Latest Updates
-
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್
ಲವ್ ಬ್ರೇಕಪ್ ಆಗಿ ಮತ್ತೆ ಒಂದಾದರೆ ಇನ್‌ಸೆಕ್ಯೂರಿಟಿ ಕಾಡುವುದೇಕೆ?
ಗೋಲ್ಡನ್ ಸ್ಟಾರ್ ಗಣೇಶ್ ನಡೆಸುತ್ತಿರುವ ರಿಯಾಲಿಟಿ ಶೋದಲ್ಲಿ ಸ್ಪರ್ಧಿಯಾಗಿರುವ ಪುನೀತಾ ಆಚಾರ್ಯರವರು ಹೇಳಿದ ವಿಷಯ ಹಲವರನ್ನು ಚಿಂತಿಸುವಂತೆ ಮಾಡಿದೆ, ತನಗೆ ಇರುವ ಇನ್‌ಸೆಕ್ಯೂರಿಟಿ ಹಾಗೂ ಅದಕ್ಕೆ ಕಾರಣವೇನು ಎಂಬುವುದರ ಬಗ್ಗೆ ಹೇಳಿದರು, ಅವರ ಇನ್‌ಸೆಕ್ಯುರಿಟಿಗೆ ಕಾರಣ ಅವರಾಗಿದ್ದ ಲವ್ ಫೇಲ್ಯೂರ್, ಹಾಗಂತ ಅವರಿಗೆ ಲವ್ ಬ್ರೇಕಪ್ ಆಗಿದ್ದು ಬೇರೆ ಯಾರ ಜೊತೆಯೂ ಅಲ್ಲ ಆಗ ಲಲ್ವರ್ ಆಗಿದ್ದ ಅವರ ಪತಿ ಶ್ರೀರಾಮ್ ಜೊತೆ.

ಪುನೀತಾರವರದ್ದು ಅದು ಫಸ್ಟ್ ಲವ್, ನಾನು ಮದುವೆಯಾದರೆ ಪ್ರೀತಿಸಿದ ಹುಡುಗನನ್ನೇ ಎಂಬ ನಂಬಿಕೆಯಲ್ಲಿರುವಾಗ ಶ್ರೀರಾಮ್ ಬಂದು ಇಬ್ಬರು ದೂರ-ದೂರ ಆಗುವ ಎಂದು ಹೇಳಿ ಪ್ರೀತಿಯಿಂದ ಹೊರ ನಡೆಯುತ್ತಾರೆ. ಆದರೆ ಅದು ಪುನೀತಾರವರ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರುತ್ತೆ, ತುಂಬಾ ನೋವು ಅನುಭವಿಸುತ್ತಾರೆ, ಜೀವನದಲ್ಲಿ ಮೊತ್ತ ಮೊದಲ ಬಾರಿ ಸೋತೆ ಎಂದು ಕುಗ್ಗಿ ಹೋಗುತ್ತಾರೆ.
ಸ್ವಲ್ಪ ಸಮಯದ ಬಳಿಕ ಶ್ರೀರಾಮ ಮತ್ತೆ ಅವರ ಬಳಿ ಬಂದು ಮದುವೆಯಾಗುವ ಎಂದು ಕೇಳುತ್ತಾರೆ, ಪ್ರೀತಿಸಿದ ಹುಡುಗನಿಗೆ ಒಕೆ ಅಂದರೂ ಶ್ರೀರಾಮ್ ಮೇಲಿದ್ದ ನಂಬಿಕೆ ಹೋಗಿರುತ್ತೆ, ಮದುವೆಯಾಗಿ 10 ವರ್ಷಗಳೇ ಕಳೆದರೂ ಅವರು ನನ್ನನ್ನು ಬಿಟ್ಟು ಹೋಗಬಹುದು ಎಂಬ ಅಳಕು ಕಾಡುತ್ತಿರುವುದಾಗಿ ಹೇಳಿದ್ದರು...
ಹೌದು ಪ್ರೀತಿ ಸಂಸಾರದಲ್ಲಿ ನಂಬಿಕೆ ಎಂಬುವುದು ತುಂಬಾನೇ ಮುಖ್ಯವಾಗಿರುತ್ತೆ, ಒಮ್ಮೆ ಆ ನಂಬಿಕೆ ಕಳೆದುಕೊಂಡರೆ ಮತ್ತೆ ಬರುವುದು ಕಷ್ಟ. ಕೆಲವು ಸಂಬಂಧಗಳಲ್ಲಿ ಲವ್, ಬ್ರೇಕಪ್ ಆಗುತ್ತಲೇ ಇರುತ್ತದೆ. ಒಮ್ಮೆ ಇಬ್ಬರು ದೂರಾಗೋಣ ಅಂತ ದೂರಾಗುತ್ತಾರೆ, ಕೆಲವು ದಿನಗಳ ಬಳಿಕ ಇಲ್ಲ..ನಿನ್ನ ಬಿಟ್ಟಿರಲು ಸಾಧ್ಯವಿಲ್ಲ ಎಂದು ಮತ್ತೆ ಒಂದಾಗುತ್ತಾರೆ. ಹೀಗೆ ಒಂದಾಗುವ ಜೋಡಿಗಳಲ್ಲಿ ಎಲ್ಲೋ ಒಂದು ಇನ್‌ಸೆಕ್ಯೂರಿಟಿ ಎಂಬುವುದು ಕಾಡುತ್ತಲೇ ಇರುತ್ತದೆ.
ಲವ್ ಮಾಡಿ ಬ್ರೇಕಪ್ ಆದ್ಮೇಲೆ ಮತ್ತೆ ಒಂದಾದರೆ ಅಂಥ ಸಂಸಾರದಲ್ಲಿ ಈ ರೀತಿಯ ಸಮಸ್ಯೆಗಳು ಕಂಡು ಬರಬಹುದು:

ಗೊಂದಲ
ಒಮ್ಮೆ ಬಿಟ್ಟು ಹೋದ ಮೇಲೆ ಮತ್ತೆ ಬಂದರೆ ಆ ವ್ಯಕ್ತಿ ಜೊತೆ ಸಂಸಾರ ಮಾಡುವಾಗ ಏನೋ ಅವ್ಯಕ್ತ ಭಯ ಇದ್ದೇ ಇರುತ್ತದೆ, ನನ್ನನ್ನು ಮತ್ತೆ ಬಿಟ್ಟು ಹೋಗಬಹುದಾ? ನನಗಿಂತ ಬೆಟರ್ ಯಾರಾದರೂ ಸಿಕ್ಕರೆ ನನ್ನಿಂದ ದೂರ ಆಗಬಹುದಾ? ನಾನು ಅವರಿಗೆ ಸರಿಯಾದ ಮ್ಯಾಚ್ ಅಲ್ವಾ? ಎಂಬೆಲ್ಲಾ ಗೊಂದಲ ಕಾಡುತ್ತಲೇ ಇರುತ್ತದೆ. ಎಷ್ಟೇ ಪ್ರೀತಿ ಇದ್ದರೂ ಒಂದು ಚಿಕ್ಕ ಫೈಟ್ ಬಂದರೂ ಈ ರೀತಿ ಅನಿಸಲಾರಂಭಿಸುತ್ತದೆ.

ಜಗಳ ಮತ್ತೆ ಅದೇ ವಿಷಯ ಪ್ರಸ್ತಾಪ
ಏನಾದರೂ ಚಿಕ್ಕ ವಿಷಯಕ್ಕೆ ದೊಡ್ಡ ಜಗಳವಾಗಬಹುದು, ಅಲ್ಲದೆ ಮತ್ತೆ ಹಳೆಯ ವಿಷಯಗಳು ಬರಬಹುದು, ಇದರಿಂದ ಇಬ್ಬರ ಮನಸ್ಸಿಗೆ ತ್ತಷ್ಟು ನೋವಾಗುವುದು. ಮೊದಲು ಮೋಸ ಮಾಡಿಂತೆ ಈಗಲೂ ನೀನು ಮಾಡಬಹುದು ಎಂಬೆಲ್ಲಾ ಅವವಶ್ಯಕ ಮಾತುಗಳು ಬರುವ ಸಾಧ್ಯತೆ ಹೆಚ್ಚು.

ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗುವುದು
ಯಾವುದೇ ಸಂಬಂಧದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳು ಬರುವುದು ಸಹಜ, ಆದರೆ ಬ್ರೇಕಪ್ ಮತ್ತೆ ಒಂದಾಗುವುದು ಈ ರೀತಿಯ ಸಂಬಂಧದಲ್ಲಿ ಮಾನಸಿಕ ಒತ್ತಡ ಅಧಿಕವಿರುತ್ತದೆ, ಪಾಸಿಟಿವ್ ಆಗಿ ಯೋಚಿಸುವುದಕ್ಕಿಂತ ಅವನು/ ಅವಳು ಮತ್ತೆ ನನ್ನ ಬಿಟ್ಟು ಹೋಗಬಹುದು ಎಂಬೆಲ್ಲಾ ನೆಗೆಟಿವ್ ಯೋಚನೆ ಬರುವುದು ಅಧಿಕ.

ನಿಮಗಿಂತ ಬೆಟರ್ ಆಪ್ಷನ್ ಹುಡುಕಿ ಹೋಗಿದ್ದರೆ
ಬೇರೆ ಯಾವುದೋ ಕಾರಣಕ್ಕೆ ಬ್ರೇಕಪ್ ಆಗಿ ಮತ್ತೆ ಒಂದಾದರೆ ಅಂಥ ಸಂಬಂಧದಲ್ಲಿ ಸ್ವಲ್ಪವಾದರೂ ನಂಬಿಕೆ ಇರುತ್ತೆ, ಆದರೆ ನಿನಗಿಂತ ಬೆಟರ್ ಪರ್ಸನ್ ಸಿಕ್ತಾರೆ ಅಮತ ಹೋಗಿ ಸಿಗದೆ ಮತ್ತೆ ಪ್ಯಾಚ್ ಅಪ್ ಆಗಿದ್ದರೆ ಅಂಥ ಸಂಬಂಧ ಸಂಶಯ ಸುಳಿಯಲ್ಲಿ ಸಿಉಕುವುದಂತು ಗ್ಯಾರಂಟಿ.
ಸಂಸಾರದಲ್ಲಿ ಪ್ರೀತಿಯಷ್ಟೇ ನಂಬಿಕೆ ಮುಖ್ಯ, ನಮಗೆ ಏನಾದರೂ ಸಂಶಯ, ಅಭದ್ರತೆ ಕಾಡುತ್ತಿದ್ದರೆ ಅದನ್ನು ಸಂಗಾತಿ ಜೊತೆ ಕೂತು ಮುಕ್ತವಾಗಿ ಮಾತನಾಡುವುದು ಒಳ್ಳೆಯದು.



Click it and Unblock the Notifications
