For Quick Alerts
ALLOW NOTIFICATIONS  
For Daily Alerts

ಈ 10 ಬಗೆಯ ಹುಡುಗರಿಗೆ ಜಪ್ಪಯ ಅಂದ್ರೂ ಗರ್ಲ್‌ಫ್ರೆಂಡ್ ಸಿಗಲ್ಲ

|

ಕೆಲವು ಹುಡುಗರು ಇರುತ್ತಾರೆ ಅವರಿಗೆ ಏನೇ ಆದ್ರೂ ಗರ್ಲ್‌ಫ್ರೆಂಡ್‌ ಸಿಗಲ್ಲ, ಅವರು ನೋಡೋಕೆ ಸುಂದರವಾಗಿದ್ದರೂ, ಒಳ್ಳೆಯ ಕೆಲಸ ಎಲ್ಲವೂ ಇದ್ದರೂ ಹುಡುಗಿಯರಿಗೆ ಆ ಹುಡುಗರ ಸ್ವಭಾವ ಇಷ್ಟವಾಗುವುದೇ ಇಲ್ಲ, ಇಲ್ಲಾ ಇವರಿಗೆ ತಾವು ಬಯಸಿದಂಥ ಹುಡುಗಿ ಸಾಧ್ಯನೇ ಇಲ್ಲ, ಹಾಗಿರುತ್ತೆ ಅವರ ಎಕ್ಸ್‌ಪೆಕ್ಟೇಷನ್.

ಇಲ್ಲಿ ನಾವು ಎಂಥ ಹುಡುಗರಿಗೆ ಗರ್ಲ್‌ಫ್ರೆಂಡ್‌ ಸಿಗಲ್ಲ ಅಥವಾ ಇರಲ್ಲ ಅಂತ ಹೇಳಿದ್ದೇವೆ, ನೀವು ಏನಾದರೂ ಅಂಥ ಗುಣಗಳನ್ನು ಹೊಂದಿದ್ದರೆ, ಗರ್ಲ್ ಫ್ರೆಂಡ್‌ ಬೇಕು ಎಂದು ನಿಮಗನಿಸಿದ್ದರೆ ನಿಮ್ಮಲ್ಲಿ ನೀವು ಬದಲಾವಣೆ ಮಾಡಲೇಬೇಕಾದ ಸ್ವಭಾವಗಳು ಇದೇ ನೋಡಿ

ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ

ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ.

Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344

WWW.SADGURU SAI.IN

1. ನೀವು ಬಯಸಿದಂಥ ಹುಡುಗಿ ಸಿಗಲೇ ಇಲ್ಲ

1. ನೀವು ಬಯಸಿದಂಥ ಹುಡುಗಿ ಸಿಗಲೇ ಇಲ್ಲ

ಎಲ್ಲರಿಗೂ ತಮ್ಮ ಗರ್ಲ್‌ಫ್ರೆಂಡ್‌ ಹೇಗಿರಬೇಕೆಂಬ ಕಲ್ಪನೆ ಇರುತ್ತದೆ, ಆ ರೀತಿ ಕನಸ್ಸು ಕಾಣುವುದು ತಪ್ಪು ಅಂತ ನಾವು ಹೇಳ್ತಾ ಇಲ್ಲ, ಬಯಸಿದಂಥ ಹುಡುಗಿ ಸಿಕ್ಕರೆ ತುಂಬಾನೇ ಖುಷಿಯಾಗುತ್ತದೆ. ಆದರೆ ಕೆಲವರ ಕಲ್ಪನೆ ಕೇಳಿದರೆ ಇಂಥ ಹುಡುಗಿ ಇದ್ದಾಳಾ ಅಂತ ಅವನು ಹೇಳಿದ್ದನ್ನು ಕೇಳುವಾಗ ಎಂಥವರಿಗಾದರೂ ಅನಿಸಿಯೇ ಅನಿಸುತ್ತದೆ. ಉದ್ದಕ್ಕಿರಬೇಕು, ತೆಳ್ಳಗಿರಬೇಕು, ಓದಿರಬೇಕು, ಕೆಲಸದಲ್ಲಿರಬೇಕು, ಅಡುಗೆ ಗೊತ್ತಿರಬೇಕು ಹೀಗೆ ಅವನ ಕಲ್ಪನೆಯ ಪಟ್ಟಿ ಉದ್ದಕ್ಕಿರುತ್ತದೆ, ಇದರಲ್ಲಿ ಒಂದು ಇಲ್ಲವಾದರೂ ಆತ ಒಪ್ಪಿಕೊಳ್ಳಲು ಸಿದ್ಧವಿರುವುದಿಲ್ಲ. ಎಲ್ಲರಿಗೂ ಎಲ್ಲಾ ಗುಣಗಳು ಇರುವುದು ತುಂಬಾ ಅಪರೂಪ, ಹಾಗಾಗಿ ಇಂಥ ಹುಡುಗನಿಗೆ ಗರ್ಲ್‌ಫ್ರೆಂಡ್ ಸಿಗುವುದು ಕಷ್ಟನೇ ಅಲ್ವೇನ್ರಿ?

 2. ಅಭದ್ರತೆ

2. ಅಭದ್ರತೆ

ಇನ್ನು ಕೆಲವು ಹುಡುಗರಿಗೆ ತಮ್ಮ ಕೆಲಸ, ವೃತ್ತಿ ಜೀವನದ ಬಗ್ಗೆ ತುಂಬಾ ಅಭದ್ರತೆ ಇರುತ್ತದೆ. ಅವರು ಆ ಭಯದಿಂದಲೇ ಕಮಿಟ್ ಆಗಲು ಭಯ ಬೀಳುತ್ತಾರೆ. ಇನ್ನು ಕೆಲವರಿಗೆ ನಾನು ನೋಡಲು ಸುಂದರವಾಗಿಲ್ಲ, ಒಳ್ಳೆಯ ಮನೆಯಿಲ್ಲ ಹೀಗೆ ಸುಮ್ಮನೆ ನೂರಾರು ಚಿಂತೆ ಮಾಡುತ್ತಾರೆ. ಇದರಿಂದ ಅಭದ್ರತೆ ಕಾಡಿ ಗರ್ಲ್‌ಫ್ರೆಂಡ್‌ ಬಗ್ಗೆ ಯೋಚಿಸಲೇ ಭಯವಾಗಿ ಒಂಟಿಯಾಗಿರುತ್ತಾರೆ.

3. ಹುಡುಗಿಯ ದೈಹಿಕ ಸೌಂದರ್ಯಕ್ಕಷ್ಟೇ ಬೆಲೆ ನೀಡುವವನು

3. ಹುಡುಗಿಯ ದೈಹಿಕ ಸೌಂದರ್ಯಕ್ಕಷ್ಟೇ ಬೆಲೆ ನೀಡುವವನು

ಯಾರು ಹುಡುಗಿಯ ದೈಹಿಕ ಸೌಂದರ್ಯಕ್ಕಷ್ಟೇ ಬೆಲೆ ನೀಡುತ್ತಾನೋ ಅವನಿಗೆ ಗರ್ಲ್‌ ಫ್ರೆಂಡ್‌ ಸಿಕ್ಕರೂ ಅದು ಟ್ರೂ ರಿಲೇಷನ್‌ಶಿಪ್ ಆಗಿರಲ್ಲ. ಬರೀ ಅಂದ ಚಂದ ನೋಡಿ ಗುಣ ನೋಡದೆ ಸ್ನೇಹ ಬೆಳೆಸಿ ನಂತರ ಸಾಕಷ್ಟು ಕಷ್ಟ, ನಷ್ಟ ಅನುಭವಿಸುವ ಎಷ್ಟೋ ಹುಡುಗರನ್ನು ನೋಡಬಹುದು. ಅಲ್ಲದೆ ತಮ್ಮ ಅಂದ-ಚಂದಕ್ಕೆ ಮಾತ್ರ ಬೆಲೆ ನೀಡುವ ಹುಡುಗರನ್ನು ಹುಡುಗಿಯರೂ ಇಷ್ಟ ಪಡುವುದಿಲ್ಲ.

4. ವಾಸ್ತವದಿಂದ ದೂರವಿರುವುದು

4. ವಾಸ್ತವದಿಂದ ದೂರವಿರುವುದು

ತಾನು ಏನು, ತನ್ನ ಸ್ಥಿತಿಗತಿಯೇನು ಎಂದು ವಾಸ್ತವದಲ್ಲಿ ಚಿಂತಿಸದೆ ನನಗೆ ಐಶ್ವರ್ಯ ರೈಯಂಥ ಹುಡುಗಿ ಬೇಕು ಎಂದು ಬಯಸುವ ಹುಡುಗರಿಗೆ ಕೂಡ ಗರ್ಲ್‌ ಫ್ರೆಂಡ್‌ ಸಿಗುವುದು ಕಷ್ಟನೇ. ಇವರು ವಾಸ್ತವವನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಫಿಲ್ಮಿ ಸ್ಟೈಲ್‌ ಅಥವಾ ತನ್ನ ಸ್ನೇಹಿತರೆಲ್ಲಾ ಅಸೂಯೆ ಪಡುವಂಥ ಹುಡುಗಿ ಬೇಕೆಂದು ಬಯಸಿ ಮಧ್ಯವಯಸ್ಸು ದಾಟಿದರೂ ಯಾವುದೇ ಹುಡುಗಿ ಸಿಗದೇ ಇರುವಂಥ ಪರಿಸ್ಥಿತಿ ಬರಬಹುದು.

5. ಕಾಲೆಳೆಯುವುದು

5. ಕಾಲೆಳೆಯುವುದು

ಕೆಲವರಿಗೆ ಇನ್ನೊಬ್ಬರ ಕಾಲೆಳೆಯುವುದೇ ಅಭ್ಯಾಸವಾಗಿರುತ್ತದೆ, ಗರ್ಲ್‌ಫ್ರೆಂಡ್‌ ವಿಷಯದಲ್ಲೂ ಹೀಗೆ ಮಾಡಿದರೆ ಖಂಡಿತ ಅವಳು ಇವನ ಜೊತೆ ಸಂಬಂಧ ಮುಂದುವರೆಸಲ್ಲ. ಸದಾ ಹೀಯಾಳಿಸುವುದು, ಆತ್ಮವಿಶ್ವಾಸ ಕುಗ್ಗಿಸುವಂತೆ ನಡೆದುಕೊಳ್ಳುವವನ ಪ್ರೀತಿಸಲು ಹೆಣ್ಮಕ್ಕಳಿಗೆ ಸಾಧ್ಯವಿಲ್ಲ.

 6. ಮಿ. ಪರ್ಫೆಕ್ಟ್

6. ಮಿ. ಪರ್ಫೆಕ್ಟ್

ಇನ್ನು ಕೆಲ ಹುಡುಗರು ಇರುತ್ತಾರೆ, ಅವರನ್ನು ಮಿ. ಪರ್ಫೆಕ್ಸ್ ಎಂದೇ ಕರೆಯಬಹುದು. ಎಲ್ಲವೂ ಅಚ್ಚುಕಟ್ಟಾಗಿ ಇರಬೇಕು, ತಾನು ಅಂದುಕೊಂಡಿದ್ದರಲ್ಲಿ ಸ್ವಲ್ಪ ಹೆಚ್ಚು-ಕಡಿಮೆಯಾದರೂ ಸಹಿಸಲ್ಲ. ಇಂಥವರ ಜೊತೆ ಬಾಳುವುದು ಕಷ್ಟವೆಂದು ಹೆಣ್ಮಕ್ಕಳಿಗೆ ಅನಿಸುತ್ತದೆ ಆದ್ದರಿಂದ ಇವರ ಗರ್ಲ್‌ಫ್ರೆಂಡ್ ಆಗುವ ಧೈರ್ಯ ಅವಳು ತೋರಲ್ಲ.

7. ತುಂಬಾ ನಾಚಿಕೆ

7. ತುಂಬಾ ನಾಚಿಕೆ

ಇನ್ನು ಕೆಲ ಹುಡುಗರು ಇರುತ್ತಾರೆ. ಮನಸ್ಸಿನಲ್ಲಿ ಒಂದು ಹುಡುಗಿಯನ್ನು ನೋಡಿ ಇಷ್ಟಪಡುತ್ತಾರೆ. ಆದರೆಆಕೆ ಬಳಿ ಹೇಳಿಕೊಳ್ಳಲು ನಾಚಿಕೆ. ಅವಳಿಗೆ ಇವನ ಭಾವನೆ ಗೊತ್ತಾಗುವುದಿಲ್ಲ. ಇವನ ನಾಚಿಕೆ ಸ್ವಭಾವದಿಂದಾಗಿ ಅವಳ ಬಳಿ ಹೇಳದೆಯೇ ಅವಳನ್ನು ಕಳೆದುಕೊಳ್ಳುತ್ತಾನೆ.

 8. ಸದಾ ಕೆಲಸ ಕೆಲಸ

8. ಸದಾ ಕೆಲಸ ಕೆಲಸ

ಜೀವನದಲ್ಲಿ ಮುಂದೆ ಬರಬೇಕೆಂದರೆ ಕಷ್ಟಪಟ್ಟು ಕೆಲಸ ಮಾಡಬೇಕು ನಿಜ. ಆದರೆ ಸದಾ ಕೆಲಸ-ಕೆಲಸ ಅಂತ ಓಡುತ್ತಿದ್ದರೆ ಅವನಿಗೆ ಹುಡುಗಿಯನ್ನು ಪ್ರೀತಿಸಲು ಆದರೂ ಎಲ್ಲಿ ಸಮಯವಿರುತ್ತದೆ, ಹೀಗಾಗಿ ಗರ್ಲ್‌ಫ್ರೆಂಡ್ ಸಿಕ್ಕಿರಲ್ಲ. ಸಿಕ್ಕರೂ ಸದಾ ಕೆಲಸ ಅಂತ ಮುಳುಗಿದವನಿಗೆ ಅವಳೇ ಗುಡ್‌ಬೈ ಹೇಳಿ ಹೋಗುತ್ತಾಳೆ.

9. ದೂರುವ ಗುಣ

9. ದೂರುವ ಗುಣ

ಈ ಗುಣ ಇರುವ ಹುಡುಗನಿಗೆ ದೇವ ಲೋಕದ ಅಪ್ಸರೆ ತೋರಿಸಿದರೂ ಏನಾದರೂ ಕೊಂಕು ನುಡಿಯುತ್ತಾನೆ, ಅಂಥವನಿಗೆ ಗರ್ಲ್‌ ಫ್ರೆಂಡ್‌ ಸಿಗುವುದು ಕಷ್ಟನೇ ಅಲ್ವಾ?

10. ಪ್ರೀತಿ ಬಿಟ್ಟು ದೇಹದ ಆಸೆ ಬಗ್ಗೆ ಹೇಳಿಕೊಳ್ಳುವವ

10. ಪ್ರೀತಿ ಬಿಟ್ಟು ದೇಹದ ಆಸೆ ಬಗ್ಗೆ ಹೇಳಿಕೊಳ್ಳುವವ

ಪರಿಚಯವಾದ ದಿನವೇ ಸೆಕ್ಸ್ ಬಗ್ಗೆ ಮಾತನಾಡಿದರೂ ಯಾವ ಹುಡುಗಿಗೇ ತಾನೇ ಇರಿಸು ಮುರಿಸು ಆಗಲ್ಲ. ಇಂಥ ಹುಡುಗರನ್ನು ಒಳ್ಳೆಯ ಹುಡುಗಿಯರು ಖಂಡಿತ ಇಷ್ಟಪಡಲ್ಲ.

ಆದ್ದರಿಂದ ನನಗೂ ಒಬ್ಬಳು ಗರ್ಲ್‌ಫ್ರೆಂಡ್‌ ಬೇಕೆನ್ನುವವರು ಈ ಸ್ವಭಾವದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು, ನೀವು ಕೂಡ ಈ ವಾದ ಒಪ್ಪುತ್ತೀರಿ ತಾನೆ?

ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ

ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ

ನಿಮ್ಮ ಸಮಸ್ಯೆಗಳಾದ ಆರೋಗ್ಯ ಬಾದೆ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಸತಿ ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಅತ್ತೆ-ಸೊಸೆ ಕಲಹ, ಆಸ್ತಿ ವಿಚಾರ, ಭೂತ ಭಯ, ಪ್ರೇತ ಭಯ, ವಿದೇಶ ಪ್ರಯಾಣ, ರಾಜಕೀಯ ಪ್ರವೇಶ, ಸಿನಿಮಾ ಪ್ರವೇಶ, ಎಷ್ಟೇ ಸಂಪತ್ತಿದ್ದರೂ ಮನಸ್ಸಿಗೆ ಅಶಾಂತಿ, ಫ್ಯಾಕ್ಟರಿ ಬಿಜಿನೆಸ್ನಲ್ಲಿ ತೊಂದರೆ ಇನ್ನು ಯಾವುದೇ ಕಠಿಣ ಸಮಸ್ಯೆ ಇದ್ದರು ಸಹ 7 ದಿನಗಳಲ್ಲಿ ಪರಿಹಾರ ಶತಸಿದ್ಧ.

ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಗುರೂಜಿಯವರನ್ನು ಸಮಾಲೋಚನೆಗೆ ಇಂದೇ ಭೇಟಿ ಕೊಡಿ.

Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344

WWW.SADGURU SAI.IN

English summary

Not Having A Girlfriend? Here Are The Possible Reasons Behind It

If you are someone who never had any girlfriend, we are sure you might have thought of the reasons behind it. Some of you may have tried to seek your friends' help in getting to know girls around you.
X