದುಗರು ಕಳುಹಿಸಿರುವ ಲವ್‌ಸ್ಟೋರಿಗಳನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ಸೃಷ್ಟಿ, ಎಸ್‌ಡಿಎಂ ಕಾಲೇಜು ಸಮೂಹ ಮಾಧ್ಯಮ ವಿದ್ಯಾರ್ಥಿನಿ ಕಳುಹಿಸಿರುವ ಸುಂದರ ಲವ್‌ಸ್ಟೋರಿ ಇಲ್ಲಿ ಪ್ರಕಟಿಸಲಾಗಿದೆ.
ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು ಏನೋ ಕುತೂಹಲ,ನನಗೆ ತುಂಬಾ ಕುತೂಹಲ.ಎಲ್ಲರಿಗೂ ಹೀಗೆ ಆಗುವುದೇನೋ ಸಹಜ.ಮಳೆಗಾಲ ಬಂದ್ರೆ ಸಾಕು ಹಪ್ಪಳ, ಸಂಡಿಗೆ ಹೀಗೆ ಹಲಸಿನ ಕಾಯಿಯ ನಾನಾ ಬಗೆಯ ತಿಂಡಿಗಳನ್ನು ಚಪ್ಪರಿಸುತ್ತಾ, ಜಿಟಿ ಜಿಟಿ ಮಳೆಯಲ್ಲಿ ನೆನೆಯುವುದರಲ್ಲಿ ಇರುವ ಸಂಭ್ರಮವೇ ಬೇರೆ. ಅದರಲ್ಲೂ ವಿದ್ಯಾರ್ಥಿಗಳಿಗಂತೂ ಮಳೆಯಲಿ ನೆನೆಯುವುದು ಏನೋ ಒಂತರ ಖುಷಿ.

ಮಳೆಗಾಲ ಎಂದಾಗ ಕಾಲೇಜಿನಲ್ಲಿ ನಡೆದ ಘಟನೆಯೊಂದು ನೆನಪಿಗೆ ಬರುತ್ತದೆ.ಅಂದು ಕಾಲೇಜಿನಿಂದ ಮನೆಗೆ ಬರುವ ಸಮಯ. ಆಗ ಜೋರಾಗಿ ಮಳೆ ಬರುವ ಎಲ್ಲಾ ಸೂಚನೆಗಳು ಕಂಡುಬರುತಿದ್ದವು.ಅದೇ ಸಂದರ್ಭಕ್ಕೆ ನಾನು ಬಸ್ ಸ್ಟಾಪಿಗೆ ಹೊರಟಾಗ ಒಂದೊಂದೆ ಮಳೆ ಹನಿಗಳು ಜೋರಾಗಿ ಸುರಿಯಲಾರಾಂಭಿಸಿದವು.
ನನ್ನಲ್ಲಿ ಕೊಡೆ ಇದ್ದರು ಬಿಡಿಸದೆ ಮಳೆಹನಿಗಳ ಜೊತೆ ನೆನೆಯುತ್ತಾ ಸಂತಸದಿಂದ ನನ್ನ ಪಾಡಿಗೆ ಸ್ವಲ್ಪ ದೂರ ಬಂದೆ, ಅದೇ ಸಮಯಕ್ಕೆ ನನ್ನ ಮೇಲೆ ಬೀಳುವ ಮಳೆ ಹನಿಗಳ ಸ್ವರ್ಶವು ನಿಂತಿತ್ತು.ಇದೇನೂ ಎಂದು ಆಶ್ಚರ್ಯದಿಂದ ಮೇಲೆ ನೋಡಿದರೆ ಕೊಡೆಯೊಂದು ನನ್ನ ತಲೆಯ ಮೇಲೆ ಇತ್ತು.ಇದು ಯಾರೆಂದು ಬೆರಗು ಕಣ್ಣಿನಿಂದ ನೋಡಿದಾಗ ಅಪರಿಚಿತ ವ್ಯಕ್ತಿ ನಗುತ್ತಾ ಕೊಡೆ ಹಿಡಿದು ನನ್ನ ಪಕ್ಕದಲ್ಲೇ ನಿಂತಿದ್ದರು.
ಅದೇ ಸಂದರ್ಭದಲ್ಲಿ ನನ್ನ ತಲೆಯಲ್ಲಿ ನೂರಾರು ಪ್ರಶ್ನೆಗಳ ಸರಮಾಲೆಯೇ ಹುಟ್ಟಿದ್ದವು.ಆದರೂ ಏನು ಕೇಳದೆ ನನ್ನ ಪ್ರಶ್ನೆಗಳ ಗಂಟನ್ನು ಹೊತ್ತುಕೊಂಡು ಅವನ ಜೊತೆಗೆ ಮೌನಿಯಾಗಿ ಹೆಜ್ಜೆ ಹಾಕುತ್ತಾ ಮುಂದುವರಿದೆ.ಅಂತೂ ಇಂತೂ ಮೌನವೃತದಲ್ಲಿಯೇ ನಮ್ಮ ಪಯಣ ಬಸ್ಟಾಪಿಗೆ ತಲುಪಿತು.ಆಗಲೂ ನಾವು ಒಬ್ಬರ ಮುಖವನ್ನು ಒಬ್ಬರು ನೋಡದೆ ಬಸ್ ನಿಂತಿದ್ದ ಸ್ಥಳಕ್ಕೆ ನಡೆದೆವು.
ಆ ದಿನ ಬಸ್ಸಿನಲ್ಲೂ ರಶ್. ಆದರೂ ಹೇಗೋ ನಮಗಿಬ್ಬರಿಗೂ ಒಂದೇ ಜಾಗದಲ್ಲಿ ಸೀಟು ಸಿಕ್ಕಿತ್ತು.ಆಗಲೂ ಮೌನ ವೃತದಲ್ಲಿಯೇ ನಮ್ಮ ಪಯಣ ಮುಂದುವರಿಯಿತು. ಹೀಗಿರಬೇಕಾದರೆ ಅವನು ಬಸ್ಸಿನಿಂದ ಇಳಿಯುವ ಜಾಗವು ಬಂತು.ಆದರೆ ಆತನು ಹೋಗುವ ಅವಸರದಲ್ಲಿ ನಮ್ಮಿಬ್ಬರನ್ನು ಜೊತೆಯಾಗಿಸಿದ ಆ ಅಮೂಲ್ಯವಾದ ಕೊಡೆಯನ್ನು ಬಿಟ್ಟು ಹೋಗಿದ್ದ. ಆ ಕಪ್ಪು ಬಣ್ಣದ ಕೊಡೆಯನ್ನು ನಾನು ಹಿಡಿದುಕೊಂಡು ಅವನದೇ ಯೋಚನೆಯಲ್ಲಿ ಮನೆಯನ್ನು ತಲುಪಿದೆ.
ಸದಾಶಿವನಿಗೆ ಅದೇ ಧ್ಯಾನ ಅನ್ನೋ ಹಾಗೇ, ನಾನು ಕೂಡ ಅವನದೇ ನೆನಪಿನಲ್ಲಿ ಅದ್ಯಾವಾಗ ನಿದ್ದೆ ಹತ್ತಿತೋ ತಿಳಿಯದು .ಮರುದಿನ ಕಾಲೇಜಿಗೆಂದು ಹೊರಟಾಗ ಜೋರಾಗಿ ಮಳೆ ಪ್ರಾರಂಭವಾಯಿತು.ಆಗ ಮತ್ತೆ ಅವನದೇ ನೆನಪಿನೊಂದಿಗೆ ಜೊತೆಯಲಿದ್ದ ಆತನ ಕೊಡೆಯನ್ನು ಬಿಡಿಸಿಕೊಂಡು ಹೊರಟೆ. ದೈಹಿಕವಾಗಿ ಅವನು ಜೊತೆ ಇಲ್ಲದಿದ್ದರೂ ಅವನ ನೆನಪಿನ ಜೊತೆಗೆ ಹೆಜ್ಜೆ ಹಾಕಿದೆ.ಆ ಕೊಡೆಯನ್ನು ನೋಡಿದಾಗ ಅದರೊಳಗೆ ಅವನ ಹೆಸರು ಮತ್ತು ವಿಳಾಸವನ್ನು ಬರೆದಿದ್ದಿದ್ದು ಮತ್ತಷ್ಟು ಮನಕೆ ಸಂತಸ ತಂದಿತ್ತು .
ಹಾಗೇ ಅವನ ನೆನಪಲ್ಲೇ ಕೊಡೆಯನ್ನು ಹಿಡಿದುಕೊಂಡು ಕಾಲೇಜಿನಲೆಲ್ಲ ಆತನನ್ನು ಹುಡುಕಿದೆ. ಆತನ ಪತ್ತೆಯೇ ಇಲ್ಲ.ಕಾಲೇಜಿಗೆ ರಜೆ ಹಾಕಿರಬಹುದು ಎಂದುಕೊಂಡು ಸುಮ್ಮನಾದರು ಈ ಹಾಳಾದ ಕಣ್ಣುಗಳು ಸುಮ್ಮನಿರಬೇಕೆ?? ಅಲ್ಲಿರಬಹುದು ಇಲ್ಲಿರಬಹುದೆಂದು ಹುಡುಕಬೇಕಾದರೆ ಆತ ಪ್ರತ್ಯಕ್ಷನಾದನು. ಏನೋ ಒಂದು ಸಂಕೋಚ ಕೊಡೆಯನ್ನು ಹೇಗೆ ಕೊಡುವುದೆಂದು. ಆದರೂ ಧೈರ್ಯ ಮಾಡಿ ಕೊಡೆಯನ್ನ ಆತನ ಕೈಗೆ ನೀಡಿ ನನ್ನ ಕ್ಲಾಸಿನತ್ತ ಹೆಜ್ಜೆ ಬೆಳೆಸಿದೆ.
ಆದರೆ ಮನಸಲ್ಲಿ ಅವನ ನೆನಪು ಮಾತ್ರ ಹಾಗೆ ಅಚ್ಚಾಗಿ ಉಳಿದಿತ್ತು. ಮನಸ್ಸಿಲ್ಲದ ಮನಸ್ಸಲ್ಲಿ ಅವನ ಕೊಡೆಯನ್ನ ಹಿಂದಿರುಗಿಸಿದ್ದು ಏನೋ ಒಂತರ ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟಂತಾಗಿತ್ತು. ಅವನೊಂದಿಗಿನ ಮೊದಲ ಭೇಟಿ, ಮೊದಲ ನೋಟ , ಮೊದಲ ಮುಗುಳ್ನಗು ಇಂದಿಗೂ ಅವನೇ ಕಣ್ಮುಂದೆ ಬಂದು ನಿಂತಂತೆ ಭಾಸವಾಗುತ್ತಿದೆ. ಪರಿಚಯವಿಲ್ಲದವಳಿಗೆ ಇಷ್ಟೊಂದು ಸಹಾಯ ಮಾಡಿದವನಿಗೆ ಮನ ಮತ್ತೆ ಮತ್ತೆ ಧನ್ಯವಾದವನ್ನ ಹೇಳುತ್ತಿತ್ತು.
ಮನದ ಭಾವನೆಗಳನ್ನ ಅವನಿಗೆ ತಿಳಿಸಿದ್ದರೆ ಅವನ ಪ್ರತ್ಯುತ್ತರ ಏನಿತ್ತೋ ಏನೋ ತಿಳಿಯದು. ಅವನೊಂದಿಗಿನ ಈ ಬಾಂಧವ್ಯ ನನಗೆ ಸ್ನೇಹವಾಗಿತ್ತೋ?? ಅಥವಾ ಪ್ರೀತಿಯಾಗಿತ್ತೋ?? ಎನ್ನುವುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ.



Click it and Unblock the Notifications
