Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪ್ರೀತಿ ವಿಚಾರದಲ್ಲಿ, ಹುಡುಗರು ಸೀರಿಯಸ್ ಆಗಿರುತ್ತಾರಂತೆ!
ಪ್ರೀತಿ ಇರದ ಲೋಕವು ಬರಡು ಕಾಣಯ್ಯ....ಎಂಬ ಹಾಡೊಂದು ಕೇಳಿರಬಹುದು. ಪ್ರೀತಿ ಹಾಗೆ ಇದು ಎಲ್ಲರಲ್ಲೂ ಮೂಡಲ್ಲ, ಅಷ್ಟೇ ಏಕೆ ಪ್ರೀತಿಯನ್ನು ಹಂಬಲಿಸಿದ ಎಲ್ಲರಿಗೂ ಸಿಗಲ್ಲ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದ ವಿಚಾರ. ಅದರಲ್ಲೂ ಪ್ರೀತಿ ವಿಚಾರದಲ್ಲಿ ಪುರುಷರು ತುಂಬಾ ಆಲೋಚನೆ ಮಾಡುತ್ತಾರೆ ಮತ್ತು ಸಂಬಂಧಕ್ಕಿಂತ ಹೆಚ್ಚಾಗಿ ಪುರುಷರು ಪ್ರೀತಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ಮನಸ್ಸಿಗೆ ಹತ್ತಿರವಾದ ಹುಡುಗಿ ಮಾತನಾಡದೇ ಇದ್ದರೆ..?
ತನ್ನ ಸಂಗಾತಿ ಬಗ್ಗೆ ಸರಿತಪ್ಪು ನಿರ್ಧಾರ ಮಾಡುವುದರೊಂದಿಗೆ ಎಲ್ಲಾ ಮೂಲೆಗಳಿಂದಲೂ ಅದನ್ನು ಪರಿಶೀಲಿಸಿ ಅಂತಿಮವಾಗಿ ಒಂದು ನಿರ್ಧಾರಕ್ಕೆ ಬರುತ್ತಾರೆ. ಪ್ರೀತಿಸುವ ಮೊದಲು ಪುರುಷರು ಆರು ಹಂತದಲ್ಲಿ ದಾಟಿ ಹೋಗುತ್ತಾರೆ ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಲೈಫ್‌ನಲ್ಲಿ ಸುಂದರ ಹುಡುಗಿಯನ್ನು ಪಡೆಯುವ ಗುಂಗಿನಲ್ಲಿ....
ಪುರುಷರಿಗೆ ಸಂಬಂಧಕ್ಕಿಂತ ಮಿಗಿಲಾಗಿ ಪ್ರೀತಿಯ ಮೇಲೆ ಹೆಚ್ಚಿನ ಬದ್ಧತೆಯಿರುತ್ತದೆ ಎಂದರೆ ನಂಬಲೇಬೇಕು. ಜೀವನದಲ್ಲಿ ಪ್ರೀತಿಯ ಆಯ್ಕೆಯ ವೇಳೆ ಪುರುಷರು ಸ್ಪಷ್ಟತೆ ಹೊಂದಿರುತ್ತಾರೆ. ಇದು ಇಲ್ಲವೆಂದಾದರೆ ಅವರು ಇದರಿಂದ ದೂರವೇ ಉಳಿದುಬಿಡುತ್ತಾರೆ. ಮುಂದಿನ ಜೀವನವು ಸುಖಮಯವಾಗಿ ಸಾಗಲು ಪುರುಷರು ಪ್ರೀತಿಯ ಆಯ್ಕೆಯ ಬಗ್ಗೆ ಎಚ್ಚರಿಕೆ ವಹಿಸಿ ಮುಂದಿನ ಹೆಜ್ಜೆ ಇಡುತ್ತಾರೆ. ಇಂತಹ ಕೆಲವು ಹಂತಗಳ ಬಗ್ಗೆ ನಾವು ನಿಮಗೆ ತಿಳಿಸಲಿದ್ದೇವೆ. ಇದನ್ನು ಓದುತ್ತಾ ಪ್ರೀತಿಯ ಆನಂದ ಪಡೆಯಿರಿ....

ಆಕೆಯೊಂದಿಗೆ ಕಳೆಯುವ ಸಂತೋಷದ ಸಮಯ...
ಸಂಗಾತಿಯ ಬಗ್ಗೆ ಪುರುಷನೊಬ್ಬ ಆಲೋಚಿಸಲು ಆರಂಭಿಸಿದರೆ ಆಗ ಆತನ ತಲೆಯಲ್ಲಿ ಹಲವಾರು ರೀತಿಯ ಆಲೋಚನೆಗಳು ಮೂಡುತ್ತದೆ. ಪ್ರೀತಿಗೆ ಬಿದ್ದ ಮಹಿಳೆಯಲ್ಲಿ ಅಷ್ಟು ಬೇಗ ಸೆಳೆತವನ್ನು ಕಾಣಲು ಹೇಗೆ ಸಾಧ್ಯವಾಯಿತು ಎನ್ನುವುದನ್ನು ಯೋಚಿಸುವಾಗ ತಯಾಷೆಯೆನಿಸುವುದು. ಆಕೆಯೊಂದಿಗೆ ಕಳೆಯುವ ಸಂತೋಷದ ಸಮಯವು ಆತನನ್ನುಯಾವಾಗಲೂ ನಗುತ್ತಿರುವಂತೆ ಮಾಡುತ್ತದೆ. ನಾವು ಇದನ್ನು ಹುಚ್ಚಾಟ ಎನ್ನಬಹುದು.

ಸಮಯದ ಬಗ್ಗೆ ಚಿಂತೆವಿಲ್ಲ....
ಮಹಿಳೆಯೊಂದಿಗೆ ಪ್ರೀತಿಯಲ್ಲಿ ಬೀಳುವ ಪುರುಷರು ಸಮಯವನ್ನು ಹೆಚ್ಚು ವಿನಿಯೋಗಿಸುತ್ತಾರೆ. ಅವರಿಬ್ಬರು ಜತೆಯಾಗಿ ಹೆಚ್ಚಿನ ಸಮಯ ಕಳೆಯುವುದಕ್ಕೆ ಒತ್ತು ನೀಡುತ್ತಾರೆ. ಪರಸ್ಪರ ಹೆಚ್ಚಿನ ಸಮಯ ಕಳೆಯುವುದರಿಂದ ಅವರಿಬ್ಬರ ಸಂಬಂಧವು ಮತ್ತಷ್ಟು ಗಟ್ಟಿಯಾಗುವುದು.

ಭಾವನೆಗಳ ಭರವಸೆ
ಪ್ರೀತಿಯು ಒಂದು ಹಂತಕ್ಕೆ ಬಂದ ಬಳಿಕ ಪರಸ್ಪರ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಈ ವೇಳೆ ಅವರಿಬ್ಬರು ಹೊರಗಡೆ ತಿರುಗಾಡಲು ಹೋಗುವುದು ಸಾಮಾನ್ಯ...

ಭಾವನೆಗಳ ಭರವಸೆ
ಆದರೆ ಈ ಹಂತದಲ್ಲಿ ತಾಳ್ಮೆ ಕಳಕೊಳ್ಳುವ ಪುರುಷರು ತನ್ನ ಸಂಗಾತಿ ಕೂಡ ಇದೇ ಭಾವನೆ ವ್ಯಕ್ತಪಡಿಸುತ್ತಾಳೆಯಾ ಎಂದು ತಿಳಿಯಲು ಬಯಸುತ್ತಾರೆ. ಇದನ್ನು ನೇರವಾಗಿ ಕೇಳಲು ಆತ ಹೆದರಿಕೊಂಡರೂ ಆಕೆ ತನ್ನನ್ನು ಇಷ್ಟಪಡುತ್ತಿದ್ದಾಳೆಯಾ ಎಂದು ತಿಳಿಯಲು ಹಲವಾರು ಪ್ರಯತ್ನ ಮಾಡುತ್ತಾನೆ.

ಅಡಗಿದ್ದ ಭಾವನೆಗಳ ಅನಾವರಣ
ಸಂಗಾತಿ ಕೂಡ ತನ್ನನ್ನು ಇಷ್ಟ ಪಡುತ್ತಿದ್ದಾಳೆ ಮತ್ತು ಆಕೆ ತನ್ನನ್ನು ಒಪ್ಪಿಕೊಂಡಿದ್ದಾಳೆಂದು ಪುರುಷ ತಿಳಿದುಕೊಂಡ ಬಳಿಕ ಆತ ತನ್ನ ಅಡಗಿದ್ದ ಭಾವನೆಗಳನ್ನೆಲ್ಲಾ ಹೊರಹಾಕುತ್ತಾನೆ. ತನ್ನ ಸಂಗಾತಿಗಾಗಿ ಬಚ್ಚಿಟ್ಟಿರುವ ಹೃದಯಾಳದ ಭಾವನೆಗಳನ್ನು ಹೊರಹಾಕುತ್ತಾನೆ ಮತ್ತು ಆಕೆಯನ್ನು ಎಷ್ಟು ಪ್ರೀತಿಸುತ್ತೇನೆ ಎಂದು ಹೇಳುತ್ತಾನೆ.

ಮುಳುಗು
ಸಂಗಾತಿಯೊಂದಿಗೆ ತನ್ನ ಭಾವನೆಗಳನ್ನು ಹಂಚಿಕೊಂಡ ಬಳಿಕ ತನಗಾಗಿಯೇ ಆಕೆ ಜನಿಸಿದ್ದಾಳೆಂದು ನಿರ್ಧರಿಸುವ ಪುರುಷರು ಅಂತಿಮವಾಗಿ ಪ್ರೀತಿಯನ್ನು ಸಂಬಂಧದಲ್ಲಿ ಬದಲಾಯಿಸಲು ತಯಾರಾಗುತ್ತಾರೆ. ಇದಕ್ಕೆ ಮೊದಲು ಅವರು ಎಲ್ಲಾ ರೀತಿಯ ಸರಿತಪ್ಪುಗಳನ್ನು ವಿಶ್ಲೇಷಣೆ ಮಾಡಿರುತ್ತಾರೆ.



Click it and Unblock the Notifications
