Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮೋಸ ಮಾಡುವ ಪುರುಷರ ಆರು ಲಕ್ಷಣಗಳು...!
ಇದು ನಿಜವಾಗಿರುತ್ತದೆ ಎಂದು ನಾವು ಹೇಳುವುದಿಲ್ಲ. ಆದರೆ ಕೆಲವೊಂದು ಸಲ ಪುರುಷರು ಕೂಡ ವಂಚಿಸುತ್ತಾರೆ ಮತ್ತು ಇದಕ್ಕೆ ನಿಮ್ಮನ್ನು ನೀವು ದೂಷಿಸಿಕೊಳ್ಳುವಂತಹ ಕೆಲಸ ಮಾಡಬಾರದು. ಕೆಲವೊಂದು ಸಲ ಸಂಬಂಧಗಳು ತುಂಬಾ ಕಠಿಣವಾಗಿರುತ್ತದೆ. ಆದರೆ ನಿಮ್ಮನ್ನು ಪ್ರೀತಿಸುತ್ತಿರುವ ವ್ಯಕ್ತಿಗೆ ಮೋಸ ಮಾಡಲು ಇದು ಕಾರಣವಲ್ಲ.
ಪುರುಷರು ಮೋಸ ಮಾಡುತ್ತಿದ್ದಾರೆ ಎಂದು ತಿಳಿಯಲು ಇರುವ ಕೆಲವೊಂದು ಸಂಜ್ಞೆಗಳು ಯಾವುದು ಮತ್ತು ಅವರು ಮೋಸ ಮಾಡುತ್ತಿರುವಾಗ ಏನಾದರೂ ಹೇಳುತ್ತಾರೆಯಾ ಅಥವಾ ಮಾಡುತ್ತಾರೆಯಾ? ಸಂಬಂಧದ ತರಬೇತುದಾರೆ ಮರ್ಸಿಲಿನಾ ಹರ್ಡಿ ಅವರು ಪುರುಷರು ಮೋಸ ಮಾಡುತ್ತಿರುವರೆಂದು ಸೂಚಿಸುವ ಕೆಲವೊಂದು ಸಂಜ್ಞೆಗಳು ಮತ್ತು ಅವರು ಮೋಸ ಮಾಡುತ್ತಿರುವಾಗ ಹೇಳುವ ಹತ್ತು ವಿಷಯಗಳನ್ನು ಇಲ್ಲಿ ನೀಡಲಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಹೆಂಗಸು ಕೇಳುವ 6 ಚಾಲಾಕಿನ ಪ್ರಶ್ನೆಗಳು
ನಿಮಗೆ ಸಂಬಂಧದಲ್ಲಿ ಮೋಸವಾಗುತ್ತಿದ್ದರೆ ಅಥವಾ ನಿಮ್ಮ ಪುರುಷನಿಂದ ಇಂತಹ ವಿಷಯಗಳನ್ನು ಕೇಳಿ ನಿಮಗೆ ಅಚ್ಚರಿಯಾಗಿರಬಹುದು. ಮೋಸ ಮಾಡುವ ವೇಳೆ ಹೆಚ್ಚಿನ ಪುರುಷರು ಪುಸ್ತಕ ಓದಿದಂತೆ ಒಂದೇ ರೀತಿಯ ವಾಕ್ಯಗಳನ್ನು ಹೇಳುವುದನ್ನು ನಾವಿಲ್ಲಿ ನೋಡಬಹುದಾಗಿದೆ.

1. ಆಕೆ ಕೇವಲ ಗೆಳತಿ
ನಿಮ್ಮವ ಹೊಸಬರೊಂದಿಗೆ ಅದರಲ್ಲೂ ಮಹಿಳೆಯೊಂದಿಗೆ ಮಾತನಾಡುವುದನ್ನು ನೀವು ಗುರುತಿಸಿರಬಹುದು. ನೀವು ಕೇಳುವ ತನಕ ಆಕೆಯ ಬಗ್ಗೆ ಏನೂ ಹೇಳಿರುವುದಿಲ್ಲ ಮತ್ತು ನೀವು ಆಕೆಯನ್ನು ಭೇಟಿಯಾಗುತ್ತೇನೆಂದು ಹೇಳಿದರೆ ಆತ ನಿರಾಕರಿಸುತ್ತಾನೆ. ಯಾಕೆಂದರೆ ಆಕೆ ಆತನ ಗೆಳತಿಯಲ್ಲ, ಗರ್ಲ್ ಫ್ರೆಂಡ್ ಆಗಿರುತ್ತಾಳೆ.
2. ನನ್ನ ವೈಯಕ್ತಿಕತೆ ಗೌರವಿಸಿ, ಮೊಬೈಲ್ ಮುಟ್ಟಬೇಡ...
ಆಕೆ ಕಳುಹಿಸಿರುವ ಯಾವುದಾದರೂ ಟೆಕ್ಸ್ಟ್ ಮೆಸೇಜ್ ನ್ನು ನೀವು ನೋಡಬಹುದು ಅಥವಾ ಆಕೆ ಕಳುಹಿಸಿದ ಕೂಡಲೇ ನೀವು ಅದನ್ನು ನೋಡಬಹುದು ಎನ್ನುವ ಭೀತಿಯಿಂದ ಆತ ತನ್ನ ಮೊಬೈಲ್ ಮುಟ್ಟಬಾರದೆಂದು ಹೇಳುತ್ತಾನೆ. ಆತನ ಮೊಬೈಲ್ ನಲ್ಲಿ ಆಕೆಯ ಫೋಟೊ ಕೂಡ ಇರಬಹುದು.
3. ನೀನು ಮೋಸ ಮಾಡುತ್ತಿದ್ದೀಯಾ. ಅಲ್ಲವೇ?
ಹೌದು, ಮೋಸ ಮಾಡುವ ಪುರುಷರು ತಮ್ಮ ಸಂಗಾತಿಯನ್ನು ಮೋಸ ಮಾಡುತ್ತಾಳೆಂದು ದೂಷಿಸುತ್ತಾರೆ. ಯಾಕೆ? ಯಾಕೆಂದರೆ ನಾನು ಹೀಗೆ ಮಾಡಬಹುದಾದರೆ ಆಕೆ ಕೂಡ ಹೀಗೆ ಮಾಡಬಹುದು ಎಂದು ಯೋಚಿಸುತ್ತಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಗಂಡು ಹೆಣ್ಣಿನ ನಡುವಿನ ಪ್ರೀತಿ ಎಂತಹದು ಗೊತ್ತಾ?
4. ನೀನು ಅಷ್ಟು ಒಳ್ಳೆಯವಳಲ್ಲ...
ನೀವು ಮಾಡಿದ ಪ್ರತಿಯೊಂದು ತಪ್ಪನ್ನು ಕೂಡ ದೊಡ್ಡದಾಗಿ ಬಿಂಬಿಸಲಾಗುತ್ತದೆ ಮತ್ತು ನಿಮಗೆ ಸಮಸ್ಯೆಯೇನೆಂದು ತಿಳಿಯುವುದಿಲ್ಲ. ಆತ ನಿಮ್ಮ ಪ್ರೀತಿಸುತ್ತಿದ್ದರೆ ನಿಮಗೆ ಮೋಸ ಮಾಡಲ್ಲ ಅಥವಾ ನೀವು ಉತ್ತಮವೆಂದು ಆತ ಯೋಚಿಸುತ್ತಿರುತ್ತಾನೆ. ಇದರಿಂದಾಗಿ ಆತ ನೀವು ಉತ್ತಮವಲ್ಲವೆಂದು ನಂಬಲು ಆರಂಭಿಸುತ್ತಾರೆ. ಇದರಿಂದಾಗಿ ಆತ ಬೇರೆಯವರ ಕಡೆ ಆಕರ್ಷಿತನಾಗುತ್ತಾನೆ. ಆದರೆ ವಾಸ್ತವದಲ್ಲಿ ನೀವು ಅತ್ಯುತ್ತಮವಾಗಿರುತ್ತೀರಿ.
5. ನಾನೇ ಬಟ್ಟೆ ಒಗೆಯುತ್ತೇನೆ...
ಆರಂಭದಲ್ಲಿ ಆತ ನಿಮಗೆ ನೆರವು ನೀಡುತ್ತಿದ್ದಾನೆ ಎಂದು ನಿಮಗನಿಸಬಹುದು. ದುರಾದೃಷ್ಟದಿಂದ ಆತ ತನ್ನ ಪ್ಯಾಂಟ್, ಪರ್ಫ್ಯೂಮ್ ಸುವಾಸನೆ ಅಥವಾ ಇತರ ಯಾವುದೇ ವಸ್ತುಗಳು ನಿಮ್ಮ ಕೈಗೆ ಸಿಗಬಾರದೆಂದು ಭಾವಿಸುತ್ತಾನೆ.
6. ನಿಗದಿತ ಅವಧಿಗಿಂತ ಹೆಚ್ಚಿನ ಕೆಲಸ...
ಆತ ಹಠಾತ್ ಆಗಿ ಕಚೇರಿಯಲ್ಲಿ ಹೆಚ್ಚಿನ ಸಮಯ ವ್ಯಯಿಸಬಹುದು. ಸಾಮಾನ್ಯವಾಗಿ ಬರುವಂತೆ ಆತ ಮನೆಗೆ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಇದು ಯಾಕೆಂದರೆ ಆತ ಕಚೇರಿಯಲ್ಲಿರುವುದಿಲ್ಲ. ನೀವು ಅವರನ್ನು ಹಿಡಿಯುತ್ತೀರೆಂಬ ಭಯವೇ ಇಲ್ಲದೆ ಆತ ಬೇರೆ ಹುಡುಗಿಯೊಂದಿಗಿರುತ್ತಾನೆ.



Click it and Unblock the Notifications
